For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯದ ಪ್ರಕಾರ ಈ ವಾರ ನಿಮ್ಮ ಲವ್ ಲೈಫ್ ಹೇಗಿದೆ ತಿಳಿಯಿರಿ

By Sushma Charhra
|

ಜ್ಯೋತಿಷ್ಯ ಶಾಸ್ತ್ರದಲ್ಲಿ, ಶುಕ್ರ ಗ್ರಹವು ಪ್ರಾಪಂಚಿಕ ಏರುಪೇರುಗಳಾವುದು, ಜೀವನದಲ್ಲಿ ಬದಲಾವಣೆಗಳಾಗಲು ಕಾರಣೀಕರ್ತನಾಗುವ ಮಹತ್ವವಾದ ಸ್ಥಾನವನ್ನು ಪಡೆದುಕೊಂಡಿದೆ. ಜೀವನದಲ್ಲಿ ನೀವು ಇನ್ನೊಬ್ಬರ ಬಗ್ಗೆ ಇಟ್ಟುಕೊಂಡಿರುವ ಭಾವನೆಗಳು ಮತ್ತು ಆಲೋಚನೆಗಳ ವಿಚಾರದಲ್ಲಿ ಮಹತ್ವವಾದ ಪರಿಣಾಮವನ್ನು ಶುಕ್ರ ಗ್ರಹವು ಮಾಡಲಿದೆ. ಹಾಗಾಗಿ ಈ ವಾರದಲ್ಲಿ ನಿಮ್ಮ ಪ್ರೀತಿಯ ವಿಚಾರದಲ್ಲಿ ಏನಾಗಲಿದೆ, ಜಾತಕದ ಭವಿಷ್ಯದ ಪ್ರಕಾರ ನಿಮ್ಮ ಪ್ರೀತಿ ನಿಮಗೆ ಖುಷಿ ನೀಡುತ್ತಾ, ಇಲ್ಲವೇ ದುಃಖ ನೀಡುತ್ತಾ, ಈ ವಾರ ನಿಮ್ಮ ಪ್ರೀತಿಯಿಂದ ನೀವು ಏನನ್ನು ನಿರೀಕ್ಷಿಸಬಹುದು ಇಂತಹ ಕೆಲವು ವಿಚಾರಗಳನ್ನು ತಿಳಿಸಬಹುದು.

ವಾರದ ಆರಂಭದಲ್ಲೇ ನೀವು ಈ ವಾರದ ಬಗೆಗಿನ ಭವಿಷ್ಯವನ್ನು ತಿಳಿದುಕೊಳ್ಳುವುದು ಉತ್ತಮವಲ್ಲವೇ. ಈ ಲೇಖನದಲ್ಲಿ ನಮ್ಮ ಜ್ಯೋತಿಷ್ಯ ತಜ್ಞರು ನಿಮ್ಮ ಪ್ರೀತಿಯ ವಿಚಾರವಾಗಿ ಮೇ 14 ರಿಂದ ಮೇ 20,2018 ರ ವರೆಗೆ ಏನು ನಡೆಯಬಹುದು ಎಂಬ ಭವಿಷ್ಯವನ್ನು ತಿಳಿಸಲಿದ್ದೇವೆ. ಈ ಲೆಕ್ಕಾಚಾರವು ನಿಮ್ಮ ರಾಶಿಗೆ ಅನುಗುಣವಾಗಿ ಇರುತ್ತೆ. ಈ ವಾರ ಕೆಲವು ಗ್ರಹಗತಿಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಹಾಗಾಗಿ ಆ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲೇಖನದಿಂದ ಪಡೆದುಕೊಳ್ಳಿ.

