For Quick Alerts
ALLOW NOTIFICATIONS  
For Daily Alerts

2023: ಹೊಸ ವರ್ಷದಲ್ಲಿ ಅದೃಷ್ಟಕ್ಕಾಗಿ ಪಾಲಿಸಲಾಗುವ ನಂಬಿಕೆಗಳಿವು

|

ಟಿಕ್‌-ಟಿಕ್‌ ಕ್ಲಾಕ್‌ ಮಧ್ಯರಾತ್ರಿಯಲ್ಲಿ 12 ಗಂಟೆ ಬಡೆಯುತ್ತಿದ್ದಂತೆ ಎಲ್ಲಾ ಕಡೆಯಿಂದ ಹೊಸ ವರ್ಷದ ಶುಭಾಶಯಗಳು... ಹ್ಯಾಪಿ ನ್ಯೂ ಇಯರ್‌... ಎಂದು ಸಂಭ್ರಮದಿಂದ ಜೋರಾಗಿ ಹೇಳುತ್ತಾ ಕುಣಿದು ಕುಪ್ಪಳಿಸುತ್ತಾರೆ. ಹೊಸ ವರ್ಷ ಎಂದರೆ ಏನೋ ಹೊಸ ಭರವಸೆ, ಎಲ್ಲವೂ ಒಳಿತಾಗಲಿ ಎಂಬ ಆಶಯ, ಹೊಸದಾದ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ.

ಹೊಸ ವರ್ಷದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ, ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಈ ನಂಬಿಕೆಗಳಿವೆ, ವಿದೇಶದಲ್ಲಿ ಈ ನಂಬಿಕೆ ತುಸು ಅಧಿಕವೇ ಇದೆ ಎಂದು ಹೇಳಬಹುದು. ಹೊಸ ವರ್ಷ ಅದೃಷ್ಟದ ವರ್ಷವಾಗಿರಲು ಈ ರೀತಿ ಮಾಡಿದರೆ ಒಳ್ಳೆಯದಂತೆ:

ಮಿಡ್‌ನೈಟ್‌ಕಿಸ್‌:

ಮಿಡ್‌ನೈಟ್‌ಕಿಸ್‌:

ಯಾರನ್ನು ನೀವು ಪ್ರೀತಿಸುತ್ತಾರೋ ಅವರಿಗೆ ಮಧ್ಯರಾತ್ರಿ 12 ಗಂಟೆಗೆ ಕಿಸ್‌ ಮಾಡಿದರೆ ಮುಂದಿನ 12 ತಿಂಗಳು ಇಬ್ಬರ ಬಾಂಧವ್ಯ ತುಂಬಾ ಚೆನ್ನಾಗಿರುತ್ತದೆ ಎಂಬ ನಂಬಿಕೆ. ಹೊಸ ವರ್ಷವನ್ನು ಸಂಗಾತಿ ಜೊತೆಗೆ ಸ್ವಾಗತಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ನಿಮ್ಮ ಸಂಗಾತಿಗೆ ನೀವೂ ರೊಮ್ಯಾಂಟಿಕ್ ಕಿಸ್‌ ಕೊಟ್ಟು ಹೊಸ ವರ್ಷವನ್ನು ರೊಮ್ಯಾಂಟಿಕ್ ಆಗಿ ಸ್ವಾಗತಿಸಬಹುದು ಏನಂತೀರಿ?

ಹೊಸ ವರ್ಷಕ್ಕೆ ಮುನ್ನ ನಿಮ್ಮಿಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೆ ಇಂದೇ ಕೂತು ಮಾತನಾಡಿ, ಹೊಸದಾಗಿ ಹೊಸ ವರ್ಷ ಪ್ರಾರಂಭಿಸಿ. ಹೊಸ ವರ್ಷ ಇಡೀ ವರ್ಷ ನಿಮ್ಮಿಬ್ಬರ ಬಾಂಧವ್ಯ ಚೆನ್ನಾಗಿಟ್ಟಿರಲಿ.

