ಇದೆಲ್ಲಾ ನೈಸರ್ಗಿಕ ಕ್ರಿಯೆ! ಎಲ್ಲದಕ್ಕೂ ಪುರುಷರೇ ಕಾರಣರಲ್ಲ!!

By: Deepak M
Subscribe to Boldsky

ಪುರುಷರು ಬಲಶಾಲಿಗಳು, ಅವರಿಗೆ ಧೈರ್ಯ ಹೆಚ್ಚು, ಶಕ್ತಿ ಹೆಚ್ಚು, ಮಾನಸಿಕ ಸಾಮರ್ಥ್ಯ ಹೆಚ್ಚು, ಭಾವನಾತ್ಮಕವಾಗಿ ಹೆಚ್ಚು ದೃಢವಾಗಿರುತ್ತಾರೆ ಇತ್ಯಾದಿ ಇತ್ಯಾದಿ ಅಂಶಗಳು ಅವರ ಕುರಿತಾಗಿ ಇರುತ್ತದೆ. ಆದರೆ ನಾವು ಹೇಳಲು ಹೊರಟಿರುವುದು ಪುರುಷರು ಯಾವ ವಿಚಾರದಲ್ಲಿ ಸ್ವಲ್ಪ ವಿಚಿತ್ರವಾಗಿ ಆಡುತ್ತಾರೆ ಎಂಬುದರ ಕುರಿತಾಗಿ.  ಲೈಂಗಿಕ ಸಮಸ್ಯೆಗೆ, ಮಾತ್ರೆಗಳು ಬೇಕಾಗಿಲ್ಲ! ಈ ಟಿಪ್ಸ್ ಅನುಸರಿಸಿ

ಎಲ್ಲರಿಗೂ ತಿಳಿದಿರುವಂತೆ ಕೆಲವು ಪುರುಷರಿಗೆ ಲೈಂಗಿಕಾಸಕ್ತಿ ಎಂದರೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಪ್ರೀತಿ ಇರುತ್ತದೆ. ಸಂಗಾತಿಯ ಜೊತೆಗೆ ಸಮಯ ಸಿಕ್ಕರೆ ಮತ್ತು ಸಂಗಾತಿ ಸಹಕರಿಸಿದರೆ ಅವರು ಲೈಂಗಿಕ ಕ್ರಿಯೆ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಆದರೆ ಲೈಂಗಿಕ ಕ್ರಿಯೆ ಮಾಡಲು ಇಷ್ಟು ಉತ್ಸಾಹ ತೋರುವ ಇವರು, ಲೈಂಗಿಕ ಕ್ರಿಯೆಯ ನಂತರ ಇದ್ದಕ್ಕಿದ್ದಂತೆ ಒಂದು ವಿಚಿತ್ರ ಬಗೆಯಲ್ಲಿ ವರ್ತಿಸಲು ಶುರು ಮಾಡುತ್ತಾರೆ.   ಲೈಂಗಿಕ ಜೀವನಕ್ಕೆ ಅಡ್ಡಿಯಾಗುವ ಆರು ಆರೋಗ್ಯ ಸಮಸ್ಯೆಗಳು!

ಇದು ಅಷ್ಟೊತ್ತಿನವರೆಗೆ ಇದ್ದ ಮೂಡ್ ಅನ್ನು ಹಾಳು ಮಾಡುವ ಮಟ್ಟಿಗೆ ಇವರ ವರ್ತನೆ ಇರುತ್ತದೆ. ಬನ್ನಿ ಈ ಅಂಕಣದಲ್ಲಿ ಕೆಲವು ಪುರುಷರ ಈ ಬಗೆಗಿನ ವರ್ತನೆ ಹೇಗಿರುತ್ತದೆ ಹಾಗು ಅದಕ್ಕೆ ಕಾರಣಗಳು ಏನು ಎಂಬುದನ್ನು ನಾವು ಚರ್ಚಿಸಿದ್ದೇವೆ. ಸಂಗಾತಿಗೆ ಮುಜುಗರ ಮತ್ತು ಅಚ್ಚರಿ ಹಾಗು ಬೇಸರ ತರಿಸುವ ಈ ವರ್ತನೆಗಳ ಬಗ್ಗೆ ನೀವು ಸಹ ತಿಳಿದುಕೊಳ್ಳಿ ಮತ್ತು ಈ ವರ್ತನೆಗಳು ನಿಮ್ಮಲ್ಲಿದ್ದಲ್ಲಿ ಸರಿಪಡಿಸಿಕೊಳ್ಳಿ......    