ಮೇಷ

ಮೇಷ

ಮೇಷ ರಾಶಿಯವರನ್ನು ಆಳುವ ಗ್ರಹವಾಗಿರುವ ಮಂಗಳನು ಈ ವಾರ 10 ನೇ ಮನೆಯಲ್ಲಿ ಕೇತುವಿನ ಜೊತೆಗಿರುತ್ತಾನೆ. ನೀವು ಕೂಡಲೇ ಗಮನ ಹರಿಸಬೇಕಾಗಿರುವ ಕೆಲವು ವಿಚಾರಗಳಿಂದ ನೀವು ವಿಮುಖರಾಗುತ್ತೀರಿ. ಇದರ ಜೊತೆಗೆ ನೀವು ನಿಜವಾಗಿಯೂ ಗಮನಹರಿಸಬೇಕಾದ ವಿಚಾರಕ್ಕಿಂತಲೂ ಹೆಚ್ಚಾಗಿ ಬೇರೆಯ ವಸ್ತುವಿನಿಂದ ಇಲ್ಲವೇ ವ್ಯಕ್ತಿಗಳಿಂದ ಪ್ರಭಾವಿತರಾಗಿಬಿಡುತ್ತೀರಿ. ಇದರಿಂದಾಗಿ ನೀವು ನಿಮ್ಮ ಪ್ರೀತಿಪಾತ್ರವಾದ ವಸ್ತು ಅಥವಾ ವ್ಯಕ್ತಿಯಿಂದ ದೂರವಿರಬೇಕಾಗುವ ಸಂದರ್ಭ ಬರಬಹುದು. ಕೆಲವು ಕ್ಷಣಗಳಿಗಾಗಿ ನೀವು ಯಾರನ್ನು ಇಲ್ಲವೇ ಯಾವುದನ್ನು ನಿಜಕ್ಕೂ ರಕ್ಷಿಸಬೇಕಿತ್ತೋ ನೀವದನ್ನು ಈ ವಾರ ಮಾಡುವುದಿಲ್ಲ. ಇದರ ಜೊತೆಗೆ ಪ್ರತಿನಿತ್ಯದ ಕೆಲಸ ಕಾರ್ಯಗಳು, ವ್ಯಕ್ತಿಗಳು ಮತ್ತು ವಸ್ತುಗಳ ವಿಚಾರಗಳನ್ನು ನಾಜೂಕಲ್ಲಿ ಸಂಭಾಳಿಸಲು ಪ್ರಯತ್ನಿಸುತ್ತೀರಿ.

ವೃಷಭ

ವೃಷಭ

ವೃಷಭ ರಾಶಿಯವರ ಗ್ರಹವಾಗಿರುವ ಶುಕ್ರನು ಕಳೆದ ವಾರ ತನ್ನ ಮನೆಯಲ್ಲೇ ಇದ್ದು, ಈ ವಾರದ ಆರಂಭದಲ್ಲಿ ಮಿಥುನ ರಾಶಿಗೆ ಸಂಚರಿಸುತ್ತಾನೆ. ಜೀವನದ ಹಲವು ಮಜಲುಗಳಲ್ಲಿ ನಿಮಗೆ ಈ ವಾರ ಗೌರವ ದೊರೆಯಲಿದೆ. ನಿಮ್ಮ ಪ್ರೀತಿ,ಪ್ರಣಯ, ನಂಬಿಕೆ, ಚಿಂತನೆಗಳು, ಉದ್ದೇಶಗಳು, ಅಷ್ಟೇ ಯಾಕೆ ನಿಮ್ಮ ಭಾವನೆಗಳಿಗೂ ಈ ವಾರ ಬೆಲೆ ಸಿಗಲಿದೆ. ಪ್ರಾಪಂಚಿಕವಾಗಿ ನಿಮಗೊಂದು ಗೌರವ ಸಿಗುವ ವಾರ ಇದಾಗಿದೆ.

