For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯದ ಜೀವನ ಚಕ್ರ: ಯಾವ್ಯಾವ ವಯಸ್ಸಿನಲ್ಲಿ ಏನೆಲ್ಲಾ ಆಗಲಿದೆ ನೋಡಿ..

By Hemanth
|

ಜೀವನ ಚಕ್ರವೆನ್ನುವುದು ಹುಟ್ಟಿನೊಂದಿಗೆ ಆರಂಭವಾಗಿ ಸಾವಿನಲ್ಲಿ ಅಂತ್ಯ ಕಾಣುವುದು. ಈ ಮಧ್ಯೆ ಇರುವ ಸುಂದರ ಜೀವನವನ್ನು ನಾವು ಅನುಭವಿಸಬೇಕು. ಬಾಲ್ಯದಲ್ಲಿ ಏನಾಗುವುದೋ ಅದು ಪ್ರತಿಯೊಂದು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುವುದು. ನಾವು ಭೂಮಿ ಮೇಲೆ ತಿಂದುಂಡು ಮಲಗಲು ಬಂದಿರುವುದು. ಸಮಯ ಸಾಗಿದಂತೆ ನಮಗೆ ನಿಲ್ಲಲು, ನಡೆಯಲು ಹಾಗೂ ಆಟವಾಡುವುದು ಹೇಗೆ ಎನ್ನುವುದು ತಿಳಿಯುವುದು. ಇದರ ಬಳಿಕ ಜೀವನದಲ್ಲಿ ಶೈಕ್ಷಣಿಕ ಮಟ್ಟವು ಆರಂಭವಾಗುವುದು. ಇದು ನಿಮ್ಮನ್ನು ಮತ್ತೊಂದು ಹಂತ ಹಾಗೂ ಕೆಲವೊಂದು ನೈತಿಕ ಪಾಠ ಕಲಿಸಿಕೊಡುವುದು.

20ರ ಹರೆಯದ ಬಳಿಕವಷ್ಟೇ ನಿಮ್ಮ ನಿಜವಾದ ಜೀವನವೆನ್ನುವುದು ಆರಂಭವಾಗುವುದು. ಆದರೆ ವಯಸ್ಸಾಗುತ್ತಾ ಹೊದಂತೆ ನಿಮಗೆ ಕೆಲವೊಂದು ಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಪ್ರತಿಯೊಬ್ಬರಂತೆ ನಿಮಗೆ ಬೆರೆಯಲು ಸಾಧ್ಯವಾಗಲ್ಲ. ಮನುಷ್ಯನ ಜೀವನವು 20ರ ಹರೆಯದಿಂದ 95ರ ಹರೆಯದ ತನಕ ತುಂಬಾ ಪ್ರಾಮುಖ್ಯವಾಗಿರುವುದು. ಈ ಲೇಖನದಲ್ಲಿ ನಾವು ಜ್ಯೋತಿಷ್ಯದ ಜೀವನ ಚಕ್ರದ ಬಗ್ಗೆ ತಿಳಿಸಿಕೊಡಲಿದ್ದೇವೆ. ನಿಮಗೆ ಜೀವನ ಚಕ್ರದ ಮಹತ್ವ ತಿಳಿದರೆ ಆಗ ವೈಯಕ್ತಿಕವಾಗಿ ನೀವು ಯಾವ ರೀತಿ ಬೆಳೆಯುವಿರಿ ಎಂದು ತಿಳಿಯಬಹುದು....

