For Quick Alerts
ALLOW NOTIFICATIONS  
For Daily Alerts

ಈ 5 ರಾಶಿಯವರು ಸಿಕ್ಕಾಪಟ್ಟೆ ವಾದ ಮಾಡುವ ಅಭ್ಯಾಸ ಹೊಂದಿರುತ್ತಾರೆ..!

By Sushma Charhra
|

ಮನುಷ್ಯನಾಗಿ ಹುಟ್ಟಿದ ಮೇಲೆ ಕೋಪ ಸಹಜವೇ. ಆದರೆ ಕೆಲವು ರಾಶಿಯವರಿಗೆ ಕೋಪ ಅತೀ ಬೇಗನೆ ಬಂದುಬಿಡುತ್ತೆ. ನಾವು ಹೇಳುತ್ತೇವಲ್ಲ ಅವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತೆ ಎಂದು ಹಾಗೆ. ಹಿಂದೆಮುಂದೆ ಆಲೋಚನೆ ಮಾಡದೆ ಥಟ್ ಅಂತ ಎಗರಾಡಿಬಿಡುವುದು ಅವರ ಅಭ್ಯಾಸ. ಅದರಲ್ಲೂ ಈ 5 ರಾಶಿಯವರಿಗೆ ಕೋಪ ಬರುವುದು ಬಹಳ ಬೇಗ. ಕೋಪ ಬರಲು ಅದು ಹೋಗಿರುವುದೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು.

ಆ ರಾಶಿಯವರು ಯಾರೆಂದರೆ - ವೃಶ್ಚಿಕ, ವೃಷಭ, ಸಿಂಹ ,ಮಿಥುನ, ಕರ್ಕಾಟಕ

ಯಾವಾಗಲಾದರೂ ಯೋಚಿಸಿದ್ದೀರಾ,... ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ಯಾವಾಗಲೂ ಸಿಡುಕು ಮೋರೆ ಹಾಕಿಕೊಂಡೇ ಇರಲು ಕಾರಣವೇನು ಅಂತ. ಇದು ಅವರ ರಾಶಿಫಲ ಕೂಡ ಆಗಿರಬಹುದು. ಸಿಟ್ಟು ಬರುವುದು, ತಾಳ್ಮೆ ಕಳೆದುಕೊಳ್ಳುವುದನ್ನು ನಾವು ಹುಟ್ಟಿದ ರಾಶಿಚಕ್ರದ ಆಧಾರದಲ್ಲಿ ವಿಂಗಡಿಸಿ ಒಂದಕ್ಕೊಂದು ಸಂಬಂಧ ಕಲ್ಪಿಸಬಹುದು.

ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ಕೆಲವು ರಾಶಿಯವರಿಗೆ ಅತೀ ಹೆಚ್ಚು ಸಿಟ್ಟಿರುತ್ತೆ. ಇವರು ತಮ್ಮ ತಾಳ್ಮೆಯನ್ನು ಅತೀ ಬೇಗನೆ ಕಳೆದುಕೊಂಡು ಬಿಡುತ್ತಾರೆ. ಹಾಗಾದ್ರೆ ಆ 5 ರಾಶಿಚಕ್ರದವರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ವೃಶ್ಚಿಕ ( ಅಕ್ಟೋಬರ್ 23- ನವೆಂಬರ್ 21)

ವೃಶ್ಚಿಕ ( ಅಕ್ಟೋಬರ್ 23- ನವೆಂಬರ್ 21)

ಇವರು ದೊಡ್ಡ ಜಗಳಗಾರರೇನಲ್ಲ ಆದರೆ ಯಾವಾಗಲೂ ದೂರುದಾರರು. ನೀವು ಅವರ ರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುವುದಾಗಲಿ, ಅಥ್ವಾ ಏನೇ ಅಪರಾಧ ಎಸಗುವುದಾಗಲಿ ಮಾಡಿದರೆ, ನೀವು ತಪ್ಪು ಮಾಡಿದ್ದೀರಿ ಅನ್ನುವುದನ್ನು ವೃಶ್ಚಿಕ ರಾಶಿಯವರು ನಿಮಗೆ ಮನದಟ್ಟು ಮಾಡಿಯೇ ತೀರುತ್ತಾರೆ. ಇವರ ವ್ಯಕ್ತಿತ್ವ ಹೇಗೆ ಎಂದರೆ ಅವರು ಹೇಳಿದ್ದನ್ನು ನೀವು ಅರ್ಥ ಮಾಡಿಕೊಳ್ಳದೇ ಹೋದರೆ ಇವರ ಕೋಪ ಸೊನ್ನೆ ಡಿಗ್ರಿಯಿಂದ 60 ಡಿಗ್ರಿವರೆಗೂ ಏರುತ್ತಲೇ ಸಾಗುತ್ತೆ. ಚರ್ಚೆಯ ಕೊನೆಯ ಹಂತದಲ್ಲಿ ಅವರು ನಿಮಗೆ ಚುಚ್ಚಿಯೇ ಚುಚ್ಚುತ್ತಾರೆ ಅಂದರೆ ಇತರರಿಗೆ ನೋವಾಗುವಂತೆ ಮಾಡುವ ಸ್ವಭಾವ ವೃಶ್ಚಿಕ ರಾಶಿಯವರದ್ದು. ನೀವು ವೃಷ್ಚಿಕ ರಾಶಿಯವರು ವಿರೋಧಿಸಿದ್ದೀರಿ ಎಂದರೆ ಬಾಯಿ ಮುಚ್ಚಿಕೊಂಡು ಇರುವುದೇ ಲೇಸು.

