ಕರ್ನಾಟಕ ರಾಜ್ಯೋತ್ಸದ ದಿನವಾದ ಇಂದು ನಿಮ್ಮ ಭವಿಷ್ಯ ಹೀಗಿದೆ ನೋಡಿ...

By: Divya pandith
Subscribe to Boldsky

ನಮಗೆ ಪ್ರತಿದಿನವೂ, ಪ್ರತಿಗಳಿಗೆಯೂ ಹೊಸ ಹೊಸ ಅನುಭವವನ್ನು ನೀಡುತ್ತದೆ. ಅದೇ ಪ್ರಕೃತಿಯ ವಿಶೇಷ. ನಾವು ಅನುಭವಿಸುವ ಸೋಲು ಗೆಲುವು, ಕಷ್ಟ-ಸುಖ, ನೋವು-ನಲಿವು ಎಲ್ಲವೂ ನಮ್ಮ ಜನ್ಮದ ಘಳಿಗೆ, ನಕ್ಷತ್ರ ಹಾಗೂ ರಾಶಿಯನ್ನು ಅವಲಂಭಿಸಿರುತ್ತದೆ. ನಮ್ಮ ಜಾತಕರದ ಮನೆಯ ಅನುಸಾರ ಗ್ರಹಗಳ ಸಂಚಾರವು ಪ್ರಭಲವಾದ ಪರಿಣಾಮವನ್ನು ಬೀರುತ್ತವೆ. ಇದರ ಅನ್ವಯದಂತೆ ನಿತ್ಯದ ಭವಿಷ್ಯ ಅಡಗಿರುತ್ತದೆ. ನಮ್ಮವರು ತಮ್ಮವರು ಎನ್ನುವವರ ಪ್ರೀತಿ ಸಹಕರಾರ, ವೃತ್ತಿ ಕ್ಷೇತ್ರದ ಜಯಾ ಮತ್ತು ಅಪಜಯಗಳು ಇದರ ಹಿಂದೆಯೇ ಇರುತ್ತದೆ ಎಂದರೆ ತಪ್ಪಾಗಲಾರದು.

ಆಧುನಿಕ ಪ್ರಪಂಚ, ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ವಿಸ್ಮಯಕರ ಪ್ರಗತಿಯ ಹಿನ್ನೆಲೆಯಿಂದ ಅನೇಕರು ಭವಿಷ್ಯ ಜಾತಕ ಎನ್ನುವ ವಿಚಾರ ಎಂದರೆ ಮೂಗು ಮುರಿಯಬಹುದು. ನಮ್ಮ ಭವಿಷ್ಯ ಜನ್ಮಕುಂಡಲಿಗೆ ಅನ್ವಯವಾದ ಗ್ರಹಗತಿಗಳ ಸಂಚಾರ, ದೆಸೆ, ಭುಕ್ತಿಗಳ ಫಲವಾಗಿಯೇ ನಿರ್ಧರಿತವಾಗಿರುತ್ತದೆ. ಹಾಗಾಗಿಯೇ ಎಷ್ಟೇ ಶ್ರೀಮಂತರಾಗಿದ್ದರೂ ವಿವಾಹ ವಾಗದಿರುವುದು, ಕಾರಣವಿಲ್ಲದೆ ಬಂಧು ಬಾಂಧವರಲ್ಲಿ ವೈಮನಸ್ಸು ಉಂಟಾಗುವುದು. ಎಷ್ಟೇ ವಿದ್ಯಾವಂತರು-ಬುದ್ಧಿವಂತರಾಗಿದ್ದರೂ ಕೆಲಸ ಸಿಗದಿರುವುದು ಹೀಗೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದಕ್ಕಾಗಿ ಭವಿಷ್ಯ, ಜಾತಕ ಮತ್ತು ದೇವರು ಎನ್ನುವ ದಿವ್ಯ ಶಕ್ತಿಯ ಬಗ್ಗೆ ನಾವು ನಂಬಲೇ ಬೇಕು.

ನೀವು ದೇವರಲ್ಲಿ ಭಕ್ತಿ, ಜಾತಕದಲ್ಲಿ ನಂಬಿಕೆ ಹಾಗೂ ಭವಿಷ್ಯದಲ್ಲಿ ಭರವಸೆಯನ್ನು ಹೊಂದಿದ್ದೀರಿ, ಕರ್ನಾಟಕ ರಾಜ್ಯೋತ್ಸವಾದ ಈ ಶುಭ ದಿನದಂದು ನಿಮ್ಮ ಗ್ರಹಗತಿಗಳು ಹಾಗೂ ನಕ್ಷತ್ರ ಫಲಗಳು ಯಾವರೀತಿ ಇದೆ? ಎನ್ನುವ ಕುತೂಹಲ ನಿಮ್ಮನ್ನು ಕಾಡುತ್ತಿದ್ದರೆ ಈ ಕೆಳಗೆ ನೀಡಿರುವ ಭವಿಷ್ಯದ ವಿವರಣೆಯನ್ನು ತಿಳಿಯಿರಿ.