ಮಿಥುನ

ಮಿಥುನ

ಮಿಥುನ ರಾಶಿಯವರನ್ನು ಆಳುವ ಗ್ರಹವಾಗಿರುವ ಮಂಗಳನು ಈ ವಾರದ ಆರಂಭದಲ್ಲಿ 11 ನೇ ಮನೆಯಲ್ಲಿ ಸೂರ್ಯ ಮತ್ತು ಚಂದ್ರನೊಂದಿಗೆ ಇರುತ್ತಾನೆ. ಈ ವಾರ ನೀವು ನಿಮ್ಮ ಹೃದಯ ಏನನ್ನು ಹೇಳುತ್ತಿದೆ ಅನ್ನುವುದು ಗಮನವಿಟ್ಟು ಗ್ರಹಿಸಬೇಕಾಗುತ್ತದೆ ಮತ್ತು ಅದನ್ನು ಗಟ್ಟಿ ಮನಸ್ಸಿನೊಂದಿಗೆ ಪ್ರಾರಂಭಿಸಬೇಕಾಗುತ್ತದೆ. ಈ ವಾರವು ಬಹಳ ಶಕ್ತಿಶಾಲಿಯಾಗಿದೆ ಮತ್ತು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸೂಕ್ತವಾಗಿದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾಚಿಕೆ ಪಟ್ಟುಕೊಳ್ಳಬೇಡಿ ಮತ್ತು ಮುಜುಗರ ಪಟ್ಟುಕೊಳ್ಳಬೇಡಿ.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರನ್ನು ಆಳುವ ಗ್ರಹವಾಗಿರುವ ಚಂದ್ರನು 10 ನೇ ಮನೆಯಿಂದ ನಿಮ್ಮ ಸ್ವಂತ ಮನೆಗೆ ಆ ವಾರದ ಅಂತ್ಯದಲ್ಲಿ ಕಾಲಿಡಲಿದ್ದಾನೆ. ಪ್ರೀತಿಯ ವಿಚಾರದಲ್ಲಿ ಈ ವಾರ ನೀವು ಧನಾತ್ಮಕ ಆಲೋಚನೆಗಳನ್ನು ಮಾಡಬೇಕಿದೆ. ಕ್ಷಣ ಮಾತ್ರದಲ್ಲಿ ಎಲ್ಲವೂ ಆಗಬೇಕೆಂದು ಬಯಸಬೇಡಿ. ನಿಮಗೆ ನೀವು ಈ ವಾರ ಸಮಯ ನೀಡಬೇಕಿದೆ. ಸಣ್ಣ ಸಮಯದಲ್ಲಿ ಯಾವುದನ್ನೂ ಕೈಗೂಡಿಸಲು ಸಾಧ್ಯವಿಲ್ಲ. ಆದರೆ ಈ ಹಂತ ನಿಮ್ಮ ಮಾನಸಿಕ ಸ್ಥಿರತೆಗಾಗಿ ಬಹಳ ಮುಖ್ಯ.

