For Quick Alerts
ALLOW NOTIFICATIONS  
For Daily Alerts

ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!

ಬೆಕ್ಕು ಅಡ್ಡಬಂದಲ್ಲಿ ಅಪಶಕುನ, ಕಾಗೆ ಕೂಗಿದಲ್ಲಿ ನೆಂಟರ ಆಗಮನ ನಾಯಿ ಊಳಿಟ್ಟರೆ ಮನೆಯ ಯಜಮಾನನಿಗೆ ಅಪಾಯ ಹೀಗೆ ನಾವು ನಂಬುವ ಮೂಢನಂಬಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮುಂದೆ ಓದಿ...

By Arshad
|

ಮೂಢನಂಬಿಕೆಗಳನ್ನು ಬಲವಾಗಿ ನಂಬುವವರು ಈ ಕಾರಣಗಳನ್ನು ನೀಡುತ್ತಾರೆ. ಮೂಢನಂಬಿಕೆಗಳೆಂದರೆ ಮಾನವನು ನಂಬಿಕೊಂಡು ಬಂದಂತಹ ಪದ್ಧತಿಯಾಗಿದ್ದು ಇದಕ್ಕೆ ಭಯ, ಉತ್ಪ್ರೇಕ್ಷೆ, ಹಿಂದಿನವರು ನಡೆಸಿಕೊಂಡು ಬಂದ ಪರಂಪರೆ, ಕೆಲವು ಅಕಸ್ಮಿಕಗಳು ಮೊದಲಾದವು ಕಾರಣವಾಗಿವೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವೇ ಆಗುತ್ತದಂತೆ. ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು

ಅಂತೆಯೇ ಕೆಲವು ಮೂಢನಂಬಿಕೆಗಳನ್ನು ನಾವು ಪರಾಮರ್ಶಿಸದೇ ಅನುಸರಿಸಿಕೊಂಡು ಬರುತ್ತಿರುವುದು ಮಾತ್ರ ಸುಳ್ಳಲ್ಲ. ಆಧುನಿಕ ವಿಜ್ಞಾನ ಹಲವು ಮೂಢನಂಬಿಕೆಗಳನ್ನು ನಿವಾರಿಸಿದೆಯಾದರೂ ಇನ್ನೂ ನೂರಾರು ಮೂಢನಂಬಿಕೆಗಳು ಉಳಿದುಕೊಂಡು ಬಂದಿವೆ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!

ಮನಃಶಾಸ್ತ್ರಜ್ಞರ ಪ್ರಕಾರ ಮಾನವರಿಗೆ ಒಳ್ಳೆಯದನ್ನು ಗಮನಿಸುವುದಕ್ಕಿಂತ ಕೆಟ್ಟದ್ದನ್ನು ಗಮನಿಸಲೇ ಹೆಚ್ಚಿನ ಕುತೂಹಲವಿರುವ ಕಾರಣ ಈ ಮೂಢನಂಬಿಕೆಗಳಿಗೆ ಹೆಚ್ಚಿನ ಆದ್ಯತೆ ದೊರಕಿದೆ. ಅಷ್ಟಲ್ಲದೇ, ನಾವು ಪತ್ರಿಕೆಗಳಲ್ಲಿ ಇರುವ ನೂರಾರು ಒಳ್ಳೆಯ ಸುದ್ದಿಗಳನ್ನು ಹಾಗೇ ಕಣ್ಣಾಡಿಸಿ ಕೆಟ್ಟ ಸುದ್ದಿಗಳೇನಾದರೂ ಇದ್ದರೆ ಥಟ್ಟನೆ ಅವನ್ನು ಗಮನಿಸುವುದಿಲ್ಲವೇ! ಇಂದಿಗೂ ಅನುಸರಿಸಿಕೊಂಡು ಬರುತ್ತಿರುವ ಕೆಲವು ಮೂಢನಂಬಿಕೆಗಳಲ್ಲಿ ಕೆಲವನ್ನು ಇದನ್ನು ಆಚರಿಸುವವರು ಯಾವ ಕಾರಣಗಳನ್ನು ನೀಡುತ್ತಾರೆ ಎಂಬುದನ್ನು ನೋಡೋಣ ಬನ್ನಿ....


