For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!

By Super
|

ಮೂಢನಂಬಿಕೆಗಳು ಜನರ ಜೀವನದ ಭದ್ರ ಬುನಾದಿ ಎಂದೇ ಹೇಳಬಹುದು. ಬೆಕ್ಕು ಅಡ್ಡಬಂದಲ್ಲಿ ಅಪಶಕುನ, ಕಾಗೆ ಕೂಗಿದಲ್ಲಿ ನೆಂಟರ ಆಗಮನ ನಾಯಿ ಊಳಿಟ್ಟರೆ ಮನೆಯ ಯಜಮಾನನಿಗೆ ಅಪಾಯ ಹೀಗೆ ನಾವು ನಂಬುವ ಮೂಢನಂಬಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ಇಂದಿನ ಜೀವನದಲ್ಲಿ ಇಷ್ಟು ಮುಖ್ಯವಾದ ಪಾತ್ರವನ್ನು ವಹಿಸಿರುವ ಮೂಢನಂಬಿಕೆ ಇತಿಹಾಸದಲ್ಲೂ ತನ್ನ ಗುರುತನ್ನು ಉಂಟುಮಾಡಿದೆ ಎಂಬುದೇ ಇದರ ವಿಶೇಷತೆಯಾಗಿದೆ. ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!

ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಮೂಢನಂಬಿಕೆಗಳ ಪಟ್ಟಿಯನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಸಣ್ಣ ವಿಚಾರಗಳಿಂದ ಜನ್ಮತಾಳಿರುವ ಈ ಮೂಢನಂಬಿಕೆಗಳ ಭಂಡಾರ ಬೆಳೆಯುತ್ತಾ ಬೆಳೆಯುತ್ತಾ ದೃಢವಾಗುತ್ತಾ ಹೋಗಿದೆ. ಈ ನಂಬಿಕೆಗಳು ಎಂದಿಗೂ ಅಂತ್ಯವಿಲ್ಲ. ಬದಲಿಗೆ ಹೊಸ ಹೊಸ ನಂಬಿಕೆಗಳ ಜನ್ಮತಾಳುತ್ತಾ ಬರಲಿವೆ. ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು

ಇವುಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಆ ಭಗವಂತನಿಗೆ ಮಾತ್ರ ಗೊತ್ತು. ಕೆಲವೊಂದು ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳಿದ್ದರೂ ಮತ್ತೆ ಕೆಲವೊಂದು ನಂಬಿಕೆಗಳು ನಗುವನ್ನು ತರಿಸುವಂತಿದೆ. ಬನ್ನಿ ಆ ಮೂಢನಂಬಿಕೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದು ನಿಮಗಿದು ಆಶ್ಚರ್ಯವನ್ನುಂಟು ಮಾಡುವುದು ಖಂಡಿತ.

ಮದುವೆಯಲ್ಲಿನ ಮುಖದ ಪರದೆ

ಮದುವೆಯಲ್ಲಿನ ಮುಖದ ಪರದೆ

ರೋಮನ್ ಇತಿಹಾಸದ ಪ್ರಕಾರ, ಮದುವೆಯ ಸಮಯದಲ್ಲಿ ಮುಖಕ್ಕೆ ಹಾಕುವ ಪರದೆ ಕೆಟ್ಟ ಶಕ್ತಿಗಳಿಂದ ಕಾಪಾಡುವಂಥದ್ದಾಗಿದೆ. ಮದುವಣಗಿತ್ತಿಯ ಮುಖವನ್ನು ಮುಸುಕಿನಿಂದ ಮರೆಮಾಡುವುದು ಉದ್ದೇಶವಾಗಿದ್ದರೂ ಕೆಟ್ಟ ಶಕ್ತಿಗಳಿಂದ ರಕ್ಷಣೆ ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.

ಮಕ್ಕಳಾಗದಿರಲು ಲೆಟಿಸ್ ಸೊಪ್ಪು ಕಾರಣ

ಮಕ್ಕಳಾಗದಿರಲು ಲೆಟಿಸ್ ಸೊಪ್ಪು ಕಾರಣ

19 ನೇ ಶತಮಾನದಲ್ಲಿ, ಮಕ್ಕಳನ್ನು ಹೊಂದಬೇಕೆಂಬ ಬಯಕೆಯುಳ್ಳವರು ಸಲಾಡ್‎ಗಳನ್ನು ಸೇವಿಸುತ್ತಿರಲಿಲ್ಲವಂತೆ. ಇದನ್ನು ಬರಡು ಸಸ್ಯವೆಂದು ಪರಿಗಣಿಸಲಾಗಿದ್ದು ಗರ್ಭಧಾರಣೆಗೆ ಹಾನಿಕರ ಎಂಬುದಾಗಿ ನಿರ್ಧರಿಸಲಾಗಿತ್ತು.

ರಾತ್ರಿ ಚ್ಯೂಯಿಂಗ್ ಗಮ್ ಸೇವನೆ ನಿಷೇಧ

ರಾತ್ರಿ ಚ್ಯೂಯಿಂಗ್ ಗಮ್ ಸೇವನೆ ನಿಷೇಧ

ಇದು ಟರ್ಕಿಯಲ್ಲಿ ನಂಬಲಾಗುವ ಬಲವಾದ ಮೂಢನಂಬಿಕೆಯಾಗಿದೆ. ರಾತ್ರಿ ವೇಳೆ ಚ್ಯೂಯಿಂಗ್ ಗಮ್ ಸೇವಿಸಿದಲ್ಲಿ, ಅದು ಸತ್ತವರ ಮಾಂಸವನ್ನು ಅಗೆಯುವುದು ಎಂಬುದಾಗಿ ನಂಬಲಾಗಿತ್ತು.

ದಿರಿಸು ಮೇಲಕ್ಕೆ ಎದ್ದಲ್ಲಿ ಹೊಸ ದಿರಿಸು ಖರೀದಿ

ದಿರಿಸು ಮೇಲಕ್ಕೆ ಎದ್ದಲ್ಲಿ ಹೊಸ ದಿರಿಸು ಖರೀದಿ

ನಿಜಕ್ಕೂ ಇದು ಪೊಳ್ಳು ಮೂಢನಂಬಿಕೆ ಎಂದೇ ಹೇಳಬಹುದು! ಮಹಿಳೆಯರ ಲಂಗದ ಕೆಳತುದಿ ಮೇಲಕ್ಕೆದ್ದು ಕಿಸೆಯಂತೆ ರಚನೆಯಾದಲ್ಲಿ ಆಕೆಯ ಜೀವನದಲ್ಲಿ ಏನಾದರೂ ಅದೃಷ್ಟ ಖುಲಾಯಿಸುತ್ತದೆ ಎಂದರ್ಥವಾಗಿದೆ. ಹೊಸ ದಿರಿಸನ್ನು ಆಕೆ ತೊಡುತ್ತಾಳೆ ಎಂಬ ನಂಬಿಕೆಯಾಗಿದೆ.

ಮಧ್ಯರಾತ್ರಿ ದ್ರಾಕ್ಷಿ ತಿಂದಲ್ಲಿ ಶುಭಸೂಚನೆ

ಮಧ್ಯರಾತ್ರಿ ದ್ರಾಕ್ಷಿ ತಿಂದಲ್ಲಿ ಶುಭಸೂಚನೆ

ಸ್ಪೇನ್‎ನಲ್ಲಿ ಹೊಸ ವರ್ಷದ ಸಂಜೆಯಲ್ಲಿ, ಜನರು ಒಬ್ಬರಿಗೊಬ್ಬರು ಶುಭ ಕೋರುವುದಿಲ್ಲ. ಬದಲಿಗೆ ಅವರು 12 ದ್ರಾಕ್ಷಿಗಳನ್ನು ಸೇವಿಸುತ್ತಾರೆ. ಇದರಿಂದ 12 ತಿಂಗಳುಗಳೂ ಅವರಿಗೆ ಅದೃಷ್ಟವನ್ನು ತರುತ್ತವೆ ಎಂದಾಗಿದೆ.

ಹಕ್ಕಿ ಹಿಕ್ಕೆ ಹಾಕಿದಲ್ಲಿ ನೀವು ಶ್ರೀಮಂತರಾಗುತ್ತೀರಿ

ಹಕ್ಕಿ ಹಿಕ್ಕೆ ಹಾಕಿದಲ್ಲಿ ನೀವು ಶ್ರೀಮಂತರಾಗುತ್ತೀರಿ

ರಷ್ಯಾದಲ್ಲಿ, ನಿಮ್ಮ ಮೇಲೆ ಹಕ್ಕಿ ಹಾಕಿದಲ್ಲಿ ನೀವು ಶ್ರೀಮಂತರಾಗುತ್ತೀರಿ ಎಂಬ ನಂಬಿಕೆ ಇದೆ. ಇದನ್ನು ಅದೃಷ್ಟವೆಂದು ನಂಬುತ್ತಾರೆ. ಇದು ನಿಮಗೆ ಶ್ರೀಮಂತಿಕೆಯನ್ನು ತರುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಹೆಚ್ಚು ಪಕ್ಷಿಗಳು ಸೇರಿ ಹೆಚ್ಚು ಹಿಕ್ಕೆ ಹಾಕಿದಲ್ಲಿ ನೀವು ಆಗರ್ಭ ಶ್ರೀಮಂತರಾಗುವುದು ಖಂಡಿತ ಏನಂತೀರಿ?

ಜೂಲಿಯೆಟ್‎ಗೆ ಪ್ರೇಮ ಪತ್ರ

ಜೂಲಿಯೆಟ್‎ಗೆ ಪ್ರೇಮ ಪತ್ರ

ಜೂಲಿಯೆಟ್‎ಗೆ ಪ್ರೇಮ ಪತ್ರ ಬರೆದು ಜೂಲಿಯೆಟ್ ಬದುಕಿದ್ದ ದೇವಾಲಯದ ಗೋಡೆಯ ಮೇಲೆ ಅಂಟಿಸುವುದರಿಂದ ಪ್ರೀತಿಯಲ್ಲಿದ್ದವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಪ್ರೀತಿಯ ಅದೃಷ್ಟಕ್ಕಾಗಿ ಇಲ್ಲಿ ವೀಕ್ಷಕರು ಜೂಲಿಯೆಟ್‎ನ ಕಂಚಿನ ಪ್ರತಿಮೆಯ ಬಲ ಸ್ತನವನ್ನೇ ದೋಚಿದ್ದಾರೆ.

English summary

Superstitious Beliefs Around The World

Superstitious beliefs are a big part of thousands of people's daily lives. Although in post-modern society it is hardly believed, it does not have much of a place. However, when you see the history, it has played a huge role in shaping up the culture and society of few of the regions in the world.
X
Desktop Bottom Promotion