ದುಃಖಪಡುತ್ತಾರೆ!

ದುಃಖಪಡುತ್ತಾರೆ!

ಅಧ್ಯಯನಕಾರರು ಸಾಬೀತುಪಡಿಸಿರುವಂತೆ ಸಂಭೋಗದ ನಂತರ ಪುರುಷರು ದುಃಖಪಡುತ್ತಾರಂತೆ!. ಈ ಸ್ಥಿತಿಯನ್ನು ಪೋಸ್ಟ್-ಕೊಯ್ಟಲ್ ಟ್ರಿಸ್ಟೀಸ್ಸ್ ಎನ್ನುತ್ತಾರೆ. ವಿವಾಹಪೂರ್ವ, ಅನೈತಿಕ ಲೈಂಗಿಕ ಕ್ರಿಯೆಯಲ್ಲಿ ಇದು ಹೆಚ್ಚಾಗಿ ಕಾಡುತ್ತದೆ. ಪುರುಷರು ಖಿನ್ನ ಮನಸ್ಕರಾಗಿ ಏಕೆ ಹೀಗೆ ಮಾಡಿಬಿಟ್ಟೆ ಎಂದು ಆಲೋಚನೆಗೆ ತೊಡಗುತ್ತಾರೆ.

ನಿದ್ದೆ ಮಾಡುತ್ತಾರೆ

ನಿದ್ದೆ ಮಾಡುತ್ತಾರೆ

ಇದು ಸಾಮಾನ್ಯವಾಗಿ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಖಲನದ ನಂತರ ಪುರುಷರಲ್ಲಿ ಹಲವಾರು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಲೈಂಗಿಕ ಹಾರ್ಮೋನ್‌ಗಳು ಇರುತ್ತವೆ. ಇವು ಪುರುಷರಿಗೆ ವಿಶ್ರಾಂತಿಯನ್ನು ನೀಡುತ್ತವೆ. ಆಗ ಆರಾಮವಾಗಿ ನಿದ್ದೆ ಮಾಡುತ್ತಾರೆ. ಸಂಗಾತಿ ನಿಮ್ಮ ಅಪ್ಪುಗೆ ಹಾಗು ಆರೈಕೆಯನ್ನು ಬಯಸುತ್ತಾರೆ ಕಣ್ರೀ, ಸ್ವಲ್ಪ ಆಕೆಯನ್ನು ನೋಡಿ!.

ಅವರಿಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ

ಅವರಿಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ

ಹಲವಾರು ಪುರುಷರು ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಲು ಕಷ್ಟಪಡುತ್ತಾರೆ. ಇದಕ್ಕೆ ಕಾರಣ ರಕ್ತ ಸಂಚಾರ. ಹೌದು ಶಿಶ್ನವು ನಿಮಿರಿರುವಾಗ ಹೆಚ್ಚಿನ ಪ್ರಮಾಣದ ರಕ್ತವು ಶಿಶ್ನದತ್ತ ಹರಿದಿರುತ್ತದೆ. ನಿಮಿರುವಿಕೆ ಇಳಿಯುವವರೆಗೆ ನೀವು ಮೂತ್ರ ವಿಸರ್ಜನೆ ಮಾಡುವುದು ಕಷ್ಟವಾಗುತ್ತದೆ. ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

