For Quick Alerts
ALLOW NOTIFICATIONS  
For Daily Alerts

Women's Equality Day 2022: ಭಾರತದ ಸ್ಪೂರ್ತಿದಾಯಕ ಸಾಧಕ ಮಹಿಳೆಯರು ಇವರೇ ನೋಡಿ

|

ಮಹಿಳೆ.....ತಾಯಿ, ಪತ್ನಿ, ಮಗಳ ರೂಪದಲ್ಲಿ ನಾವು ಮಹಿಳೆಯನ್ನು ಕಾಣುತ್ತೇವೆ. ಭಾರತದಲ್ಲಂತೂ ಮಹಿಳೆಯರಿಗೆ ಭಾರೀ ಗೌರವ ಕೊಡುತ್ತಾರೆ. ಆದರೆ ಹಲವು ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ಮಹಿಳೆಯರ ಸಮಾನತೆಗೆ ಅನುಕೂಲಕರ ವಾತಾವರಣ ಇಡೀ ಜಗತ್ತಿನಲ್ಲಿ ಇರಲಿಲ್ಲ. ಯಾವಾಗ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು ಅಲ್ಲಿಂದ ಮಹಿಳೆಯರಿಗೆ ಸಮಾನತೆ ದೊರಕಿದೆ.

1920ರ ಆಗಸ್ಟ್ 26 ರಂದು ಅಮೆರಿಕ ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡುವ ಕಾಯ್ದೆಯನ್ನು ಜಾರಿಗೆ ತಂದಿತು. ಹೀಗಾಗಿ ಆಗಸ್ಟ್ 26ರಂದು ಮಹಿಳೆಯ ಸಮಾನತೆಯ ದಿನ ಎಂದು ಆಚರಿಸಲಾಗುತ್ತಿದೆ. ಹೌದು, ಇಂದು ಆಗಸ್ಟ್ 26, ಇಂದು ಮಹಿಳಾ ಸಮಾನತೆ ದಿನ. ಈ ದಿನದ ವಿಶೇಷತೆಯ ಭಾಗವಾಗಿ ನಾವಿಂದು ನಮ್ಮ ಭಾರತದ ಹೆಮ್ಮೆಯಾಗಿರುವ ಮಹಿಳೆಯರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

ಮಹಿಳೆಯರಿಗೆ ಸಮಾನತೆ ಸಿಕ್ಕಿದ್ದರಿಂದ ಯಾವ ರೀತಿಯ ಕ್ರಾಂತಿಯನ್ನು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ್ದಾರೆ ಎನ್ನುವುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಬ್ಯುಸಿನೆಸ್, ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕಿ ಮಹಿಳೆಯರ ಪಟ್ಟಿ ಇಲ್ಲಿದ್ದು ಅವರು ನಿಜಕ್ಕೂ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಪುರುಷರು ಮಾತ್ರವಲ್ಲ ಮನಸ್ಸು ಮಾಡಿದರೆ ಮಹಿಳ್ಖೆಯರು ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಫಲ್ಗುಣಿ ನಾಯರ್ - ಸಿಇಒ ನ್ಯಾಕಾ ( Nyka)

ಫಲ್ಗುಣಿ ನಾಯರ್ - ಸಿಇಒ ನ್ಯಾಕಾ ( Nyka)

