Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಇಲ್ಲಿರುವ ಪುರಾತನ ಚಿಹ್ನೆಯೊಂದನ್ನು ಆರಿಸಿ... ಇದರ ಹಿಂದಿದೆ ನಿಮ್ಮ ಸದ್ಯದ ಪರಿಸ್ಥಿತಿಗೆ ಪರಿಹಾರ
ನಿಮ್ಮನ್ನು ಅಪಾರವಾಗಿ ಆಕರ್ಷಿಸಿದ ಚಿಹ್ನೆಯನ್ನು ಆಯ್ದುಕೊಂಡ ಬಳಿಕ ಆ ಚಿಹ್ನೆಯೊಂದಿಗೆ ನೀವು ಭಾವನಾತ್ಮಕವಾಗಿ ಹೊಂದಿಕೊಳ್ಳುತ್ತೀರಿ, ಬನ್ನಿ, ನೀವು ಆರಿಸಿದ ಚಿಹ್ನೆ ಏನು ಹೇಳುತ್ತವೆ ಎಂದು ನೋಡೋಣ
ನಮ್ಮೆಲ್ಲರ ಪರಿಸ್ಥಿತಿಗಳು ದಿನೇ ದಿನೇ ಬದಲಾಗುತ್ತಲೇ ಇರುತ್ತವೆ. ನಿಮ್ಮ ಪ್ರಸ್ತುತ ಪರಿಸ್ಥಿತಿ ನಿಮ್ಮನ್ನ ಎತ್ತ ಒಯ್ಯಲಿದೆ ಎಂಬುದನ್ನು ಕಂಡುಕೊಳ್ಳಲು ಪುರಾತನ ಚಿಹ್ನೆಯೊಂದನ್ನು ಆಯ್ದುಕೊಂಡರೆ ಸಾಕು! ಕೆಳಗೆ ವಿವರಿಸಿರುವ ಈ ಪುರಾತನ ಚಿಹ್ನೆಗಳಲ್ಲಿ ನಿಮ್ಮ ಮನಸ್ಸನ್ನು ಅಪಾರವಾಗಿ ಆಕರ್ಷಿಸುವ ಚಿಹ್ನೆಯನ್ನೇ ಆಯ್ದುಕೊಳ್ಳಿ. ಈ ಚಿಹ್ನೆಗಳು ನಿಮಗೆ ಸಂತೋಷ ಮತ್ತು ಸಮೃದ್ದಿಯನ್ನು ತರುತ್ತದೆ ಎಂದು ನಂಬಲಾಗಿದೆ, ಇದು ನಿಮಗೂ ಒಳ್ಳೆಯದನ್ನೇ ಮಾಡಬಹುದು.
ನಿಮ್ಮನ್ನು ಅಪಾರವಾಗಿ ಆಕರ್ಷಿಸಿದ ಚಿಹ್ನೆಯನ್ನು ಆಯ್ದುಕೊಂಡ ಬಳಿಕ ಆ ಚಿಹ್ನೆಯೊಂದಿಗೆ ನೀವು ಭಾವನಾತ್ಮಕವಾಗಿ ಹೊಂದಿಕೊಳ್ಳುತ್ತೀರಿ, ಬನ್ನಿ, ನೀವು ಆರಿಸಿದ ಚಿಹ್ನೆ ಏನು ಹೇಳುತ್ತವೆ ಎಂದು ನೋಡೋಣ:

