ದೇಹದ ಮೇಲಿರುವ ಮಚ್ಚೆ ನಿಮ್ಮ ಭವಿಷ್ಯದ ಬಗ್ಗೆ ಹೇಳುತ್ತೇ!

By: manu
Subscribe to Boldsky

ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿದ್ದರೂ ಆತನ ದೇಹದ ಯಾವುದಾದರೊಂದು ಭಾಗದಲ್ಲಿ ಮಚ್ಚೆ ಎನ್ನುವುದು ಇದ್ದೇ ಇರುತ್ತದೆ. ಕೆಲವು ಸಲ ಏನೇ ಅವಘಡವಾದರೂ ಮಚ್ಚೆ ಮೂಲಕವೇ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗುತ್ತದೆ. ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಮಚ್ಚೆ ದೇಹದಲ್ಲಿ ಇದ್ದೇ ಇರುತ್ತದೆ. ಕೆಲವರ ಮುಖ, ಕೈ ಹಾಗೂ ಕಾಲಿನ ಭಾಗದಲ್ಲಿ ಮಚ್ಚೆ ಇರುತ್ತದೆ. ಇದು ಕಣ್ಣಿಗೆ ಕಾಣುವಂತಿರುತ್ತದೆ.   ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ!

ಆದರೆ ಇನ್ನು ಕೆಲವು ಮಚ್ಚೆಗಳು ಹೊರಗಿನವರಿಗೆ ಕಾಣುವುದಿಲ್ಲ. ಮಚ್ಚೆ ಮಾತ್ರ ಇದ್ದೇ ಇರುತ್ತದೆ. ದೇಹದ ಕೆಲವೊಂದು ಭಾಗದಲ್ಲಿ ಇರುವಂತಹ ಮಚ್ಚೆಗಳು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇನ್ನು ಕೆಲವು ಭಾಗದಲ್ಲಿದ್ದರೆ ಅದು ಅಪಶಕುನ ಎನ್ನುವ ಮೂಢನಂಬಿಕೆಯೂ ಇದೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

ಆದರೆ ದೇಹದ ಯಾವ ಭಾಗದಲ್ಲಿ ಮಚ್ಚೆಗಳು ಇದ್ದರೆ ನಿಮಗೆ ಸಂಪತ್ತು ಅಥವಾ ಇನ್ನಿತರ ಅದೃಷ್ಟ ತರಲಿದೆ ಎಂದು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.....  

ಕಣ್ಣಿನ ಹುಬ್ಬುಗಳ ಮಧ್ಯೆ ಮಚ್ಚೆ

ಕಣ್ಣಿನ ಹುಬ್ಬುಗಳ ಮಧ್ಯೆ ಮಚ್ಚೆ

ಇದು ವೃತ್ತಿಗೆ ಸಂಬಂಧಿಸಿದ ಮಚ್ಚೆಯಾಗಿದೆ. ಈ ಮಚ್ಚೆ ಇದ್ದರೆ ನೀವು ವೃತ್ತಿಯಲ್ಲಿ ಉನ್ನತಿಗೇರುತ್ತೀರಿ ಮತ್ತು ಉತ್ತಮ ಸಾಧನೆ ಮಾಡುತ್ತೀರಿ. ಯಾವುದೋ ಭಡ್ತಿ, ಸಂಬಳದಲ್ಲಿ ಹೆಚ್ಚಳ ಮತ್ತು ಈ ರೀತಿ ಏನಾದರೂ ನಿಮ್ಮ ವೃತ್ತಿಯಲ್ಲಿ ಆಗಲಿದೆ.

ಕಣ್ಣುರೆಪ್ಪೆಯ ಮೇಲಿರುವ ಮಚ್ಚೆ

ಕಣ್ಣುರೆಪ್ಪೆಯ ಮೇಲಿರುವ ಮಚ್ಚೆ

ಕಣ್ಣುಗಳ ಸೌಂದರ್ಯಕ್ಕೆ ಅವಲಕ್ಷಣವಾಗಿ ಕಾಣುವ ಈ ಮಚ್ಚೆ ಇರುವ ವ್ಯಕ್ತಿಗಳು ಬಹುಕೌಶಲ್ಯವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇದೇ ಇವರ ಕೊರತೆಯಾಗಿದ್ದು ಯಾವುದೇ ಒಂದು ಕೌಶಲ್ಯದಲ್ಲಿ ಪರಿಣಿತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇನ್ನುಳಿದಂತೆ ತಮ್ಮ ಪ್ರತಿಭೆಯಿಂದಾಗಿ ಇವರು ಸುತ್ತಮುತ್ತಲ ಎಲ್ಲರಿಗೂ ಬೇಕಾದವರಾಗಿರುತ್ತಾರೆ.

