For Quick Alerts
ALLOW NOTIFICATIONS  
For Daily Alerts

  ಭಾನುವಾರದ ದಿನ ಭವಿಷ್ಯ

  By Lekhaka
  |

  ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅದೇನೋ ಒಂದು ಬಗೆಯ ನಿರಾಳ. ದಿನವಿಡೀ ವಿಶ್ರಾಂತಿ ಪಡೆಯಬಹುದು ಎನ್ನುವ ಖುಷಿ. ಉಳಿದ ದಿನಗಳಲ್ಲಿ ಮಾಡಲಾಗದೇ ಇಟ್ಟಿರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಹಲವರಿಗೆ ಶುಭದಿನವಾಗಿ ಪರಿಣಮಿಸುತ್ತದೆ. ವಾರವಿಡೀ ಕೆಲಸದ ಒತ್ತಡದಲ್ಲಿ ಇರುವವರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಕೊಂಚ ಸಮಯವನ್ನು ಕಳೆಯಲು ಅವಕಾಶ ಕಲ್ಪಿಸಿಕೊಡುವ ಸುಂದರವಾದ ದಿನ ಇದು.

  ಹಿಂದೂ ಪಂಚಾಗದ ಪ್ರಕಾರ ಭಾನುವಾರವನ್ನು ಶುಭದಿನವೆಂದು ಕರೆಯುತ್ತಾರೆ. ಕೆಲವು ಪ್ರಮುಖ ಕೆಲಸಗಳನ್ನು ಕೈಗೊಳ್ಳಲು ಈ ದಿನ ಶುಭಕರವಾದ್ದು ಎಂದು ಹೇಳುತ್ತಾರೆ. ಭಾನುವಾರ, ರವಿವಾರ, ಆದಿತ್ಯವಾರ ಎಂತಲೂ ಈ ದಿನವನ್ನು ಕರೆಯುತ್ತಾರೆ. ರವಿವಾರ ಎಂದು ಕರೆಯುವ ಈ ದಿನ ಎಲ್ಲರ ಬಾಳು ಬೆಳಗಲಿ ಎನ್ನುವುದುಬೋಲ್ಡ್ ಸ್ಕೈನ ಆಶಯ. ವಿಶ್ರಾಂತಿಗೆ ಅವಕಾಶ ಕಲ್ಪಿಸುವ ಈ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ನೀಡಬಹುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಕೆಳಗಿರುವ ರಾಶಿ ಭವಿಷ್ಯವನ್ನು ಪರಿಶೀಲಿಸಿ.

  ಮೇಷ:

  ಮೇಷ:

  ಈ ದಿನವವು ಮೇಷರಾಶಿಯವರಿಗೆ ಅತ್ಯಂತ ಶುಭಕರವಾದ ದಿನ ಎಂದು ಹೇಳಬಹುದು. ಸ್ತ್ರೀಯರಿಗೆ ಶುಭವುಂಟಾಗುವುದು. ಇಂದು ಕಪ್ಪು ಬಟ್ಟೆಯನ್ನು ಧರಿಸದಿರುವುದು ಸೂಕ್ತ. ಬಂಧು ಮಿತ್ರರ ಸಹಕಾರವನ್ನು ನೀವು ಬಯಸಿದರೆ ಅದು ಲಭ್ಯವಾಗುವುದು. ಯಾವುದೇ ಕಾರಣಕ್ಕೂ ನೀವು ತಳೆದಿರುವ ಮಾನಸಿಕ ದೃಢತೆಯನ್ನು ಕೈಬಿಡದಿರಿ. ವ್ಯಾಪಾರ ಉದ್ಯಮದಲ್ಲಿ ಲಾಭ ಉಂಟಾಗುವುದು. ನಿರೀಕ್ಷಿತ ಮಟ್ಟದಲ್ಲಿಯೇ ಗೆಲುವನ್ನು ಸಾಧಿಸುವಿರಿ. ಧಾನ್ಯ ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗುವುದು. ಯಶಸ್ವಿ ಜೀವನಕ್ಕಾಗಿ ವಿಷ್ಣು ಹಾಗೂ ಕುಲದೇವರ ಸ್ಮರಣೆ ಮಾಡಿ.

