Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಈ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 12 ಬೆರಳುಗಳು!!
ಕೈ ಮತ್ತು ಕಾಲಿನಲ್ಲಿ ಒಟ್ಟು ಎಷ್ಟು ಬೆರಳುಗಳು ಇದೆ ಎಂದು ಕೇಳಿದರೆ ಆಗ ಬರುವ ಉತ್ತರ 20. ಕೆಲವರಿಗೆ ಒಂದು ಬೆರಳು ಹೆಚ್ಚಿಗೆ ಇರುಬಹುದು. ಆದರೆ ಪ್ರತಿಯೊಬ್ಬ ಮಾನವನು ಒಂದೇ ರೀತಿಯಾಗಿರದೆ ಇಲ್ಲದ ಕಾರಣ ಇದು ಸಹಜವೆನ್ನಬಹುದು. ಮಾನವನ ಗುಣಸ್ವಭಾವದಲ್ಲಿ ಬದಲಾವಣೆಗಳು ಇರುವಂತೆ ದೇಹದಲ್ಲಿನ ಅಂಗಾಂಗಗಳಲ್ಲಿಯೂ ಬದಲಾವಣೆಗಳು ಇರುವುದು. ಕೆಲವರಿಗೆ ಅನುವಂಶಿಯವಾಗಿ ದೇಹದಲ್ಲಿನ ಅಂಗಗಳು ಬಂದಿರುವುದು. ಈ ಲೇಖನದಲ್ಲಿ ಹೇಳಲು ಹೊರಟಿರುವುದು ಬ್ರೆಜಿಲ್‌ನ ಒಂದು ಕುಟುಂಬದ ಬಗ್ಗೆ ಇಲ್ಲಿರುವ ಸುಮಾರು 14 ಮಂದಿಯ ಕೈ ಮತ್ತು ಕಾಲಿನಲ್ಲಿ ಕ್ರಮವಾಗಿ 12 ಬೆರಳು ಇದೆ. ಇದು ತುಂಬಾ ವಿಚಿತ್ರವೆಂದು ಕಾಣಿಸುವುದಾದರೂ ಸತ್ಯ. ಈ ವಿಶಿಷ್ಟ ಕುಟುಂಬದ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ...
ಅವರು ಡಿ ಸಿಲ್ವಾ
ಈ ಕುಟುಂಬದ ಹೆಸರು ಡಿ ಸಿಲ್ವಾ ಎಂದು. ಕುಟುಂಬದ ವಿಶೇಷತೆಯೆಂದರೆ ಕುಟುಂಬದ 14 ಮಂದಿ ಸದಸ್ಯರು ಹುಟ್ಟುವಾಗಲೇ 12 ಕೈ ಮತ್ತು ಕಾಲಿನ ಬೆರಳುಗಳನ್ನು ಹೊಂದಿದ್ದಾರೆ.
ಇತ್ತೀಚಿನ ಸೇರ್ಪಡೆ
ಅಗ್ರ ಮಾಧ್ಯಮವೊಂದರಲ್ಲಿ ಬಂದಿರುವ ವರದಿಯ ಪ್ರಕಾರ ಇತ್ತೀಚೆಗೆ ಈ ಕುಟುಂಬದ ಜನಿಸಿದ ಸಣ್ಣ ಮಗುವಿನ ಕೈ ಮತ್ತು ಕಾಲಿನ ಬೆರಳುಗಳು 12. ಅನುವಂಶಿಯವಾಗಿ ಬಂದಿರುವ ಈ ಅಸಹಜತೆಯು ಈಗ ಕುಟುಂಬದ ಗುರುತಾಗಿದೆ. ಅಸಹಜತೆ ಬಗ್ಗೆ ಕುಟುಂಬದ ಯಾವ ಸದಸ್ಯನಿಗೂ ಬೇಸರವಿಲ್ಲ.
ವೈದ್ಯಕೀಯ ಪರಿಸ್ಥಿತಿ
ಈ ಅನುವಂಶೀಯ ಕಾಯಿಲೆಯು 'ಪಾಲಿಡಕ್ಟೈಲಿ' ಎನ್ನುವ ಪರಿಸ್ಥಿತಿಯಾಗಿದೆ. ಸಾವಿರದಲ್ಲಿ ಒಬ್ಬರು ಇಂತಹ ಪರಿಸ್ಥಿತಿಯಲ್ಲಿ ಹುಟ್ಟುವರು ಎಂದು ಅಧ್ಯಯನಗಳು ಹೇಳಿವೆ.
ವೈದ್ಯರ ಮಾತುಗಳು….
ಈ ಪರಿಸ್ಥಿತಿಗೆ ವಿವಿಧ ಪರಿವರ್ತನೆಗಳು ಕಾರಣವಾಗುತ್ತದೆ. ಆದರೆ ಕೈ ಮತ್ತು ಕಾಲಿನಲ್ಲಿ ಹೆಚ್ಚುವರಿ ಬೆರಳು ಪಡೆಯುವುದು ಜಿನ್ ಗಳಲ್ಲಿ ಆಗಿರುವ ಕೆಲವು ಪಲ್ಲಟಗಳನ್ನು ಸೂಚಿಸುವುದು. ಸಾಮಾನ್ಯವಾಗಿ ಇದರಿಂದ ಹೆಚ್ಚುವರಿ ಬೆರಳುಗಳು ಬರುವುದು.
ಮತ್ತಷ್ಟು ಹೇಳುವುದಾದರೆ
ವೈದ್ಯರು ಹೇಳುವ ಪ್ರಕಾರ ನಿಮ್ಮ ತಂದೆ ಅಥವಾ ತಾಯಿಗೆ ಹೆಚ್ಚುವರಿ ಬೆರಳುಗಳಿದ್ದರೆ ನಿಮಗೂ ಹೆಚ್ಚುವರಿ ಬೆರಳು ಬರುವ ಸಾಧ್ಯತೆಯು ಶೇ.50ರಷ್ಟಿರುವುದು.
ಕುಟುಂಬದ ನಂಬಿಕೆ
ಕುಟುಂಬವು ಇದನ್ನು ತುಂಬಾ ಧನಾತ್ಮಕವಾಗಿ ಪರಿಗಣಿಸಿದೆ. ಹೆಚ್ಚುವರಿ ಬೆರಳುಗಳು ಒಂದು ಆಸ್ತಿ ಮತ್ತು ಇದರಿಂದಾಗಿ ಸಾಮಾನ್ಯರಗಿಂತ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಹೇಳಿದೆ. ಈ ಕುಟುಂಬದ ಬಗ್ಗೆ ನಿಮ್ಮ ಅನಿಸಿಕೆಗಳು ಏನಾದರೂ ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯದಿರಿ.