For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಇದೇ ಕಾರಣಕ್ಕೆ ಸಂಗಾತಿ ನಿಮ್ಮೆಡೆಗೆ ಆಕರ್ಷಣೆಗೆ ಒಳಗಾಗುವುದು!

  By Hemanth
  |

  ಪ್ರತಿಯೊಂದು ರಾಶಿಯವರಿಗೂ ಅವರದ್ದೇ ಆಗಿರುವ ಗುಣ ಹಾಗೂ ಅವಗುಣಗಳು ಇರುವುದು. ಕೆಲವು ರಾಶಿಯವರು ತುಂಬಾ ಆಕರ್ಷಕವಾಗಿ, ಮಾತಿನಲ್ಲಿ ಮೋಡಿ ಮಾಡುವ ಗುಣ ಹೊಂದಿದ್ದರೆ, ಇನ್ನು ಕೆಲವು ರಾಶಿಯವರು ತುಂಬಾ ಮೌನ ಹಾಗೂ ಇತರರ ಜತೆ ಬೆರೆಯುವ ಗುಣ ಹೊಂದಿರಲ್ಲ. ಆದರೆ ಜೀವನದಲ್ಲಿ ಪ್ರತಿಯೊಂದು ರಾಶಿಯವರಿಗೆ ಪ್ರೀತಿ ಎನ್ನುವುದು ಆಗಿಯೇ ಆಗುವುದು. ಇಂತಹ ಸಮಯದಲ್ಲಿ ನಿಮ್ಮ ಯಾವ ಗುಣಗಳ ಕಡೆ ಸಂಗಾತಿಯು ಆಕರ್ಷಿತಳಾಗುತ್ತಾಳೆ ಅಥವಾ ಆಕರ್ಷಿತನಾಗುತ್ತಾನೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

  ಮೇಷ: ಮಾ.21- ಎ.19

  ಮೇಷ: ಮಾ.21- ಎ.19

  ನಿಮ್ಮಲ್ಲಿರುವಂತಹ ಉತ್ಸಾಹವು ಬೇರೆಯವರಲ್ಲಿ ಹುಚ್ಚೆಬ್ಬಿಸುವುದು. ನೀವು ಪ್ರತಿಯೊಂದಕ್ಕೂ ಹಾಗೂ ಎಲ್ಲದಕ್ಕೂ ತುಂಬಾ ಉತ್ಸಾಹ ತೋರಿಸುವಿರಿ. ನಿಮ್ಮ ಒಳಮನಸ್ಸನ್ನು ನೋಡಿಕೊಂಡು ಅವರು ನಿಮ್ಮೆಡೆಗೆ ಆಕರ್ಷಿತರಾಗುವರು. ಇನ್ನು ಈ ರಾಶಿಯವರು ಅತ್ಯುತ್ತಮ ಸಕ್ರಿಯತೆಯನ್ನು ಹೊಂದಿರುವ ಚಿಹ್ನೆಯವರು ಎಂದು ಹೇಳಬಹುದು. ಇವರು ತಮ್ಮ ಸಕ್ರಿಯ ಜೀವನದ ಮಧ್ಯಭಾಗದಲ್ಲಿ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವರು. ಇವರು ತಮ್ಮ ದೊಡ್ಡ ಗುರಿ ಮತ್ತು ಕನಸನ್ನು ನೆರವೇರಿಸಿಕೊಳ್ಳಲು ಸದಾ ಕಾರ್ಯನಿರತರಾಗಿರುತ್ತಾರೆ. ಇವರು ಗುರಿಯನ್ನು ಸಾಧಿಸುವ ಹಂಬಲದಲ್ಲಿ ಇರುವುದರಿಂದ ಸಂಬಂಧವನ್ನು ಮುಂದುವರಿಸಲು ಇವರಿಗೆ ಕಷ್ಟಸಾಧ್ಯವಾಗುವುದು. ಇವರು ಒಂದೇ ಗುಣಲಕ್ಷಣ ಹಾಗೂ ಮೌಲ್ಯವನ್ನು ಹೊಂದಿದ್ದೀರಿ ಎನ್ನುವುದನ್ನು ನಿಮ್ಮ ನಕ್ಷತ್ರವು ಬಹಿರಂಗಪಡಿಸುವುದು.

  ವೃಷಭ: ಎಪ್ರಿಲ್ 2- ಮೇ20

  ವೃಷಭ: ಎಪ್ರಿಲ್ 2- ಮೇ20

  ನಿಮ್ಮನ್ನು ತುಂಬಾ ಆಕರ್ಷಕ ವ್ಯಕ್ತಿಯಾಗಿ ರೂಪಿಸಿರುವ ಬಗ್ಗೆ ನೀವು ತುಂಬಾ ಬದ್ಧತೆಯಿಂದ ಇರುವಿರಿ. ಪ್ರೀತಿಸಲು ನೀವು ಅವಸರ ಮಾಡುವುದಿಲ್ಲ, ಆದರೆ ಪ್ರೀತಿ ನಿಮಗೆ ಕಂಡುಬಂದರೆ ಆಗ ನೀವು ಶ್ರೇಷ್ಠವಾಗಿರುವುದನ್ನು ನೀಡುವಿರಿ. ಈ ವ್ಯಕ್ತಿಗಳು ಮತ್ಮ ಸಂಗಾತಿಯ ಹೃದಯವನ್ನು ಕದಿಯುವರು. ನಿಮ್ಮ ಸಂಗಾತಿಗೆ ಸ್ಥಿರತ, ಏಕರೂಪತೆ ಮತ್ತು ಪ್ರೀತಿ ಎಲ್ಲಾ ಸಮಯದಲ್ಲೂ ನೀಡುವಿರಿ. ಈ ರಾಶಿಯವರು ತಮ್ಮ ಆತ್ಮ ಸಂಗಾತಿಯನ್ನು ಶಾಪಿಂಗ್ ಮಳಿಗೆಗಳಲ್ಲಿ ಭೇಟಿಯಾಗುವ ಸಾಧ್ಯತೆಗಳಿರುತ್ತವೆ. ಈ ರಾಶಿಯವರು ಆಡಂಬರ ತೋರಿಸುವಲ್ಲಿ ಅಳತೆ ಮೀರಿದ ವರ್ತನೆಯನ್ನು ತೋರುವಿರಿ.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ನಿಮ್ಮ ಶಕ್ತಿಯನ್ನು ಕಂಡು ಇತರರು ಆಕರ್ಷಿತರಾಗುವರು. ಪಾರ್ಟಿಗೆ ಹೋದರೆ ಅಲ್ಲಿ ನೀವು ಆ ಪಾರ್ಟಿಯ ಜೀವಕಳೆಯಾಗಿರುವಿರಿ. ನಿಮ್ಮ ಆಕರ್ಷಣೆಯನ್ನು ಮೀರಿಸುವವರು ಇರಲ್ಲ. ಇದರ ಹೊರತಾಗಿ ನೀವು ಹೃದಯವೈಶಾಲ್ಯರು. ಇದರಿಂದಾಗಿ ನೀವು ಜ್ಞಾನ ಮತ್ತು ಭಾವನೆಗಳನ್ನು ಹಂಚಿಕೊಳ್ಳುವಿರಿ. ಇನ್ನು ಈ ರಾಶಿಯವರು ಪರಸ್ಪರ ಸ್ನೇಹಿತರ ನಡುವೆಯೇ ಆತ್ಮಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳಿರುತ್ತವೆ. ಸಕ್ರಿಯವಾದ ಸಾಮಾಜಿಕ ವಲಯವನ್ನು ಹೊಂದಿರುವ ನಿಮಗೆ ದೊಡ್ಡ ಅವಕಾಶಗಳು ದೊರೆಯುತ್ತವೆ. ನೀವು ಸೀಮಿತ ವ್ಯಕ್ತಿಗಳೊಂದಿಗೆ ಸ್ನೇಹಿತರಾಗಲು ಬಯಸಿದರೆ ನಿಮ್ಮ ಪ್ರೀತಿಪಾತ್ರರನ್ನು ಅಥವಾ ಆತ್ಮಸಂಗಾತಿಯನ್ನು ಬಹುಬೇಗ ಭೇಟಿ ಮಾಡುವ ಸಾಧ್ಯತೆಗಳಿರುತ್ತವೆ.

  ಕರ್ಕಾಟಕ: ಜೂ.21- ಜು.22

  ಕರ್ಕಾಟಕ: ಜೂ.21- ಜು.22

  ನೀವು ಮಾಡುವಂತಹ ಪ್ರತಿಯೊಂದರಲ್ಲೂ ಹೆಚ್ಚಿನ ಪ್ರಯತ್ನವು ನಿಮ್ಮನ್ನು ಗುಂಪಿನಲ್ಲಿ ಎತ್ತಿ ತೋರಿಸುವುದು. ನೀವು ಪ್ರೀತಿಪಾತ್ರರ ಬಗ್ಗೆ ತುಂಬಾ ಕಾಳಜಿ ಹಾಗೂ ರಕ್ಷಣಾತ್ಮಕ ಭಾವನೆ ಹೊಂದಿರುವಿರಿ. ಇದು ನಿಮ್ಮ ನೈಸರ್ಗಿಕ ಗುಣ. ನಿಮ್ಮೊಂದಿಗೆ ತುಂಬಾ ರೋಮ್ಯಾಂಟಿಕ್ ಆಗಿದ್ದರೆ ಆಗ ಎಲ್ಲಾ ಸಮಸ್ಯೆಗಳನ್ನು ಮರೆತು ನೀವು ಮನೆಯ ಭಾವನೆ ಪಡೆಯುವಿರಿ. ಜನರಿಗೆ ನಿಮ್ಮೊಂದಿಗೆ ಇರಲು ತುಂಬಾ ಸುರಕ್ಷಿತ ಹಾಗೂ ಆರಾಮದಾಕವೆನಿಸುವುದು. ಈ ವ್ಯಕ್ತಿಗಳು ಹೆಚ್ಚು ಮನೆಯೊಳಗೆ ಇರಲು ಬಯಸುತ್ತಾರೆ. ಇವರು ತಮ್ಮ ಕುಟುಂಬವನ್ನು ಹೆಚ್ಚು ಇಷ್ಟಪಡುತ್ತಾರೆ. ಕುಟುಂಬದ ಸಮಾರಂಭಗಳಲ್ಲಿ ಅಥವಾ ಕೆಲವು ಕಾರ್ಯಕ್ರಮಗಳಲ್ಲಿ ನಿಮ್ಮ ಆತ್ಮ ಸಂಗಾತಿಯನ್ನು ನೀವು ಕಂಡುಕೊಳ್ಳುವ ಸಾಧ್ಯತೆಗಳಿವೆ.