  ವೃಷಭ:

  ವೃಷಭ:

  ಅಂದುಕೊಂಡ ವಿಚಾರಗಳು ಸುಗಮವಾಗಿ ನೆರವೇರದು. ಗೊಂದಲ ಹಾಗೂ ಕಿರಿಕಿರಿ ನಿಮ್ಮ ನೆಮ್ಮದಿಯನ್ನು ಹಾಳುಮಾಡುವುದು. ಅಪಘಾತದಂತಹ ಅಶುಭ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ. ಮಕ್ಕಳಿಂದಲೂ ಅಶುಭ ವಾರ್ತೆ ಕೇಳುವ ಸಾಧ್ಯತೆ ಇದೆ. ರಾಹುಕಾಲದಲ್ಲಿ ಪ್ರಯಾಣವನ್ನು ಬೆಳೆಸದಿರಿ. ರಾಜಕಾರಣಿಗಳಿಗೂ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ನಿಮ್ಮ ನಿರೀಕ್ಷಿತ ಮಟ್ಟದಲ್ಲಿ ಗೆಲುವು ದೊರೆಯದು. ಯಶಸ್ವಿ ಬದುಕಿಗಾಗಿ ಗಣೇಶ ಹಾಗೂ ಸೂರ್ಯನ ಉಪಾಸನೆ ಮಾಡುವುದು ಉತ್ತಮ.

  ಮಿಥುನ:

  ಮಿಥುನ:

  ಅಂದುಕೊಂಡ ಕೆಲಸದಲ್ಲಿ ಸಮಾಧಾನ ಉಂಟಾಗುವ ಸಾಧ್ಯತೆ ಇದೆ. ತಂದೆ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯ ಹಾಗೂ ಸಹಕಾರ ಇರುವುದು. ಇದರಿಂದ ಹೊಸ ಕಾರ್ಯವನ್ನು ಕೈಗೊಳ್ಳುವ ಅವಕಾಶವಿದೆ. ನಿರೀಕ್ಷಿತ ಯಶಸ್ಸು ದೊರೆಯುವುದು. ಮನೆಯಲ್ಲಿ ಸಂತೋಷ ಹಾಗೂ ಮನಸ್ಸಿಗೆ ಸಮಾಧಾನ ದೊರೆಯುವುದು. ವೈದ್ಯ ವೃತ್ತಿಯಲ್ಲಿರುವವರಿಗೆ ಉತ್ತಮ ಧನಾಗಮನ ಆಗುವುದು. ಉತ್ತಮ ಭವಿಷ್ಯಕ್ಕಾಗಿ ಕುಲದೇವರು ಹಾಗೂ ಇಷ್ಟದೇವರನ್ನು ಆರಾಧಿಸಿ.

  ಕರ್ಕ:

  ಕರ್ಕ:

  ಸಮಾಧಾನದ ಮಾನಸಿಕ ಸ್ಥಿತಿಯನ್ನು ಹೊಂದುವುದರ ಜೊತೆಗೆ ಇಂದು ಸಿಹಿ ಭೋಜನವನ್ನು ಸವಿಯುವ ಅವಕಾಶವಿದೆ. ತಂದೆ ಮಕ್ಕಳ ನಡುವೆ ಇರುವ ಭಿನ್ನಾಭಿಪ್ರಾಯ ಉಪಶಮನವಾಗುವುದು. ಕೆಲವು ವಿಚಾರದ ಕುರಿತು ಆಪ್ತರೊಂದಿಗೆ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಬಹುದು. ನಿಮ್ಮ ಗುರಿ ಯಶಸ್ಸನ್ನು ಸಾಧಿಸಬೇಕೆಂದರೆ ಕುಲದೇವರ ಆರಾಧನೆ ಹಾಗೂ ಇಷ್ಟದೇವರ ಸ್ಮರಣೆ ಮಾಡಬೇಕು.

