For Quick Alerts
ALLOW NOTIFICATIONS  
For Daily Alerts

  ಹಣ ಹೆಚ್ಚುವ ಸಮಯ ಇದು...ಯಾವ್ಯಾವ ರಾಶಿಯವರ ಆರ್ಥಿಕ ಸ್ಥಿತಿ ಹೇಗಿದೆ ನೋಡಿ

  By Divya Pandith
  |

  ಹಣ ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರೀಮಂತನಾಗಿದ್ದರೂ ಇನ್ನೂ ಸ್ವಲ್ಪ ಲಾಭ ಬರಲಿ ಎಂದೇ ಬಯಸುತ್ತಾರೆ. ಏಕೆಂದರೆ ಜೀವನದಲ್ಲಿ ಹಣ ಎನ್ನುವುದು ಮನುಷ್ಯನಿಗೆ ಅಷ್ಟು ಅಗತ್ಯದ ವಸ್ತುವಿನಲ್ಲಿ ಒಂದಾಗಿದೆ. ಇದೀಗ ಸಾಮಾನ್ಯವಾಗಿ ಉದ್ಯೋಗಿಗಳು ತಮ್ಮ ಸಂಸ್ಥೆಗಳಲ್ಲಿ ದುಡಿಮೆಯನ್ನು ಹೆಚ್ಚಿಸಿಕೊಳ್ಳುವ ಅಥವಾ ಬಡ್ತಿ ಪಡೆಯುವ ಸಮಯ ಎಂದು ಹೇಳಬಹುದು.

  ಈ ಸಮಯದಲ್ಲಿ ತಮ್ಮ ಆದಾಯದಲ್ಲಿ ಕೊಂಚ ಹೆಚ್ಚಳವನ್ನು ಪಡೆದುಕೊಳ್ಳುತ್ತಾರೆ. ಇಂತಹ ವೇಳೆ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಹಗೂ ಸಂತೋಷ ಉಂಟಾಗುವುದು ಸುಳ್ಳಲ್ಲಾ. ಆದರೆ ನಮ್ಮ ಪರಿಸ್ಥಿತಿ, ಕಷ್ಟಗಳು, ಆರ್ಥಿಕ ಸ್ಥಿತಿ-ಗತಿ, ಖರ್ಚುಗಳೆಲ್ಲವೂ ನಮ್ಮ ಬದುಕಿನಲ್ಲಿ ಅನೇಕ ಬದಲಾವಣೆಯನ್ನು ತರುತ್ತವೆ. ಖರ್ಚು ಎನ್ನುವುದು ಉಳಿತಾಯ ಮಾಡಲು ಅಡ್ಡಗಾಲನ್ನು ಇಡುವುದು. ಈ ತಿಂಗಳು ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಕೆಲವು ಗ್ರಹಗತಿಗಳ ಪರಿಣಾಮದಿಂದ ಹಣವನ್ನು ಉಳಿಸಿಕೊಳ್ಳಲು ನೀವು ಯಾವ ರೀತಿಯ ಪರಿಶ್ರಮ ವಹಿಸುವಿರಿ? ನಿಮ್ಮ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

  ಮೇಷ

  ಮೇಷ

  ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಗತಿಯು ಅಷ್ಟೇನು ಉತ್ತಮವಾಗಿಲ್ಲ ಎಂದೇ ಹೇಳಬಹುದು. ನಿಮ್ಮ ಕಿಸೆಯಿಂದ ಹಣವನ್ನು ಖರ್ಚುಮಾಡುವಂತಹ ಒಂದು ದೊಡ್ಡ ವರ್ತುಲದ ರಂಧ್ರವಿದೆ ಎಂದು ಹೇಳಬಹುದು. ಆದರೆ ಇನ್ನೊಂದೆಡೆ ಕೆಲಸದ ನಿಮಿತ್ತ ಕೈಗೊಳ್ಳುವ ಪ್ರವಾಸವು ಪ್ರಯೋಜನಕಾರಿಯಾಗಿರುತ್ತದೆ. ಮಧ್ಯವರ್ತಿಗಳೊಂದಿಗೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು. ಏಕೆಂದರೆ ಅವರು ನಿಮ್ಮ ದಾರಿಯನ್ನು ತಪ್ಪಿಸುವ ಸಾಧ್ಯತೆಗಳಿವೆ. ಹಣದ ವಿಚಾರದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು.

