Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೋಡಿ, ಇವರಿಗೆಲ್ಲಾ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು...
ನಮ್ಮ ಜೀವನದಲ್ಲಿ ಎಷ್ಟು ವಿಧದ ನವರು ಇದ್ದಾರೆ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಾವು ದೈನಂದಿನ ಜೀವನದಲ್ಲಿ ಭೇಟಿಯಾಗುವ ಹಲವಾರು ವಿಧದ ಬೈಯಾಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ನಮ್ಮ ಹೆಚ್ಚಿನ ಎಲ್ಲಾ ಕೆಲಸಗಳನ್ನು ಈ ಬೈಯಾಗಳು ಮಾಡುತ್ತಿರುವರು. ಆದರೆ ಇದನ್ನು ನಾವು ಗಮನಿಸುವುದೇ ಇಲ್ಲ. ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯಲು ಹಾಲು ತರುವುದರಿಂದ ಹಿಡಿದು ರಾತ್ರಿ ಕರ್ತವ್ಯ ಮುಗಿಸಿ ನಿಮ್ಮನ್ನು ಮನೆಗೆ ಬಿಡುವ ತನಕ ಈ ಬೈಯಾಗಳು ಇರುವರು. ಈ ಲೇಖನದಲ್ಲಿ ಬೈಯಾಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗಿದೆ. ಇದು ಒಂದು ಲಘು ಲೇಖನ. ನೀವು ಇದನ್ನು ಓದಿದ ಬಳಿಕ ನಿಮಗೆ ಏನು ಅನಿಸುತ್ತದೆ ಎನ್ನುವ ಬಗ್ಗೆ ನಮಗೆ ತಿಳಿಸಿಕೊಡಿ.

ಝೆರಾಕ್ಸ್ ವಾಲೆ ಬೈಯಾ
ಲೈಬ್ರೇರಿಯಿಂದ ತಂದಿರುವ ಪುಸ್ತಕಗಳ ಫೋಟೊಕಾಫಿ ತೆಗೆದಿರುವಂತಹ ಝೆರಾಕ್ಸ್ ಅಂಗಡಿಯ ಬೈಯಾನನ್ನು ನಾವು ಮರೆಯಲು ಹೇಗೆ ಸಾಧ್ಯ. ನಮ್ಮ ಸ್ನೇಹಿತರೊಂದಿಗೆ ಗಾಸಿಪ್ ನಲ್ಲಿ ಕಾಲ ಕಳೆಯುತ್ತಿದ್ದ ಕಾರಣ ಅವರನ್ನು ಮರೆಯುತ್ತಿದ್ದೆವು. ನಮ್ಮ ಪರೀಕ್ಷೆಗೆ ತಯಾರಾಗಲು ನೆರವಾಗಿರುವುದಕ್ಕೆ ನಿಮಗೆ ದೊಡ್ಡ ಧನ್ಯವಾದ.

ಕ್ಯಾಂಟೀನ್ ನ ಬೈಯಾ
ಜೇಬು ಖಾಲಿ ಇದ್ದರೂ ಆಗ ಹೋಗಿ ಮ್ಯಾಗಿ ಅಥವಾ ಚಹಾ ಹಾಗೂ ತಿಂಡಿ ತಿಂದಿರುವುದು ಒಂದು ರೀತಿಯ ಖುಷಿ. ಅದೇ ರೀತಿ ಸಣ್ಣ ಮಟ್ಟದ ರಿಯಾಯಿತಿ ಕೇಳುತ್ತಾ ಅಣಕಿಸುತ್ತಾ ಇದ್ದದ್ದು ಮತ್ತೊಂದು ರೀತಿ. ಯಾವುದೇ ಸಮಯದಲ್ಲೂ ನಮಗೆ ಆಹಾರ ನೀಡುತ್ತಿದ್ದ ಬೈಯಾಗಳಿಗೆ ನಿಮಗೆ ನಮಸ್ಕಾರ.

ಸೆಕ್ಯೂರಿಟಿಯ ಬೈಯಾ
ಕಾಲೇಜಿನ ಗೇಟ್ ನ ಬಳಿಯಲ್ಲಿ ನಿಂತುಕೊಂಡು ಅನುಮತಿ ಸಿಗುವ ತನಕ ಹೊರಗಿನವರನ್ನು ಯಾರನ್ನೂ ಒಳಗೆ ಬಿಡದೆ ಇರುತ್ತಾ ಇದ್ದದ್ದು ನಾವು ಮರೆಯಲು ಸಾಧ್ಯವೇ ಇಲ್ಲ. ಬೈಯಾನವರು ಗುಡ್ ಮಾರ್ನಿಂಗ್ ಹೇಳುತ್ತಲಿದ್ದರಿಂದ ಕಾಲೇಜಿನ ದಿನಚರಿ ಆರಂಭವಾಗುತ್ತಿತ್ತು. ನಮ್ಮ ಕಾಲೇಜಿನ ದಿನಗಳನ್ನು ತುಂಬಾ ನೆನಪಿನಲ್ಲಿ ಉಳಿಯುವಂತೆ ಮಾಡಿದ ಮತ್ತು ಕ್ಲಾಸ್ ಗೆ ಬಂಕ್ ಮಾಡಲು ನೆರವಾದ ನೆನಪುಗಳು ಅಮರ.....

