For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಅಕ್ಷಯ ತೃತೀಯದಂದು ಪಠಿಸಬೇಕಾದ ಮಂತ್ರ

  By Deepu
  |

  ಅಕ್ಷಯ ತೃತೀಯವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಹೆಚ್ಚು ಪವಿತ್ರವಾದುದು ಎಂಬುದಾಗಿ ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳು ಎಂಬ ಅರ್ಥವನ್ನು ಅಕ್ಷಯ ತೃತೀಯ ಸಾರಿ ಹೇಳುತ್ತದೆ. ಈ ದಿನದಂದು ನೀವು ಏನು ಮಾಡಿದರೂ ಅದು ನಿಮಗೆ ದೊರೆಯುತ್ತದೆ ಅಂತೆಯೇ ನೀವು ಪಡೆದುಕೊಳ್ಳುವ ಲಾಭ ದುಪ್ಪಟ್ಟಾಗುತ್ತದೆ ಎಂಬ ವಿಶ್ವಾಸವಿದೆ.

  ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ತಮ್ಮ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಜನರು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಮರಳಿ ಅವರಿಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ದಿನವು ಹೊಂದಿದೆ. ಅಂತೆಯೇ ಯಾವುದೇ ಹೊಸ ಕೆಲಸಗಳನ್ನು ನೀವು ಈ ದಿನದಂದು ಆರಂಭಿಸಿದರೆ ನಿಮಗೆ ಅದು ಶುಭವಾಗುತ್ತದೆ ಎಂದಾಗಿದೆ. ವಿವಾಹಗಳಿಗೆ ಈ ದಿನ ಶುಭ ಎಂಬ ನಂಬಿಕೆ ಇದೆ. ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ.

  ಇಂದಿನ ಲೇಖನದಲ್ಲಿ ನಿಮಗೆ ಇನ್ನಷ್ಟು ಶುಭವನ್ನು ಕಂಡುಕೊಳ್ಳಲು ಸಹಕಾರಿಯಾಗಿರುವ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿರುವ ಮಂತ್ರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈ ದಿನದಂದು ವಿಶೇಷವಾಗಿ ಈ ಮಂತ್ರಗಳನ್ನು ಉಚ್ಛರಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ ಎಂದಾಗಿದೆ.

  ಈ ದಿನ ಸಾವಿರಾರು ವಿವಾಹಗಳನ್ನು ನೆರವೇರಿಸಲಾಗುತ್ತದೆ. ಅಂತೆಯೇ ವಧು ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಈ ದಿನ ಪ್ರಶಸ್ತ ಎಂದೆನಿಸಿದೆ. ಇನ್ನು ನಿಮ್ಮ ಜಾತಕದಲ್ಲಿರುವ ಅನಿಷ್ಟಗಳನ್ನು ದೂರಮಾಡುವುದಕ್ಕಾಗಿ ಅದಕ್ಕೆ ತಕ್ಕಂತಹ ಮಂತ್ರಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಅಲ್ಲದೆ ನಿಮ್ಮ ನಕ್ಷತ್ರ ಜನ್ಮದಿನಗಳಲ್ಲಿ ಏನಾದರೂ ದೋಷವಿದ್ದರೂ ಕೂಡ ಈ ಮಂತ್ರಗಳು ಅದನ್ನು ಹೋಗಲಾಡಿಸಲು ನೆರವನ್ನು ನೀಡಲಿವೆ. ಬನ್ನಿ ಅವುಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.....

  ಅಕ್ಷಯ ತೃತೀಯದಂದು ಪಠಿಸಬೇಕಾದ ಮಂತ್ರ

  ಮೇಷ ರಾಶಿ

  ಮೇಷ ರಾಶಿ

  ಮುಂಬರಲಿರುವ ದಿನಗಳು ಮೇಷ ರಾಶಿಯವರಿಗೆ ಅತ್ಯಂತ ಅದೃಷ್ಟಕರವಾದ ವರ್ಷ ಎಂದು ಹೇಳಬಹುದು. ಈ ವರ್ಷ ನೀವು ನಿಮ್ಮ ಮನೆಯನ್ನು ನವೀಕರಿಸುವುದು ಅಥವಾ ಹೊಸ ಮನೆಯ ಖರೀದಿ ಮಾಡುವ ಆಕಾಂಕ್ಷೆಯನ್ನು ಹೊಂದುವಿರಿ. ನಿಮ್ಮ ಕನಸು ನನಸಾಗುವ ಸಾಧ್ಯತೆಗಳೂ ಹೆಚ್ಚಿವೆ. ವೃತ್ತಿ ಜೀವನದಲ್ಲಿ ಕೆಲವು ಪ್ರಶಂಸೆ, ಪ್ರಚಾರ ಅಥವಾ ವರ್ಗಾವಣೆಯಮೂಲಕ ಧನಾತ್ಮಕ ಬದಲಾವಣೆಯನ್ನು ಅನುಭವಿಸುವಿರಿ. ಒಟ್ಟಿನಲ್ಲಿ ಈ ವರ್ಷ ನಿಮಗೆ ಉತ್ತಮ ವರ್ಷವಾಗುವುದು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಗ್ರೀಕ್ ಶಾಸ್ತ್ರದ ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಮಂತ್ರ