  ವೃಷಭ

  ವೃಷಭ

  ನಿಮ್ಮ ನಕ್ಷತ್ರಗಳು ನಿಮ್ಮ ಪರವಾಗಿಲ್ಲ ಎಂದು ಹೇಳಬಹುದು. ನಿಮ್ಮ ವೃತ್ತಿ ಜೀವನ ಹಾಗೂ ನಿರೀಕ್ಷೆಗಳು ಸ್ವಲ್ಪ ಕಠಿಣವಾಗಿಯೇ ಇರುತ್ತವೆ. ನೀವು ಸುಧೀರ್ಘವಾಗಿ ಒಂದು ಅಂತರದಲ್ಲಿ ಪ್ರಯಾಣ ನಡೆಸುತ್ತಿದ್ದರೂ ಅದರಿಂದಲೂ ಯಾವುದೇ ಪ್ರಯೋಜನ ಉಂಟಾಗದು. ಆರ್ಥಿಕ ಸ್ಥಿತಿಯಲ್ಲಿ ಹಣದ ಹರಿವು ಕೊಂಚ ಬಿಗಿಯಾಗಿಯೇ ಇರುತ್ತದೆ ಎಂದು ಹೇಳಬಹುದು. ನೀವು ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

  ಮಿಥುನ

  ಮಿಥುನ

  ಈ ಸಮಯವು ನಿಮಗೆ ಅತ್ಯುತ್ತಮವಾಗಿದೆ ಎಂದು ತೋರುವುದು. ವೃತ್ತಿಜೀವನದ ಮುಂಭಾಗದಲ್ಲಿ ನಿಮಗೆ ಉತ್ತಮವಾಗುವುದು. ನಿಮ್ಮ ವಿರುದ್ಧ ಲಿಂಗದವರಿಂದ ನಿಮಗೆ ಕೆಲವು ಉತ್ತಮ ಸಹಾಯ ಆಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ಜೀವನ ಮಹತ್ತರವಾದ ಪಾತ್ರ ವಹಿಸುತ್ತದೆ. ಅದೃಷ್ಟದ ಬಾಗಿಲನ್ನು ತಳ್ಳುವ ಅನೇಕ ಅವಕಾಶಗಳು ನಿಮಗೆ ದೊರೆಯಲಿದೆ. ನಿಖರವಾದ ಪ್ರಚಾರ ಮತ್ತು ಹೊಸ ಉದ್ಯೋಗದ ಪಾತ್ರವನ್ನು ಪತ್ತೆಹಚ್ಚಲು ಸೂಕ್ತ ನಿರ್ಧಾರವನ್ನು ಕೈಗೊಳ್ಳುವಿರಿ.

  ಕರ್ಕ

  ಕರ್ಕ

  ಇದೊಂದು ನಿಮಗೆ ಮೌಲ್ಯಮಾಪನದ ಸಮಯ ಎಂದು ಹೇಳಬಹುದು. ವೃತ್ತಿ ಜೀವನದ ವಿಚಾರದಲ್ಲಿ ನಿಮ್ಮ ನಕ್ಷತ್ರಗಳು ನಿಮ್ಮ ಪರವಾಗಿ ನಿಲ್ಲುತ್ತವೆ. ನಿಮ್ಮ ಸುತ್ತಲೂ ಸಾಕಷ್ಟು ಸಕಾರಾತ್ಮಕತೆ ಇದೆ. ಇದು ನಿಮಗೆ ಆಹ್ಲಾದಕರವಾಗಿರಲು ಸಹಾಯ ಮಾಡುತ್ತದೆ. ನೀವು ಕಚೇರಿಯಲ್ಲಿ ನಿಮ್ಮ ತಲ್ಲೀನತೆ ಹಾಗೂ ಕಠಿಣ ಪರಿಶ್ರಮದಿಂದ ವಿಷಯಗಳನ್ನು ಉಳಿಸಿಕೊಳ್ಳುತ್ತೀರಿ. ಕೆಲಸದ ಕ್ಷೇತ್ರದಲ್ಲಿ ಅತ್ಯುತ್ತಮ ಹೆಜ್ಜೆಯನ್ನು ಇಡುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆಗ ನಿಮ್ಮ ಅವಕಾಶಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ.