ಫಲ್ಗುಣಿ ನಾಯರ್, ಸದ್ಯ ಈ ಹೆಸರು ಕೇಳದ ಇರುವ ಸಂಖ್ಯೆ ಭಾರತದಲ್ಲಿ ಬಹಳ ವಿರಳ ಇರಬಹುದು. ಯಾಕೆಂದರೆ ತನ್ನದೇ ಉದ್ಯಮದ ಮೂಲಕ ಭಾರೀ ಪ್ರಸಿದ್ದಿ ಪಡೆದಿದ್ದಾರೆ ಫಲ್ಗುಣಿ ನಾಯರ್. ಭಾರತೀಯ ಇ-ಕಾಮರ್ಸ್ ಕಂಪನಿ ನ್ಯಾಕಾದ ಪ್ರಸ್ತುತ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಫಲ್ಗುಣಿ ನಾಯರ್, ಸೆಲ್ಫ್ ಮೇಡ್ ಫೀಮೇಲ್ ಇಂಡಿಯನ್ ಬಿಲಿಯನೇರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮುಂಬಯಿನ ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್ ಮತ್ತು ಐಐಎಂ ಅಹಮದಾಬಾದ್‌ನ ಪದವೀಧರರಾದ ನಾಯರ್ ಅವರು ಸ್ವಯಂ ನಿರ್ಮಿತ ಉದ್ಯಮಿಯಾಗಿ ನಕ್ಷತ್ರದಂತೆ ಜಾಗತಿಕವಾಗಿ ಪ್ರಸಿದ್ಧಿ ಹಾಗೂ ಮಿಂಚುವ ಮೂಲಕ ತನ್ನದೇ ಹಾದಿಯಲ್ಲಿ ಸಾಧನೆ ಮಾಡಿದ್ದಾರೆ. ಸೌಂದರ್ಯ ಉದ್ಯಮವನ್ನು ಆರಂಭಿಸಿದ ಮೊದಲ ಮಹಿಳೆ ಎನ್ನುವ ಕೀರ್ತಿ ಕೂಡ ಇವರ ಪಾಲಿಗಿದೆ. ಇವರ ನ್ಯಾಕಾ ಎನ್ನುವ ಸೌಂದರ್ಯ ಉದ್ಯಮ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಬ್ಯೂಟಿ, ವೆಲ್ ನೆಸ್ ಮತ್ತು ಫ್ಯಾಷನ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಬಿಸಿನೆಸ್ ಟುಡೆಯ 'ದ ಮೋಸ್ಟ್ ಪವರ್‌ಫುಲ್ ವುಮೆನ್ ಇನ್ ಬ್ಯುಸಿನೆಸ್ 2017' ನಂತಹ ಬಹು ಪುರಸ್ಕಾರಗಳು ಫಲ್ಗುಣಿ ನಾಯರ್ ಪಾಲಾಗಿದೆ. ಬ್ಯುಸಿನೆಸ್ ಲೋಕದಲ್ಲಿ ತನ್ನದೇ ಪರಿಶ್ರಮದಿಂದ ಆಗರ್ಭ ಶ್ರೀಮಂತರಾಗಿದ್ದಾರೆ.

ನಿರ್ಮಲಾ ಸೀತಾರಾಮನ್ - ಭಾರತದ ಹಣಕಾಸು ಸಚಿವೆ

ನಿರ್ಮಲಾ ಸೀತಾರಾಮನ್ - ಭಾರತದ ಹಣಕಾಸು ಸಚಿವೆ

ನಿರ್ಮಲಾ ಸೀತಾರಾಮನ್ ಭಾರತದ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿದ್ದಾರೆ. ಅತ್ಯಂತ ಯಶಸ್ವಿ ಮಹಿಳೆಯರ ಪೈಕಿ ನಿರ್ಮಲಾ ಸೀತಾರಾಮನ್ ಕೂಡ ಒಬ್ಬರು. 2019 ರಲ್ಲಿ ಭಾರತದಲ್ಲಿ ಪೂರ್ಣ ಸಮಯದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ ಮಹಿಳೆ ಮತ್ತು ಇಂದಿರಾ ಗಾಂಧಿಯವರ ನಂತರ ಭಾರತದ ಎರಡನೇ ಮಹಿಳಾ ಹಣಕಾಸು ಮಂತ್ರಿಯಾಗುವ ಮೂಲಕ ನಿರ್ಮಲಾ ಸೀತಾರಾಮನ್ ಇತಿಹಾಸವನ್ನು ನಿರ್ಮಿಸಿದರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಸೀತಾರಾಮನ್ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್. ಪಡೆದಿದ್ದರು. ಬಳಿಕ ಸೀತಾರಾಮನ್ ಅವರ ರಾಜಕೀಯ ಜೀವನವು 2014 ರಲ್ಲಿ ಆರಂಭವಾಯಿತು. ಮೊದಲು ಬಿಜೆಪಿಯ ವಕ್ತಾರರಾಗಿ ತನನ್ ರಾಜಕೀಯ ಜೀವನವನ್ನು ನಿರ್ಮಲಾ ಸೀತಾರಾಮನ್ ಆರಂಭಿಸಿದರು. ಭಾರತದ ಆರ್ಥಿಕತೆ ಮತ್ತು ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತೀಯ ಆರ್ಥಿಕತೆಯು $ 3.1 ಟ್ರಿಲಿಯನ್ ಅನ್ನು ತಲುಪುವುದರೊಂದಿಗೆ, ಅವರು ಹಲವಾರು ಪುರಸ್ಕಾರಗಳು ಮತ್ತು ಮನ್ನಣೆಗಳನ್ನು ಗಳಿಸಿದ್ದಾರೆ. ಫೋರ್ಬ್ಸ್‌ನ 2019 ರ ವಿಶ್ವದ ಅತ್ಯಂತ ಶಕ್ತಿಶಾಲಿ 100 ಮಹಿಳೆಯರಲ್ಲಿ 34 ನೇ ಶ್ರೇಯಾಂಕವನ್ನು ಮತ್ತು ತನ್ನ ಅಲ್ಮಾ ಮೇಟರ್ JNU ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಅವಾರ್ಡ್ 2019 ಅನ್ನು ಪಡೆಯುತ್ತಿದೆ.

