Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು
ಹಿಂದೂ ಧರ್ಮವು ತನ್ನದೇ ಆದ ಆಚರಣೆಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ನಿತ್ಯ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕೆಲವೊಂದು ನೀತಿ ನಿಯಮಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಕೆಲವೊಮ್ಮೆ ಈ ನಂಬಿಕೆಗಳ ಗೂಡಾರ್ಥವನ್ನು ನಾವು ಅರಿತುಕೊಳ್ಳದೆಯೇ ಅದನ್ನು ನಾವು ಅನುಸರಿಸುತ್ತೇವೆ. ಆದರೆ ಈ ಆಚರಣೆಗಳು ನಂಬಿಕೆಗಳು ಏಕೆ ಮಹತ್ವವನ್ನು ಪಡೆದುಕೊಂಡಿವೆ ಮತ್ತು ಮೂಢ ನಂಬಿಕೆಯಾಗಿದ್ದರೂ ಅವುಗಳ ಅನುಸರಣೆ ಏಕೆ ಮಾಡಬೇಕು ಎಂಬುದು ನಿಮ್ಮನ್ನು ಕಾಡಿರಬಹುದು. ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!
ವೈಜ್ಞಾನಿಕವಾದ ರಹಸ್ಯಗಳನ್ನು ಈ ನಂಬಿಕೆಗಳು ಹೊಂದಿಕೊಂಡಿದ್ದು ಅವುಗಳನ್ನು ಪಾಲಿಸುವುದು ಆರೋಗ್ಯಕರವಾಗಿ ಉತ್ತಮವಾಗಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ. ಯಾವುದೇ ನಂಬಿಕೆಗಳು ಸತ್ಯಕ್ಕೆ ಸಮೀಪವಾಗಿರುತ್ತವೆ ಅಂತೆಯೇ ಅದೊಂದು ಉತ್ತಮ ಸಿದ್ಧಾಂತವನ್ನು ಹೊಂದಿಕೊಂಡಿರುತ್ತದೆ. ಈ ಆಚರಣೆಗಳನ್ನು ನಂಬಿಕೆಗೆ ಹತ್ತಿರವಾಗಿ ಆಚರಿಸಿ ಅದರಲ್ಲಿರುವ ಕುರುಡತನವನ್ನು ನಂಬದೆ ಆ ಸಿದ್ಧಾಂತಗಳನ್ನು ಅರಿತುಕೊಂಡು ಪಾಲನೆ ಮಾಡುವುದು ಉತ್ತಮವಾದುದು. ಇಂದಿನ ಲೇಖನದಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಗಳು ಮತ್ತು ಅವುಗಳಲ್ಲಿ ಅಡಗಿರುವ ವೈಜ್ಞಾನಿಕ ಸಿದ್ಧಾಂತಗಳನ್ನು ಅರಿತುಕೊಳ್ಳೋಣ...

ಲಿಂಬೆ ಮತ್ತು ಹಸಿಮೆಣಸು
ಲಿಂಬೆ ಮತ್ತು ಹಸಿಮೆಣಸನ್ನು ಜೊತೆಯಾಗಿ ಕಟ್ಟಿ ವಾಹನ ಇಲ್ಲವೇ ಮನೆಯ ಮುಂಭಾಗದಲ್ಲಿ ನೇತುಹಾಕಿರುವುದನ್ನು ನೀವು ಕಂಡಿರುತ್ತೀರಿ. ಇದನ್ನು ಕಟ್ಟಲು ದಾರವನ್ನು ಬಳಸುತ್ತಾರೆ. ಕೆಟ್ಟ ದೃಷ್ಟಿ ತಾಗಬಾರದು ಎಂಬ ಕಾರಣಕ್ಕಾಗಿ ಜನರು ಇದನ್ನು ಕಟ್ಟುತ್ತಾರೆ ಆದರೆ ವೈಜ್ಞಾನಿಕವಾದ ತತ್ವ ಎಂದರೆ ಹತ್ತಿಯ ದಾರವು ಸೊಳ್ಳೆ ಮತ್ತು ಕೀಟಾಣುಗಳನ್ನು ಹೊಡೆದೋಡಿಸುತ್ತದೆ. ಅಂತೆಯೇ ಕಟುವಾದ ವಾಸನೆಯನ್ನು ಹೀರಿಕೊಳ್ಳುತ್ತದೆ.