  ಮೇಷ ರಾಶಿಯವರು ಈ ಮಂತ್ರವನ್ನು ಪಠಿಸಬೇಕು 'ಆಮ್ ಏಂಗ್ ಕ್ಲಿಂಗ್ ಸಾಂಗ್' ಇದು ಧನ ಮತ್ತು ಸಮೃದ್ಧಿಯನ್ನು ಈ ರಾಶಿಯವರಿಗೆ ತರಲಿದೆ. ಅಂತೆಯೇ ಈ ರಾಶಿಯವರು ಧಾನ್ಯಗಳು, ಗೋಧಿ, ಕೆಂಪು ಬಣ್ಣದ ಬಟ್ಟೆಗಳು, ತಾಮ್ರ ಮತ್ತು ಕಾಕಂಬಿಗಳನ್ನು ದಾನ ಮಾಡಿದಲ್ಲಿ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

  ವೃಷಭ ರಾಶಿ

  ವೃಷಭ ರಾಶಿ

  ವೃಷಭ ರಾಶಿಯವರು ಅನೇಕ ಸವಾಲುಗಳನ್ನು ಎದುರಿಸ ಬೇಕಾಗುವುದು. ನೀವು ನಿರೀಕ್ಷಿಸಿದ ಮಟ್ಟದಲ್ಲಿ ನಿಮ್ಮ ವ್ಯಾಪಾರ ವಹಿವಾಟುಗಳು ನಡೆಯಲಾರವು. ಹಾಗಾಗಿ ನೀವು ಉನ್ನತ ಮಟ್ಟ ಏರಲು ಹಾಗೂ ನಿಮ್ಮ ಗುರಿಯನ್ನು ತಲುಪಲು ಅಧಿಕ ಶ್ರಮವನ್ನು ವಹಿಸಬೇಕು ಎಂದು ಹೇಳಲಾಗುತ್ತದೆ. ಕೆಲಸದ ಆರಂಭದಲ್ಲಿ ತಂದೆ ಅಥವಾ ಮನೆಯ ಹಿರಿಯ ಜನರಿಂದ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ.

  ವೃಷಭ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

  ಆಮ್ ಏಂಗ್ ಕ್ಲಿಂಗ್ ಶ್ರಿಂಗ್ ಈ ಮಂತ್ರವನ್ನು ನಿತ್ಯವೂ ಪಠಿಸುವುದು ನಿಮಗೆ ನಿಯಮಿತವಾಗಿ ಸಂತಸ ಮತ್ತು ಸಮಾಧಾನವನ್ನು ಉಂಟುಮಾಡಲಿದೆ. ಹಸು ಮತ್ತು ಕರು,ವಜ್ರಗಳು, ಕುದುರೆ ಮೊದಲಾದವುಗಳನ್ನು ದಾನ ಮಾಡಿದಲ್ಲಿ ಅಂತೆಯೇ ಹಸು ಕರು, ಕುದುರೆ ಬಿಳಿ ಬಣ್ಣದಲ್ಲಿದ್ದಲ್ಲಿ ಮತ್ತು ಅಕ್ಕಿ ಹಾಗೂ ಸುಗಂಧ ದ್ರವ್ಯಗಳನ್ನು ದಾನ ಮಾಡಬಹುದಾಗಿದೆ.

  ಮಿಥುನ

  ಮಿಥುನ

  ಮಿಥುನ ರಾಶಿಯವರರಿಗೆ ಮುಂಬರಲಿರುವ ದಿನಗಳು ಅತ್ಯಂತ ಉತ್ತಮವಾಗಲಿದೆ. ಕಲೆ, ವಿನ್ಯಾಸ, ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವೃತ್ತಿಯನ್ನು ತೊಡಗಿಸಿಕೊಂಡವರಿಗೆ ಉತ್ತಮ ಲಾಭ ಮತ್ತು ಶ್ರೆಯಸ್ಸು ಉಂಟಾಗುವುದು. ಸ್ಪಲ್ಪ ದಿನಗಳ ಕಾಲ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆಗಳಿವೆ. ಸೂಕ್ತ ರೀತಿಯಲ್ಲಿ ಗೊಂದಲವನ್ನು ಪರಿಹರಿಸಿಕೊಂಡರೆ ಸಮಸ್ಯೆಗಳು ಬಗೆಹರಿಯುವುದು. ಈ ವರ್ಷ ವಿದ್ಯಾರ್ಥಿಗಳು ಸಕಾರಾತ್ಮಕ ಬದಲಾವಣೆಯನ್ನು ಅನುಭವಿಸುವರು. ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ.