12 ದ್ರಾಕ್ಷಿ ತಿನ್ನಬೇಕು:

12 ದ್ರಾಕ್ಷಿ ತಿನ್ನಬೇಕು:

ಹನ್ನೆರಡೇ ಹನ್ನೆರಡು ದ್ರಾಕ್ಷಿ ತಿನ್ನಬೇಕು, ಹೆಚ್ಚೂ ತಿನ್ನಬಾರದು, ಕಡಿಮೆಯೂ ತಿನ್ನಬಾರದು, ಅಂದರೆ ತಿಂಗಳಿಗೆ ಒಂದು ದ್ರಾಕ್ಷಿ ಎಂಬಂತೆ 12 ತಿಂಗಳಿಗೆ 12 ದ್ರಾಕ್ಷಿ ತಿಂದರೆ ಹೊಸ ವರ್ಷದ ಹ್ನನೆರಡು ತಿಂಗಳು ಅದೃಷ್ಟದ ತಿಂಗಳಾಗಿರುತ್ತದೆ ಎಂದು ಹೇಳಲಾಗುವುದು. ದ್ರಾಕ್ಷಿ ತಿಂದರೆ ಶುಭವಾಗುವುದು, ದ್ರಾಕ್ಷಿಯಂತೆ ಬದುಕು ಹುಳಿ-ಸಿಹಿ ಮಿಶ್ರಿತ, ಎರಡೂ ಹದವಾಗಿದ್ದರೆ ಚೆನ್ನ, ಅಲ್ವಾ?

ನಿಮ್ಮ ಪರ್ಸ್‌ನಲ್ಲಿ ಹಣವಿರಲಿ

ನಿಮ್ಮ ಪರ್ಸ್‌ನಲ್ಲಿ ಹಣವಿರಲಿ

ಹಣವೆಂದರೆ ಲಕ್ಷ್ಮಿ. ಹಬ್ಬಗಳಲ್ಲಿ ಹಣವಿಡುವುದು ಶುಭ ಎಂದು ಪರಿಗಣಿಸಲಾಗಿದೆ. ಹೊಸ ವರ್ಷದಲಲ್ಲಿ ನಿಮ್ಮ ಪರ್ಸ್‌ನಲ್ಲಿ ಹಣವನ್ನು ಇಟ್ಟರಿ. ಹಣ ಕೈಯಲ್ಲಿದ್ದರೆ ಆತ್ಮವಿಶ್ವಾಸ ಹೆಚ್ಚುವುದು, ಹೊಸ ವರ್ಷವನ್ನು ಆತ್ಮವಿಶ್ವಾಸದೊಂದಿಗೆ ಸ್ವಾಗತಿಸಿ. ಹೊಸ ವರ್ಷ ಯಾರ ಕೈಯಿಂದಲೂ ಹಣ ಪಡೆಯಬೇಡಿ, ಹಣ ಕೊಡಲೂ ಬೇಡಿ.

ಸಾಲ ತೆಗೆದುಕೊಂಡರೆ ಇಡೀ ವರ್ಷ ಸಾಲ ತೆಗೆಯಬೇಕಾಗುತ್ತದೆ ಎಂದು ಹೇಳಲಾಗುವುದು.

ನಿಮ್ಮ ಮನೆಯಲ್ಲಿ ದಿನಸಿ ಸಾಮಾನುಗಳಿರಬೇಕು

ನಿಮ್ಮ ಮನೆಯಲ್ಲಿ ದಿನಸಿ ಸಾಮಾನುಗಳಿರಬೇಕು

ಹೊಸ ವರ್ಷಕ್ಕೆ ಮನೆಯಲ್ಲಿ ವಸ್ತುಗಳು ಇಲ್ಲ ಅಂತ ಇರಬಾರದು, ಎಲ್ಲಾ ವಸ್ತುಗಳನ್ನು ಮೊದಲೇ ಖರೀದಿಸಿದರೆ ಶುಭ ಎಂಬುವುದು ನಂಬಿಕೆ. ಅಡುಗೆ ಮನೆಯ ಡಬ್ಬಗಳು ತುಂಬಿದ್ದರೆ ಶುಭ ಎಂದು ಹೇಳಲಾಗುವುದು.