ಧೃವ ನಕ್ಷತ್ರವನ್ನು ಆಯ್ದುಕೊಂಡರೆ:
ಇದು ಗುರಿ ಅಥವಾ ಗಮ್ಯಸ್ಥಾನದ ಸಂಕೇತವಾಗಿದೆ. ಒಂದು ವೇಳೆ ನೀವು ಈ ಚಿಹ್ನೆಯನ್ನು ಆಯ್ದುಕೊಂಡರೆ ನಿಮ್ಮ ಮನದಲ್ಲಿ ಯಾವುದೋ ಯೋಜನೆಯನ್ನು ಕಾರ್ಯಗತಗೊಳಿಸುವ ಯೋಚನೆಗಳೇ ಹರಿದಾಡುತ್ತಿರುತ್ತವೆ. ಬಹುಕಾಲದಿಂದ ನೀವು ಸಾಧಿಸಬೇಕಾಗಿದ್ದ ಯಾವುದೋ ಒಂದು ವಿಷಯಕ್ಕೆ ಈಗ ಈ ನಕ್ಷತ್ರ ಒಂದು ದಿಕ್ಕು ತೋರಿಸುತ್ತದೆ ಹಾಗೂ ಈ ಯೋಜನೆ ಕಾರ್ಯಗತಗೊಳ್ಳಲು ಸರಿಯಾದ ದಾರಿಯಲ್ಲಿ ಮುಂದುವರೆಯಲು ಪ್ರೇರಣೆ ದೊರಕುತ್ತದೆ. ನಿಮ್ಮ ಕನಸನ್ನು ಸಾಕಾರಗೊಳಿಸಲು ಹೆಚ್ಚಿನ ಪ್ರಯತ್ನ ನಡೆಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಫಲ ದೊರಕುವ ಸಾಧ್ಯತೆ ಇದೆ.

ಒಂದು ವೇಳೆ ತ್ರಿಕೋಣ (Trinity) ವನ್ನು ಆಯ್ದುಕೊಂಡರೆ
ಇದು ದೇವರ ಚಿಹ್ನೆಯಾಗಿದೆ. ಸಾವಿರಾರು ವರ್ಷಗಳಿಂದ ಧಾರ್ಮಿಕ ದ್ವಂದ್ವವಿರುವ ಈ ಚಿಹ್ನೆಯನ್ನು ತಪಸ್ವಿಗಳು ಅನುಸರಿಸುತ್ತಾ ಬಂದಿದ್ದಾರೆ. ಒಂದು ವೇಳೆ ನೀವು ಈ ಚಿಹ್ನೆಯನ್ನು ಆರಿಸಿಕೊಂಡರೆ ನಿಮ್ಮ ಜೀವದಲ್ಲಿ ಕವಲುದಾರಿಗಳು ಎದುರಾಗುತ್ತಿವೆ ಹಾಗೂ ಸರಿಯಾದ ದಾರಿಯನ್ನು ಆಯ್ದುಕೊಳ್ಳಲು ನಿಮಗೆ ಆತ್ಮವಿಮರ್ಶೆ ಹಾಗೂ ಧ್ಯಾನದ ಅಗತ್ಯವಿದೆ ಅಥವಾ ಈಗಾಗಲೇ ಆಯ್ದುಕೊಂಡಿದ್ದರೆ ಈ ದಾರಿ ಸರಿಯೇ ಎಂದು ಪುನರ್ಪರಿಶೀಲನೆ ನಡೆಸಲು ತಿಳಿಸುತ್ತಿದೆ.