ಇಂದ್ರಾ ನೂಯಿ - ಪೆಪ್ಸಿಕೋದ ಮಾಜಿ ಸಿಇಒ

ಇಂದ್ರಾ ನೂಯಿ - ಪೆಪ್ಸಿಕೋದ ಮಾಜಿ ಸಿಇಒ

ವಿಶ್ವದ ಅತ್ಯಂತ ಪ್ರಭಾವಶಾಲಿ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾದ ಇಂದ್ರಾ ನೂಯಿ ಅವರು ಒಂದು ದಶಕದಿಂದ ವ್ಯಾಪಾರ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಹೇಳಬಹುದು. ಹೌದು, ಪೆಪ್ಸಿಕೋ ಅಧ್ಯಕ್ಷ-ಸಿಇಒ, ಅಮೆಜಾನ್ ಬೋರ್ಡ್‌ಗಳು ಮತ್ತು ಐಸಿಸಿ ಸದಸ್ಯ ಸೇರಿದಂತೆ ಪ್ರಬಲ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಕಾರಣ ಜಗತ್ತಿನ ಉದ್ಯಮದಲ್ಲಿ ನೂಯಿ ಪ್ರಾಬಲ್ಯ ಸಾಧಿಸಿದ್ದಾರೆ. ಸ್ವಯಂ ನಿರ್ಮಿತ ವ್ಯಾಪಾರ ಉದ್ಯಮದ ಮೂಲಕ ಪ್ರಸಿದ್ದಿ ಪಡೆದ ನೂಯಿ, 2008 ರಿಂದ 2017 ರವರೆಗೆ ಫೋರ್ಬ್ಸ್ ಮತ್ತು ಫಾರ್ಚೂನ್ಸ್‌ನ 'ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ' ಪಟ್ಟಿಯಲ್ಲಿ ಸತತವಾಗಿ ಶ್ರೇಯಾಂಕ ಪಡೆಯುವ ಮೂಲಕ ತನ್ನ ಸಾಧನೆ ಏನು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. . ಯೇಲ್ ಪದವೀಧರೆಯಾಗಿರುವ ನೂಯಿ ಅವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ 11 ಗೌರವ ಪದವಿಗಳು ನೀಡಿ ಗೌರವಿಸಲಾಗಿದೆ. 2021 ರಲ್ಲಿ ರಾಷ್ಟ್ರೀಯ ಮಹಿಳಾ ಹಾಲ್ ಆಫ್ ಫೇಮ್ ಮತ್ತು ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯ ಗೌರವವನ್ನು ನೂಯಿ ಪಡೆದಿದ್ದರು.