21ರಿಂದ 24ನೇ ವಯಸ್ಸು

21ರಿಂದ 24ನೇ ವಯಸ್ಸು

ಈ ಸಮಯದಲ್ಲಿ ಶನಿಯು 34 ತಿರುಗಿರುವ ಕಾರಣ ಇದು ತುಂಬಾ ಸಮತೋಲನದ ಸಮಯವಾಗಿದೆ. ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ಈ ಸಮಯದ ರಾಶಿಗಳ ಬಗ್ಗೆ ಹೇಳಬಹುದು. ಯುರೇನಸ್ ¼ ಭಾಗದಲ್ಲಿರುವ. ಇಲ್ಲಿ ನಿಮ್ಮ ಸ್ವಾತಂತ್ರ್ಯ ಹಾಗೂ ಜವಾಬ್ದಾರಿಯ ಸಮತೋಲವಿರುವುದು. ಈ ಸಮಯದಲ್ಲಿ ಜವಾಬ್ದಾರಿ ಪಡೆಯುವಂತಹ ವ್ಯಕ್ತಿಯು ಶನಿಗೆ ತುಂಬಾ ಸತ್ಯವಾಗಿದ್ದರೂ ಸಮಾಜ ಮತ್ತು ಆತನ ಹೊಂದಿಕೊಂಡಿರುವ ಕುಟುಂಬಕ್ಕೆ ಏನೇ ನೀಡದೆ ಇದ್ದರೂ ಆಗ ಅವನ ಜೀವನದಲ್ಲಿ ಜೀವನದ ಅಚ್ಚರಿ ಹಗೂ ಸಾಧನೆಗಳು ಕಂಡುಬರಬಹುದು.

28ರಿಂದ 30ನೇ ವಯಸ್ಸು

28ರಿಂದ 30ನೇ ವಯಸ್ಸು

ಇದು ತುಂಬಾ ಗಂಭೀರ ಹಾಗೂ ನಿರ್ಣಾಯಕ ಘಟ್ಟವಾಗಿದೆ. ಈ ಹಂತದಲ್ಲಿ ಶನಿಯು ನಿಮ್ಮ ಹುಟ್ಟಿನ ವೇಳೆ ಇರುವಂತಹ ಸ್ಥಾನದಲ್ಲಿ ಇರುವ ಕಾರಣದಿಂದಾಗಿ ತುಂಬಾ ಪ್ರಾಮುಖ್ಯ ಘಟ್ಟವಾಗಿದೆ. ಹಿಂದಿನ ಜೋತಿಷ್ಯ ಚಕ್ರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಅದು ಇಲ್ಲಿ ನಿಮಗೆ ತೊಂದರೆ ಉಂಟು ಮಾಡಲಿದೆ. ವೃತ್ತಿ ಜೀವನವು ಸರಿಯಾಗಿ ಇರದೇ ಇರುವುದು, ಸಂಬಂಧದಲ್ಲಿ ಬಿರುಕು ಮತ್ತು ಅವಕಾಶದಿಂದ ವಂಚಿತವಾಗಿರುವುದು. ಸಮಸ್ಯೆಗಳು ದೊಡ್ಡ ಮಟ್ಟದಲ್ಲದಿದ್ದರೂ ಇದನ್ನು ನಿವಾರಣೆ ಮಾಡಬಹುದು.

35ರಿಂದ 45ನೇ ವಯಸ್ಸು

35ರಿಂದ 45ನೇ ವಯಸ್ಸು

ನೀವು ಹದಿಹರೆಯದಲ್ಲಿ ತೆಗೆದುಕೊಂಡ ಕೆಲವೊಂದು ನಿರ್ಧಾರಗಳಿಂದಾಗಿ ಈ ಹಂತದಲ್ಲಿ ಅದು ತುಂಬಾ ಒಳ್ಳೆಯ ರೀತಿಯಿಂದ ಸಾಗುವುದು ಮತ್ತು ಪ್ರಮುಖ ಗ್ರಹಗಳು ಪಲ್ಲಟವಾಗುವುದಿಲ್ಲ. ಇದೇ ಕಾರಣದಿಂದ ಎಲ್ಲವೂ ಸರಾಗವಾಗಿ ಸಾಗುವುದು. 38ರಿಂದ 45ನೇ ವಯಸ್ಸಿನ ನಡುವೆ ಹೊರಗಿನ ಪ್ರಮುಖ ನಾಲ್ಕು ಗ್ರಹಗಳು ತಮ್ಮ ನೈಸರ್ಗಿಕ ಪಥದಲ್ಲಿರುವುದು ಮತ್ತು ಒಗ್ಗೂಡುವುದು. ಇದರಿಂದ ಈ ಹಂತದಲ್ಲಿ ಸಾಗುವುದು ಮಕ್ಕಳಾಟಿಕೆಯಲ್ಲ. ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹೆಚ್ಚಿನವರು ಜೀವನದ ಮಧ್ಯಭಾಗದಲ್ಲಿ ಸಮಸ್ಯೆ ಎದುರಿಸುವರು.

