For Quick Alerts
ALLOW NOTIFICATIONS  
For Daily Alerts

  ಮೇ 14, 2018 ರಿಂದ ಮೇ 20, 2018ರ ವಾರ ಭವಿಷ್ಯ

  |

  ಸಮಯ ಎನ್ನುವುದು ಯಾರ ಕಲ್ಪನೆಗೂ ಸಿಗದ ವಿಚಾರ. ನಾವು ಕಳೆಯುತ್ತಿರುವ ಸಮಯ ಹಾಗೂ ಮುಂದೆ ಬರಲಿರುವ ಸಮಯದಲ್ಲಿ ನಮ್ಮ ಭವಿಷ್ಯದ ಬದಲಾವಣೆ ಯಾವ ರೀತಿಯ ತಿರುವನ್ನಾದರೂ ಪಡೆದುಕೊಳ್ಳುವುದು? ಅದು ಯಾಕೆ ಹಾಗೆ? ನಮಗೆ ಹೇಗೆ ದೊರೆಯಿತಿ? ಎನ್ನುವಂತಹ ಚಿಂತನೆಗಳಿಗೆ ಅವಕಾಶಗಳಿರುವುದಿಲ್ಲ. ಅದೇನೇ ಆಗಿದ್ದರೂ ಸ್ವೀಕರಿಸಿ ಅನುಭವಿಸಬೇಕಷ್ಟೆ.

  ಜ್ಯೋತಿಷ್ಯದ ಅನುಸಾರ ನಮ್ಮ ಮುಂದಿನ ಭವಿಷ್ಯ ಅಥವಾ ಸಮಯ ಹೇಗಿರಬಹುದು ಎನ್ನುವುದನ್ನು ಅವಲೋಕನ ಮಾಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರದಲ್ಲಿ ಗ್ರಹಗತಿಗಳ ಸ್ಥಾನಮಾನ ಧನಾತ್ಮಕ ಅಥವಾ ಋಣಾತ್ಮಕ ಬದಲಾವಣೆಯನ್ನು ಪಡೆದುಕೊಳ್ಳುವುದು. ಇವುಗಳ ಅನುಗುಣವಾಗಿ ರಾಶಿಚಕ್ರದ ಮೇಲೆ ಗಂಭೀರವಾದ ಬದಲಾವಣೆ ಉಂಟಾಗುವುದು.

  ಈ ವಾರದ ಗ್ರಹಗತಿಗಳಿಂದಾಗಿ ನಿಮ್ಮ ಮೇಲೆ ಯಾವ ಪರಿಣಾಮ ಬೀರುವುದು? ಅದರಿಂದಾಗಿ ನೀವು ಯಾವ ಬದಲಾವಣೆಯನ್ನು ಕಾಣಬೇಕಾಗುವುದು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  ಮೇಷ:

  ಮೇಷ:

  ವೃತ್ತಿಗೆ ಸಂಬಂಧಿತ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಮನಸ್ಸು ಆಯಸ್ಕಾಂತದಂತೆ ಕೆಲಸ ಮಾಡುವುದು. ಸಮಯವು ಇತರರಿಗೆ ನಿಮ್ಮಿಂದ ಸಹಾಯ ಮಾಡುವಂತಹ ಸಂದರ್ಭವನ್ನು ಒದಗಿ ಬರುವಂತೆ ಮಾಡುವುದು. ಅಂತಹ ಸಮಯದಲ್ಲಿ ನೀವು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಮತ್ತೊಂದೆಡೆ ನಿಮ್ಮ ಪ್ರಚಾರಕ್ಕಾಗಿ ನೀವು ಹಿಂತಿರುಗಬಹುದು.

  ವೃಷಭ:

  ವೃಷಭ:

  ಹಣಕಾಸಿನ ವಿಚಾರದಲ್ಲಿ ಈ ವಾರವು ನಿಮಗೆ ಅದೃಷ್ಟದ ವಾರವಾಗಿರುತ್ತದೆ. ಉತ್ತಮ ಸಮಯ ನಿಮಗೆ ಒದಗಿ ಬರುವುದರಿಂದ ನೀವು ಹಣ ಮಾಡುವ ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ. ಸ್ವಯಂ ಸಾಧನೆ ಮಾಡಲು ಬಯಸುವವರು ನಿಮ್ಮನ್ನು ಹಿಮ್ಮೆಟ್ಟಿಸುವ ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಯಾವುದು ಸರಿ ಎನ್ನುವುದನ್ನು ಸೂಕ್ತ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಪ್ರೀತಿಯ ಮುಂಭಾಗದಲ್ಲಿ ನಿಮ್ಮ ಪ್ರೀತಿಯು ಕೂಡ ನಿಕಟ ಸಂಬಂಧವನ್ನು ಪಡೆದುಕೊಳ್ಳುವುದು.