ಮೇಷ:

ಮೇಷ:

ನಿಮ್ಮ ಬಯಕೆಯಂತೆಯೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು. ಮನಸ್ಸಿಗೆ ನೆಮ್ಮದಿ ಉಂಟಾಗುವುದು. ವಿಶೇಷ ಲಾಭಾವಂಶಗಳು ಸಹ ಅನಿರೀಕ್ಷಿತವಾಗಿ ನೆರವೇರುವುದು. ಮಾನಸಿಕವಾಗಿ ಇದ್ದ ಅನೇಕ ಗೊಂದಲಗಳು ದೂರವಾಗುವುದು. ನಿಮ್ಮ ಬಂಧು ಬಾಂಧವರು ಹಾಗೂ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ಆಸ್ತಿ ಖರೀದಿಸುವ ಯೋಗವಿದೆ. ಈ ಕುರಿತು ಮಾತು ಕತೆಯನ್ನು ನಡೆಸುವ ಸಾಧ್ಯತೆ ಇದೆ. ಅನೇಕ ದಿನದಿಂದ ಹಣವಿಲ್ಲದೆ ಕೈ ಕಟ್ಟಿದಂತಾದ ಪರಿಸ್ಥಿಯು ಮುಂದು ವರಿಯದು. ಹಣದ ಹರಿವು ಉಂಟಾಗುವುದು. ವಿಧ್ಯಾರ್ಥಿಗಳಿಗೂ ಸಹ ನೆಮ್ಮದಿ ದೊರೆಯುವಂತಹ ಸಮಯ. ಯುವಕರಿಗೆ ಪ್ರೇಮದ ವಿಚಾರವಾಗಿ ವೈಫಲ್ಯ ಉಂಟಾಗುವ ಸಾಧ್ಯತೆ ಇದೆ. ಈ ರಾಶಿಯವರು ಇನ್ನಷ್ಟು ಒಳಿತಿಗಾಗಿ ವಿಷ್ಣುವಿನ ಸ್ಮರಣೆ ಹಾಗೂ ಪೂಜೆಯನ್ನು ಕೈಗೊಳ್ಳಬೇಕು.

ವೃಷಭ:

ವೃಷಭ:

ಆರ್ಥಿಕ ವಲಯದಲ್ಲಿ ಏರು ಪೇರು ಉಂಟಾಗುವುದು, ಸ್ನೇಹಿತರಿಂದ ದ್ರೋಹ ಉಂಟಾಗುವುದು. ವಿಪರೀತ ದಣಿವಿನಿಂದ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು. ಈ ವಿಚಾರವಾಗಿ ಆಸ್ಪತ್ರೆಗೆ ಹೋಗಬೇಕಾಗುವ ಸಂದರ್ಭ ಒದಗಿ ಬರುವುದು. ಖರ್ಚುಗಳು ನಿರೀಕ್ಷೆ ಮೀರಿ ಉಂಟಾಗುವುದು. ಅಪಘಾತ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ದೂರ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡದಿರಿ. ಆದಷ್ಟು ಜಾಗೃತೆ ವಹಿಸಿ. ವೃತ್ತಿ ಕ್ಷೇತ್ರಲ್ಲಿ ಮೇಲಾಧಿಕಾರಿಗಳಿಂದ ತೊಂದರೆ ಉಂಟಾಗುವುದು. ಉತ್ತಮ ಸಮಯ ಹಾಗೂ ಅದೃಷ್ಟಕ್ಕಾಗಿ ವಿಘ್ನ ವಿನಾಶಕನಾದ ಗಣೇಶನನ್ನು ಆರಾಧಿಸಿ.