ರೋಶನಿ ನಾಡಾರ್ ಮಲ್ಹೋತ್ರಾ - ಹೆಚ್‌ಸಿಎಲ್ ಸಿಇಒ

ರೋಶನಿ ನಾಡಾರ್ ಮಲ್ಹೋತ್ರಾ - ಹೆಚ್‌ಸಿಎಲ್ ಸಿಇಒ

ದೇಶದಲ್ಲಿ ಪಟ್ಟಿ ಮಾಡಲಾದ ಪ್ರತಿಷ್ಟಿತ ಐಟಿ ಕಂಪನಿಯನ್ನು ಮುನ್ನಡೆಸುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ರೋಶನಿ ನಾಡಾರ್ ಮಲ್ಹೋತ್ರಾ ಪಾತ್ರರಾಗಿದ್ದಾರೆ. ಭಾರತೀಯ ಉದ್ಯಮಿಯಾಗಿರುವ ರೋಶನಿ ನಾಡಾರ್, ಪ್ರಸ್ತುತ ಭಾರತೀಯ ಬಹುರಾಷ್ಟ್ರೀಯ ಐಟಿ ಕಂಪನಿ ಎಚ್‌ಸಿಎಲ್ ನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿ ಇಲಿನಾಯ್ಸ್ ನ ಹಳೆಯ ವಿದ್ಯಾರ್ಥಿಯಾಗಿರುವ ರೋಶನಿ ನಾಡಾರ್ ಮಲ್ಹೋತ್ರಾ ಅವರು, ತಮ್ಮ ತಂದೆ ಶಿವ ನಾಡಾರ್ ಬಳಿಕ ಎಚ್ ಸಿ ಎಲ್ ನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡರು. 2019 ರಲ್ಲಿ ಫೋರ್ಬ್ಸ್‌ನ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಡಾರ್ ಮಲ್ಹೋತ್ರಾ ಅವರು 54 ನೇ ಸ್ಥಾನವನ್ನು ಗಳಿಸಿದ್ದರು. 2017 ಮತ್ತು 2014 ರಲ್ಲಿ ವೋಗ್ ಮತ್ತು ಎನ್ ಡಿಟಿವಿ ವರ್ಷದ ಲೋಕೋಪಕಾರಿ ಪ್ರಶಸ್ತಿಗಳನ್ನು ಸಹ ಅವರು ಪಡೆದುಕೊಂಡಿದ್ದಾರೆ.

ಡಾ. ಸೌಮ್ಯಾ ಸ್ವಾಮಿನಾಥನ್ - ಡಬ್ಲ್ಯೂ ಎಚ್‌ನ ಮುಖ್ಯ ವಿಜ್ಞಾನಿ

ಡಾ. ಸೌಮ್ಯಾ ಸ್ವಾಮಿನಾಥನ್ - ಡಬ್ಲ್ಯೂ ಎಚ್‌ನ ಮುಖ್ಯ ವಿಜ್ಞಾನಿ

ಭಾರತೀಯ ಶಿಶುವೈದ್ಯರು ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿರುವ ಡಾ. ಸೌಮ್ಯಾ ಸ್ವಾಮಿನಾಥನ್ 2019ರ ಮಾರ್ಚ್ ನಿಂದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಸೌಮ್ಯ ಸ್ವಾಮಿನಾಥನ್ ಈ ಹಿಂದೆವಿಶ್ವ ಆರೋಗ್ಯ ಸಂಸ್ಥೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಮತ್ತು ICMR ನ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. AIIMS ನವದೆಹಲಿಯ ಹಳೆಯ ವಿದ್ಯಾರ್ಥಿಯಾಗಿರುವ ಸೌಮ್ಯ ಅವರು ಜಾಗತಿಕ ಆರೋಗ್ಯ ಶೃಂಗಸಭೆಯಲ್ಲಿ ಉನ್ನತ ವೈಜ್ಞಾನಿಕ ಸಮಿತಿಯ ಸದಸ್ಯರಾಗಿರುವಾಗ ಎಚ್‌ಐವಿ ಮತ್ತು ಕ್ಷಯರೋಗದ ಕುರಿತು ನಡೆಸಿದ ಸಂಶೋಧನೆಗೆ ಅವರು ಜಾಗತಿಕವಾಗಿ ಗುರುತಿಸಿಕೊಂದರು. ಅಲ್ಲದೇ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿದರು. ಸೌಮ್ಯ ಅವರಿಗೆ, ಪ್ರಖ್ಯಾತ ಭಾರತೀಯ ವಿಜ್ಞಾನ ಅಕಾಡೆಮಿಗಳಿಂದ ಫೆಲೋಶಿಪ್‌ಗಳು ಮತ್ತು ಇಂಡಿಯನ್ ಅಸೋಸಿಯೇಷನ್ ​​ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್‌ಗಳಿಂದ ಜೀವಮಾನದ ಸಾಧನೆಯ ಪ್ರಶಸ್ತಿ ಸೇರಿದಂತೆ ತನ್ನ ವೃತ್ತಿಜೀವನದುದ್ದಕ್ಕೂ ಹಲವಾರು ಪ್ರಶಸ್ತಿಗಳನ್ನು ಸೌಮ್ಯ ಅವರು ಗಳಿಸಿದ್ದಾರೆ.