ಮೇಲ್ತುಟಿಯ ಮೇಲೆ ಮಚ್ಚೆ

ಮೇಲ್ತುಟಿಯ ಮೇಲೆ ಮಚ್ಚೆ

ಮೇಲ್ತುಟಿಯ ಮೇಲೆ ಮಚ್ಚೆಯಿದ್ದರೆ ನೀವು ಆಹಾರ ಹಾಗೂ ಬಟ್ಟೆಯ ಬಗ್ಗೆ ಹೆಚ್ಚು ಚಿಂತಿಸುವ ವ್ಯಕ್ತಿಯೆಂದು ಅರ್ಥ. ನೀವು ಅಂತರ ವ್ಯಕ್ತಿತ್ವದವರೆಂದು ಇದರರ್ಥ. ಸ್ನೇಹಿತರ ಮಧ್ಯೆ ನೀವು ಹೆಚ್ಚು ಜನಪ್ರಿಯರಾಗಿರುತ್ತೀರಿ.

ಕೆನ್ನೆಯ ಮೂಳೆ

ಕೆನ್ನೆಯ ಮೂಳೆ

ಕೆನ್ನೆಯ ಮೂಳೆಯ ಮೇಲೆ ಮಚ್ಚೆಯಿದ್ದರೆ ನೀವು ಮಾಡುತ್ತಿರುವ ವೃತ್ತಿಯಲ್ಲಿ ತುಂಬಾ ಪ್ರಭಾವಶಾಲಿ ಹುದ್ದೆಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಪತ್ತು ಕೂಡ ಹೆಚ್ಚಾಗುವುದು.

ಅಂಗೈಯಲ್ಲಿ ಮಚ್ಚೆ

ಅಂಗೈಯಲ್ಲಿ ಮಚ್ಚೆ

ಅಂಗೈ ಒಳಗಡೆ ಮಚ್ಚೆಯಿದ್ದರೆ ನಿಮಗೆ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. ನೀವು ತುಂಬಾ ಜಾಣ, ಮಹಾತ್ವಾಕಾಂಕ್ಷಿ ಮತ್ತು ನಾಯಕತ್ವವನ್ನು ಸುಲಭವಾಗಿ ಪಡೆಯುತ್ತೀರಿ. ಅಂಗೈಯ ಮೇಲ್ಗಡೆ ಮಚ್ಚೆಯಿದ್ದರೆ ನೀವು ಆರ್ಥಿಕ ಸಾಮರ್ಥ್ಯ ಮತ್ತು ಆಡಳಿತದಲ್ಲಿ ಬಲಿಷ್ಠರಾಗಿರುತ್ತೀರಿ. ನಿಮ್ಮ ಆರ್ಥಿಕತೆಯು ಚೆನ್ನಾಗಿರುತ್ತದೆ.

ಪಾದದಲ್ಲಿ ಮಚ್ಚೆ

ಪಾದದಲ್ಲಿ ಮಚ್ಚೆ

ಪಾದದ ಕೆಳಗಡೆ ಮಚ್ಚೆಯಿದ್ದರೆ ನೀವು ಯಾವಾಗಲೂ ಪ್ರವಾಸ ಮಾಡುವ ಮತ್ತು ಹೊಸ ಹೊಸ ಅಡುಗೆಗಳನ್ನು ಇಷ್ಟಪಡುವವರು ಎಂದು ಅರ್ಥ. ಕೆಲಸದ ಕಡೆ ನೀವು ತುಂಬಾ ಜನಪ್ರಿಯರಾಗಿರುತ್ತೀರಿ. ನೀವು ಒಳ್ಳೆಯ ನಾಯಕ ಅಥವಾ ಅಧಿಕಾರವನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಿ.

ಹಾಗಾದರೆ ರೆಡಿಯಾಗಿ ಅದೃಷ್ಟ ಪರೀಕ್ಷೆಗೆ!

ಹಾಗಾದರೆ ರೆಡಿಯಾಗಿ ಅದೃಷ್ಟ ಪರೀಕ್ಷೆಗೆ!

ಮಚ್ಚೆಗಳು ಎಲ್ಲಿದ್ದರೆ ಯಾವ ಲಾಭಗಳು ಇದೆ ಎಂದು ಗೊತ್ತಾಗಿದೆ ತಾನೇ? ನಿಮ್ಮ ದೇಹದ ಯಾವ ಭಾಗದಲ್ಲಿ ಮಚ್ಚೆಯಿದೆ ಎಂದು ಹುಡುಕಿ. ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಿ.

 
English summary

What Does your Mole on body say about You?

Every person has moles all over their body. Some are small, some are bigger but their position on your body has a special meaning. There are moles which are linked with a person’s wealth; others are linked with family fortune while others are connected with a person’s health. so do you want to know what do your moles mean? Read to find out.
Please Wait while comments are loading...
Subscribe Newsletter