ಸಿಂಹ

ಸಿಂಹ

ಸಿಂಹ ರಾಶಿಯವರ ಆಳುವ ಗ್ರಹ ಸೂರ್ಯನು 9 ನೇ ಮನೆಯಲ್ಲಿದ್ದು, ಮಧ್ಯವಾರದಲ್ಲಿ ವೃಷಭರಾಶಿಗೆ ಪ್ರವೇಶಿಸಲಿದ್ದಾನೆ. ನಿಮ್ಮ ಆಲೋಚನೆಗಳನ್ನು ಇನ್ನಷ್ಟು ವಿಸ್ತರಿಸಲು ವಸ್ತು ಅಥವಾ ವಿಚಾರದ ಬಗ್ಗೆ ಆಳವಾಗಿ ಚಿಂತಿಸುವುದು ಅಥವಾ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಹೊಸ ಸಂಬಂಧಗಳನ್ನು ಆರಂಭಿಸಲು ಸೂಕ್ತವಾಗಿದೆ. ಗೆಳೆಯ-ಗೆಳತಿಯರಿಂದ ಸಂಗಾತಿ ಆಯ್ಕೆಯಾಗಬಹುದು ಅದಕ್ಕಾಗಿ ನಿಮ್ಮ ಗಮನ ಹೆಚ್ಚಾಗಿ ಎಲ್ಲರ ಮೇಲೂ ಕೇಂದ್ರೀಕರಿಸಿಕೊಳ್ಳುವುದು ಒಳ್ಳೆಯದು. ನೀವು ಹೆಚ್ಚೆಚ್ಚು ಪ್ರೀತಿಸಲು ಮತ್ತು ಅವರ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಆರಂಭಿಸಿದಂತೆ ಅವರೂ ನಿಮ್ಮೊಂದಿಗೆ ಹತ್ತಿರವಾಗುತ್ತಾರೆ ಮತ್ತು ಸಂಬಂಧ ಗಟ್ಟಿಗೊಳ್ಳುವ ವಾರ ಇದಾಗಿದೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರ ಆಳುವ ಗ್ರಹವು ಬುಧನಾಗಿದ್ದು, ಈ ವಾರ ಆತ 8 ನೇ ಮನೆಯಲ್ಲಿ ಉದಾತ್ತನಾಗಿರುವ ಸೂರ್ಯ ಮತ್ತು ಚಂದ್ರರ ಪ್ರಭಾವದಲ್ಲಿರುತ್ತಾನೆ. ನಿಮ್ಮ ನೀವು ಈ ವಾರ ಬಿಡಿಸಲಾಗದ ಬಂಧನದ ಸಂದರ್ಬಕ್ಕೆ ಒಳಗಾಗುತ್ತೀರಿ. ಇದರಿಂದಾಗಿ ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಕುತೂಹಲಕ್ಕೆ ಒಳಗಾಗುತ್ತೀರಿ. ನೀವು ನಿಮ್ಮ ಸುತ್ತಮುತ್ತಲಿರುವವರುವವರು ನಿಮ್ಮನ್ನು ಋಣಾತ್ಮಕ ಸನ್ನಿವೇಶಕ್ಕೆ ದೂಡುತ್ತಿದ್ದಾರೆ ಎಂದು ಭಾವಿಸುತ್ತೀರಿ ಮತ್ತು ಯಾವುದೋ ಕಾರಣದಿಂದ ಅವರನ್ನು ದೂಷಿಸಿಕೊಳ್ಳುತ್ತೀರಿ. ಹಾಗಾಗಿ ಬೇರೆಯವರನ್ನು ದೂಷಿಸುವಂತೆ ಮಾಡಿಕೊಳ್ಳುವುದಕ್ಕಿಂತ ಆದಷ್ಟು ಈ ವಾರ ನೀವು ಜಾಗರೂಕರಾಗಿರುವುದು ಸೂಕ್ತ. ಇದರಿಂದ ಅನಗತ್ಯ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ಸೃಷ್ಟಿಯಾಗುವುದು ತಪ್ಪುತ್ತೆ.