ಒಂದು ವೇಳೆ ಪಂಚಭುಜ ನಕ್ಷತ್ರವನ್ನು ಆಯ್ದುಕೊಂಡರೆ:
ಇದೊಂದು ನಿಗೂಢ ಹಾಗೂ ವಸ್ತುಗಳ ಸ್ತ್ರೀರೂಪವೂ ಆಗಿದೆ. ಒಂದು ವೇಳೆ ನೀವು ಈ ಚಿಹ್ನೆಯನ್ನು ಆಯ್ದುಕೊಂಡರೆ ನೀವು ಹರಸಲ್ಪಟ್ಟವರು ಎಂದು ತಿಳಿದುಕೊಳ್ಳಬಹುದು. ನೀವು ಆಯ್ದುಕೊಂಡ ದಾರಿಯನ್ನೇ ಆಯ್ದುಕೊಂಡು ಮುಂದುವರೆಯಲು ಹಲವಾರು ವ್ಯಕ್ತಿಗಳು ಸಿದ್ದರಾಗಿದ್ದಾರೆ. ಇವರ ಸಹಕಾರವನ್ನು ಪಡೆದು ಮುನ್ನಡೆಯಲು ನಿಮ್ಮ ಮನಸ್ಸಿನ ಭೀತಿಯನ್ನು ಪಕ್ಕಕ್ಕಿಡಬೇಕು ಹಾಗೂ ಯಾವುದೇ ಅಳುಕಿಲ್ಲದೇ ಮುಂದುವರೆಯಬೇಕು. ನೀವು ಊಹಿಸದ ಹಲವಾರು ವಿಷಯಗಳು ಮೋಡಿ ಮಾಡಿದಂತೆ ನಡೆಯುತ್ತಾ ನಿಮ್ಮ ದಾರಿಯನ್ನು ಸುಗಮಗೊಳಿಸುತ್ತದೆ.

ನ್ಯಾಯದ ಚಕ್ರವನ್ನು ಆಯ್ದುಕೊಂಡರೆ
ಈ ಚಕ್ರ ಚಕ್ರವರ್ತಿ ಅಶೋಕನನ್ನು ಪ್ರತಿನಿಧಿಸುತ್ತದೆ. ಈ ಚಕ್ರದಲ್ಲಿ ಎಂಟು ಕಡ್ಡಿಗಳಿವೆ ಹಾಗೂ ಇವು ಶಕ್ಯಮುನಿಯವರು ವಿವರಿಸಿದಂತೆ ಸರಿಯಾದ ಜೀವನಕ್ಕೆ ಅಗತ್ಯವಾದ ಎಂಟು ಪಥಗಳನ್ನು ತೋರುತ್ತವೆ. ಒಂದು ವೇಳೆ ನೀವು ಈ ಚಿಹ್ನೆಯನ್ನು ಆಯ್ದುಕೊಂಡರೆ ನೀವು ನಿಮ್ಮ ಮಹತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಿಸುವ ವ್ಯಕ್ತಿಯಾಗಿದ್ದೀರಿ. ಈ ಪುರಾತನ ಚಿಹ್ನೆ ನಿಮ್ಮ ಸಮರ್ಪಣಾಭಾವ ಹಾಗೂ ಯಶಸ್ಸಿನೆಡೆ ಸನ್ಮಾರ್ಗದಲ್ಲಿ ಮುನ್ನಡೆಯುವ ನಿರ್ಣಯವನ್ನು ಬಿಂಬಿಸುತ್ತದೆ.

ಒಂದು ವೇಳೆ ಪವಿತ್ರ ಓಂ ಚಿಹ್ನೆಯನ್ನು ಆಯ್ದುಕೊಂಡರೆ
ಓಂ ಪವಿತ್ರ ಚಿಹ್ನೆಯಾಗಿದ್ದು ಜಗತ್ತನ್ನ ಸೃಷ್ಟಿಸಿದ ಸೃಷ್ಟಿಕರ್ತನ ಸೂಚನೆಯೂ ಆಗಿದೆ. ಇದೊಂದು ಅತ್ಯಂತ ವಿಶಾಲ ಅರ್ಥವುಳ್ಳ ಚಿಹ್ನೆಯಾಗಿದ್ದು ಇಡಿಯ ವಿಶ್ವದ ಸೃಷ್ಟಿಯನ್ನೇ ತನ್ನಲ್ಲಿ ಅಳವಡಿಸಿಕೊಂಡಿದೆ. ಈ ಚಿಹ್ನೆಯನ್ನು ಯಾವುದೇ ರೂಪದಲ್ಲಿ ತಮ್ಮೊಂದಿಗೆ ಇರಿಸಿಕೊಂಡವರಲ್ಲಿ ಇದು ಸಮೃದ್ದಿಯನ್ನು ತರುತ್ತದೆ.



Click it and Unblock the Notifications