  ಸಿಂಹ

  ಸಿಂಹ

  ಈ ಸಮಯದಲ್ಲಿ ನೀವು ನಿರಾಶೆಗೆ ಒಳಗಾಗದಿರಿ. ಹಣದ ವಿಚಾರದಲ್ಲಿ ಈ ವರ್ಷ ನಿಮಗೆ ಅಷ್ಟು ಅನುಕೂಲಕರವಾಗಿಲ್ಲ ಎಂದು ಹೇಳಲಾಗುವುದು. ನೀವು ಮಾಡುತ್ತಿರುವ ಕೆಲಸದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಗುವುದು. ವೃತ್ತಿಯ ವಿಚಾರವಾಗಿ ನೀವು ಸಾಕಷ್ಟು ಪರಿಶ್ರಮ ಹಾಗೂ ಏಕಾಗ್ರತೆಯನ್ನು ನೀಡದಿದ್ದರೆ ಯಶಸ್ಸು ದೊರೆಯುವುದು ಎನ್ನುವುದು ಖಾತರಿ ಇರುವುದಿಲ್ಲ. ನೀವು ಸಣ್ಣ ಲಾಭಕ್ಕಾಗಿ ಪ್ರಯತ್ನಿಸುತ್ತಿದ್ದರೆ ಪರಿಸ್ಥಿತಿಯು ಪರಿಪೂರ್ಣವಾಗಬಹುದು.

  ಕನ್ಯಾ

  ಕನ್ಯಾ

  ಈ ಹಿಂದೆ ನಡೆಸಿದ ಹೋರಾಟದ ಫಲವಾಗಿ ನೀವಿಂದು ಸುದೀರ್ಘವಾದ ಉಸಿರನ್ನು ತಗೆದುಕೊಳ್ಳಬಹುದು. ಏಕೆಂದರೆ ಆರ್ಥಿಕವಾಗಿ ನೀವು ಸ್ಥಿರತೆಯನ್ನು ಹೊಂದುವಿರಿ. ನಿಮ್ಮ ಗುರಿಯನ್ನು ಸಾಧಿಸಲು ನೀವು ಉತ್ತಮ ವಿಧಾನದಿಂದ ಯೋಜಿಸಬೇಕಾಗುವುದು. ವಿದೇಶದ ಹಣದೊಂದಿಗೆ ವ್ಯವಹರಿಸುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುವಿರಿ. ಹೊಸ ಉದ್ಯಮಕ್ಕೆ ಇದು ಸೂಕ್ತ ಸಮಯವಾಗಿರುವುದಿಲ್ಲ.

  ತುಲಾ

  ತುಲಾ

  ಈ ಸಮಯವು ನಿಮಗೆ ಉತ್ತಮವಾಗಿದೆ ಎನ್ನಬಹುದು. ಹಣಕಾಸಿನ ವಿಚಾರದಲ್ಲಿ ನೀವು ಡೈನಾಮಿಕ್ ರೂಪದ ಬದಲಾವಣೆಯನ್ನು ಕಾಣುವಿರಿ. ನಿಮ್ಮ ಆರ್ಥಿಕ ಸ್ಥಿತಿಯ ಸುಧಾರಣೆಗೆ ದೇವರ ಆಶೀರ್ವಾದ ಲಭ್ಯವಾಗುವುದು. ನೀವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶ ದೊರೆಯುವುದು. ಇನ್ನೊಂದೆಡೆ ಕೆಲವು ತೊಂದರೆಗಳನ್ನು ನೀವು ಅನುಭವಿಸಬೇಕಾಗುವುದು. ಕೆಲವೊಮ್ಮೆ ನಿಮ್ಮ ಯಶಸ್ಸು ಕೈತಪ್ಪಿ ಹೋಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಶಕ್ತಿಯನ್ನು ಉತ್ಪಾದಕ ಉದ್ದೇಗಳಿಗೆ ಚಾಲನೆ ಮಾಡಬೇಕು.

  ವೃಶ್ಚಿಕ

  ವೃಶ್ಚಿಕ

  ಕೆಲಸದ ಮುಂಭಾಗದಲ್ಲಿ ನೀವು ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಕೆಲಸ ನಿಭಾಯಿಸುವಲ್ಲಿ ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ನೀವು ಅದನ್ನು ಎಚ್ಚರಿಕೆಯಿಂದ ನಿಭಾಯಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಘರ್ಷಣೆಗೆ ಕಾರಣವಾಗಬಹುದಾದ ಪರಿಸ್ಥಿತಿಗೆ ನೀವು ಹೆಜ್ಜೆ ಇಡುವುದನ್ನು ತಪ್ಪಿಸಬೇಕು. ನಿಮ್ಮ ಅಹಂಕಾರವನ್ನು ಪಕ್ಕಕ್ಕೆ ಇಟ್ಟು, ಸಹೋದ್ಯೋಗಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ನಿರ್ವಹಿಸಬೇಕಾಗುವುದು.