ಕಪ್ಪು ಬೆಕ್ಕು ದಾರಿಗಡ್ಡ ಹಾದು ಹೋದರೆ

ಕಪ್ಪು ಬೆಕ್ಕು ದಾರಿಗಡ್ಡ ಹಾದು ಹೋದರೆ

ಭಾರತ ಸಹಿತ ಹಲವು ರಾಷ್ಟ್ರಗಳಲ್ಲಿ ನೀವು ಹೋಗುತ್ತಿರುವ ರಸ್ತೆಗೆ ಅಡ್ಡಲಾಗಿ ಕಪ್ಪು ಬೆಕ್ಕೇನಾದಾರೂ ಹಾದು ಹೋದರೆ ತಕ್ಷಣ ಅಲ್ಲೇ ನಿಂತುಬಿಡಬೇಕು. ಬೆಕ್ಕು ದಾಟಿದ ಸ್ಥಳದಿಂದ ಬೇರೆ ಯಾರಾದರೂ ದಾಟಿದ ಬಳಿಕವೇ ನೀವು ಮುಂದುವರೆಯಬಹುದು. ಅಲ್ಲಿಯವರೆಗೆ ಅಲ್ಲಿಯೇ ನಿಲ್ಲಬೇಕು ಅಥವಾ ಬಳಸು ದಾರಿ ಹಿಡಿಯಬೇಕು. ಇಲ್ಲದಿದ್ದರೆ ದುರಾದೃಷ್ಟ ಕಾಡುತ್ತದೆ. ಭಾರತದಲ್ಲಿ ವಿದ್ಯಾವಂತರೆಂದು ಎದೆಯುಬ್ಬಿಸಿ ನಡೆಯುವವರೂ ಈ ನಂಬಿಕೆಯನ್ನು ಆಚರಿಸುತ್ತಾರೆ.

ಕಪ್ಪು ಬೆಕ್ಕು ದಾರಿಗಡ್ಡ ಹಾದು ಹೋದರೆ

ಕಪ್ಪು ಬೆಕ್ಕು ದಾರಿಗಡ್ಡ ಹಾದು ಹೋದರೆ

ಈ ನಂಬಿಕೆಗೆ ಕಾರಣವೇನೆಂದರೆ ಹಿಂದೆ ಹಳ್ಳಿಗಳಲ್ಲಿ ಮಣ್ಣಿನ ದಾರಿಗಳೇ ಇದ್ದು ಬರಿಗಾಲಿನಲ್ಲಿಯೇ ನಡೆದಾಡುತ್ತಿದ್ದರು. ಕೆಲವೆಡೆ ಅತಿ ಹೆಚ್ಚು ಜಾರುತ್ತಿತ್ತು. ಆ ಸ್ಥಳದಲ್ಲಿ ಹೆಜ್ಜೆ ಇಡುವ ಮುನ್ನ ಇಲ್ಲಿ ನಡೆದಾಡಿ ಅಭ್ಯಾಸವಿದ್ದವರು ನಡೆದಂತೆ ನಡೆದರೆ ಜಾರಿ ಬೀಳುವ ಸಾಧ್ಯತೆ ಕಡಿಮೆ ಇರುತ್ತದೆ. ಆ ಹೊತ್ತಿಗೆ ಅಚಾನಕ್ಕಾಗಿ ಕಪ್ಪು ಬೆಕ್ಕು ಅಡ್ಡ ಬಂದ ಕಾರಣ ಈ ಎಚ್ಚರಿಕೆಗೆ ಬೆಕ್ಕೇ ಕಾರಣ ಎಂದು ಹೇಳಲಾಗುತ್ತದೆ.