ವೃಷಭ(ಎಪ್ರಿಲ್ 20 – ಮೇ 20)

ವೃಷಭ(ಎಪ್ರಿಲ್ 20 – ಮೇ 20)

ವೃಷಭ ರಾಶಿಯವರು ಹುಟ್ಟು ಜಗಳಗಂಟರಲ್ಲ. ಬೇರೆಯವರಿಂದ ಅಪಾಯವಾದಾಗ, ಬೆದರಿಕೆ ಬಂದಾಗ ಮಾತ್ರ ಇವರು ಕೋಪೋದ್ರೆಕ್ತಗೊಳ್ಳುತ್ತಾರೆ. ಪದೇ ಪದೇ ಜಗಳ ಮಾಡುವ ಸ್ವಭಾವ ಇವರದ್ದಲ್ಲ. ಆದರೆ ವೃಷಭ ರಾಶಿಯವರೊಡನೆ ಇದ್ದ ಒಪ್ಪಂದ ಮುರಿದರೆ ಸ್ವಲ್ಪ ಸಮಯದವರೆಗೆ ನೀವು ಅವರಿಂದ ದೂರ ಉಳಿಯುವುದೇ ಲೇಸು. ಒಂದು ವೇಳೆ ತಮ್ಮ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ವೃಷಭ ರಾಶಿಯವರಲ್ಲಿ ಇರುವುದಿಲ್ಲ ಯಾಕೆಂದರೆ ಅವರು ತಾವು ತಪ್ಪು ಎಸಗುವುದು ಬಹಳ ವಿರಳವೆಂದು ಭಾವಿಸಿರುತ್ತಾರೆ. ಜೊತೆಗೆ ಅವರು ತಮ್ಮ ವಾದದಲ್ಲಿ ಬಹಳ ವಿಶ್ವಾಸ ಹೊಂದಿರುತ್ತಾರೆ.ಒಂದು ವೇಳೆ ಸಾಕ್ಷ್ಯಾಧಾರಗಳು ತಮ್ಮ ವಿರುದ್ಧವಿದ್ದರೂ ಬಹಳ ಬೇಗನೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇವರು ಯೋಗ್ಯರಿರುತ್ತಾರೆ. ಹಾಗಾಗಿ ವೃಷಭ ರಾಶಿಯವರೊಡನೆ ಕಾಲೆಳೆದು ಜಗಳಕ್ಕೆ ನಿಲ್ಲುವಾಗ ಜಾಗರೂಕರಾಗಿರಿ.

ಸಿಂಹ (ಜುಲೈ 23- ಅಗಸ್ಟ್ 22)

ಸಿಂಹ (ಜುಲೈ 23- ಅಗಸ್ಟ್ 22)

ಹೆದರಿಕೆ ಅನ್ನುವುದು ಇವರ ಜಾಯಮಾನದಲ್ಲೇ ಇಲ್ಲ. ಸಿಂಹರಾಶಿಯವರನ್ನು ನೀವು ನಿಮ್ಮ ಪ್ರೀತಿಯ ಫ್ರೆಂಡ್ ಎಂದು ಪರಿಗಣಿಸಬಹುದು ಆದರೆ ಅದರ ಜೊತೆಜೊತೆಗೆ ನಿಮ್ಮ ಎದುರಾಳಿ ಎಂದು ಕೂಡ ಅಂದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದಾಗ ಅದನ್ನು ಸುಲಭದಲ್ಲೇ ಪರಿಹರಿಸಿಕೊಳ್ಳಬಹುದು ಆದರೂ ಸಿಂಹ ರಾಶಿಯವರು ಅದನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಲು ಬಿಡುವುದಿಲ್ಲ. ಕೆಟ್ಟ ಭಾಷೆಗಳು, ಮುಖ ಕೆಂಪಗಾಗುವಂತ ಆರೋಪಗಳು ಇವರೊಡನೆ ವಾದಿಸುವಾಗ ಬಂದುಬಿಡುತ್ತೆ. ಹೆಚ್ಚು ಸಮರ್ಥಿಸಿಕೊಳ್ಳಲು ಹೊರಟರೆ ಆರೋಪಗಳು ಹೆಚ್ಚಾಗುತ್ತಾ ಸಾಗುತ್ತೆ. ಹಾಗಾಗಿ ಇವರನ್ನು ಜಗಳದಿಂದ ಕಟ್ಟಿಹಾಕಲು ಸಾಧ್ಯವಿಲ್ಲ ಬದಲಾಗಿ ಭಾವನೆಗಳಿಂದ ಎದುರಿಸಬೇಕಷ್ಟೇ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಸೂಕ್ಷ್ಮವಾಗಿ ಇವರೊಡನೆ ವ್ಯವಹರಿಸುವುದು ಸೂಕ್ತ.

ಮಿಥುನ (ಜೂನ್ 21- ಜುಲೈ 22)

ಮಿಥುನ (ಜೂನ್ 21- ಜುಲೈ 22)

ಮಿಥುನ ರಾಶಿಯವರು ಮೌನಿಗಳು, ಭಾವನಾತ್ಮಕ ಜೀವಿಗಳು, ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿರುವವರೇ ಆಗಿದ್ದರೂ ಕೂಡ ಇವರ ಭಾವನೆಗಳು ಏರುಪೇರಾಗುತ್ತಿರುತ್ತೆ. ಸೂಕ್ಷ್ಮ ವಿಚಾರಗಳನ್ನು ಇವರೊಡನೆ ಮಾತನಾಡುವಾಗ ಬಹಳ ಜಾಗರೂಕತೆ ಬೇಕು ಯಾಕೆಂದರೆ ಒಂದು ವೇಳೆ ಇವರ ಭಾವನೆಗಳಿಗೆ ನೀವು ಧಕ್ಕೆ ತಂದರೆ ಅದನ್ನು ಅವರು ಸೀರಿಯಸ್ ಆಗಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ತಿಂಗಳಾಗಿರಲಿ, ವರ್ಷವಾಗಿರಲಿ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಮುಂದೊಂದು ದಿನ ಇವರು ನಿಮ್ಮೊಡನೆ ಜಗಳಕ್ಕಿಳಬಹುದು. ಹಾಗಾಗಿ ಮಿಥುನ ರಾಶಿಯವರೊಡನೆ ಜಾಗರೂಕತೆಯಿಂದ ವರ್ತಿಸುವುದು ಬಹಳ ಒಳಿತು.

ಕರ್ಕಾಟಕ (ಮೇ 21- ಜೂನ್ 20)

ಕರ್ಕಾಟಕ (ಮೇ 21- ಜೂನ್ 20)

ಕರ್ಕಾಟಕ ರಾಶಿಯವರು ಜಗಳವಾಡುವವರಲ್ಲ, ಬದಲಾಗಿ ಜೂಜಾಡುವವರು. ಅಂದರೆ ತಮ್ಮ ಉತ್ತರಗಳನ್ನು ನೀಡುವಾಗ ತೂಗುಯ್ಯಾಲೆ ಮಾಡುವುದು ಜಾಸ್ತಿ. ಇವರ ವರ್ತನೆಗಳು, ಉತ್ತರಗಳು ಎಲ್ಲವೂ ಅವರ ಆಗಿನ ಮನಸ್ಥಿತಿಯನ್ನು ಆಧರಿಸುತ್ತದೆ. ಒಂದೇ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಇವರು ಉತ್ತರಿಸಿಬಿಡುತ್ತಾರೆ. ಹಾಗಾಗಿ ಇವರೊಡನೆ ಯಾವುದಾದರೂ ಪ್ರಮುಖ ವಿಚಾರ ಪ್ರಸ್ತಾಪಿಸುವಾಗ ಎರಡು ಭಿನ್ನ ಪ್ರತಿಕ್ರಿಯೆಗಳನ್ನು ನಿರೀಕ್ಷೆಯಲ್ಲಿಟ್ಟುಕೊಂಡೇ ಮಾತನಾಡಬೇಕು. ಹಾಗಾಗಿ ಅವರೊಡನೆ ವಾದಕ್ಕಿಳುವಾಗ ಜಾಗೃತರಾಗಿರಿ.

Read more about: ಜ್ಯೋತಿಷ್ಯ
English summary

the-5-zodiac-signs-who-argue-the-most

the-5-zodiac-signs-who-argue-the-most
X
Desktop Bottom Promotion