  ಮಿಥುನ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

  ಆಮ್ ಕ್ಲಿಂಗ್ ಏಂಗ್ ಸಾಂಗ್ ನಿಮ್ಮ ಜೀವನದಲ್ಲಿ ಈ ಮಂತ್ರವನ್ನು ಉಚ್ಛರಿಸುವುದರಿಂದ ಶಾಂತಿ ಸಮಾಧಾನ ಉಂಟಾಗಲಿದೆ. ಹಸಿರು ಬಣ್ಣದಲ್ಲಿರುವ ಬಟ್ಟೆಗಳು, ಧಾನ್ಯಗಳು, ಪಚ್ಚೆ, ಚಿನ್ನ ಮತ್ತು ಸಿಂಪಿಗಳನ್ನು ದಾನ ಮಾಡುವುದು ಉತ್ತಮ.

  ಕರ್ಕ

  ಕರ್ಕ

  ಕರ್ಕಾಟಕ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

  ಆಮ್ ಏಂಗ್ ಕ್ಲಿಂಗ್ ಶ್ರಿಂಗ್ ಇದು ಧನ ಸಂಪತ್ತನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಈ ರಾಶಿಯವರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಲ್ಲಿ ಈ ಮಂತ್ರವು ಸಮಾಧಾನವನ್ನು ತರಲಿದೆ. ತುಪ್ಪ, ಸಕ್ಕರೆ, ಹಾಲು, ಮೊಸರು, ಸುಗಂಧ ದ್ರವ್ಯಗಳು, ಬಟ್ಟೆಗಳು ಮೊದಲಾದವನ್ನು ಈ ರಾಶಿಯವರು ದಾನ ಮಾಡಬೇಕು. ಬಿಳಿ ಬಣ್ಣದಲ್ಲಿರುವ ವಸ್ತ್ರಗಳು, ಅಕ್ಕಿ, ಹರಳುಗಳು ಮತ್ತು ಬಿದಿರಿನ ಬುಟ್ಟಿಗಳನ್ನು ಈ ರಾಶಿಯವರು ದಾನ ಮಾಡಬಹುದಾಗಿದೆ.

  ಸಿಂಹ ರಾಶಿ

  ಸಿಂಹ ರಾಶಿ

  ಸಿಂಹ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

  ಆಮ್ ಹ್ರಿಂಗ್ ಶ್ರಿಂಗ್ ಶ್ರಂಗ್ ಈ ಮಂತ್ರವನ್ನು ಪಠಿಸುವುದರಿಂದ ಸಿಂಹ ರಾಶಿಯವರಿಗೆ ಯಶಸ್ಸು ದೊರೆಯುತ್ತದೆ. ದನ, ಕೆಂಪು ಹೂವುಗಳು, ಕೆಂಪು ಬಟ್ಟೆಗಳು,

  ತಾಮ್ರ, ಕಾಕಂಬಿ, ಚಿನ್ನ, ಗೋಧಿಯನ್ನು ಇವರುಗಳು ದಾನ ಮಾಡಿದಲ್ಲಿ ಸುಖ ಶಾಂತಿ ನೆಮ್ಮದಿ ಇವರದಾಗುತ್ತದೆ.

  ಕನ್ಯಾ ರಾಶಿ

  ಕನ್ಯಾ ರಾಶಿ

  ಕನ್ಯಾ ರಾಶಿಯವರು ಈ ಮಂತ್ರವನ್ನು ಪಠಿಸಬೇಕು ಆಮ್ ಶ್ರಿಂಗ್ ಏಂಗ್ ಶ್ರಾಂಗ್ ಕನ್ಯಾರಾಶಿಯವರು ಈ ಮಂತ್ರವನ್ನು ಪಠಿಸುವುದರಿಂದ ಅವರಿಗೆ ಸಕಲ ಸಂಪತ್ತು ದೊರೆಯಲಿದೆ. ಹಸಿರು ಬಳೆಗಳು, ಹಸಿರು ದಿರಿಸುಗಳು ಮತ್ತು ಫೆನ್ನಲ್ ಬೀಜಗಳನ್ನು ಇವರುಗಳು ದಾನ ಮಾಡಿದಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ.