ಭಾವನಾತ್ಮಕವಾಗಿ ಬೇರ್ಪಡುತ್ತಾರೆ

ಭಾವನಾತ್ಮಕವಾಗಿ ಬೇರ್ಪಡುತ್ತಾರೆ

ಅಧ್ಯಯನಗಳ ಪ್ರಕಾರ ಸಂಭೋಗದ ನಂತರ ಪುರುಷರು ಸಂಗಾತಿಯ ಕುರಿತು ಕಾಳಜಿ ಮಾಡದೆ ತಮ್ಮ ಕಾರ್ಯದಲ್ಲಿ ನಿರತರಾಗುತ್ತಾರೆ. ಆದರೆ ಮಹಿಳೆ ಸಂಭೋಗದ ನಂತರ ಪುರುಷನ ಪ್ರೀತಿಯನ್ನು ಬಯಸುತ್ತಾಳೆ. ಇದಕ್ಕೆ ಕಾರಣ ಆಕ್ಸಿಟೋಸಿನ್ ಎಂಬುದು ಅಧ್ಯಯನಕಾರರ ಅಭಿಪ್ರಾಯ. ಸ್ವಲ್ಪ ಕಾಳಜಿ ತೋರಿ ಮಾರಾಯ್ರೆ.

ಅವರಿಗೆ ಹೊಟ್ಟೆ ಹಸಿಯುತ್ತೆ!!

ಅವರಿಗೆ ಹೊಟ್ಟೆ ಹಸಿಯುತ್ತೆ!!

ತಮಾಷೆಯಾದರೂ ನಿಜ, ಲೈಂಗಿಕ ಕ್ರಿಯೆಯ ನಂತರ ಕೆಲವು ಪುರುಷರಿಗೆ ಇದ್ದಕ್ಕಿಂದ್ದಂತೆ ಹಸಿವಾಗಲು ಆರಂಭವಾಗುತ್ತದೆ. ಸಂಭೋಗದಲ್ಲಿ ವಿಪರೀತ ಸರ್ಕಸ್ ಮಾಡಿದ ಪುರುಷರು ಕ್ರಿಯೆ ಮುಗಿದ ನಂತರ ತಮ್ಮ ಶಕ್ತಿಯನ್ನು ಕಳೆದುಕೊಂಡು ಆಯಾಸವಾಗಿರುತ್ತಾರೆ. ಆಗ ಅವರಿಗೆ ಹಸಿವಾಗುತ್ತದೆ.

ಅವರಿಗೆ ಮತ್ತೆ ನಿಮಿರುವಿಕೆ ಕಾಣಿಸಿಕೊಳ್ಳುವುದಿಲ.

ಅವರಿಗೆ ಮತ್ತೆ ನಿಮಿರುವಿಕೆ ಕಾಣಿಸಿಕೊಳ್ಳುವುದಿಲ.

ಸಂಭೋಗದ ನಂತರದ ಅವಧಿಯನ್ನು "ಪೋಸ್ಟ್-ಕೊಯಿಟಲ್ ರಿಫ್ರ್ಯಾಕ್ಟರಿ ಪಿರಿಯಡ್" ಎನ್ನುತ್ತಾರೆ. ಇದನ್ನು ಪರಾಕಾಷ್ಠೆಯಿಂದ ಚೇತರಿಸಿಕೊಳ್ಳುವ ಅವಧಿ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಪುರುಷರಿಗೆ ಮತ್ತೆ ಶಿಶ್ನ ನಿಮಿರುವಿಕೆ ಕಾಣಿಸಿಕೊಳ್ಳುವುದಿಲ್ಲ. ಮಹಿಳೆಯರಂತೆ ಒಂದೇ ಲೈಂಗಿಕ ಕ್ರಿಯೆಯಲ್ಲಿ ಪುರುಷರಿಗೆ ಹಲವಾರು ಬಾರಿ ಪರಾಕಾಷ್ಠೆ ಕಾಣಿಸಿಕೊಳ್ಳುವುದಿಲ್ಲ. ಇದಕ್ಕಾಗಿ 30 ನಿಮಿಷಗಳಿಂದ ಒಂದೆರಡು ಗಂಟೆಗಳ ಅವಧಿಯವರೆಗೆ ಅವರಿಗೆ ಸಮಯಾವಕಾಶಬೇಕಾಗುತ್ತದೆ.

 

English summary

What Happens To Men After They Make Out

Here, in this article, we are about to share some of the most bizarre and weird things men do after making love. These are the things that almost all men do and we bet, this surely annoys their partners. Find out more about these weird habits of men that women hate.
Subscribe Newsletter