  ಸಿಂಹ: ಜು.23- ಆ.23

  ಸಿಂಹ: ಜು.23- ಆ.23

  ನೀವು ಯಾರದ್ದೇ ಹೃದಯವನ್ನು ಕರಗಿಸಬಲ್ಲೀರಿ. ನೀವು ಪ್ರೀತಿಸುವಾಗ ಸೂರ್ಯನಂತೆ ಪ್ರಕರವಾಗಿ ಪ್ರೀಸಿವುದುದರಿಂದ, ನಿಮ್ಮ ಪ್ರೀತಿ ತುಂಬಾ ಬಲ ಹಾಗೂ ಆತ್ಮವಿಶ್ವಾಸದಿಂದ ಇರುವುದು. ಇದರಿಂದಾಗಿ ಜನರು ನಿಮ್ಮನ್ನು ಪ್ರೀತಿಸಲು ಮುಂದಾಗುವರು. ಈ ರಾಶಿಯವರು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವರು ಕೆಲವು ತಂತ್ರಜ್ಞಾನಗಳ ಮೂಲಕ ತಮ್ಮ ಆತ್ಮ ಸಂಗಾತಿಯನ್ನು ಭೇಟಿ ಮಾಡುತ್ತಾರೆ. ಇವರಿಗೆ ವಿಶಾಲವಾದ ಸಾಮಾಜಿಕ ವ್ಯವಸ್ಥೆಯ ಪರಿಚಯ ಇರುವುದರಿಂದ ಆತ್ಮ ಸಂಗಾತಿಯನ್ನು ಹುಡುಕುವುದು ಕಷ್ಟವಾಗದು.

  ಕನ್ಯಾ: ಆ.24- ಸೆ. 23

  ಕನ್ಯಾ: ಆ.24- ಸೆ. 23

  ನಿಮ್ಮಲ್ಲಿರುವಂತಹ ವಿನಯಶೀಲತೆಯು ಇತರರನ್ನು ಹುಚ್ಚು ಹಿಡಿಸುವಂತೆ ಮಾಡುವುದು. ನಿಮ್ಮ ಸಂಗಾತಿಯು ಬಂದು ಹೋಗುತ್ತಲಿರಬಹುದು ಮತ್ತು ಅವರ ಬಲ ಹಾಗೂ ತಪ್ಪುಗಳನ್ನು ನೀವು ಸ್ವೀಕರಿಸಿರುವಿರಿ. ಈಗಲೂ ನೀವು ಅವರನ್ನು ತುಂಬಾ ಪ್ರೀತಿಸುವಿರಿ. ಅವರು ಹೇಗಿದ್ದಾರೋ ಹಾಗೆ ನೀವು ಸ್ವೀಕರಿಸಬೇಕು. ನಿಮ್ಮನ್ನು ಅವರು ಬೇರೆಯವರಿಗಾಗಿ ಬಿಟ್ಟುಕೊಡಲಾರರು. ಈ ರಾಶಿಯವರು ವೃತ್ತಿ ಜೀವನದ ಬಗ್ಗೆ ಹೆಚ್ಚು ಒತ್ತು ಹಾಗೂ ಸಮಯವನ್ನು ನೀಡುತ್ತಾರೆ. ಇವರು ಪ್ರಾಯೋಗಿಕವಾಗಿ ಚಿಂತನೆ ನಡೆಸುವ ಅಗತ್ಯವಿರುತ್ತದೆ. ಇವರ ಆತ್ಮ ಸಂಗಾತಿಯೂ ಇವರ ಹತ್ತಿರದಲ್ಲಿಯೇ ಇರುತ್ತಾರೆ. ಇವರು ತಮ್ಮ ಜಗತ್ತಿನಾಚೆ ಕಣ್ತೆರೆದು ನೋಡಿದಾಗ ಸಂಗಾತಿಯ ಭೇಟಿಯಾಗುವುದು.