ತುಲಾ

ತುಲಾ

ತುಲಾ ರಾಶಿಯವರ ಆಳುವ ಗ್ರಹ ಶುಕ್ರನು ಈ ವಾರ 9 ನೇ ಮನೆಯಲ್ಲಿದ್ದಾನೆ. ಈ ವಾರ ಹಲವು ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳಲಿದೆ., ಈ ಅವಕಾಶವು ನಿಮ್ಮ ಜೀವನದಲ್ಲೊಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಬಹುದು. ಯಾಕಂದರೆ ಅಷ್ಟೊಂದು ದೊಡ್ಡ ಮಟ್ಟದ ಪ್ರಭಾವವನ್ನು ಇದು ನಿಮ್ಮ ಮೇಲೆ ಮಾಡಲಿದೆ. ಹಾಗಾಗಿ ನಿಮ್ಮ ಭವಿಷ್ಯದ ಪ್ರೀತಿ ನಿಮಗೆ ಈ ವಾರ ದೊರಕುವ ಸಾಧ್ಯತೆ ಇದೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯನ್ನು ಆಳುವ ಗ್ರಹವಾಗಿರುವ ಮಂಗಳನು ಕೇತುವಿನ ಜೊತೆ 3 ನೇ ಮನೆಯಲ್ಲಿದ್ದಾನೆ. ಈ ವಾರವು ಸಾಡೇಸಾತಿಯನ್ನು ಅನುಭವಿಸುತ್ತಿರುವ ಕೊನೆಯ ವಾರವಾಗಿದೆ. ಹೊಸತನ ಮತ್ತು ಸಂತೋಷಕ್ಕಾಗಿ ನಿಮ್ಮ ಉತ್ಸಾಹವೇ ಈ ವಾರ ಚಿಲುಮೆಯಂತೆ ಉಕ್ಕಲಿದೆ. ನಿಮ್ಮ ದೈಹಿಕ ಅಂಶಗಳೇ ನಿಮ್ಮನ್ನು ಪ್ರೀತಿಯೆಡೆದೆ ದಾಪುಗಾಲು ಹಾಕುವಂತೆ ಮಾಡಲಿದೆ. ನಿಮ್ಮ ಅಂತರಾಳದಲ್ಲಿ ಹುದುಗಿಸಿ ಇಟ್ಟುಕೊಂಡಿದ್ದ ಅದೆಷ್ಟೋ ಸಾವಿರ ಭಾವನೆಗಳು ಈ ವಾರ ನಿಮ್ಮವರ ಮುಂದೆ ರೂಪುಗೊಳ್ಳಲಿದೆ ಅಂದರೆ ನಿಮ್ಮ ರೊಮ್ಯಾಂಟಿಕ್ ಭಾವನೆಗಳಿಗೆ ಸ್ಥಳಾವಕಾಶ ಸಿಕ್ಕಿ, ನಿಮ್ಮ ಅದೆಷ್ಟೋ ದಿನಗಳ ವಿರಹ ಯಾತನೆ ಕಡಿಮೆಯಾಗುವ ವಾರ ಇದಾಗಿದೆ.

ಧನು

ಧನು

ಧನು ರಾಶಿಯವರ ಆಳುವ ಗ್ರಹವಾಗಿರುವ ಗುರುವು ನಿಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿದ್ದು ಲಾಭದಾಯಕವಾಗಿರುತ್ತಾನೆ. ನೀವು ಈಗಾಗಲೇ ಪ್ರೀತಿಯಲ್ಲಿ ಮುಳುಗಿದ್ದರೆ ಮುಂದಿನ ವಾರಕ್ಕಾಗಿ ಈ ವಾರ ಕೆಲವು ಪ್ರಮುಖ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಹೃದಯವು ಎಲ್ಲಾ ಕ್ಷೇತ್ರಗಳಲ್ಲೂ ಈ ವಾರ ಅಧಿಕಾರ ಚಲಾಯಿಸುತ್ತದೆ. ಹೊಸ ಅನುಭವಕ್ಕಾಗಿ ನೀವು ಈ ವಾರ ನಿಮ್ಮ ಹೃದಯವನ್ನು ತೆರೆದಿಡಬೇಕಾಗುತ್ತದೆ.