ಸೋಮವಾರದ ಉಪವಾಸ

ಸೋಮವಾರದ ಉಪವಾಸ

ವಿಶೇಷವಾಗಿ ಯುವತಿಯರು ಸೋಮವಾರದಂದು ಉಪವಾಸವಿರಬೇಕು ಎಂಬ ಮೂಢನಂಬಿಕೆ ಭಾರತದಲ್ಲಿ ಬೆಳೆದುಬಂದಿದೆ. ಸೋಮವಾರದಂದು ಉಪವಾಸವಿದ್ದು ಶಿವನನ್ನು ಆರಾಧಿಸಿದರೆ ಆಕೆಗೆ ಶಿವನಂತಹ ಪತಿ ದೊರಕುತ್ತಾನೆ ಎಂದು ನಂಬಲಾಗಿದೆ. ವೈಜ್ಞಾನಿಕವಾಗಿ ಈ ವಿಧಿಯನ್ನು ಅವಲೋಕಿಸಿದರೆ ಸೋಮವಾರದಂದು ಕೇವಲ ದ್ರವಾಹಾರವನ್ನು ಸೇವಿಸಿ ಉಪವಾಸವಿರುವ ಮೂಲಕ ಯುವತಿಯರ ಜೀರ್ಣಾಂಗಗಳು ಪೂರ್ಣವಾಗಿ ಕಲ್ಮಶರಹಿತವಾಗಲು ನೆರವಾಗುತ್ತದೆ. ಈ ದಿನದಂದು ಮನೆಗೆಲಸದಿಂದ ಬಿಡುವು ಸಿಗುವ ಕಾರಣ ಅಗತ್ಯವಾದ ಆರಾಮವನ್ನೂ ಪಡೆದಂತಾಗುತ್ತದೆ.

ರಾತ್ರಿ ಮರದ ಕೆಳಗೆ ಕುಳಿತುಕೊಳ್ಳಬೇಡಿ

ರಾತ್ರಿ ಮರದ ಕೆಳಗೆ ಕುಳಿತುಕೊಳ್ಳಬೇಡಿ

ರಾತ್ರಿ ಮರದ ಬಳಿ ಹೋದರೆ ಭೂತ ಹಿಡಿದುಕೊಳ್ಳುತ್ತದೆ ಎಂದು ಹಿರಿಯರು ಎಚ್ಚರಿಸುತ್ತಾರೆ. ವಾಸ್ತವವಾಗಿ ಇಲ್ಲಿ ಭೂತ ಎಂದಿರುವುದು ಇಂಗಾಲದ ಡೈ ಆಕ್ಸೈಡ್. ಮರಗಳು ದಿನದ ಬೆಳಕಿನಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡಿದರೆ ರಾತ್ರಿ ಹೊತ್ತು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ. ಆದ್ದರಿಂದ ಮರದ ಕೆಳಗೆ ರಾತ್ರಿಹೊತ್ತು ಹೋದರೆ ಉಸಿರಾಟದ ಮೂಲಕ ಈ ವಿಷಾನಿಲ ದೇಹ ಸೇರುವ ಸಾಧ್ಯತೆ ಹೆಚ್ಚುತ್ತದೆ. ಸುಮ್ಮನೇ ಹೇಳಿದರೆ ಸಾಮಾನ್ಯರು ಕೇಳದ ಕಾರಣ ಹಿರಿಯರು ಈ ಚಾಣಾಕ್ಷ ಉಪಾಯ ಮಾಡಿದ್ದಾರೆ.

ಸೀನು ಬರುವ ಹೊತ್ತಿನಲ್ಲಿ ನಿಲ್ಲಿ

ಸೀನು ಬರುವ ಹೊತ್ತಿನಲ್ಲಿ ನಿಲ್ಲಿ

ಒಂದು ವೇಳೆ ಹೊರಗೆ ನಡೆಯುತ್ತಿರುವಾಗ ಅಕಸ್ಮಾತ್ತಾಗಿ ಸೀನು ಬಂದರೆ ನಿಂತಲ್ಲೇ ಕೊಂಚ ಕಾಲ ನಿಂತುಬಿಡಿ ಎಂದು ಹೇಳುತ್ತಾರೆ. ನಿಲ್ಲದಿದ್ದರೆ ದುರಾದೃಷ್ಟ ಕಾಡುತ್ತದೆ ಎಂದೂ ಹೇಳುತ್ತಾರೆ. ವಾಸ್ತವವಾಗಿ ಸೀನುವಾಗಿನ ಒಂದು ಕ್ಷಣದ ಒಂದು ಭಾಗದಷ್ಟು ಕಾಲ ನಮ್ಮ ಹೃದಯದ ಸಹಿತ ಎಲ್ಲಾ ಕಾರ್ಯಗಳು ನಿಂತುಬಿಡುತ್ತವೆ.