  ಸಿಂಹ:

  ಸಿಂಹ:

  ಇಂದು ಇವರಿಗೆ ಅಷ್ಟು ಅನುಕೂಲಕರವಲ್ಲದ ದಿನ ಎಂದು ಹೇಳಬಹುದು. ವಿಪರೀತವಾದ ಆಯಾಸ ಹಾಗೂ ಆರೋಗ್ಯ ಸಮಸ್ಯೆಯು ನಿಮ್ಮನ್ನು ಕಂಗೆಡಿಸುವುದು. ಮಾಂಸಹಾರವನ್ನು ಇಂದು ಸೇವಿಸದಿರಿ. ಹಿರಿಯರ ಮಾತನ್ನು ದಿಕ್ಕರಿಸದಿರಿ. ಮಹಿಳೆಯರು ಆಭರಣಗಳನ್ನು ಧರಿಸಿ ಪ್ರಯಾಣ ಬೆಳೆಸುವುದು ಸೂಕ್ತವಲ್ಲ. ಚಿನ್ನವನ್ನು ಕಳೆದುಕೊಳ್ಳುವ ಸಂದರ್ಭ ಒದಗಿ ಬರುವುದು. ಸ್ಥಿರಾಸ್ತಿಯಿಂದ ಯಾವುದೇ ಲಾಭ ಉಂಟಾಗದು. ಉತ್ತಮ ಜೀವನಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

  ಕನ್ಯಾ:

  ಕನ್ಯಾ:

  ಇಂದು ನಿಮಗೆ ಕೊಂಚ ಸಮಾಧಾನ ಉಂಟಾಗುವುದು. ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ನಡೆ ಇರುವುದು. ತಂದೆ ಹಾಗೂ ಸ್ನೇಹಿತರ ನಡುವೆ ಗೊಂದಲ ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಅಷ್ಟು ಲಾಭ ಉಂಟಾಗದು. ಮೇಲಾಧಿಕಾರಿಗಳಿಂದ ಯಾವುದೇ ಪ್ರಶಂಸೆ ದೊರೆಯದು. ಸಾಮಾಧಾನದ ಬದುಕಿಗೆ ಸೂರ್ಯ ಹಾಗೂ ನಾರಾಯಣನ ಆರಾಧನೆ ಮಾಡುವುದು ಸೂಕ್ತ.

  ತುಲಾ:

  ತುಲಾ:

  ಇಂದು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಇದು ನಿಮಗೆ ಮಾನಸಿಕ ನೆಮ್ಮದಿಯನ್ನುಂಟುಮಾಡುವುದು. ಉಪನ್ಯಾಸ ಹಾಗೂ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಉತ್ತಮ ಸ್ಥಾನಮಾನ ಹಾಗೂ ಲಾಭ ದೊರೆಯುವುದು. ಮಕ್ಕಳಿಂದ ಶುಭ ಸುದ್ದಿ ಹಾಗೂ ಸ್ಥಿರಾಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಹದಗೆಟ್ಟಿದ್ದ ಹಣಕಾಸಿನ ವ್ಯವಸ್ಥೆಯೂ ಸುಧಾರಣೆಯನ್ನು ಕಾಣುತ್ತದೆ. ಇನ್ನಷ್ಟು ಒಳ್ಳೆಯ ಫಲಗಳಿಗಾಗಿ ಲಕ್ಷ್ಮಿ ಮತ್ತು ನಾರಾಯಣನ ಆರಾಧನೆ ಮಾಡಿ.

  ವೃಶ್ಚಿಕ:

  ವೃಶ್ಚಿಕ:

  ಅಂದುಕೊಂಡ ವಿಚಾರವು ನಿಮ್ಮ ನಿರೀಕ್ಷೆಯಂತೆ ಆಗದು. ಸ್ವಲ್ಪ ಗೊಂದಲಮಯ ಫಲಿತಾಂಶ ದೊರೆಯುವುದು. ಆರೋಗ್ಯದ ಬಗ್ಗೆ ಆದಷ್ಟು ಜಾಗೃತರಾಗಿರಿ. ವೈಜ್ಞಾನಿಕ ಕ್ಷೇತ್ರದಲ್ಲಿ ಯಶಸ್ಸು ದೊರೆಯದು. ವಿದೇಶ ಪ್ರಯಾಣದ ಕನಸು ನೆರವೇರದು. ಸುಂದರ ಜೀವನ ಹಾಗೂ ಯಶಸ್ವಿ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆ ಮಾಡುವುದು ಸೂಕ್ತ.