  ಮಿಥುನ:

  ಮಿಥುನ:

  ಈ ವಾರ ನೀವು ವೃತ್ತಿ ಕ್ಷೇತ್ರದಲ್ಲಿ ಬೇರೆ ಮಾರ್ಗವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮೋಸ ಮಾಡುವ ಹಾಗೂ ಮನವೊಲಿಸುವ ವ್ಯಕ್ತಿಗಳ ವಿರುದ್ಧ ನೀವು ಹೋರಾಡಬಹುದು. ಬಲವಂತವಾಗಿ ಪ್ರಮುಖ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಭಾವನಾತ್ಮಕ ಪ್ರಾಮುಖ್ಯತೆಯ ಅಗತ್ಯ ಏನು ಎನ್ನುವುದು ಈ ವಾರದಲ್ಲಿ ಒಲವು ತೋರುತ್ತದೆ. ತೀವ್ರತೆಯ ರೂಪದಲ್ಲಿ ಡೇಟಿಂಗ್ ಮಾಡುವ ಸಿದ್ಧತೆಯನ್ನು ಮಾಡುವಿರಿ. ಮಗುವಿನಂತಹ ನಡವಳಿಕೆ ಮತ್ತು ಮನೋಭಾವವು ಉತ್ತಮ ಫಲಿತಾಂಶ ನೀಡುವುದು.

  ಕರ್ಕ:

  ಕರ್ಕ:

  ಈ ವಾರ ನಿಮ್ಮ ಕೆಲಸದ ಒತ್ತಡದಿಂದ ಮನಸ್ಸು ಹೊರ ಬರಲು ಬಯಸುವುದು. ವಾರದ ಅಂತ್ಯದ ವರೆಗೂ ನೀವು ನಿಮ್ಮ ಗಮನವನ್ನು ಕೆಲಸದಲ್ಲಿ ಕೇಂದ್ರೀಕರಿಸಲು ಕಷ್ಟವಾಗುವುದು. ಆರ್ಥಿಕ ವಿಚಾರದಲ್ಲಿ ನೀವು ಆಕ್ರಮಣಕಾರಿಯಾಗಿ ವ್ಯವಹರಿಸಲು ಒಲವು ತೋರುವಿರಿ. ಸೃಜನಶೀಲತೆಯನ್ನು ಉತ್ತೇಜಿಸುವ ಮೂಲಕ ನಾವೀನ್ಯತೆಗೆ ಯಾವುದೇ ರೀತಿಯ ರೂಪಾಂತರದ ಅವಶ್ಯಕತೆ ಇದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇನ್ನೊಂದೆಡೆ ಸಕಾರಾತ್ಮಕ ಶಕ್ತಿಯು ವಿಪರೀತತೆಯು ನಿಮ್ಮನ್ನು ಕಾರ್ಯರೂಪಕ್ಕೆ ತರಲು ತೋರುವುದು.

  ಸಿಂಹ:

  ಸಿಂಹ:

  ಈ ವಾರದಲ್ಲಿ ನೀವು ಅನೇಕ ಗೊಂದಲಗಳನ್ನು ಅನುಭವಿಸುತ್ತೀರಿ. ನಿಮ್ಮ ವೃತ್ತಿಪರ ಜೀವನದಲ್ಲಿ ಹಠಾತ್ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ಹಣಕಾಸು ಸೇರಿದಂತೆ ಇನ್ನಿತರ ವಿಚಾರದಲ್ಲಿ ಹೆಚ್ಚಿನ ಗಮನ ಬೇಕಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಭಾವನೆ ಹಾಗೂ ಪ್ರೀತಿಗಾಗಿ ಸ್ವಲ್ಪ ಸಮಯವನ್ನು ಕೊಡಲು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕಾಗುವುದು.

