For Quick Alerts
ALLOW NOTIFICATIONS  
For Daily Alerts

ಈ ರಾಶಿಚಕ್ರದವರು ಸದಾ ತಮ್ಮದೇ ರೀತಿಯಲ್ಲಿ ವರ್ತಿಸುತ್ತಾರೆ.

|

ನಮ್ಮವರು ನಮ್ಮ ಸ್ನೇಹಿತರು ಎಂದಾಗ ನಾವು ಭರವಸೆ ಇಡುವುದು ಹೆಚ್ಚು. ಅವರು ಮಾಡುವ ಕೆಲಸದಲ್ಲಿ ಯಾವುದೇ ದೋಷಕಾಣದು. ಅವರಲ್ಲಿರುವ ನಂಬಿಕೆಯು ಅವರಲ್ಲಿರುವ ದೋಷಗಳನ್ನು ಮರೆಮಾಡುತ್ತದೆ. ಹಾಗಾಗಿ ಅವರಲ್ಲಿ ಇರುವ ಯಾವುದೇ ಕೆಟ್ಟ ಗುಣಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಹಾಗೊಮ್ಮೆ ಯಾವುದಾದರೂ ತಪ್ಪುಗಳು ಕಂಡುಬಂದರೂ ಅದನ್ನು ಕ್ಷಣಾರ್ಧದಲ್ಲಿಯೇ ಮರೆತು ಬಿಡುತ್ತೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಬಹಳ ಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ವ್ಯಕ್ತಿ ಎಷ್ಟೇ ಹತ್ತಿರದವರಾಗಿರಲಿ ಅಥವಾ ಬಂಧು ಬಾಂಧವರೇ ಆಗಿರಲಿ ಅವರು ತಮ್ಮ ಸಂಬಂಧ ಅಥವಾ ನಂಬಿಕೆಗಿಂತಲೂ ಹೆಚ್ಚಾಗಿ ತಮ್ಮನ್ನು ತಾವು ಪ್ರೀತಿಸುತ್ತಾರೆ. ಅವರು ತಮ್ಮ ಎಣಿಕೆ ಹಾಗೂ ತಮ್ಮ ಇಚ್ಛೆಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತಾರೆ. ಇತರರ ಅನುಕೂಲವನ್ನು ಪರಿಗಣಿಸುವುದಿಲ್ಲ. ಈ ಗುಣಗಳು ಕೆಲವು ಸೀಮಿತ ರಾಶಿಚಕ್ರದವರು ಹೊಂದಿರುತ್ತಾರೆ. ಹಾಗಾಗಿ ಅಂತಹ ರಾಶಿಚಕ್ರದವರು ನಿಮ್ಮ ಆಪ್ತರಾಗಿದ್ದರೆ ಅವರೊಂದಿಗೆ ನಂಬಿಕೆ ಇಡುವ ಮೊದಲು ಅವರ ಈ ಗುಣಗಳನ್ನು ತಿಳಿದುಕೊಳ್ಳಿ. ಏಕೆಂದರೆ ಅವರು ತಮ್ಮ ಕೆಲವು ಎಣಿಕೆಯ ಬಿಟ್ಟು ಆಚೆ ಬರುವುದಿಲ್ಲ...

ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಗುಣ ಹೇಗಿರುತ್ತದೆ? ನೀವು ಆ ರಾಶಿಚಕ್ರಕ್ಕೆ ಸೇರಿದವರೇ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ...

ಕುಂಭ:

ಕುಂಭ:

ಈ ರಾಶಿಯ ವ್ಯಕ್ತಿಗಳು ಮುಕ್ತ ಚಿಂತಕರಾಗಿರುತ್ತಾರೆ. ಇವರು ಏನು ಮಾಡುತ್ತಾರೆ ಅಥವಾ ಏನು ಮಾಡಬೇಕು ಎನ್ನುವುದನ್ನು ಇತರರ ಪ್ರಭಾವದಿಂದ ತಿಳಿಯುವುದಿಲ್ಲ. ಎಲ್ಲವೂ ಅವರ ಸ್ವ-ಇಚ್ಛೆಯಂತೆ ನಡೆಯುವುದು. ಇವರು ಇತರರ ಶಿಫಾರಸ್ಸುಗಳ ಮೂಲಕ ಜನಪ್ರಿಯವಾಗುವುದನ್ನು ಇಷ್ಟಪಡುವುದಿಲ್ಲ. ಕೆಲವೊಂದು ವಿಷಯದಲ್ಲಿ ಇವರಿಗೆ ವೈಯಕ್ತಿಕವಾಗಿ ಮನವರಿಕೆ ಮಾಡಬೇಕಾಗುವುದು. ಆಗ ಅವರು ಶ್ಲಾಘಿಸುತ್ತಾರೆ. ಇವರ ಏಕೈಕ ಅನುಮೋದನೆ ಎಂದರೆ ಅದು ಅವರ ಅಭಿಪ್ರಾಯ. ಇವರು ತಮ್ಮ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಇತರರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ.