ಒಡೆದ ಕನ್ನಡಿ
ಹಿಂದಿನ ದಿನಗಳಲ್ಲಿ ಕನ್ನಡಿ ಒಡೆಯುವುದನ್ನು ಅಶುಭವೆಂದು ಪರಿಗಣಿಸಲಾಗುತ್ತಿತ್ತು. ಕನ್ನಡಿ ಕಡಿಮೆ ದರದಲ್ಲಿ ದೊರೆಯುವುದರಿಂದ ಅದು ಆಗಾಗ್ಗೆ ಬಿದ್ದು ಒಡೆಯುವುದನ್ನು ತಪ್ಪಿಸುವುದಕ್ಕಾಗಿ ಹಿಂದಿನವರು ಈ ಕಟ್ಟುಕಥೆಯನ್ನು ಹೇಳಿ ನಂಬಿಸುತ್ತಿದ್ದರು.

ಸೂರ್ಯಾಸ್ತದ ನಂತರ ಉಗುರು ತೆಗೆಯುವುದು
ಸೂರ್ಯಾಸ್ತದ ನಂತರ ಉಗುರು ತೆಗೆಯುವುದು ಇಲ್ಲವೇ ಕೂದಲು ಕತ್ತರಿಸುವುದು ತಪ್ಪು ಎಂಬುದಾಗಿ ಪರಿಗಣಿಸಲಾಗುತ್ತದೆ. ವೈಜ್ಞಾನಿಕವಾಗಿ ಈ ಆಚರಣೆಯನ್ನು ನೋಡಹೊರಟರೆ ರಾತ್ರಿ ವೇಳೆಯಲ್ಲಿ ಉಗುರು ಕತ್ತರಿಸುವಾಗ ಉಂಟಾಗುವ ಗಾಯಗಳನ್ನು ತಪ್ಪಿಸುವುದಕ್ಕಾಗಿ ಹಿರಿಯರು ಈ ರೀತಿ ಹೇಳುತ್ತಿದ್ದರು. ಆದ್ದರಿಂದಲೇ ಕತ್ತಲಾದ ನಂತರ ಯಾವುದೇ ಚಟುವಟಿಕೆಯನ್ನು ಮಾಡಬಾರದು ಎಂಬುದಾಗಿ ನಿಷೇಧವನ್ನು ಹೇರಿದ್ದರು.

ಗ್ರಹಣ ಸಮಯದಲ್ಲಿ ಗರ್ಭಿಣಿಯರು ಹೊರಹೋಗುವಂತಿಲ್ಲ
ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಹೋಗದಂತೆ ನಿಷೇಧವನ್ನು ಹೇರಲಾಗಿತ್ತು. ಈ ಸಮಯದಲ್ಲಿ ತರಕಾರಿಗಳನ್ನು ಕತ್ತರಿಸುವುದು ಮತ್ತು ಹೊರಹೋಗುವುದನ್ನು ನಿಷೇಧಿಸಲಾಗಿತ್ತು. ಆದರೆ ಇದರ ಹಿಂದಿರುವ ಸತ್ಯ ಸೂರ್ಯನ ಯುವಿ ಕಿರಣಗಳು ಭ್ರೂಣಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬುದಾಗಿತ್ತು.

ಸಂಜೆ ಹೊತ್ತಿನಲ್ಲಿ ಕಸ ಗುಡಿಸುವುದು
ಆ ದಿನಗಳಲ್ಲಿ ಸಂಜೆ ಹೊತ್ತು ಮಂದ ಬೆಳಕು ಇದ್ದುದರಿಂದಾಗಿ ಕೆಲವೊಮ್ಮೆ ಧರಿಸಿಕೊಂಡಿದ್ದ ಅಮೂಲ್ಯ ವಸ್ತುಗಳು ಅಂದರೆ ಆಭರಣಗಳು ಮೊದಲಾದವು ಬಿದ್ದು ಹೋಗುತ್ತಿತ್ತು ಮತ್ತು ಅದನ್ನು ಹುಡುಕುವುದು ಕಷ್ಟಾಸಾಧ್ಯವಾಗುತ್ತಿತ್ತು. ಆದ್ದರಿಂದಲೇ ಸಂಜೆ ಕಸಗುಡಿಸಬಾರದು ಎಂಬ ನಿಯಮವನ್ನು ಅನ್ವಯಿಸಿದ್ದರು.



Click it and Unblock the Notifications
