For Quick Alerts
ALLOW NOTIFICATIONS  
For Daily Alerts

ಕಾಂಡೋಮ್ ಬಳಸಿ ಆಡುವ ಸ್ಪರ್ಧೆ!! ನಮ್ಮಲ್ಲಿ ಇಂತಹ ಹುಚ್ಚರೂ ಇದ್ದಾರೆ!!

By Arshad
|

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣದ ಮೂಲಕ ಕೆಲವು ಸ್ಪರ್ಧೆಗಳು ನಡೆಯುವ ಬಗ್ಗೆ ತಿಳಿಯುತ್ತಿದೆ ಹಾಗೂ ಇವುಗಳಲ್ಲಿ ಹೆಚ್ಚಿನವು ವಿಚಿತ್ರವಾಗಿಯೂ ಅಪಾಯಕಾರಿಯಾಗಿಯೂ ಇರುತ್ತದೆ. ಬ್ಲೂ ವೆಲ್ ಗೇಮ್, ಐಸ್ ಬಕೆಟ್ ಚಾಲೆಂಜ್ ಮೊದಲಾದವು ಜಗತ್ತಿನ ಪಾಲಕರ ನಿದ್ದೆಗೆಡಿಸಿದರೆ ಇಂತಹದ್ದೇ ಇನ್ನೊಂದು ವ್ಯಸನಕಾರಿ ಆಟವೊಂದು ಬಂದಿದೆ. ಅದೇ ಸ್ನಾರ್ಟಿಂಗ್ ಕಾಂಡೋಮ್ ಚಾಲೆಂಜ್ ಅಥವಾ ಕಾಂಡೋಂ ಅನ್ನು ಮೂಗಿನಲ್ಲಿ ತೂರಿಸಿ ಗುಟುರು ಹಾಕುವುದು.

ಈ ತಲೆಹಿಡುಕ ಆಟದ ಬಗ್ಗೆ ನಾವು ಕೆಲವು ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿದ್ದೇವೆ ಹಾಗೂ ಈ ಮೂಲಕ ಈ ಸ್ಪರ್ಧೆಯಲ್ಲಿ ಸರ್ವಥಾ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡುತ್ತಿದ್ದೇವೆ. ಈ ಆಟದ ಮೂಲಕ ಸುಲಭವಾಗಿ ಉಸಿರುಗಟ್ಟಬಹುದು ಹಾಗೂ ಸಾವು ಸಹಾ ಆವರಿಸಬಹುದು.

ಈ ಆಟ 1993ರಷ್ಟು ಹಳೆಯದು!

ಈ ಆಟ 1993ರಷ್ಟು ಹಳೆಯದು!

ಸಾಮಾಜಿಕ ತಾಣಗಳ ಮೂಲಕ ಇದರ ಬಗ್ಗೆ ಇತ್ತೀಚೆಗೆ ನಮಗೆ ತಿಳಿದುಬಂದಿದ್ದರೂ ಈ ಆಟ 1993ರಷ್ಟು ಹಳೆಯದು. ನಂಬಲರ್ಹ ಮೂಲಗಳ ಪ್ರಕಾರ ಈ ಆಟವನ್ನು 1993ರ ಅಕ್ಟೋಬರ್ ನಂದು ಪ್ರಥಮವಾಗಿ ಆಡಲಾಯಿತು. ಅಂದು ಕೆಂಟ್ ವಿಶ್ವವಿದ್ಯಾಲಯದ ಆಂತರಿಕ ವೃತ್ತಪತ್ರಿಕೆಯಲ್ಲಿ "ಜಿಂ ರೋಸ್ ಸರ್ಕಸ್ ಸೈಡ್ ಶೋ" ಎಂಬ ಕಾರ್ಯಕ್ರಮದ ಬಗ್ಗೆ ಪ್ರಕಟವಾಗಿತ್ತು. ಈ ಪ್ರದರ್ಶನದಲ್ಲಿ ಜಿಂ ಎಂಬುವನ್ನು ಕಾಂಡೋಂ ಒಂದನ್ನು ಮೂಗಿನಿಂದ ಒಳಗೆಳೆದುಕೊಂಡು ಬಾಯಿಯಿಂದ ಹೊರಬಿಡುತ್ತಾರೆ ಎಂದು ಪ್ರಕಟಿಸಲಾಗಿತ್ತು.

ಈ ಸ್ಪರ್ಧೆಯ ಬಗ್ಗೆ

ಈ ಸ್ಪರ್ಧೆಯ ಬಗ್ಗೆ

ಕಾಂಡೋಮ್ ಬಳಸಿ ಗುಟುರು ಹಾಕುವ ಸ್ಪರ್ಧೆ ಈಗ ಹಲವರ ಗಮನ ಸೆಳೆದಿದ್ದು ಚಿಕ್ಕ ಮಕ್ಕಳೂ ಈ ಕ್ರಿಯೆಯನ್ನು ನಡೆಸಿ ತಮ್ಮ ವಿಡಿಯೋಗಳನ್ನು ಪ್ರಕಟಿಸುತ್ತಿದ್ದಾರೆ. ಮೂಗಿನ ಒಂದು ಹೊಳ್ಳೆಯಿಂದ ತೆರೆದ ಕಾಂಡೋ ಒಂದನ್ನು ಒಳಗೆಳೆದುಕೊಳ್ಳುತ್ತಾರೆ ಹಾಗೂ ಬಳಿಕ ಗಂಟಲಿನಲ್ಲಿ ಬೆರಳು ಹಾಕಿ ಒಳಗಿನಿಂದ ಎಳೆದು ಬಾಯಿಯ ಮೂಲಕ ಹೊರಗೆಳೆದುಕೊಳ್ಳಲಾಗುತ್ತದೆ.

