ವ್ಯಕ್ತಿಯ ಹಲ್ಲನ್ನು ನೋಡಿ ಕೂಡ ವ್ಯಕ್ತಿತ್ವ ಅರಿಯಬಹುದಂತೆ!!

Posted By: Divya pandith
Subscribe to Boldsky

ವ್ಯಕ್ತಿಯ ವ್ಯಕ್ತಿತ್ವವನ್ನು ಅಷ್ಟು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಅವನ ವರ್ತನೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಇಲ್ಲವೇ ಕೆಲವು ಪರೀಕ್ಷೆಗಳನ್ನು ಒಡ್ಡುವುದರ ಮೂಲಕ ವ್ಯಕ್ತಿತ್ವ ಪರಿಶೀಲನೆ ಹಾಗೂ ಸ್ವಭಾವದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಕೆಲವು ಅಧ್ಯಯನಗಳು ವ್ಯಕ್ತಿಯ ಹಲ್ಲಿನ ಆಕಾರವು ವ್ಯಕ್ತಿಯ ಗುಣ ಹಾಗೂ ವ್ಯಕ್ತಿತ್ವವನ್ನು ತಿಳಿಯಬಹುದು ಎಂದು ದೃಢಪಡಿಸಿದ್ದಾರೆ.

ಹೌದು, ವ್ಯಕ್ತಿಯ ಸೌಂದರ್ಯವನ್ನು ದ್ವಿಗುಣ ಗೊಳಿಸುವುದರಲ್ಲಿ ಅವನ ಹಲ್ಲುಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಲ್ಲಿನ ಪಂಕ್ತಿ ಹಾಗೂ ಆಕಾರಗಳು ಸುಂದರವಾಗಿಲ್ಲವೆಂದಾದರೆ ಅವು ಮುಖದ ಕಳೆಯನ್ನು ಹಾಳು ಮಾಡುತ್ತವೆ. ಹಾಗೆಯೇ ಅದೇ ಹಲ್ಲುಗಳು ನಮ್ಮ ವ್ಯಕ್ತಿತ್ವವನ್ನು ಬಹಳ ಸುಲಭವಾಗಿ ವ್ಯಕ್ತಪಡಿಸುತ್ತವೆ. ನಿಮಗೂ ಈ ವಿಚಾರ ಹೆಚ್ಚು ಕುತೂಹಲವನ್ನು ಉಂಟುಮಾಡುತ್ತಿದೆ ಎಂದಾದರೆ ಮೊದಲು ನಿಮ್ಮ ಹಲ್ಲಿನ ಆಕಾರ ಯಾವುದೆಂದು ತಿಳಿಯಿರಿ. ಬಳಿಕ ಈ ಮುಂದೆ ವಿವರಿಸಲಾದ ವಿವರಣೆಯನ್ನು ಅರಿಯಿರಿ...

personality tests in kannada

ಚೌಕಾಕಾರದ ಹಲ್ಲುಗಳು

ಚೌಕಾಕಾರದ ಹಲ್ಲುಗಳನ್ನು ಹೊಂದಿದ ವ್ಯಕ್ತಿಗಳ ಹೃದಯ ಬಹಳ ಒಳ್ಳೆಯದು ಚಿನ್ನದಂತಹ ಗುಣದವರು ಎನ್ನಲಾಗುವುದು. ಇವರಿಗೆ ಬೇರೆಯವರಿಗಿಂತ ಹೆಚ್ಚಿನ ಪ್ರೀತಿಯ ಅಗತ್ಯವಿರುತ್ತದೆ. ಇವರು ತಮ್ಮ ಪ್ರೀತಿಯನ್ನು ಇತರೊಂದಿಗೆ ಹಂಚಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ. ಇವರ ಮನಸ್ಸನ್ನು ನೋಯಿಸಿದರೂ ಪುನಃ ಪ್ರೀತಿಸುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಸಂವಹನ ನಡೆಸಲು ಇವರು ಅತ್ಯುತ್ತಮ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಬಹುದು.

ಗೋಲಾಕಾರದ ಹಲ್ಲು

ಗೋಲಾಕಾರದ ಹಲ್ಲನ್ನು ಹೊಂದಿರುವವರು ಅದ್ಭುತ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇವರು ತಮ್ಮ ಆಕರ್ಷಕ ನಗುವಿನೊಂದಿಗೆ ಎಂತಹದ್ದೇ ಕಷ್ಟಕರವಾದ ಪರಿಸ್ಥಿತಿಯನ್ನು ನಿರ್ವಹಿಸಬಲ್ಲರು ಎಂದು ಹೇಳಲಾಗುತ್ತದೆ. ಇವರನ್ನು ಪ್ರೀತಿಸುವ ವ್ಯಕ್ತಿಗಳಿಗಾಗಿ ಇವರು ಸದಾ ಸಹಾಯಕ ಹಸ್ತವನ್ನು ತೋರುತ್ತಾರೆ. ಇವರು ಇತರರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎನ್ನುವುದಕ್ಕೆ ಹೆಚ್ಚು ಯೋಚಿಸದೆ, ನಿಮ್ಮ ಸ್ವಂತ ಜೀವನದ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಹಲವಾರು ವ್ಯಕ್ತಿಗಳು ತಮ್ಮದೇ ಆದ ನಕಾರಾತ್ಮಕ ಜನರು ಇರುತ್ತಾರೆ. ಅವರ ಬಗ್ಗೆ ಹೆಚ್ಚು ಗಮನ ಕೇಂದ್ರಿಕರಿಸಬಾರದು ಎಂದು ತಿಳಿಯಬೇಕು.

ತ್ರಿಕೋನಾಕಾರದ ಹಲ್ಲು

ಈ ಆಕಾರದ ಹಲ್ಲು ಸ್ವಲ್ಪ ವಿಲಕ್ಷಣದಂತೆ ತೋರುತ್ತದೆಯಾದರೂ ಕೆಲವು ಬಗೆಯ ಆಕರ್ಷಣೆಯನ್ನು ಹೊಂದಿರುತ್ತಾರೆ. ಅಪೂರ್ವವಾದ ಮೋಡಿಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಅದ್ಭುತ ಸ್ಮೈಲ್‍ನೊಂದಿಗೆ ಜನರನ್ನು ಆಕರ್ಷಿಸುತ್ತಾರೆ. ಗಂಭೀರ ಸಮಸ್ಯೆಗಳನ್ನು ಸಹ ಇವರು ಒಂದು ನಗುವಿನ ಮೂಲಕ ನಿವಾರಿಸುತ್ತಾರೆ. ಇವರು ಊಹಿಸಲು ಅಸಾಧ್ಯವಾಗುವಷ್ಟು ಜನಪ್ರಿಯತೆ ಹಾಗೂ ಬೆರೆಯುವಿಕೆಯನ್ನು ತೋರುತ್ತಾರೆ.

ಆಯತಾಕಾರದ ಹಲ್ಲು

ಆಯತಾಕಾರದ ಹಲ್ಲನ್ನು ಹೊಂದಿದ್ದರೆ ಇವರು ಅತ್ಯಂತ ಸಹಕಾರ ಮತ್ತು ದಯೆಯ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇವರು ಅತ್ಯಂತ ಶುದ್ಧ ಹೃದಯದ ಮೂಲಕ ಇತರರನ್ನು ಆಕರ್ಷಿಸುತ್ತಾರೆ. ಅಲ್ಲದೆ ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಕೆಲವು ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಂಡರೆ ಹೆಚ್ಚು ಸಂತೋಷವನ್ನು ಅನುಭವಿಸುವಿರಿ ಹಾಗೂ ಇತರರೊಂದಿಗೆ ಬೆರೆಯಲು ಅನುಕೂಲವಾಗುವುದು ಎಂದು ಹೇಳಲಾಗುತ್ತದೆ.

English summary

Shape Of Your Teeth Can Reveal Interesting Facts About Your Personality!

The different shapes of your teeth can reveal a lot about your personality. This is one of the ways in which a person's personality can be found out by looking at the shape of their teeth. For eg, if a person has square-shaped teeth, then they are said to have a heart of gold.Shape Of Teeth Reveals About Personality
Story first published: Saturday, April 7, 2018, 7:00 [IST]