ಮನೆಯ ಬಾಗಿಲು ಮಧ್ಯರಾತ್ರಿ ತೆರೆದಿಡಬೇಕು

ಮನೆಯ ಬಾಗಿಲು ಮಧ್ಯರಾತ್ರಿ ತೆರೆದಿಡಬೇಕು

ಹೊಸ ವರ್ಷದಂದು ಮನೆಯ ಬಾಗಿಲು ಮುಚ್ಚಿರಬಾರದು, ಮನೆಯ ಮುಂಬಾಗಿಲು ತೆರೆದಿಟ್ಟರೆ ಹೊಸ ವರ್ಷದಲ್ಲಿ ಅದೃಷ್ಟ ನಮ್ಮ ಮನೆಯೊಳಗೆ ಬರುತ್ತದೆ ಎಂಬ ನಂಬಿಕೆ ಇದೆ. ಈ ದಿನ ಮಧ್ಯರಾತ್ರಿ ಮನೆಯ ಮುಂಬಾಗಿಲು ತೆರೆದಿಟ್ಟು ಎಲ್ಲರು ಮನೆಮಂದಿಯೆಲ್ಲಾ ಜೊತೆಯಾಗಿ ಹಬ್ಬವನ್ನು ಆಚರಿಸಿ.

ಮನೆಯನ್ನು ಸ್ವಚ್ಛ ಮಾಡಬಾರದು

ಮನೆಯನ್ನು ಸ್ವಚ್ಛ ಮಾಡಬಾರದು

ಹೊಸ ವರ್ಷ ಪ್ರಾರಂಭವಾಗುವ ಮುನ್ನ ಮನೆಯನ್ನು ಸ್ವಚ್ಛಮಾಡಬೇಕು, ಹೊಸ ವರ್ಷದ ದಿನ ಮನೆಯನ್ನು ಸ್ವಚ್ಛ ಮಾಡಬಾರದು, ಬಟ್ಟೆ ಒಗೆಯಬಾರದು ಎಂದು ಹೇಳಲಾಗುವುದು. ಹೊಸ ದಿನವನ್ನು ಸಂಭ್ರಮದಿಂದ ಸ್ವಾಗತಿಸಿ, ಮನೆ ಕೆಲಸ ಮಾಡುತ್ತಾ ಕೂರಬೇಡಿ.

ಅಳಬಾರದು

ಅಳಬಾರದು

ಹೊಸ ವರ್ಷದ ದಿನ ಕಣ್ಣೀರು ಹಾಕಬಾರದು ಎಂದು ಹೇಳಲಾಗುವುದು. ಯಾವುದೇ ಶುಭ ಕಾರ್ಯ ನಡೆಯುವಾಗ ಕಣ್ಣೀರು ಹಾಕಬಾರದು, ಹಾಗೆ ಹಾಕಿದರೆ ಶುಭವಲ್ಲ ಎಂದು ಹೇಳಲಾಗುವುದು. ಹೊಸ ವರ್ಷ ಎಂದರೆ ವರ್ಷದ ಫಲ, ಈ ದಿನ ಕಣ್ಣೀರು ಹಾಕಬಾರದು ಎಂದು ಹೇಳಲಾಗುವುದು. ವರ್ಷದ ಮೊದಲ ದಿನವನ್ನು ಸಂತೋಷದಿಂದ ಬರಮಾಡಿ.

ಮನೆ ಬಾಗಿಲು ಹಾಕಿ ಹೋಗಬಾರದು

ಮನೆ ಬಾಗಿಲು ಹಾಕಿ ಹೋಗಬಾರದು

ಹೊಸ ವರ್ಷದ ದಿನ ಮನೆಗೆ ಬಾಗಿಲು ಹಾಕಿ ಹೊರಗಡೆ ಹೋಗಬಾರದು ಎಂದು ಹೇಳಲಾಗುವುದು, ಕೆಲವು ಕಡೆ ಮನೆಯ ಹಿರಿಯರು ಈ ದಿನ ಮನೆ ಮಂದಿಗೆ ಉಡುಗೊರೆ ನೀಡುವ ಪದ್ಧತಿ ಇದೆ.

English summary

Best New Years Superstitions That Could Bring You Good Luck in 2023 in Kannada

New Years Superstitions, people do things in new year, new year 2023, things to for good luck in 2023,
Story first published: Saturday, December 31, 2022, 14:14 [IST]
X
Desktop Bottom Promotion