ಲೈಂಗಿಕ ಸಮಸ್ಯೆಗೆ, ಮಾತ್ರೆಗಳು ಬೇಕಾಗಿಲ್ಲ! ಈ ಟಿಪ್ಸ್ ಅನುಸರಿಸಿ

By: manu
Subscribe to Boldsky

ಕಾಮ, ಮೋಹ, ಮದ, ಮತ್ಸರ ಎನ್ನುವ ಅಂಶಗಳು ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ. ಕೆಲವರು ಇದನ್ನು ಹತೋಟಿಯಲ್ಲಿ ಇಟ್ಟುಕೊಂಡು ಜೀವನ ಸಾಗಿಸುತ್ತಾ ಇರುತ್ತಾರೆ. ಇನ್ನು ಕೆಲವರ ಹತೋಟಿಗೆ ಇದು ಸಿಗದೆ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಕಾಮ ಅದರಲ್ಲೂ ಲೈಂಗಿಕ ಆರೋಗ್ಯದ ಬಗ್ಗೆ. ಲೈಂಗಿಕ ಆರೋಗ್ಯವೆಂದರೆ ನಿಯಮಿತವಾಗಿ ತನ್ನ ಕಾಮನೆಗಳನ್ನು ಪೂರೈಸಿಕೊಳ್ಳುವುದು. ಇದು ಸಾಧ್ಯವಾಗಿಲ್ಲವೆಂದಾದರೆ ಆತನ ಲೈಂಗಿಕ ಆರೋಗ್ಯ ಸರಿಯಾಗಿಲ್ಲವೆಂದು ಹೇಳಬಹುದು. ಲೈಂಗಿಕ ಜೀವನದಲ್ಲಿ ಕಾಮಾಸಕ್ತಿ ಕಡಿಮೆ ಮಾಡುವ ಆಹಾರಗಳು

ಪ್ರಾಣಿಗಳು ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಆದರೆ ಅವುಗಳಿಗೆ ಸಮಯ ಹಾಗೂ ಋತುವಿನ ನಿರ್ಬಂಧವಿರುತ್ತದೆ. ಆಯಾಯ ಋತುವಿನಲ್ಲಿ ಮಾತ್ರ ಪ್ರಾಣಿಗಳು ಲೈಂಗಿಕ ಕ್ರಿಯೆ ನಡೆಸುತ್ತವೆ. ಆದರೆ ಮನುಷ್ಯ ಹಾಗಲ್ಲ. ಆತನಿಗೆ ಪ್ರತಿನಿತ್ಯವು ಲೈಂಗಿಕಕ್ರಿಯೆ ನಡೆಸುವಂತಹ ಶಕ್ತಿಯಿದೆ. ಪ್ರತಿದಿನವೂ ಲೈಂಗಿಕ ಕ್ರಿಯೆ ಸರಿಯಾಗಿ ಆಗದಿದ್ದರೆ ಆಗ ಖಿನ್ನತೆ, ನಿರಾಶೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲೈಂಗಿಕ ಜೀವನಕ್ಕೆ ಅಡ್ಡಿಯಾಗುವ ಆರು ಆರೋಗ್ಯ ಸಮಸ್ಯೆಗಳು!

ಕೆಲವರು ಕಾಮೋತ್ತೇಜನಕ ಮಾತ್ರೆಗಳು, ಔಷಧಿ ಹಾಗೂ ಆಲ್ಕೋಹಾಲ್‌ನ ಸೇವನೆ ಮಾಡಿಕೊಂಡು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗಬಹುದು. ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡುವ 10 ಆಹಾರಗಳು 

ಹಾಗಾಗಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಬಳಸಿಕೊಂಡರೆ ತುಂಬಾನೇ ಒಳ್ಳೆಯದು. ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ನಿಮ್ಮ ಲೈಂಗಿಕ ಜೀವನವು ಸುಗಮವಾಗುವುದು....  

ಒತ್ತಡಕ್ಕೆ ಬ್ರೇಕ್ ಹಾಕಿ!

ಒತ್ತಡಕ್ಕೆ ಬ್ರೇಕ್ ಹಾಕಿ!

ಲೈಂಗಿಕ ಜೀವನಕ್ಕೆ ದೊಡ್ಡ ತೊಡಕು ಉಂಟು ಮಾಡುವ ವಿಷಯವೆಂದರೆ ಅದು ಒತ್ತಡ. ನೀವು ಒತ್ತಡದಿಂದ ಮುಕ್ತರಾಗಲು ಎಲ್ಲಾ ರೀತಿಯ ಪ್ರಯತ್ನ ಮಾಡಿ.

ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ಬೇಡ

ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ಬೇಡ

ಸಂಗಾತಿಯ ಜತೆ ಲೈಂಗಿಕ ಇತಿಮಿತಿ, ಆಸೆಗಳು ಹಾಗೂ ಏನನ್ನು ಬಯಸುತ್ತೀರಿ ಎನ್ನುವ ಬಗ್ಗೆ ಮಾತನಾಡಿ. ಒತ್ತಾಯಪೂರ್ವಕವಾಗಿ ಮಾಡುವಂತಹ ಲೈಂಗಿಕ ಕ್ರಿಯೆಯು ನಿಮಗೆ ಯಾವುದೇ ಸುಖವನ್ನು ನೀಡದೆ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿ

ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿ

ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಿ. ನಿಮ್ಮ ಆರೋಗ್ಯಕ್ಕೆ ಹೇಗೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕೋ ಅದೇ ರೀತಿಯಲ್ಲಿ ಲೈಂಗಿಕ ಆರೋಗ್ಯಕ್ಕೂ ಕೆಲವೊಂದು ಒಳ್ಳೆಯ ಪೋಷಕಾಂಶಗಳು ಬೇಕಾಗಿರುತ್ತದೆ.

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಎಷ್ಟು ಸಾಧ್ಯವೋ ಅಷ್ಟು ಮಟ್ಟಿಗೆ ನೀರು ಕುಡಿಯಿರಿ. ಯಾಕೆಂದರೆ ನಿರ್ಜಲೀಕರಣದಿಂದ ಯೋನಿ ಶುಷ್ಕತೆ ಮತ್ತು ನಿಮಿರುವಿಕೆ ಅಸಾಮಾನ್ಯವಾಗಬಹುದು.

ಧೂಮಪಾನ ನಿಲ್ಲಿಸಿ

ಧೂಮಪಾನ ನಿಲ್ಲಿಸಿ

ಧೂಮಪಾನ ಮಾಡುತ್ತಾ ಇದ್ದರೆ ಅದನ್ನು ಬಿಟ್ಟುಬಿಡಿ. ಯಾಕೆಂದರೆ ಇದು ಲೈಂಗಿಕ ಜೀವನ ಹಾಗೂ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

ಮಾನಸಿಕ ತೊಂದರೆಗೆ ಮದ್ದು ಮಾಡಿ

ಮಾನಸಿಕ ತೊಂದರೆಗೆ ಮದ್ದು ಮಾಡಿ

ಲೈಂಗಿಕ ಕ್ರಿಯೆಯ ವೇಳೆ ಮಾನಸಿಕವಾಗಿ ನಿಮಗೆ ಯಾವುದೇ ಸಮಸ್ಯೆಯಾಗುತ್ತಾ ಇದ್ದರೆ ಆಗ ನೀವು ಮನೋತಜ್ಞರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಿ.

ಜನನಾಂಗಗಳ ಸಮಸ್ಯೆ ಇದ್ದರೆ

ಜನನಾಂಗಗಳ ಸಮಸ್ಯೆ ಇದ್ದರೆ

ಜನನಾಂಗಗಳಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಕಾಯಿಲೆಗಳನ್ನು ಪರೀಕ್ಷಿಸಿಕೊಳ್ಳಲು ಮಹಿಳೆಯರು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಬೇಕು. ಪುರುಷರು ಕೂಡ ಏನಾದರೂ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಯಾಗಬೇಕು.

ಕಾಂಡೋಮ್ ಬಳಸಲೇಬೇಕು

ಕಾಂಡೋಮ್ ಬಳಸಲೇಬೇಕು

ಒಂದಕ್ಕಿಂತ ಹೆಚ್ಚಿನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾ ಇದ್ದರೆ ಲೈಂಗಿಕ ರೋಗಗಳನ್ನು ತಪ್ಪಿಸಲು ಕಾಂಡೋಮ್ ಬಳಸಲೇಬೇಕು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ

ಲೈಂಗಿಕ ಕ್ರಿಯೆ ನಡೆಸುವ ಜಾಗದಲ್ಲಿ ಹೆಚ್ಚಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಯಾಕೆಂದರೆ ಸಣ್ಣ ಕಣವು ಜನನಾಂಗದೊಳಗೆ ಹೋದರೆ ಅದರಿಂದ ಸೋಂಕು ಉಂಟಾಗಬಹುದು.

ಲೈಂಗಿಕ ಕ್ರಿಯೆ ಮೊದಲು...

ಲೈಂಗಿಕ ಕ್ರಿಯೆ ಮೊದಲು...

ಮಹಿಳೆಯರು ಲೈಂಗಿಕ ಕ್ರಿಯೆ ಮೊದಲು ಹಾಗೂ ಬಳಿಕ ಮೂತ್ರ ವಿಸರ್ಜನೆ ಮಾಡಬೇಕು. ಇದರಿಂದ ಯಾವುದೇ ಕಣಗಳು ಇದ್ದರೂ ಅದು ಹೊರಹೋಗುವುದು. ಇದರಿಂದ ಯುಟಿಐನಂತಹ ಸೋಂಕನ್ನು ತಡೆಗಟ್ಟಬಹುದು.

 
English summary

Best Tips To Improve Sexual Health You Must Read!

If we are not healthy sexually, it could give rise to problems such as erectile dysfunction, frigidity, frustration and even depression, due to the lack of action in the bedroom! So, just like we take care of the other aspects of our health, we must also give importance to our sexual health.
Subscribe Newsletter