  ತುಲಾ ರಾಶಿ

  ತುಲಾ ರಾಶಿ

  ತುಲಾ ರಾಶಿಯವರು ಈ ಮಂತ್ರವನ್ನು ಪಠಿಸಬೇಕು ಆಂಗ್ ಶ್ರಿಂಗ್ ಏಂಗ್ ಶಾಂಗ್ ಬಿಳಿ ಬಟ್ಟೆಗಳು, ಶ್ರೀಗಂಧ, ಸುಗಂಧ ದ್ರವ್ಯ ಮತ್ತು ಸಕ್ಕರೆಯನ್ನು ಈ ರಾಶಿಯವರು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ.

  ವೃಶ್ಚಿಕ

  ವೃಶ್ಚಿಕ

  ವೃಶ್ಚಿಕ ರಾಶಿಯವರು ಈ ಮಂತ್ರವನ್ನು ಉಚ್ಛರಿಸುವುದರಿಂದ ಉತ್ತಮ ಫಲವನ್ನು ಕಂಡುಕೊಳ್ಳಬಹುದಾಗಿದೆ: ಆಮ್ ಏಂಗ್ ಕ್ಲಿಂಗ್ ಶ್ರಿಂಗ್ ಶ್ರೀಗಂಧ, ಹವಳ, ಕೇಸರಿ ಮೊದಲಾದವನ್ನು ಈ ರಾಶಿಯವರು ದಾನ ಮಾಡಬಹುದು.

  ಧನು

  ಧನು

  ಧನು ರಾಶಿಯವರು ಈ ಮಂತ್ರವನ್ನು ಪಠಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್ ಹಳದಿ ಬಣ್ಣದ ಧಾನ್ಯಗಳು, ಹಳದಿ ಬಣ್ಣದ ವಸ್ತ್ರಗಳು ಮತ್ತು ಪುಷ್ಪ ಪಾತ್ರೆಗಳನ್ನು ಇವರುಗಳು ದಾನ ಮಾಡಬಹುದಾಗಿದೆ.

  ಮಕರ

  ಮಕರ

  ಮಕರ ರಾಶಿಯವರು ಈ ಮಂತ್ರವನ್ನು ಉಚ್ಛರಿಸಿ ಉತ್ತಮ ಫಲಗಳನ್ನು ಕಂಡುಕೊಳ್ಳಬಹುದಾಗಿದೆ ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್ ಎಳ್ಳು, ಎಣ್ಣೆ, ಕಾಳುಗಳು, ಹಸುಗಳನ್ನು ಈ ರಾಶಿಯವರು ದಾನ ಮಾಡಬಹುದಾಗಿದೆ.

  ಕುಂಭ ರಾಶಿ

  ಕುಂಭ ರಾಶಿ

  ಆಮ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಮಂತ್ರವನ್ನು ಈ ರಾಶಿಯವರು ಉಚ್ಛರಿಸಿದಲ್ಲಿ ಲಕ್ಷ್ಮೀ ಕಟಾಕ್ಷ ಇವರ ಮೇಲೆ ಉಂಟಾಗುತ್ತದೆ. ಬೆಳ್ಳಿ, ಕಬ್ಬಿಣ, ನೀಲ ಮಣಿ, ಕಪ್ಪು ಬಟ್ಟೆಗಳು, ಕಂಬಳಿಗಳು ಮತ್ತು ಛತ್ರಿಯನ್ನು ಇವರು ದಾನ ಮಾಡಿದಲ್ಲಿ ಶುಭ ಫಲಗಳನ್ನು ಕಂಡುಕೊಳ್ಳಬಹುದಾಗಿದೆ.

  ಮೀನ ರಾಶಿ

  ಮೀನ ರಾಶಿ

  ಲಕ್ಷ್ಮೀ ದೇವಿಯು ಈ ರಾಶಿಯವರ ಮೇಲೆ ಖಂಡಿತವಾಗಿ ತಮ್ಮ ದಯೆಯನ್ನು ಬೀರುತ್ತಾರೆ ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್ ಚಿನ್ನ, ಕೇಸರಿ, ಅರಿಶಿನ, ಸಕ್ಕರೆ, ಬೆಳ್ಳಿ, ಉಪ್ಪು, ಜೇನು ಮತ್ತು ಕುದುರೆಗಳನ್ನು ದಾನ ಮಾಡುವುದರಿಂದ ಇವರಿಗೆ ಶುಭ ಫಲಗಳು ದೊರೆಯಲಿವೆ.

  English summary

  Akshaya Tritiya Mantras, Stotras Based on Each Zodiac Signs

  There are specific things you must donate or give away based on your zodiac signs. Doing so will help negate the negative effects of your zodiac signs.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more