ಕರುಣಾ ನುಂಡಿ - ಭಾರತೀಯ ಸುಪ್ರೀಂ ಕೋರ್ಟ್‌ ವಕೀಲೆ

ಕರುಣಾ ನುಂಡಿ - ಭಾರತೀಯ ಸುಪ್ರೀಂ ಕೋರ್ಟ್‌ ವಕೀಲೆ

ಕರುಣಾ ನುಂಡಿ ಪ್ರಖ್ಯಾತ ಭಾರತೀಯ ವಕೀಲರಾಗಿದ್ದು, ಸುಪ್ರೀಂಕೋರ್ಟ್ ನಲ್ಲಿ ವಕೀಲೆ ವೃತ್ತಿಯನ್ನು ಮಾಡಿಕೊಂಡಿದ್ದಾರೆ. 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಅತ್ಯಾಚಾರ-ವಿರೋಧಿ ಕರಡು ರಚನೆಯಲ್ಲಿ ಅವರ ಪಾತ್ರ ಮಹತ್ವದಾಗಿದೆ. anti-rape ಬಿಲ್ ಜಾರಿಗೆ ತರುವ ಮೂಲಕ ಕರುಣಾ ನುಂಡಿ ಸ್ಫೂರ್ತಿಯ ಮತ್ತು ಬದಲಾವಣೆಯ ಧ್ವನಿಯಾದರು. ಸೇಂಟ್ ಸ್ಟೀಫನ್ಸ್ ದೆಹಲಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಪದವೀಧರರಾದ ನಂಡಿ ಅವರು ಮಾನವ ಹಕ್ಕಿಗಾಗಿ ಹಲವು ಹೋರಾಟಗಳನ್ನು ಮಾಡುತ್ತಿದ್ದಾರೆ. ಅಲ್ಲದೇ "ಜಗತ್ತಿಗೆ ಧನಾತ್ಮಕ ಕೊಡುಗೆಯನ್ನು" ಮತ್ತು "ಅನ್ಯಾಯವನ್ನು ನಿವಾರಿಸುವುದು" ಎನ್ನುವ ಮೋಟಿವೇಶನ್ ಮೂಲಕ ಕರುಣಾ ನುಂಡಿ ಭಾರೀ ಪ್ರಸಿದ್ದಿಯಾದರು. ಇನ್ನು ಇವರ ಲಿಂಗ ನ್ಯಾಯ ಮತ್ತು ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆಗೆ ಫೋರ್ಬ್ಸ್‌ನ ಸೆಲ್ಫ್ ಮೇಡ್ ವುಮೆನ್ 2020ರಲ್ಲಿ ಗೌರವ ನೀಡಿತು.

ಮಾಧಬಿ ಪುರಿ ಬುಚ್ - ಸೆಬಿಯ ಅಧ್ಯಕ್ಷರು

ಮಾಧಬಿ ಪುರಿ ಬುಚ್ - ಸೆಬಿಯ ಅಧ್ಯಕ್ಷರು

ಮಾರ್ಚ್ 2, 2022 ರಂದು ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನ ಹೊಸ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡ ಮಾಧಬಿ ಪುರಿ ಬುಚ್ ಅವರು SEBI ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಮತ್ತು ಮಾರುಕಟ್ಟೆ ನಿಯಂತ್ರಕವನ್ನು ಮುನ್ನಡೆಸುವ ಮೊದಲ ಮಾಜಿ ಖಾಸಗಿ ವಲಯದ ಉನ್ನತ ಮಟ್ಟದ ಕಾರ್ಯನಿರ್ವಾಹಕಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ದೆಹಲಿಯ ಸೇಂಟ್ ಸ್ಟೀಫನ್ಸ್ ಮತ್ತು IIM ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅವರು ಅನುಭವಿ ಉದ್ಯಮಿಯಾಗಿದ್ದಾರೆ. ಐಸಿಐಸಿಐ, ಪ್ರಧಾನ್ ಮತ್ತು ಐಡಿಯಾ ಸೆಲ್ಯುಲಾರ್ ನಲ್ಲಿ ತಾನು ಮಾಡಿದ ಅತ್ಯುತ್ತಮ ಕಾರ್ಯಕ್ಕೆ ಮಾಧವಿ ಹೆಸರುವಾಸಿಯಾಗಿದ್ದಾರೆ.