ಧನು:

ಧನು:

ಈ ರಾಶಿಯವರು ಅತ್ಯಂತ ಧೈರ್ಯವಿರುವವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುವವರು ಎನ್ನಬಹುದು. ಅವರು ಎಲ್ಲಿಗೆ ಹೋಗಬೇಕು ಎಂದು ಬಯಸುತ್ತಾರೋ ಅಲ್ಲಿಗೇ ಹೋಗಲೇ ಬೇಕು. ತಮ್ಮ ಅಭಿಪ್ರಾಯ ಹಾಗೂ ನಿರ್ಣಯದಲ್ಲಿ ಮುಕ್ತರಾಗಿರುತ್ತಾರೆ. ಇವರು ಸಂದರ್ಭಗಳಿಗೆ ಬದ್ಧರಾಗಿರಲು ಬಯಸುವುದಿಲ್ಲ. ಇವರು ತಮ್ಮದೇ ಆದ ಕೌಶಲ್ಯ ಹಾಗೂ ಸಾಮಥ್ರ್ಯ ಹೊಂದಿರುತ್ತಾರೆ. ಜೊತೆಗೆ ಅವರ ಸಾಮಥ್ರ್ಯದ ಮೇಲಿರುವ ಅವರ ನಂಬಿಕೆಯಿಂದಲೇ ತಮ್ಮ ಮಾರ್ಗದಲ್ಲಿ ಸವಾಲು ಮತ್ತು ಅಪಾಯಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ.

ಮೇಷ:

ಮೇಷ:

ಈ ರಾಶಿಚಕ್ರದವರು ಸ್ವತಂತ್ರರಾಗಿರಲು ಬಯಸುತ್ತಾರೆ. ಇವರು ಎಲ್ಲಾ ವಿಚಾರದಲ್ಲೂ ತಮ್ಮದೇ ಆದ ನಂಬಿಕೆಯನ್ನು ಹೊಂದಿರುತ್ತಾರೆ. ಇವರು ಅಪಾಯವನ್ನು ತಂದುಕೊಳ್ಳುವುದು ಅಥವಾ ಕೆಲವೊಮ್ಮೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಅವರ ಅರಿವಿಗೆ ಬರುತ್ತದೆಯಾದರೂ ತಮ್ಮದೇ ಆದ ಸ್ವಂತ ಒಳನೋಟವನ್ನು ನಂಬುತ್ತಾರೆ. ಇವರು ಯಾವುದೇ ಸನ್ನಿವೇಶದಲ್ಲಾದರೂ ಸಕಾರಾತ್ಮಕ ರೀತಿಯಲ್ಲಿ ಸ್ವೀಕರಿಸುವುದು ಹಾಗೂ ಉತ್ತಮ ಭಾವನೆಗಳಿಗೆ ಶ್ರಮಿಸಬೇಕು ಎನ್ನುವುದನ್ನು ತಿಳಿದಿರಬೇಕು.

ಮಿಥುನ:

ಮಿಥುನ:

ಈ ರಾಶಿಚಕ್ರದವರು ಇತರರನ್ನು ಕಂಡು ಅಸೂಯೆ ಪಡುವುದಿಲ್ಲ. ಹಾಗೆಯೇ ತಮ್ಮ ಬಗ್ಗೆ ಹೇಳುವ ಯಾವುದೇ ಟೀಕೆಗಳನ್ನು ಸಹಿಸುವುದಿಲ್ಲ. ಅನೇಕ ಸಂದರ್ಭದಲ್ಲಿ ತಮಗೆ ಅನುಕೂಲವಾಗುವಂತಹ ಉಪಯೋಗಗಳನ್ನು ಮಾಡಲು ಮುಂದಾಗುತ್ತಾರೆ. ಇವರನ್ನು ಪ್ರಭಾವ ಬೀರುವ ಏಕೈಕ ವ್ಯಕ್ತಿಗಳು ಎಂದರೆ ಅವರೇ ಆಗಿರುತ್ತಾರೆ. ಅತ್ಯಂತ ಬುದ್ಧಿವಂತರಾದ ಇವರಿಗೆ ತಾವು ಏನನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ.