  ಕನ್ಯಾ:

  ಕನ್ಯಾ:

  ಈ ವಾರ ನೀವು ನಿಮ್ಮ ಎದುರಾಳಿಯ ದೌರ್ಬಲ್ಯವನ್ನು ಅರಿಯುವ ಸಲುವಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸುವ ಸಾಧ್ಯತೆಗಳಿವೆ. ಕೆಲವು ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪದ ವಿಷಯದ ಕಾರಣವಾಗಿ ವಿವಾದ ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮನ್ನು ಮೊದಲ ಸ್ಥಾನದಲ್ಲಿ ಇಡಲು ಏನನ್ನು ಪಡೆದುಕೊಂಡಿಲ್ಲ. ಹಾಗಾಗಿ ಮುಂದಿನ ದಾರಿ ಹೇಗಿರುತ್ತದೆ? ಎನ್ನುವುದರ ಬಗ್ಗೆ ಸ್ವಲ್ಪ ಜಾಗರೂಕತೆಯಲ್ಲಿ ಇರಬೇಕು.

  ತುಲಾ:

  ತುಲಾ:

  ಆರ್ಥಿಕವಾಗಿ ಉತ್ತಮ ಸ್ಥಾನವನ್ನು ಪಡೆಯಲು ನೀವು ನಿಮ್ಮ ಮಾರ್ಗದ ಮಧ್ಯದಲ್ಲಿ ಹೋಗಬೇಕು. ಕೆಲವು ಪ್ರಮುಖ ವಿಚಾರದಲ್ಲಿ ಸೂಕ್ತ ನಿರ್ಣಯವನ್ನು ಬೇಗನೆ ತೆಗೆದುಕೊಳ್ಳಬೇಕು. ಅದ್ಭುತ ರೀತಿಯಲ್ಲಿ ಮಾಡುವ ಹೂಡಿಕೆಯ ಪ್ರಸ್ತಾಪವನ್ನು ತಿರಸ್ಕರಿಸಬೇಕು. ಈ ವಾರ ನೀವು ಯಾವುದೇ ಹೊಸ ಹೂಡಿಕೆಯನ್ನು ಕೈಗೊಳ್ಳುವುದಿದ್ದರೆ ಅಗತ್ಯವಾದ ಎಚ್ಚರಿಕೆ ವಹಿಸಬೇಕು. ಆಧ್ಯಾತ್ಮಿಕವಾಗಿ ಹೊಸ ಅನುಭವವನ್ನು ಪಡೆಯಲು ನೀವು ಸಮಯವನ್ನು ತೆಗೆದುಕೊಳ್ಳಬೇಕು.

  ವೃಶ್ಚಿಕ:

  ವೃಶ್ಚಿಕ:

  ಈ ವಾರ ನೀವು ದೇಶಕ್ಕೆ ಸಂಬಂಧಿಸಿದಂತೆ ಅಥವಾ ಸಾಮಾಜಿಕವಾಗಿ ಕೆಲವು ಸುಧಾರಣೆಯ ಕೆಲಸಕ್ಕೆ ಮುಂದಾಗುವ ಸಾಧ್ಯತೆಗಳಿವೆ. ನಿಮ್ಮ ಯೋಜನೆಯಿಂದ ಜನರು ಪ್ರಭಾವಿತರಾದರೆ ಅದನ್ನು ಸಂಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗುವುದು. ಇದು ನಿಮಗೆ ಸಂತೋಷದಿಂದ ಇರಲು ಹಾಗೂ ಆತ್ಮವಿಶ್ವಾಸದಿಂದ ನಡೆಲು ಸೂಕ್ತವಾದ ಸಮಯವಾಗಿದೆ. ಈ ಜೀವನವನ್ನು ನೀವು ಪೂರ್ಣವಾಗಿ ಅನುಭವಿಸಿ. ಪ್ರೀತಿ ಪಾತ್ರರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ.

  ಧನು:

  ಧನು:

  ಈ ವಾರ ನೀವು ಕೆಲವು ಭಾವನೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಸಂಗಾತಿಯೊಡನೆ ಕೆಲವು ವಿಚಾರಕ್ಕೆ ತರ್ಕ ಮತ್ತು ಜಗಳ ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ನೀವು ಈ ವಾರ ಕೆಲವು ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು. ಕೆಲವು ವಿಚಾರ ಅಥವಾ ಕೆಲಸ ಸಂಪೂರ್ಣ ಗೊಳಿಸುವಾಗ ನಿಮ್ಮ ಅಹಂ ಬಿಡುವುದು ಸೂಕ್ತ ಎನ್ನುವುದನ್ನು ಮರೆಯದಿರಿ.