  ತುಲಾ: ಸೆ.24- ಅ.23

  ತುಲಾ: ಸೆ.24- ಅ.23

  ನಿಮ್ಮ ಸೌಜನ್ಯಯುತ ನಡವಳಿಕೆಯಿಂದಾಗಿ ಸಂಗಾತಿಯು ನಿಮ್ಮನ್ನು ತುಂಬಾ ಪ್ರೀತಿಸುತ್ತಿರಬಹುದು. ನೀವು ಸಂಗಾತಿಗೆ ಎಲ್ಲಾ ರೀತಿಯ ಪ್ರೀತಿ ಹಂಚಿಕೊಳ್ಳಲಿದ್ದೀರಿ. ಯಾಕೆಂದರೆ ನೀವು ಜೀವನದ ಪ್ರತಿಯೊಂದು ಖುಷಿ ಹಾಗೂ ಸಂತೋಷವನ್ನು ಅವರೊಂದಿಗೆ ಹೇಳಿಕೊಳ್ಳುವಿರಿ. ನಿಮ್ಮೊಂದಿಗೆ ಇರಲು ಸಂಗಾತಿಗೆ ಯಾವುದೇ ತೊಂದರೆಯಾಗದು. ಈ ವ್ಯಕ್ತಿಗಳು ಉತ್ತಮ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಹವ್ಯಾಸದ ಮೂಲಕವೇ ಆತ್ಮಸಂಗಾತಿಯ ಭೇಟಿಯಾಗುವುದು ಎಂದು ಇವರ ನಕ್ಷತ್ರ ಹೇಳುತ್ತದೆ. ಮ್ಯಾರಥಾನ್ ಚಾಲನೆ ಮಾಡುವಾಗ ಅಥವಾ ನಿಮ್ಮ ಭಾವೋದ್ರೇಕ ತುಂಬಿದ ಚಟುವಟಿಕೆಗಳನ್ನು ನೀವು ಮಾಡುತ್ತಿರುವಾಗ ಆತ್ಮ ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆಗಳಿರುತ್ತವೆ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ನಿಮ್ಮ ಭಕ್ತಿ ಹಾಗೂ ಉತ್ಸಾಹದಿಂದ ಸಂಗಾತಿಯು ನಿಮ್ಮತ್ತ ಆಕರ್ಷಿತರಾಗುವರು. ನಿಮಗೆ ಯಾರು ಮುಖ್ಯರು ಎಂದು ತಿಳಿದುಕೊಳ್ಳಲು ನೀವು ದಿಗ್ಬ್ರಮೆ ಮತ್ತು ವ್ಯಾಕುಲತೆಯನ್ನು ತೆಗೆದುಹಾಕಲು ಬೇಗನೆ ನಿರ್ಧಾರ ಮಾಡುವಿರಿ. ನೀವು ಅತ್ಯುತ್ತಮ ವ್ಯಕ್ತಿಯಾಗಿರುವ ಕಾರಣದಿಂದ ಯಾವಾಗ ಬೇಕಿದ್ದರೂ ನೀವು ಆತ್ಮಚಿಂತನೆ ಮಾಡಿಕೊಳ್ಳುವಿರಿ.ಈ ರಾಶಿಯವರು ಅತ್ಯಂತ ಭಾವೋದ್ರಿಕ್ತ ವ್ಯಕ್ತಿಗಳಾಗಿರುತ್ತಾರೆ. ಏನಾದರೂ ಸಾಧಿಸಬೇಕು ಎಂದಾಗ ಬಹಳ ಕಷ್ಟಪಟ್ಟು ಹೋರಾಡುತ್ತಾರೆ. ನಿಮ್ಮ ಪಾಲುದಾರರು ಕೆಲಸವನ್ನು ನೋಡಿ ಬರುವ ಸಾಧ್ಯತೆಗಳಿವೆ. ನಿಮ್ಮ ಗುರಿ ಸಾಧನೆಗೆ ನೀವು ಹೊಂದಿರುವ ಭಾವೋದ್ರೇಕವನ್ನು ನಿಮ್ಮ ಆತ್ಮ ಸಂಗಾತಿ ನೋಡಿದಾಗ ನಿಮ್ಮೆಡೆಗೆ ಸಂಪೂರ್ಣವಾಗಿ ಆಕರ್ಷಿತರಾಗುತ್ತಾರೆ.