ಮಕರ:

ಮಕರ:

ಈ ರಾಶಿಯವರು ತಮ್ಮ ಕಠಿಣ ಕೆಲಸ ಮತ್ತು ಶ್ರದ್ಧೆಯ ವಿಚಾರದಲ್ಲಿ ಹೆಸರುವಾಸಿಯಾಗಿದ್ದಾರೆ. ಅತ್ಯಂತ ಸ್ವತಂತ್ರ ರಾಶಿಚಕ್ರದ ಚಿಹ್ನೆಯವರು ಎಂದು ಹೇಳಲಾಗುತ್ತದೆ. ಇವರು ಆಯ್ಕೆ ಮಾಡುವ ಕೆಲಸವು ಹೆಚ್ಚು ಭಾವೋದ್ರಿಕ್ತ ವಿಷಯವಾಗಿರುತ್ತದೆ. ಆರ್ಥಿಕ ಸ್ಥಿತಿಯಿಂದ ಸಿಗುವ ಸ್ವಾತಂತ್ರ್ಯವನ್ನು ಇವರು ಬಯಸುತ್ತಾರೆ. ಇವರು ತಾವು ಮಾಡುವ ಕೆಲಸವನ್ನು ಹೆಚ್ಚು ಇಷ್ಟಪಡುವುದರಿಂದ ಬೇರೆಯವರ ನಿರ್ದೇಶನವನ್ನು ಇಷ್ಟಪಡುವುದಿಲ್ಲ. ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟ ಪಡುವ ಇವರು ತಮ್ಮದೇ ಆದ ರೀತಿಯಲ್ಲಿ ಮೇಲಾಧಿಕಾರಿಯಾಗಿರುತ್ತಾರೆ.

ಕನ್ಯಾ:

ಕನ್ಯಾ:

ಈ ರಾಶಿಯ ವ್ಯಕ್ತಿಗಳು ಯಾರನ್ನಾದರೂ ಅಥವಾ ಏನನ್ನಾದರೂ ತಮ್ಮ ನಿಯಂತ್ರಣದಲ್ಲಿಡಲು ಬಯಸುತ್ತಾರೆ. ಸದಾ ಎಲ್ಲಾ ವಿಚಾರದಲ್ಲೂ ಸಂಶೋಧನೆಯನ್ನು ನಡೆಸುತ್ತಿರುತ್ತಾರೆ. ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎನ್ನುವುದನ್ನು ತಿಳಿದಿರುತ್ತಾರೆ. ಹಗಾಗಿ ಇತರರಿಂದ ಸಹಾಯವನ್ನು ಪಡೆಯಲು ಇವರು ಬಯಸುವುದಿಲ್ಲ. ಬದಲಿಗೆ ಹೆಚ್ಚು ಸ್ವತಂತ್ರರಾಗಿರಲು ಬಯಸುತ್ತಾರೆ. ಇತರರನ್ನು ನಂಬಲು ಇವರು ಕಷ್ಟಪಡುತ್ತಾರೆ. ತಮಗೆ ತಾವೇ ಒಂದು ಗಡಿಯನ್ನು ಹಾಕಿಕೊಂಡಿರುತ್ತಾರೆ. ಇವರನ್ನು ಬಳಸಿಕೊಂಡು ಇತರರು ಲಾಭ ಪಡೆಯಲು ಅನುಮತಿಸುವುದಿಲ್ಲ.

Read more about: ಜ್ಯೋತಿಷ್ಯ
English summary

zodiac-signs-that-are-known-to-think-only-for-themselve

zodiac-signs-that-are-known-to-think-only-for-themselve
Story first published: Tuesday, May 15, 2018, 16:20 [IST]
X
Desktop Bottom Promotion