ಈ ಅಪಾಯಕಾರಿ ಆಟದ ಆಪತ್ತುಗಳು:

ಈ ಅಪಾಯಕಾರಿ ಆಟದ ಆಪತ್ತುಗಳು:

ಈ ಸ್ಪರ್ಧೆಯನ್ನು ಗಮನಿಸಿದ ವಿಶ್ವದ ಹಲವು ಆರೋಗ್ಯ ತಜ್ಞರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಜನತೆಯನ್ನು ಈ ಆಟದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಈ ಪರಿಯಾಗಿ ರಬ್ಬರ್ ಒಳಗೆಳೆದುಕೊಂಡರೆ ಇದು ಆ ವ್ಯಕ್ತಿಯ ಮೂಗಿನ ವಾಯುಮಾರ್ಗದಲ್ಲಿ ತಡೆಯುಂಟುಮಾಡಬಹುದು ಹಾಗೂ ಉಸಿರಾಟವನ್ನು ಸ್ಥಗಿತಗೊಳಿಸಬಹುದು.

ವೈದ್ಯರು ನೀಡುವ ವಿವರಣೆ

ವೈದ್ಯರು ನೀಡುವ ವಿವರಣೆ

ಈ ಸ್ಪರ್ಧೆ ನೋಡುವವರಿಗೆ ಅಸಹ್ಯ ತರಿಸುತ್ತದೆ. ಆದರೂ ಕೆಲವರು ಕುತೂಹಲಕ್ಕೆಂದಾದರೂ ಸರಿ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುತ್ತಿದ್ದಾರೆ. ಆದರೆ ಕಾಂಡೋಂಗಳ ಹೊರಭಾಗದಲ್ಲಿ ವೀರ್ಯಾಣುಗಳನ್ನು ಕೊಲ್ಲುವ ಕೆಲವು ರಾಸಾಯನಿಕಗಳನ್ನು ಜಾರುಕದ್ರವದೊಂದಿಗೆ ಸಿಂಪಡಿಸಲಾಗಿದ್ದು ಒಂದು ವೇಳೆ ಈ ರಾಸಾಯನಿಕ ಮೂಗಿನ ಒಳಭಾಗದ ತೇವದಲ್ಲಿ ಸೇರಿಕೊಂಡರೆ ಇದು ಅತೀವವಾದ ಅಲರ್ಜಿಕಾರಕ ಪರಿಣಾಮವನ್ನುಂಟುಮಾಡಬಹುದು ಹಾಗೂ ಭಾರೀ ಸೋಂಕು ಎದುರಾಗಬಹುದು.

ಇದೊಂದೇ ಹುಚ್ಚುತನದ ಸ್ಪರ್ಧೆ ಮಾತ್ರವಲ್ಲ!

ಇದೊಂದೇ ಹುಚ್ಚುತನದ ಸ್ಪರ್ಧೆ ಮಾತ್ರವಲ್ಲ!

ಅಂತರ್ಜಾಲದಲ್ಲಿ ಈ ಬಗ್ಗೆ ಮಾಹಿತಿ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚು ಹೆಚ್ಚಾಗಿ ಆಪಾಯಕ್ಕೊಳಗಾಗುತ್ತಿದ್ದಾರೆ. 2012ರಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಯೂಟ್ಯೂಬ್ ವಿಡಿಯೋಗಳಲ್ಲಿ ಚಿಕ್ಕ ಮಕ್ಕಳೂ ದಾಲ್ಚಿನ್ನಿ ಪುಡಿಯನ್ನು ಸೇವಿಸುವ ಸವಾಲನ್ನು ಸ್ವೀಕರಿಸಿರುವುದನ್ನು ದಾಖಲಿಸಲಾಗಿದೆ. ಈ ಸ್ಪರ್ಧೆಯಲ್ಲಿ ಒಂದು ದೊಡ್ಡ ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿಲ್ಲದೇ, ಒಣದಾಗಿಯೇ ನೇರವಾಗಿ ಬಾಯಿಗೆ ಸುರಿದುಕೊಳ್ಳಲಾಗುತ್ತದೆ. ಬಳಿಕ ಈ ಪುಡಿಯನ್ನು ಊದುವ ಮೂಲಕ ಚಿಕ್ಕ, ಕಿತ್ತಳೆ ಬಣ್ಣದ ಮೋಡವೊಂದನ್ನು ಸೃಷ್ಟಿಸಬೇಕಾಗುತ್ತದೆ. ಆದರೆ ಈ ಪುಡಿ ಅತೀವ ಖಾರವಾಗಿದ್ದು ಬಾಯಿಯನ್ನು ಒಣಗಿಸಿ ಪ್ರಾಣಾಪಾಯವನ್ನುಂಟುಮಾಡಬಹುದು. ಇಂತಹ ಅಪಾಯಕಾರಿ ಸ್ಪರ್ಧೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

Snorting Condom Challenge Is The Next In Thing!

This is the worst challenge that you would read about! From various crazy challenges that people are inventing for no reason and just for the sake of thrill will leave you baffled with this bizarre challenge of "Condom Snorting". We reveal the disgusting details of the trick and the challenge on the whole. For the individuals who're reading this piece of article, avoid taking up this challenge, as it can easily lead to suffocation and death.
X
Desktop Bottom Promotion