ಮಿಥುನ:

ಮಿಥುನ:

ಇಷ್ಟು ದಿನಗಳಿಂದ ಅಂದುಕೊಂಡಂತಹ ವಿಚಾರಗಳು ಹಾಗೂ ಬಯಕೆಗಳು ಇಂದು ನೆರವೇರಲಿದೆ. ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು. ಈ ವಿಚಾರವಾಗಿ ಆದಷ್ಟು ಸಾತ್ವಿಕ ಆಹಾರವನ್ನು ಸೇವಿಸಿ. ಜೀರ್ಣಾಂಗ ವ್ಯವಸ್ಥೆಯಿಂದ ತೊಂದರೆ ಕಣಿಸಿಕೊಳ್ಳುವುದರಿಂದ ಮಂಸಹಾರಿ ಪದಾರ್ಥಗಳಿಂದ ದೂರವಿರಿ. ವೃತ್ತಿ ಕ್ಷೇತ್ರದಲ್ಲಿ ಅಲ್ಪ ಮಟ್ಟದ ಲಾಭಾಂಶ ದೊರೆಯುವ ಸಾಧ್ಯತೆ ಇದೆ. ವಿದಾರ್ಥಿಗಳಿಗೆ ಕೆಲವು ವಿಚಾರದ ಕುರಿತು ಗೊಂದಲಗಳು ಉಂಟಾಗುವುದು. ಸಂತೋಷಕರ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ವಿಷ್ಣುವಿನ ಸ್ಮರಣೆ ಹಾಗೂ ಆರಾಧನೆಯನ್ನು ಕೈಗೊಳ್ಳಿ.

ಕರ್ಕ:

ಕರ್ಕ:

ಮಾನಸಿಕವಾಗಿ ನೆಮ್ಮದಿ ಉಂಟಾಗುವುದು. ನೀವು ಮಾಡುತ್ತಿರುವ ಕೆಲಸದಲ್ಲಿ ಸಂತೃಪ್ತಿ ಪಡೆಯುವಿರಿ. ಅಲ್ಲದೆ ಕೆಲಸದಿಂದ ಹಣಕಾಸಿನ ಲಾಭ ಉಂಟಾಗುವುದು. ಮಕ್ಕಳಿಂದ ಹಿಡಿದು ವೃದ್ಧರ ವರೆಗೂಲೆಲ್ಲರಿಗೂ ಅನುಕೂಲದ ಸಮಯ ಹಾಗೂ ಉತ್ತಮ ಸಮಯ ನಿಮ್ಮದಾಗಿರುವುದು. ಮಾನಸಿಕವಾಗಿ ಕೆಲವು ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಇದು ನಿಮಗೆ ಅಪಾಯವನ್ನುಂಟುಮಾಡುವುದು. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಮದುವೆಯ ವಿಚಾರಗಳ ಕುರಿತು ಮಾತು ಕತೆ ನೆರವೇರುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಗಣೇಶ ಹಾಗೂ ವಿಷ್ಣುವಿನ ಆರಾಧನೆಯನ್ನು ಮಾಡಿ.

ಸಿಂಹ:

ಸಿಂಹ:

ಇಷ್ಟು ದಿನದಿಂದ ನೀವು ಅನುಭವಿಸುತ್ತಿರುವ ಮಾನಸಿಕ ಕಿರಿಕಿರಿ ಮುಂದುವರಿಯಲಿದೆ. ದೈಹಿಕವಾಗಿ ಅನಾರೋಗ್ಯ ಹಾಗೂ ಆಲಸ್ಯದ ಪ್ರವೃತ್ತಿ ಉಂಟಾಗುವುದು. ನೀರು ಹಾಗೂ ಸಮುದ್ರ ಕೆಲಸಗಳಲ್ಲಿ ತೊಡಗಿರುವಂತವರಿಗೆ ಕೆಲಸದಲ್ಲಿ ವಿಫಲತೆ ಉಂಟಾಗುವ ಸಾಧ್ಯತೆ ಇದೆ. ಸಹೋದರ ಹಾಗೂ ಸಹೋದರಿಯರಲ್ಲಿ ಜಗಳ ವೈಮನಸ್ಸು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಅಂದುಕೊಂಡ ವಿಚಾರಗಳ ಯಶಸ್ಸಿಗಾಗಿ ಕುಲದೇವರು ಮತ್ತು ಇಷ್ಟ ದೇವರುಗಳ ಜಪ ಮತ್ತು ಆರಾಧನೆಯನ್ನು ಕೈಗೊಳ್ಳಿ.

ಕನ್ಯಾ:

ಕನ್ಯಾ:

ಇಷ್ಟಾರ್ಥಗಳು ನೆರವೇರುವುದರಿಂದ ಮನೆಯಲ್ಲಿ ಖುಷಿ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ಅನುಭವಿಸುವಿರಿ. ಇಷ್ಟು ದಿನ ಬಂಧು ಮಿತ್ರರ ನಡುವೆ ಇದ್ದ ವೈಮನಸ್ಸುಗಳು ಶಮನವಾಗುತ್ತದೆ. ಸಹೋದರಿಯರಿಂದ ಸಹಕಾರ ಸಿಗುವುದು. ಹಣದ ಹರಿವು ಉಂಟಾಗುವುದು. ದಾಂಪತ್ಯದ ಜೀವನದಲ್ಲಿ ಕೊಂಚ ಭಿನ್ನಾಭಿಪ್ರಾಯ ಕಂಡುಬರುವುದು. ಅಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸುವುದು ಸೂಕ್ತ. ಉತ್ತಮ ದಿನ ಹಾಗೂ ಭವಿಷ್ಯಕ್ಕಾಗಿ ವಿಷ್ಣುವಿನ ಆರಾಧನೆಯನ್ನು ಮಾಡಿ.

ತುಲಾ:

ತುಲಾ:

ಈ ರಾಶಿಯವರಿಗೆ ಇದೊಂದು ಅದೃಷ್ಟದ ದಿನ ಎಂದು ಹೇಳಬಹುದು. ಮನೆಯಲ್ಲಿ ಶುಭ ಸುದ್ಧಿಯನ್ನು ಕೇಳುವಿರಿ. ಮಕ್ಕಳಿಂದ ಸದ್ ವರ್ತನೆ ಹಾಗೂ ಶುಭ ಸಮಾಚಾರ ಉಂಟಾಗುವುದು. ಕೆಲಸ ಕ್ಷೇತ್ರದಲ್ಲಿ ಉತ್ತಮ ಪರಿಸ್ಥಿತಿ ಉಂಟಾಗುವುದು. ಇದರೊಟ್ಟಿಗೆ ಅನೇಕ ಶುಭ ವಿಚಾರಗಳನ್ನು ಕೇಳುವಿರಿ ಹಾಗೂ ಅನುಭವಿಸುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಲ್ಲಿ ಅಡೆ ತಡೆ ಕಾಣುವಿರಿ. ದೂರದ ಊರು ಹಾಗೂ ವಿದೇಶ ಪ್ರಯಾಣ ಮಾಡುವ ಹಂಬಲದಲ್ಲಿದ್ದರೆ ಅವು ನೆರವೇರುವುದು. ನಿಮ್ಮ ಉದ್ಯೋಗದಲ್ಲಿಯೂ ಪ್ರಗತಿ ಉಂಟಾಗುವುದು. ಉತ್ತಮ ಭವಿಷ್ಯ ಹಾಗೂ ಸಮಾಧಾನಕ್ಕಾಗಿ ಶಿವನನ್ನು ಆರಾಧಿಸಿ.

ವೃಶ್ಚಿಕ:

ವೃಶ್ಚಿಕ:

ಬಯಸಿದ ವಿಚಾರಗಳು ನೆರವೇರುವ ಸಾಧ್ಯತೆಗಳು ಕಮ್ಮಿ ಎಂದು ಹೇಳಬಹುದು. ಹಾಗಾಗಿ ಕೊಂಚ ಅಸಮಧಾನ ಉಂಟಾಗುವುದು. ಬಂಧು ಮಿತ್ರರಿಂದಲೂ ಕಿರಿ ಕಿರಿ ಉಂಟಾಗುವುದು. ಸ್ನೇಹಿತರೊಂದಿಗೆ ಹಾಗೂ ಬಂಧು ಮಿತ್ರೊಂದಿಗೆ ಆಂತರಿಕ ವಿಚಾರಗಳನ್ನು ಹಂಚಿಕೊಳ್ಳದಿರಿ. ಇದರಿಂದ ನಿಮಗೆ ದ್ರೋಹ ಹಾಗೂ ನೋವು ಉಂಟಾಗುವ ಸಾಧ್ಯತೆ ಇದೆ. ಕಲಾವಿದರಿಗೆ ಸಾಮಾನ್ಯವಾದ ದಿನ ಎಂದು ಹೇಳಬಹುದು. ಇವರು ಒಳಿತಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆಯನ್ನು ಮಾಡಬೇಕು.