ಗೀತಾ ಗೋಪಿನಾಥ್ - ಐಎಂಎಫ್ ನಿರ್ದೇಶಕಿ

ಗೀತಾ ಗೋಪಿನಾಥ್ - ಐಎಂಎಫ್ ನಿರ್ದೇಶಕಿ

ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞ ಗೀತಾ ಗೋಪಿನಾಥ್ ಅವರು ಜನವರಿ 21, 2022 ರಿಂದ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಈ ಹುದ್ದೆ ಜಾಗತಿಕ ಹಣಕಾಸು ಸಂಸ್ಥೆಯ ಎರಡನೇ ಪ್ರಮುಖ ಹುದ್ದೆಯಾಗಿದ್ದು ಅವರ ಸಾಧನೆಗೆ ಸಿಕ್ಕ ಮನ್ನಣೆಯಾಗಿದೆ. ಭಾರತೀಯ ಮಹಿಳೆಯೊಬ್ಬರ ಈ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ಹಿಂದೆ ಗೀತಾ ಗೋಪಿನಾಥ್ ಜಾಗತಿಕ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಿನ್ಸ್‌ಟನ್ ನ ಹಳೆಯ ವಿದ್ಯಾರ್ಥಿಯಾಗಿರುವ ಗೀತಾ ಗೋಪಿನಾಥ್ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನಲ್ಲಿ ಅಂತರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರ ಕಾರ್ಯಕ್ರಮದ ಸಹ-ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. 2021 ರಲ್ಲಿ ಫೈನಾನ್ಷಿಯಲ್ ಟೈಮ್ಸ್‌ನ 'ವರ್ಷದ 25 ಅತ್ಯಂತ ಪ್ರಭಾವಶಾಲಿ ಮಹಿಳೆಯರ' ಪಟ್ಟಿಯಲ್ಲಿ ಗೋಪಿನಾಥ್ ಅವರು ಕಾಣಿಸಿಕೊಳ್ಳುವ ಮೂಲಕ ಅವರ ಸಾಧನೆಗೆ ಮನ್ನಣೆ ದೊರಕಿತ್ತು. ಇನ್ನು ಟೈಮ್ ಮ್ಯಾಗಜೀನ್ ನ 'ವಿಮೆನ್ ಹೌ ಬ್ರೋಕ್ ಮೇಜರ್ ಬೇರಿಯರ್ಸ್ ಟು ಬಿಕಂಮ್ ಫಸ್ಟ್ ಎನ್ನುವ ಶೀರ್ಷಿಕೆಯ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡರು. ಅಲ್ಲದೇ ಭಾರತದ ರಾಷ್ಟ್ರಪತಿಗಳು ನೀಡುವ ‘ಪ್ರವಾಸಿ ಭಾರತೀಯ ಸಮ್ಮಾನ್' ಪ್ರಶಸ್ತಿಗೂ ಗೀತಾ ಗೋಪಿನಾಥ್ ಭಾಜನರಾಗಿದ್ದಾರೆ. 2011 ರಲ್ಲಿ ವಿಶ್ವ ಆರ್ಥಿಕ ವೇದಿಕೆಯಿಂದ ‘ಯಂಗ್ ಗ್ಲೋಬಲ್ ಲೀಡರ್' ಎಂದು ಹೆಸರನ್ನು ನೀಡಿ ಅವರನ್ನು ಗೌರವಿಸಲಾಯಿತು.

English summary

Women's Equality Day 2022: most Influential Indian Women Leaders in kannada

Womens Equality Day 2022 : most Influential Indian Women Leaders in kannada
Story first published: Friday, August 26, 2022, 11:02 [IST]
X
Desktop Bottom Promotion