ಸೀನು ಬರುವ ಹೊತ್ತಿನಲ್ಲಿ ನಿಲ್ಲಿ

ಸೀನು ಬರುವ ಹೊತ್ತಿನಲ್ಲಿ ನಿಲ್ಲಿ

ಈ ಕ್ಷಣದಲ್ಲಿ ನಡೆಯುತ್ತಿದ್ದರೆ ಮುಂದಿನ ಹೆಜ್ಜೆ ನಮ್ಮ ನಿಯಂತ್ರಣದಲ್ಲಿರದೇ ಯಾವುದೇ ಅನಾಹುತ ಆಗಬಹುದು. ಆದ್ದರಿಂದ ಸೀನಿದ ಬಳಿಕ ದೇಹದ ವ್ಯವಸ್ಥೆ ಮತ್ತೆ ಚಾಲನೆಗೊಂಡು ಸುಲಲಿತಗೊಂಡ ಬಳಿಕವೇ ಮುಂದುವರೆಯುವಂತೆ ಮಾಡಲು ಹಿರಿಯರು ಈ ನಂಬಿಕೆಯನ್ನು ಹುಟ್ಟುಹಾಕಿದ್ದಾರೆ.

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ಕ್ರೈಸ್ತರು ನಡುರಾತ್ರಿ ಕಳೆದ ಬಳಿಕ ಮೂರು ಗಂಟೆಯ ಹೊತ್ತಿನಲ್ಲಿ ಆತ್ಮಗಳು ಅತಿ ಹೆಚ್ಚು ಕ್ರಿಯಾತ್ಮಕವಾಗುತ್ತವೆ ಎಂದು ನಂಬುತ್ತಾರೆ. ಈ ಹೊತ್ತಿನಲ್ಲಿ ಮನೆಯಿಂದ ಹೊರ ಹೋಗಬಾರದು. ಒಂದು ವೇಳೆ ಅನಿವಾರ್ಯವಾಗಿ ಹೋಗಲೇಬೇಕಾಗಿದ್ದರೆ ಶಿಲುಬೆಯೊಂದನ್ನು ಖಂಡಿತಾ ಕೊಂಡೊಯ್ಯಬೇಕು ಎಂಬ ನಂಬಿಕೆ ಇದೆ. ಹಿಂದೆ ಕೆಲವರಿಗೆ ಹಾಸಿಗೆ ಬಿಟ್ಟು ರಾತ್ರಿಯಿಡೀ ಊರು ತಿರುಗುವ ಅಭ್ಯಾಸವಿತ್ತು.

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ಮಲಗುವ ಸಮಯದಲ್ಲಿ ಊರು ತಿರುಗಿದರೆ ಆರೋಗ್ಯ ಹಾಳಾಗುವ ಸಂಭವವಿರುವ ಕಾರಣ ನಿದ್ದೆಗೆ ಪ್ರೇರೇಪಿಸಲು ಈ ಕಾರಣವನ್ನು ಹಿರಿಯರು ನೀಡಿರಬಹುದು.ಮುಂಜಾನೆಯ ಮೂರು ಗಂಟೆ-ಭೂತ ಪ್ರೇತಗಳದ್ದೇ ಕಾರುಬಾರು!!

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ಸಾಮಾನ್ಯವಾಗಿ ನಾವೆಲ್ಲರೂ ಹಿಂದಿನ ನಂಬಿಕೆಗಳನ್ನು ಒರೆಹಚ್ಚದೇ ಅನುಸರಿಸುತ್ತೇವೆ. ಯಾವಾಗ ಇದರ ನಿಜವಾದ ಕಾರಣಗಳನ್ನು ಕಂಡುಕೊಳ್ಳುತ್ತಾರೋ ಆಗ ಈ ನಂಬಿಕೆಗಳು ತನ್ನಿಂತಾನೇ ಮಾಯವಾಗುತ್ತಿರುವುದನ್ನು ನೋಡಬಹುದು. ಈಗಲೂ ಆಚರಿಸುತ್ತಿರುವ ಮೂಢನಂಬಿಕೆಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ ನಿಜವಾದ ಕಾರಣವನ್ನು ಕಂಡುಕೊಂಡು ಈ ನಂಬಿಕೆಗಳನ್ನು ಅಳಿಸುವುದು ಇಂದಿನ ಜನಾಂಗಕ್ಕೆ ಇರುವ ಸವಾಲಾಗಿದೆ.

English summary

Superstitions And Their Reasons

Superstition, an outcome of human fears and imagination, is the strongest believe which a human being has ever kept. Maybe because there are too many people to acknowledge the facts.
X
Desktop Bottom Promotion