ಧನು:

ಧನು:

ಇಷ್ಟು ದಿನದಿಂದ ಅನುಭವಿಸುತ್ತಿರುವ ಕಿರಿಕಿರಿ ಮುಂದುವರಿಯುವುದು. ಕೆಲವು ವಿಚಾರಗಳ ಕುರಿತು ಅನೇಕ ಗೊಂದಲಗಳು ಹಾಗೂ ಬೇಸರದ ಸಂಗತಿಗಳನ್ನು ನೀವು ಅನುಭವಿಸಬೇಕಾಗುವುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತೊಂದರೆ ಉಂಟಾಗಬಹುದು. ಬಂಧು ಮಿತ್ರಿಂದಲೂ ಸಹಕಾರ ದೊರೆಯದು. ಕಬ್ಬಿಣ ಹಾಗೂ ತೈಲಗಳ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ವಿಪರೀತವಾದ ನಷ್ಟವನ್ನು ಅನುಭವಿಸಬೇಕಾಗುವುದು. ಷೇರು ವಹಿವಾಟುಗಳಲ್ಲೂ ಲಾಭ ಉಂಟಾಗದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಬದುಕಿಗಾಗಿ ಶಿವನನ್ನು ಆರಾಧಿಸಿ.

ಮಕರ:

ಮಕರ:

ಇವರು ಶನಿಯ ಕಾಟವನ್ನು ಅನುಭವಿಸುತ್ತಿರುವುದರಿಂದ ಸಮಾಧಾನದ ಬದುಕನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಬಹುದು. ಮಾನಸಿಕ ಬಯಕೆ ಹಾಗೂ ಭಾವನೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಹಾಗೂ ಬಿರುಕು ಉಂಟಾಗುವ ಸಾಧ್ಯತೆ ಇದೆ. ಇಲ್ಲ ಸಲ್ಲದ ಆರೋಪಗಳನ್ನು ನೀವು ಅನುಭವಿಸಬೇಕಾಗುವ ಸಾಧ್ಯತೆಗಳು ಇವೆ. ಉತ್ತಮ ಫಲವನ್ನು ಪಡೆಯಲು ವಿಷ್ಣುವಿನ ಆರಾಧನೆ ಮಾಡಿ.

ಕುಂಬ:

ಕುಂಬ:

ಸಂತೃಪ್ತವಾದ ಜೀವನ ನಿಮ್ಮದಾಗುವುದು. ಜೀವನದಲ್ಲಿ ಸಮಾಧಾನವನ್ನು ಅನುಭವಿಸುವಿರಿ. ಆದಷ್ಟು ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದು ಸೂಕ್ತ. ಮಾನಸಿಕ ಹಾಗೂ ಭಕ್ತಿ ಭಾವಕ್ಕಾಗಿ ಮನೆಯ ಹಿರಿಯರು ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಬಂಧು ಮಿತ್ರರ ಸಹಕಾರ ದೊರೆಯುವುದು. ಆಸ್ತಿಗಳ ಖರೀದಿ ಮಾಡುವಂತಹ ಯೋಗ ಇದೀಗ ನಿಮ್ಮದಾಗಿದೆ. ಉತ್ತಮ ಭವಿಷ್ಯಕ್ಕಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮೀನ:

ಮೀನ:

ಇಷ್ಟು ದಿನ ನೀವು ಅನುಭವಿಸಿದ ಕಷ್ಟಗಳು ದೂರವಾಗುವುದು. ಅನುಭವಿಸಿದ ಅಪಜಯಗಳು ಇದೀಗ ವಿಜಯದ ಪತಾಕೆಯನ್ನು ಹಾರಿಸುವುದು. ನಿಮಗೆ ಇದೀಗ ಸಮಾಧಾನ ಕಾಲ ಎಂದು ಹೇಳಬಹುದು. ನ್ಯಾಯಾಂಗ ಕ್ಷೇತ್ರದಲ್ಲಿ ಜಯ ಲಭಿಸುವುದು. ಪುರುಷರಿಗೆ ವೃತ್ತಿ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನ ಪಡೆದುಕೊಳ್ಳುವ ಲಕ್ಷಣವಿದೆ. ಸ್ತ್ರೀಯರು ಪ್ರಶಂಸೆ ಹಾಗೂ ತವರು ಮನೆಯವರಿಂದ ಪ್ರೀತಿ ಹಾಗೂ ಸಹಕಾರ ದೊರೆಯುವುದು. ವಿದೇಶ ಪ್ರಯಾಣ ಮಾಡಲು ಭಯಸುವವರು ಇಂದು ಕಾರ್ಯದ ಆರಂಭ ಮಾಡಿದರೆ ಒಳ್ಳೆಯದಾಗುವುದು. ಸಂತೋಷದ ಜೀನವಕ್ಕಾಗಿ ವಿಷ್ಣು ಹಾಗೂ ಶಿವನ ಆರಾಧನೆ ಮಾಡಿ.

Read more about: astrology
English summary

ಕರ್ನಾಟಕ ರಾಜ್ಯೋತ್ಸದ ದಿನ ಭವಿಷ್ಯ

Astrology
Subscribe Newsletter