  ಧನು: ನ.23-ಡಿ.22

  ಧನು: ನ.23-ಡಿ.22

  ನೀವು ಒಂದು ಸಲ ಕೆಲಸದ ಕಡೆ ಹೆಚ್ಚು ಗಮನಹರಿಸಬೇಕೆಂದು ಯೋಚಿಸುತ್ತಾ ಇರುವಿರಿ. ಆದರೆ ಇನ್ನೊಂದು ಕಡೆಯಲ್ಲಿ ನಿಮ್ಮ ಉಲ್ಲಾಸ ಹಾಗೂ ಅತ್ಯುತ್ಸಾಹದ ಮನಸ್ಸು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಬೇಕೆಂದು ಬಯಸುವುದು. ಬಲವಾದ ನಂಬಿಕೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಒಳ್ಳೆಯದನ್ನು ನೋಡುವ ನಿಮ್ಮ ಗುಣವು ನಿಮ್ಮತ್ತ ಸಂಗಾತಿಯನ್ನು ಆಕರ್ಷಿಸುವುದು. ಈ ರಾಶಿಯವರು ಅತ್ಯಂತ ಸಾಹಸಮಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಸಾಹಸ ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳುವುದನ್ನು ಕಾಣಬಹುದು. ಇವರ ಆತ್ಮ ಸಂಗಾತಿಯೂ ಜಗತ್ತಿನ ಪ್ರಯಾಣ ಮಾಡುವಾಗ ಭೇಟಿಯಾಗುವ ಸಾಧ್ಯತೆಗಳಿವೆ. ಒಂದೇ ಸ್ಥಳದಲ್ಲಿ ನೀವು ಉಳಿದುಕೊಳ್ಳಲು ಬಯಸಬಾರದು.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ನಿಮ್ಮ ಸ್ಥಿರತೆಯು ಸಂಗಾತಿಯ ಆಕರ್ಷಿಸುವುದು. ನೀವು ಸಂಬಂಧದಲ್ಲಿ ಇರುವಾಗ ಯಾವತ್ತಿಗೂ ನಿಮ್ಮ ಸಂಗಾತಿ ಜತೆಗೆ ಇರಲು ಬಯಸುವಿರಿ ಮತ್ತು ಆಕೆಯೊಂದಿಗೆ ಇರುವ ಸಮಯ ಕಳೆದುಕೊಳ್ಳುವುದಿಲ್ಲ. ನಿಮಗೆ ಸಂಬಂಧದಲ್ಲಿ ಒಳ್ಳೆಯ ಬೆಂಬಲವು ಸಿಗುವುದು. ನಿಮ್ಮ ಕೆಲಸದಲ್ಲಿ ನೀವು ಮುಳುಗಿಕೊಳ್ಳಲು ಬಯಸುತ್ತೀರಿ. ನಿಮ್ಮ ಮಹತ್ವಾಕಾಂಕ್ಷೆಯ ಕನಸು ನನಸಾಗಲು ಅನೇಕ ಶ್ರಮವನ್ನು ವಹಿಸುವಿರಿ. ಈ ನಡುವೆ ನಿಮ್ಮ ಪ್ರಣಯದ ಜೀವನವನ್ನು ನೀವು ನಿರ್ಲಕ್ಷಿಸುವ ಸಾಧ್ಯತೆಗಳಿವೆ. ನೀವು ಸ್ವಲ್ಪ ವಿಶ್ರಾಂತಿಯನ್ನು ಪಡೆಯಬೇಕಾಗುವುದು. ಆಗ ನಿಮ್ಮ ಆತ್ಮಸಂಗಾತಿಯ ಭೇಟಿಯಾಗುವುದು.