ಕಾರು/ರಿಕ್ಷಾದ ಬೈಯಾ
ನಮ್ಮದೇ ವಾಹನವಾಗಿದ್ದರೂ ಸಹಿತ ಈ ಬೈಯಾಗಳೊಂದಿಗೆ ಪ್ರಯಾಣಿಸುವುದು ಎಷ್ಟು ಸುಲಭ ಎಂದು ಈಗ ತಿಳಿದುಬರುವುದು. ಅವರಿಗೆ ಧನ್ಯವಾದ ಹೇಳಲು ಮರೆಯಬಾರದು. ಆ್ಯಪ್ ನಲ್ಲಿ ಅವರ ಚಾಲನೆಗೆ 5 ಸ್ಟಾರ್ ನೀಡಿದ ಬಳಿಕ ಅವರ ನಗು ಮುಖ. ಸಂಪರ್ಕ ಸುಲಭವಾಗಿ ಮಾಡಿರುವುದಕ್ಕೆ ನಿಮಗೆ ಧನ್ಯವಾದಗಳು.

ಕಾಫಿಯ ಬೈಯಾ
ನಮ್ಮ ಮೇಜು ಸ್ವಚ್ಛಗೊಳಿಸಲು ಅಥವಾ ಮತ್ತೊಂದು ಕಪ್ ಕಾಫಿ ಬೇಕೆಂದು ಬೇಡಿಕೆ ಇಡುವುದು ಇದೇ ಬೈಯಾಗಳಲ್ಲಿ. ನಾವು ತುಂಬಾ ಒತ್ತಡಕ್ಕೆ ಒಳಗಾಗಿರುವಾಗ ಇವರು ನಮಗೆ ನೆರವಾಗುವರು. ನಾವು ಮಾಡುವಂತಹ ಪ್ರತಿಯೊಂದು ಹೆಚ್ಚುವರಿ ಕೆಲಸಕ್ಕೂ ಬೈಯಾಗಳಿಗೆ ಧನ್ಯವಾದಗಳು.

ತರಕಾರಿ ಬೈಯಾ
ನಾವು ಸಾಮಾನುಗಳನ್ನು ಅಂಗಡಿಗಳಿಂದ ಖರೀದಿಸಿದರೂ ತರಕಾರಿಗಳನ್ನು ಖರೀದಿಸುವುದು ಸ್ಥಳೀಯ ಬೈಯಾಗಳಿಂದ. ಇವರು ಕೆಲವೊಮ್ಮೆ ಹೆಚ್ಚು ಟೊಮೆಟೋ, ಈರುಳ್ಳಿ ಅಥವಾ ಕೊತ್ತಂಬರಿ ಸೊಪ್ಪು ನೀಡುವರು. ಇದಕ್ಕೆ ಯಾವುದೇ ಹಣ ನೀಡಬೇಕಿಲ್ಲ. ನಮ್ಮ ವಾರದ ಖರೀದಿಯಲ್ಲಿ ನಮಗೆ ತುಂಬಾ ರಿಯಾಯಿತಿ ನೀಡುವ ಬೈಯಾಗಳಿಗೆ ಧನ್ಯವಾದಗಳು....

ಹಾಲಿನ ಬೈಯಾ
ಬೆಳಗ್ಗೆ ಎದ್ದ ಬಳಿಕ ನಮಗೆ ಕುಡಿಯಲು ಬೇಕಾಗಿರುವುದು ಚಹಾ ಅಥವಾ ಕಾಫಿ. ಈ ಬೈಯಾಗಳು ನಮ್ಮ ಜೀವನ ಸುಲಭವಾಗಿಸುವರು. ಪ್ರತಿನಿತ್ಯ ಹಾಲು ಸರಬರಾಜು ಮಾಡುವಂತಹ ಬೈಯಾಗಳಿಗೆ ಧನ್ಯವಾದಗಳು.
ಇದರಲ್ಲಿ ಯಾವುದಾದರೂ ಬೈಯಾಗಳನ್ನು ನೀವು ಮಿಸ್ ಮಾಡಿದ್ದರೆ ಆಗ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.....



Click it and Unblock the Notifications