52ರಿಂದ 58ನೇ ವಯಸ್ಸು

52ರಿಂದ 58ನೇ ವಯಸ್ಸು

ಜೀವನದ ಮಧ್ಯಭಾಗದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡ ಬಳಿಕ ಮುಂದಿನ ಕೆಲವು ವರ್ಷಗಳು ನೈಸರ್ಗಿಕವಾಗಿ ಸರಾಗವಾಗಿ ಸಾಗುವುದು. ಆದರೆ 52ರ ಹರೆಯ ದಾಟಿದ ಬಳಿಕ ಕೆಲವು ಚಿರೋನ್ ಬರುವುದು. ಚಿರೋನ್ ಎಂದರೆ ಕೆಲವು ಗೃಹವಿರಹದ ಸಮಸ್ಯೆಗಳು. ಈ ಸಮಯದಲ್ಲಿ ಮದುವೆ, ಮಕ್ಕಳು ಎಂದು ಪುರುಷ ಅಥವಾ ಮಹಿಳೆ ಉತ್ತಮ ಜೀವನ ಸಾಗಿಸುತ್ತಿರುವರು. ಆದರೆ ಮಕ್ಕಳು ಮನೆಯಿಂದ ದೂರ ಹೋಗುವುದು ಇವರನ್ನು ಏಕಾಂಗಿಯಾಗಿಸಬಹುದು. ಈ ಹಂತದಲ್ಲಿ ವ್ಯಕ್ತಿಯು ತುಂಬಾ ಏಕಾಂಗಿಯಾಗುತ್ತಾನೆ. ಕೆಲವೊಂದು ವಿಚಾರದಲ್ಲಿ ಗ್ರಹಗಳು ಯಾವುದೇ ನೆರವು ನೀಡುವುದಿಲ್ಲ. ಈ ವೇಳೆ ಅವರಿಗೆ ಹಿಂದಿನ ಸಂಬಂಧದ ಬಿರುಕು ಮತ್ತು ವೃತ್ತಿ ಬದುಕಿನಲ್ಲಿ ತಮ್ಮ ಆಯ್ಕೆ ಸಿಗದೆ ಇರುವುದು ನೆನಪಿಗೆ ಬರುವುದು.

59ರ ಹರೆಯದಿಂದ 63

59ರ ಹರೆಯದಿಂದ 63

ಎರಡನೇ ಶನಿ ದೆಸೆಯು ಈ ವೇಳೆಗೆ ಬರುವುದು. ಈ ವೇಲೆ ಪ್ರಮುಖವಾಗಿ ಮರುಪರಿಶೀಲನೆ ಮಾಡುವಂತಹ ಸಮಯವಾಗಿದೆ. ನೀವು ಹಿಂದಿನ ಮೂರು ದಶಕದ ಜೀವನದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವಿರಿ ಮತ್ತು ನಿಮ್ಮ ಜೀವನದ ಸಾಧನೆ ಮತ್ತು ನಿಮಗೆ ಏನು ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬಗ್ಗೆ ನೀವು ಯೋಚಿಸಲಿದ್ದೀರಿ. ಮೊದಲ ಹಾಗೂ ಎರಡನೇ ಜೋತಿಷ್ಯ ಚಕ್ರದ ವೇಳೆ ನೀವು ಮನಸ್ಸಿನೊಳಗಿನ ಮಾತನ್ನು ಕೇಳಿದ್ದೇ ಆದರೆ ಈ ಸಮಯವು ತುಂಬಾ ಸರಾಗವಾಗಿ ಸಾಗಲಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಸರಿಯಾದ ನಿರ್ಧಾರ ಮಾಡದೆ ಇರುವವರು ಮರುಪರಿಶೀಲನೆ ಹಂತದಲ್ಲಿ ತುಂಬಾ ಅತೃಪ್ತಿಗೊಳಗಾಗುವರು.