  ಧನು

  ಧನು

  ಕೆಲಸದ ಮುಂಭಾಗದಲ್ಲಿ ನಿಮ್ಮ ನಕ್ಷತ್ರಗಳು ಯಾವುದೇ ಪ್ರಮುಖ ಬದಲಾವಣೆಯನ್ನು ತೋರಿಸುವುದಿಲ್ಲ. ಈ ತಿಂಗಳು ಕೆಲಸದಲ್ಲಿ ಯಾವುದೇ ಮೆಚ್ಚುಗೆಯನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಹಣದ ಹರಿವು ಏಕರೂಪದಲ್ಲಿಯೇ ಇರುತ್ತದೆ. ನೀವು ನಿಮ್ಮ ಸುತ್ತಲಿನ ವ್ಯಕ್ತಿಗಳೊಂದಿಗೆ ವಾದ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ

  ಮಕರ

  ಮಕರ

  ಈ ವರ್ಷ ಹಾವುದೇ ರೀತಿಯ ಹಣದ ಹೆಚ್ಚಳ ಅಥವಾ ಬಡ್ತಿ ನಿಮಗೆ ದೊರೆಯುವುದಿಲ್ಲ. ಎನ್ನುವುದರ ಬಗ್ಗೆ ಬೇಸರಗೊಳ್ಲದಿರಿ. ಆದಷ್ಟು ಶ್ರಮದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಖಿನ್ನತೆಯಿಂದ ನಿಮಗೆ ಕೆಲವು ವಿಚಾರದಲ್ಲಿ ಅಡಚಣೆ ಉಂಟುಮಾಡಬಹುದು. ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸಲು ಕಷ್ಟವಾಗುವುದು. ತಾಳ್ಮೆಯಿಂದ ಇದ್ದು ಆದಷ್ಟು ಅತ್ಯುತ್ತಮ ಫಲಿತಾಂಶವನ್ನು ನೀಡಿ.

  ಕುಂಭ

  ಕುಂಭ

  ನೀವು ಹೆಚ್ಚು ಶ್ರಮದಿಂದ ಕೆಲಸ ನಿರ್ವಹಿಸುತ್ತಿದ್ದೀರಿ. ಇದು ನಿಮಗೆ ಉತ್ತಮವಾದ ಸಮಯ. ನೀವು ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವುದು. ಕೆಲಸದ ಮುಂಭಾಗದಲ್ಲಿ ಅನೇಕ ಸಂಗತಿಗಳು ಸಂಭವಿಸುತ್ತವೆ. ಕಚೇರಿಯ ಯಾವುದೇ ರಾಜಕೀಯ ವಿಚಾರದಲ್ಲಿ ನೀವು ತೊಡಗಿಕೊಳ್ಳದಂತೆ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಇದು ನಿಮ್ಮ ಖ್ಯಾತಿಯನ್ನು ಕಡಿಮೆ ಮಾಡುವುದು.

  ಮೀನ

  ಮೀನ

  ಕೆಲಸದ ಬಗ್ಗೆ ನೀವು ಅನೇಕ ನಿರೀಕ್ಷೆಯನ್ನು ಹೊಂದಿದ್ದೀರಿ. ಅಂತೆಯೇ ಅಂತೆಯೇ ಹೆಚ್ಚು ಪರಿಶ್ರಮದಿಂದ ದುಡಿಯುತ್ತಿದ್ದೀರಿ. ನಿಮ್ಮ ಬಯಕೆಯಂತೆ ವೃತ್ತಿ ಜೀವನವು ಅಭಿವೃದ್ಧಿಯನ್ನು ಹೊಂದುವುದು ಎಂದು ಊಹಿಸಲಾಗಿದೆ. ಪ್ರಚಾರ ಹಾಗೂ ಯಶಸ್ಸಿನ ರುಚಿಯನ್ನು ನೀವು ನೋಡುವಿರಿ.

  Read more about: facts
  English summary

  Appraisal Time? Here Is What Your Zodiac Signs Reveal

  It is that time of the year when most of us eagerly wait to get the extra kick to work. Yup, with the appraisal time around, we reveal to you about what the stars have in store for you! As appraisals are about making more money, and it is all about the anticipation and curiosity of finding out on how well we have fared in the previous financial year, we bring in our astro experts' revelations! So, here's a quick look at what your sun signs reveal about the 2018 appraisals.
  Story first published: Friday, April 6, 2018, 7:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more