  ಮಕರ:

  ಮಕರ:

  ವಾರದ ಆರಂಭದಿಂದಲೇ ನೀವು ಹೊಸ ಯೋಜನೆಯನ್ನು ಹೊಂದಿರುತ್ತೀರಿ. ಕೆಲವು ನಿಮಗೆ ಒಂದು ಸವಾಲು ಹಾಗೂ ಒತ್ತಡದಿಂದ ಕೂಡಿದೆ ಎಂದು ಅನಿಸಬಹುದು. ಕೆಲಸದ ಧಕ್ಷತೆಯು ವಾರದವರೆಗೂ ತೀವ್ರವಾಗಿರುತ್ತದೆ. ನಿಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳು ನಿಮ್ಮ ವಿಶೇಷತೆಗಳಿಗೆ ಆಕರ್ಷಿತರಾಗಿರುತ್ತಾರೆ. ನೀವು ಈಗಾಗಲೇ ಪ್ರಣಯಪೂರಕವಾದ ಸಂಬಂಧದಲ್ಲಿ ಇದ್ದಿದ್ದರೆ ಅದರಿಂದ ಹೊರ ನಡೆಯುವ ಸಂದಿಗ್ಧತೆ ತೋರುವುದು. ದಾರಿಯಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ನೆನಪಿಡಿ.

  ಕುಂಭ:

  ಕುಂಭ:

  ಕೆಲವು ವಿಷಯಗಳಿಗಾಗಿ ನೀವು ಮುಂಚಿತವಾಗಿಯೇ ಯೋಜನೆ ಮತ್ತು ಯೋಚನೆಯನ್ನು ಹೊಂದಿರಬೇಕು. ಆಗ ಈ ವಾರ ಪೂರ್ತಿ ನಿಮಗೆ ಉತ್ತಮ ಸಮಯ ಹಾಗೂ ಶಕ್ತಿಯನ್ನು ಪಡೆದುಕೊಳ್ಳಬಹುದು. ಮಹತ್ವಾಕಾಂಕ್ಷೆ ಅಥವಾ ದೀರ್ಘಕಾಲದ ಗಿರಿಯನ್ನು ಹೊಂದಲು ಇದು ನಿಮಗೆ ಸೂಕ್ತ ಸಮಯ ಎನಿಸುವುದು. ಶೀಘ್ರದಲ್ಲಿಯೇ ನಿಮಗೆ ನೈಸರ್ಗಿಕವಾದ ನೆಲೆ ಲಭಿಸುವುದು. ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಹೊಂದುವ ಸಾಧ್ಯತೆಗಳಿವೆ. ಬೌದ್ಧಿಕ ಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಅದು ನಿಮ್ಮ ಶ್ರೀಮಂತ ನಿರ್ಧಾರಗಳಾಗಿ ಹೊರ ಹೊಮ್ಮುತ್ತವೆ.

   ಮೀನ:

  ಮೀನ:

  ನೀವು ನಿಮ್ಮ ಪಾಲುದಾರರ ಬಗ್ಗೆ ಮತ್ತು ಸ್ನೇಹಿತರ ಬಗ್ಗೆ ವಿಶೇಷವಾದ ಗಮನ ಹರಿಸಬೇಕಾಗುತ್ತದೆ. ಹೊಸ ವಿಚಾರದಲ್ಲಿ ನೀವು ತೆರೆದುಕೊಳ್ಳುವಿರಿ ಅಥವಾ ಭೇಟಿಯಾಗುವಿರಿ. ಅವರು ನಿಮ್ಮ ಜೀವನವನ್ನು ಸೂಕ್ತ ರೀತಿಯಲ್ಲಿ ಉತ್ಕøಷ್ಟಗೊಳಿಸುವರು. ಈ ವಾರ ನಿಮಗೆ ರಿಪೇರಿ, ನವೀಕರಣ ಅಥವಾ ಸುಧಾರಣೆಗೆ ಅನುಕೂಲಕರವಾಗಿರುತ್ತದೆ. ಮತ್ತೊಂದೆಡೆ ನೀವು ನಿಮ್ಮ ನಿಕಟತೆಯ ಪ್ರಭಾವವನ್ನು ಬಲಪಡಿಸಲು ಹಿಂದಿನಿಂದ ಹೊರಬರುವ ಪ್ರಯತ್ನ ಮಾಡಬೇಕು ಎನ್ನುವುದನ್ನು ಮರೆಯಬಾರದು.

  English summary

  your-weekly-zodiac-predictions

  your-weekly-zodiac-predictions
  Story first published: Monday, May 14, 2018, 17:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more