84ರ ವಯಸ್ಸು

84ರ ವಯಸ್ಸು

ಇದು ಮನುಷ್ಯ ಜೀವನದ ತುಂಬಾ ಮಹತ್ವದ ಘಟ್ಟ ಮತ್ತು ನೀವು ಇಲ್ಲಿ ತನಕ ಸಾಗಿದರೆ ಅದು ನಿಮ್ಮ ಅದೃಷ್ಟವೆಂದು ಭಾವಿಸಬೇಕು. ಈ ಹಂತದಲ್ಲಿ ಯುರೇನಸ್ ನಿಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರಲಿದ್ದಾನೆ. ಯುರೇನಸ್ ಹೊಸ ಶಕ್ತಿ ಹಾಗೂ ಧನಾತ್ಮಕತೆ ನೀಡುವಾತ. ತಮ್ಮ ಕುಟುಂಬದ ಜವಾಬ್ದಾರಿಯನ್ನು ಕೆಲವರು ಈ ಹಂತದಲ್ಲಿ ನಿರ್ವಹಿಸುವರು ಮತ್ತು ಇನ್ನು ಕೆಲವರಿಗೆ ಪತ್ನಿ ವಿಯೋಗವಾಗುವುದು. ಅದಾಗ್ಯೂ, ಈ ಹಂತದಲ್ಲಿ ಮನುಷ್ಯ ತನಗಾಗಿ ಜೀವಿಸಲು ಆರಂಭಿಸುವನು. ಜೀವನಶೈಲಿಗೆ ಯಾವುದೇ ರೀತಿಯ ಕಟ್ಟುಪಾಡುಗಳು ಇರುವುದಿಲ್ಲ ಮತ್ತು ಯುರೇನಸ್ ನ ಪ್ರಭಾವದಿಂದಾಗಿ ಜನರು ಸುತ್ತಲು ಧನಾತ್ಮಕತೆ ತುಂಬುವರು.

90ರಿಂದ 95ನೇ ವಯಸ್ಸು

90ರಿಂದ 95ನೇ ವಯಸ್ಸು

2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವಂತಹ ಅಂಕಿಅಂಶದ ಪ್ರಕಾರ ಜಗತ್ತಿನ ಶೇ.1ರಷ್ಟು ಜನರು ಮಾತ್ರ ಈ ವಯಸ್ಸಿನಲ್ಲಿ ಬದುಕುತ್ತಿರುವರು. ತನ್ನ ಜೀವನದ ಆರಂಭಿಕ ಹಂತದಲ್ಲಿ ಮಾಡಿರುವಂತಹ ನಿರ್ಧಾರಗಳಿಂದ ಈ ಹಂತದಲ್ಲಿ ವ್ಯಕ್ತಿಯೊಬ್ಬನ ಆರೋಗ್ಯ ಮತ್ತು ಸಮೃದ್ಧಿಯು ಅವಲಂಬಿತವಾಗಿರುವುದು. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಏನು ಮಾಡುವಂತಿಲ್ಲವೆನ್ನುವ ಅಭಿಪ್ರಾಯವಿದೆ. ಎರಡನೇ ಶನಿದೆಸೆ ವೇಳೆ ಮಾಡಿರುವಂತ ಕೆಲವು ನಿರ್ಧಾರಗಳು ಗುರು ಮತ್ತು ಯುರೇನಸ್ ನ ಆವೃತ್ತಿಯೊಂದಿಗೆ ಬಂದು ಒಬ್ಬನ ಜೀವನದ ಜೋತಿಷ್ಯ ಚಕ್ರದ ಮೇಲೆ ನೇರ ಪರಿಣಾಮ ಬೀರುವುದು.

English summary

Astrology Life Cycle According To Your Age

It is a belief that life is a cycle that begins in birth and culminates in death. Between these two extremities, lies the beautiful journey of life. Now what happens in your infancy is pretty much the same for everyone. As an individual who has just been brought to the universe, all that you do is to eat and sleep. With time, you learn how to stand up, walk and play. After that, you are taught the basics of life (this includes both academic education in the form of ABC or the numbers as well as the moral education that your parents impart to you.) It is only after the second decade that your life actually begins.
X
Desktop Bottom Promotion