  ಕುಂಭ: ಜ.21- ಫೆ. 18

  ಕುಂಭ: ಜ.21- ಫೆ. 18

  ನಿಮ್ಮಲ್ಲಿರುವಂತಹ ಪ್ರಾಮಾಣಿಕತೆಯು ಸಂಗಾತಿಯು ನಿಮ್ಮತ್ತ ಬರಲು ಕಾರಣವಾಗುವುದು. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ನಿಮಗೆ ಸಾಧ್ಯವಾಗದ ಮಾತು. ಆದರೆ ನಿಮ್ಮಲ್ಲಿರುವ ಪಾರದರ್ಶಕತೆ, ಮುಕ್ತಮನಸ್ಸು ಮತ್ತು ಪ್ರಾಮಾಣಿಕತೆಯು ಸಂಗಾತಿಯು ನಿಮ್ಮ ಸಂಬಂಧದಲ್ಲಿ ಕಾಣುವಂತಹ ಕೆಲವು ಒಳ್ಳೆಯ ಗುಣಗಳು. ಈ ರಾಶಿಯವರು ಕೆಲವು ಬೌದ್ಧಿಕ ಅನ್ವೇಷಣೆಯ ಮೂಲಕ ತಮ್ಮ ಆತ್ಮಸಂಗಾತಿಯನ್ನು ಭೇಟಿಯಾಗುವರು. ಅದು ನಿಮ್ಮ ತರಗತಿಯಲ್ಲಿ ಅಥವಾ ಕಾಫಿ ಅಂಗಡಿಯಲ್ಲಿ ಆಗಬಹುದು. ಈ ತಾಣಗಳು ಸಂಗಾತಿಯನ್ನು ಪಡೆಯಲು ಅತ್ಯುತ್ತಮ ಸ್ಥಳವಾಗಿದೆ. ಅನೇಕ ಪ್ರೇಮ ಕಥೆಗಳು ಇಲ್ಲಿಂದಲೇ ಪ್ರಾರಂಭವಾಗುತ್ತವೆ ಎಂದು ಹೇಳಬಹುದು.

  ಮೀನ: ಫೆ.19- ಮಾ.20

  ಮೀನ: ಫೆ.19- ಮಾ.20

  ನಿಮ್ಮ ಸಾಧು ಸ್ವಭಾವವು ಎಲ್ಲರನ್ನು ಸೆಳೆಯುವುದು. ಸಂಗಾತಿಯನ್ನು ಪ್ರೀತಿಸುವಾಗ ನಿಮ್ಮಲ್ಲಿರುವ ಬೆಸುಗೆ, ಆರೈಕೆ ಹಾಗೂ ಪ್ರೀತಿಗೆ ಯಾವುದೇ ರೀತಿಯ ಗಡಿಯಿಲ್ಲ. ಅವರ ಭಾವನೆಗಳಿಗೆ ನೀವು ಹೊಂದಿಕೊಂಡುರುವಿರಿ ಮತ್ತು ಅವರ ಹೃದಯಕ್ಕೆ ಇಷ್ಟವಾಗುವಂತಹ ಕೆಲಸ ಮಾಡುವಿರಿ. ಈ ರಾಶಿಯವರು ತಮ್ಮ ಆತ್ಮ ಸಂಗಾತಿಯನ್ನು ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭೇಟಿಯಾಗಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇವರು ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ನಿಮ್ಮ ಸೂಕ್ಷ್ಮ ಭಾವನಾತ್ಮಕ ಭಾವನೆಯು ನಿಮ್ಮನ್ನು ಎಲ್ಲೆಡೆ ಸಂಚರಿಸುವಂತೆ ಮಾಡುವುದು. ಜೊತೆಗೆ ಸಂಗಾತಿಯ ಪರಿಚಯ ಮಾಡಿಸುವುದು.

  Read more about: life facts
  English summary

  qualities-of-your-personality-which-can-attract-your-love-based-on-your-zodiac

  Have you ever thought what makes you so different from the rest of the signs? There is always something special about you and this can be explained by your zodiac sign. Each zodiac individual gets his/her soulmate with these interesting traits of their personality. Find out what your zodiac sign has to reveal about your charming side, which makes you feel loved by your partner.
  Story first published: Sunday, April 15, 2018, 7:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more