ಮಕರ

ಮಕರ

ಕೇತು ಮತ್ತು ಮಂಗಳ ಈ ವಾರ ಮಕರ ರಾಶಿಯವರ ಜೊತೆಗಿರುತ್ತಾರೆ. ಸಾಡೇಸಾತಿಯ ಮೊದಲ ಹಂತ ಈ ವಾರ ಆರಂಭವಾಗಲಿದೆ.ಮೂಲಭೂತವಾಗಿರುವ, ಸರಿಯಾಗಿ ತಿಳಿಯದ ಪ್ರೀತಿಯೊಂದು ಈ ವಾರ ನಿಮ್ಮೊಂದಿಗಿದೆ. ನೀವು ನಿಮ್ಮ ಕೆಲಸಕಾರ್ಯಗಳ ಬಗ್ಗೆ ಈ ವಾರ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುವ ವಾರ ಇದಾಗಿದೆ

ಕುಂಭ

ಕುಂಭ

ಕುಂಭ ರಾಶಿಯವರನ್ನು ಆಳುವ ಗ್ರಹವು ಶನಿಯಾಗಿರುತ್ತಾನೆ. ನಿಮಗೆ ಲಾಭದ ಅಂದಾಜನ್ನು ಈ ವಾರ ಹಾಕಲಾಗಿದೆ. ಪ್ರೀತಿಯ ವಿಚಾರದಲ್ಲಿ ನಿಮ್ಮ ಗೆಲುವೇ ನಿಮಗೆ ಹುಳಿಯಾಗುವ ಸಂಭವವಿದೆ. ಇದನ್ನು ಹೊರತು ಪಡಿಸಿ, ನೀವು ನಿಮ್ಮ ಪ್ರೀತಿಯ ವಿಚಾರದಲ್ಲಿ ಸರಿಯಾದ ಕಲಾತ್ಮಕ ವ್ಯೂಹವನ್ನು ರಚಿಸಬೇಕು ಮತ್ತು ಯೋಜನೆಯನ್ನು ರಚಿಸಿ ನಿಮ್ಮ ಪ್ರೀತಿಯನ್ನು ಪಡೆದುಕೊಳ್ಳಬೇಕು., ಈ ವಾರ ನಿಮ್ಮ ಗೆಳತಿಯರು ಅಥವಾ ಸಹದ್ಯೋಗಿಗಳು ನಿಮ್ಮೊಂದಿಗೆ ಪ್ರೀತಿಯ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳಬೇಡಿ.

ಮೀನ

ಮೀನ

ಮೀನ ರಾಶಿಯವರ ಆಳುವ ಗ್ರಹವಾಗಿರುವ ಗುರುವು 8 ನೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. ಒಬ್ಬ ಹೊಸ ವ್ಯಕ್ತಿಯು ನಿಮ್ಮ ಬಗ್ಗೆ ತೆಗೆದುಕೊಳ್ಳುವ ವಿಶೇಷ ಕಾಳಜಿಯು ನಿಮ್ಮನ್ನು ಆಕರ್ಷಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಈ ವಾರ ಅಂದಾಜಿಸಲಾಗುತ್ತಿದೆ ಮತ್ತು ಈ ವಾರ ಹಲವು ಕಾರ್ಯಕ್ರಮಗಳಿದ್ದು ಅವುಗಳಲ್ಲಿ ನಿಮ್ಮ ಪ್ರೀತಿಪ್ರಾತ್ರರು ನಿಮ್ಮನ್ನು ಹೊಗಳುವಂತ ಸಾಧ್ಯತೆಯ ಅನುಭವವನ್ನು ನೀವು ಈ ವಾರ ಪಡೆದುಕೊಳ್ಳುವಿರಿ.

ಈ ವಾರದ ಹೆಚ್ಚಿನ ಜ್ಯೋತಿಷ್ಯಕ್ಕಾಗಿ ನಮ್ಮ ಜ್ಯೋತಿಷ್ಯ ವಿಭಾಗವನ್ನು ಓದುವುದು ಮರೆಯಬೇಡಿ.

English summary

love-horoscope-for-14th-may-to-20th-may-2018

In the weekly astrology predictions, our astro experts reveal to us about the single idea of the supportive planetary positions for the week, for our particular zodiac sign. Check on to know what your stars hold for the week and how you'd spend your coming week.
Story first published: Monday, May 14, 2018, 16:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more