  ಧನು:

  ಧನು:

  ಇಂದು ನಿಮಗೆ ಕೊಂಚ ಕಷ್ಟಕರವಾದ ದಿನ ಎಂದು ಹೇಳಬಹುದು. ಹಲವಾರು ಬಗೆಯ ಸಮಸ್ಯೆ ನಿಮ್ಮನ್ನು ಕಾಡುವುದು. ಆರೋಗ್ಯದ ಸಮಸ್ಯೆ ಹಾಗೂ ದೇಹದ ಆಲಸ್ಯವು ಹೆಚ್ಚು ಪರಿಣಾಮಕಾರಿಯಾಗಿ ತೋರುವುದು. ಬಂಧು ಮಿತ್ರರಿಂದ ಅಸಹಕಾರ ಹಾಗೂ ಜೀವನದಲ್ಲಿ ಕೊಂಚ ಏರು ಪೇರು ಉಂಟಾಗುವುದು. ಆಸ್ತಿಯ ವಿಚಾರವಾಗಿ ಕಲಹ ಉಂಟಾಗುವುದು. ಮಾನಸಿಕ ನೆಮ್ಮದಿ ಹಾಗೂ ಯಶಸ್ವಿ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಆಂಜನೇಯ ಸ್ವಾಮಿಯ ಪೂಜೆ ಮಾಡುವುದು ಉತ್ತಮ.

  ಮಕರ:

  ಮಕರ:

  ಅಂದುಕೊಂಡ ವಿಚಾರವು ಸುಲಭವಾಗಿ ನೆರವೇರದು. ಕೆಲವು ವಿಚಾರಕ್ಕೆ ಅವಮಾನ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆ ಉಂಟಾಗುವುದು. ಹಣಕಾಸಿನ ವಿಚಾರದಲ್ಲಿ ಏರು ಪೇರು. ತಂದೆ ತಾಯಿಯ ನಡುವಿನ ಭಿನ್ನಾಭಿಪ್ರಾಯವು ಮಕ್ಕಳ ಮನಸ್ಸಿಗೆ ಕಿರಿಕಿರಿಯನ್ನುಂಟುಮಾಡುವುದು. ಹಿರಿಯರು ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

  ಕುಂಬ:

  ಕುಂಬ:

  ಬಂಧು ಮಿತ್ರರ ಸಮಾಗಮನವಾಗುವ ಸಾಧ್ಯತೆ ಇದೆ. ನಿಮ್ಮ ನಿರ್ದಿಷ್ಟಗುರಿಯನ್ನು ತಲುಪುವಿರಿ. ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆಯೂ ಇದೆ. ಸ್ತ್ರೀಯರಲ್ಲಿ ಆರೋಗ್ಯ ಸಮಸ್ಯೆಯ ನಿವಾರಣೆಯಾಗುವುದು. ಇಂದು ನೀವು ಸೂರ್ಯನ ಉಪಾಸನೆ ಮಾಡಿದರೆ ಉನ್ನತವಾದ ಸ್ಥಾನಮಾನ ಪಡೆದುಕೊಳ್ಳುವಿರಿ.

  ಮೀನ:

  ಮೀನ:

  ಅಂದುಕೊಂಡ ವಿಚಾರದಲ್ಲಿ ಸಮಾಧಾನ ಹಾಗೂ ನೆಮ್ಮದಿ ದೊರೆಯುವುದು. ಬಂಧು ಮಿತ್ರರ ಸಹಕಾರವು ದೊರೆಯುವುದು. ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುವುದು. ಬಾಲ್ಯರಿಂದ ಹಿಡಿದು ವೃದ್ಧರವರೆಗೂ ಮೀನರಾಶಿಯವರಿಗೆ ಒಳ್ಳೆಯ ಫಲಿತಾಂಶ ದೊರೆಯುವುದು. ಉತ್ತಮ ಬದುಕು ಹಾಗೂ ಯಶಸ್ವಿ ಜೀವನಕ್ಕಾಗಿ ಗಣೇಶನ ಆರಾಧನೆ ಮಾಡುವುದು ಸೂಕ್ತ.

  Read more about: ಭವಿಷ್ಯ
  English summary

  rashi bhavishya november 5th

  rashi bhavishya november 5th
  Story first published: Sunday, November 5, 2017, 7:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more