For Quick Alerts
ALLOW NOTIFICATIONS  
For Daily Alerts

ಲೈಂಗಿಕ ಜೀವನಕ್ಕೆ ಅಡ್ಡಿಯಾಗುವ ಆರು ಆರೋಗ್ಯ ಸಮಸ್ಯೆಗಳು!

By Arpitha Rao
|

ನೀವು ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದರೆ ಸೆಕ್ಸ್ ಬಗ್ಗೆ ಚಿಂತಿಸಿರಲಿಕ್ಕಿಲ್ಲ. ಆದರೆ ತುಂಬಾ ಸಮಯದಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಲೈಂಗಿಕ ಜೀವನದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಅತ್ಯಂತ ದೀರ್ಘಕಾಲದ ಸಮಸ್ಯೆಗಳು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡುವ 10 ಆಹಾರಗಳು

ಮಧುಮೇಹ

ಮಧುಮೇಹ

ರಕ್ತದಲ್ಲಿ ಅತಿಯಾದ ಸಕ್ಕರೆ ಅಂಶದಿಂದಾಗಿ ಸಾಕಷ್ಟು ಸಮಸ್ಯೆಗಳು ಸಂಭವಿಸಬಹುದು ಅದರಲ್ಲಿ ಲೈಂಗಿಕ ನಿಷ್ಕ್ರಿಯತೆಯೂ ಕೂಡ ಒಂದು.ಮಧುಮೇಹವನ್ನು ಹೊಂದಿರುವ ಶೇಖಡಾ 60 ರಿಂದ 70 ರಷ್ಟು ಪುರುಷರಿಗೆ ನಿಮಿರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಧುಮೇಹ

ಮಧುಮೇಹ

ಇದಕ್ಕೆ ಕಾರಣ ಮಧುಮೇಹವಿರುವವರ ಶಿಶ್ನಕ್ಕೆ ರಕ್ತದ ಹರಿಯುವಿಕೆ ಪರಿಣಾಮ ಬೀರುತ್ತದೆ. ಇದಲ್ಲದೆ ಮಧುಮೇಹ ನರ ದೌರ್ಬಲ್ಯವನ್ನು ಕೂಡ ನೀಡುತ್ತದೆ. ಇದರ ಪರಿಣಾಮವಾಗಿ ನರಗಳ ನಿಯಂತ್ರಣಕ್ಕೆ ಸೂಕ್ತ ಸಂಕೇತಗಳು ದೊರೆಯುವುದಿಲ್ಲ.

ಖಿನ್ನತೆ

ಖಿನ್ನತೆ

ಲೈಂಗಿಕ ಜೀವನವನ್ನು ಆನಂದಿಸಲು ಸೆಕ್ಸ್ ಬಯಕೆ ಇರಬೇಕು. ಆದರೆ ಎಲ್ಲಾ ಬಯಕೆಗಳು ಮೆದುಳಿನಿಂದ ಬರುವುದರಿಂದ ಲೈಂಗಿಕ ಬಯಕೆ ನಿಯಂತ್ರಿಸುವ ನರಗಳ ಸಂಕೇತ ತಪ್ಪಿದಲ್ಲಿ ಲೈಂಗಿಕ ನಿಷ್ಕ್ರಿಯತೆ ಉಂಟಾಗಬಹುದು. ದೀರ್ಘ ಕಾಲದ ಖಿನ್ನತೆಯನ್ನು ಹೊಂದಿರುವವರು ಈ ರೀತಿಯ ಸಮಸ್ಯೆ ಅನುಭವಿಸುತ್ತಾರೆ. ಖಿನ್ನತೆಯನ್ನು ಹೋಗಲಾಡಿಸಲು ವೈದ್ಯರು ನೀಡುವ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೂಡ ಲೈಂಗಿಕ ಆಸಕ್ತಿ ಕುಂದುತ್ತದೆ.

ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು

ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು

ಜನನಾಂಗ ಭಾಗಕ್ಕೆ ರಕ್ತ ಸಂಚಾರವಾಗುವ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಾಗ ಕೂಡ ಇದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಂಭವಿಸಿದರೆ ಅಂದರೆ ಅಧಿಕ ರಕ್ತದೊತ್ತಡ ಮತ್ತು ಅಪಧಮನಿ ಗಟ್ಟಿಯಾಗುವಿಕೆ ಇಂತಹ ಸಮಸ್ಯೆಯಿಂದ ಪುರುಷರಿಗೆ ಲೈಂಗಿಕ ನಿಷ್ಕ್ರಿಯತೆ ಸಮಸ್ಯೆ ಉಂಟಾಗುತ್ತದೆ.

ಬೆನ್ನು ನೋವು

ಬೆನ್ನು ನೋವು

ಬೆನ್ನು ನೋವು ನಿಮ್ಮ ಲೈಂಗಿಕ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಪರೋಕ್ಷವಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಹರ್ನಿಯೇಟೆಡ್ ಡಿಸ್ಕ್ ಮತ್ತು ಬೆನ್ನುಹುರಿ ಮೂಳೆಯ ಕಾರಣದಿಂದ ನೋವು ಕಾಣಿಸಿಕೊಂಡು ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆನ್ನು ನೋವು

ಬೆನ್ನು ನೋವು

ಇತ್ತೀಚಿಗೆ ನಡೆಸಿದ ಸಮೀಕ್ಷೆ ಪ್ರಕಾರ ಬೆನ್ನು ನೋವನ್ನು ಹೊಂದಿರುವ ಶೇಖಡಾ 61 ರಷ್ಟು ಜನರು ಲೈಂಗಿಕತೆಯನ್ನು ಬಯಸುವುದಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಬೆನ್ನು ನೋವು ಪ್ರಾಥಮಿಕ ಹಂತದಲ್ಲಿರುವಾಗಲೇ ಯೋಗ,ವ್ಯಾಯಾಮ ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ.

ಅನೀಮಿಯಾ

ಅನೀಮಿಯಾ

ಅನೀಮಿಯಾದಿಂದ ಲೈಂಗಿಕತೆಗೆ ತೊಂದರೆ ಆಗಲಿಕ್ಕಿಲ್ಲ. ಆದರೆ ಇದು ನಿಶ್ಯಕ್ತಿಯನ್ನು ನೀಡಬಹುದು. ಪುರುಷರಲ್ಲಿ ಅನೀಮಿಯಾ ನಿಮಿರುವಿಕೆ ತೊಂದರೆ ಮತ್ತು ಲೈಂಗಿಕ ನಿರಾಸಕ್ತಿ ಉಂಟು ಮಾಡಬಹುದು. ಬೇರೆ ಸಮಸ್ಯೆಗಳಿಗೆ ಹೋಲಿಸಿದರೆ ಈ ತೊಂದರೆಯಿಂದ ಸುಲಭವಾಗಿ ಜೀವನ ಶೈಲಿ ಬದಲಾಯಿಸಿಕೊಂಡು ಪರಿಹಾರ ಕಂಡುಕೊಳ್ಳಬಹುದು.

ಮೆನೋಪಾಸ್

ಮೆನೋಪಾಸ್

ಹಾರ್ಮೊನಿನ ಬದಲಾವಣೆ ಮತ್ತು ನಿರಂತರತೆ ಮಹಿಳೆಯರಿಗೆ ಲೈಂಗಿಕಾಸಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಮೆನೋಪಾಸ್‌ ನ ಸಮಯದಲ್ಲಿ ಮಹಿಳೆಯರಿಗೆ ಹಾರ್ಮೋನಿನ ಬದಲಾವಣೆಯಿಂದಾಗಿ ಲೈಂಗಿಕ ನಿರಾಸಕ್ತಿ ಉಂಟಾಗುತ್ತದೆ. ಜೊತೆಗೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದನ್ನು ಸರಿಯಾದ ಸಲಹೆ ಮತ್ತು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.

English summary

Top 6 health problems ruining your sex life

Sex might not be the first thing on your mind when you’re suffering from a health problem. But with health issues that stick around for a long period of time, you should think about their effects on your sex life.
X
Desktop Bottom Promotion