For Quick Alerts
ALLOW NOTIFICATIONS  
For Daily Alerts

ಮೇ ತಿಂಗಳು ಮಿಥುನ ರಾಶಿಯವರ ರಾಶಿ ಭವಿಷ್ಯ

|

ನೀವು ಮಿಥುನ ರಾಶಿಯವರಾಗಿದ್ದರೆ ನಿಮ್ಮ ಮೇ ತಿಂಗಳ ರಾಶಿ ಭವಿಷ್ಯ ಇಲ್ಲಿದೆ. ಈ ತಿಂಗಳಲ್ಲಿ ನಿಮ್ಮ ರಾಶಿ ಭವಿಷ್ಯ ಏನು ಹೇಳುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳಲು ಈ ಅಂಕಣ ಓದಿ...

ರಾಶಿಭವಿಷ್ಯದ ಪ್ರಕಾರ ೨೦೧೮ರ ಮೇ ತಿಂಗಳಲ್ಲಿ ಮಿಥುನ ರಾಶಿಯ ಉತ್ತರಾರ್ಧ ಭಾಗದಲ್ಲಿ ಗ್ರಹಗತಿ ಬಲವಾಗಿರಲಿದೆ. ಅಂದರೆ ಮೇ ೨೧ ರವರೆಗೆ ಈ ಗ್ರಹಗತಿ ಮುಂದುವರಿಯಲಿದೆ. ನಂತರ ರಾಶಿಯ ದಕ್ಷಿಣಾರ್ಧ ಪ್ರಬಲವಾಗಲಿದೆ.

೨೧ರವರೆಗೆ ಜೀವನದ ವೈಯಕ್ತಿಕ ಆಕಾಂಕ್ಷೆಗಳು, ವೃತ್ತಿ ಜೀವನ ಹಾಗೂ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ೨೧ ರ ನಂತರ ಬಲವಾದ ಭಾವನಾತ್ಮಕ ಅಂಶಗಳು ಪ್ರಾಮುಖ್ಯತೆ ಪಡೆಯಲಿವೆ.

 ಮೇ ತಿಂಗಳು ಮಿಥುನ ರಾಶಿಯವರ ರಾಶಿ ಭವಿಷ್ಯ

ಮಿಥುನ ರಾಶಿಯವರು ಸಾಮಾನ್ಯವಾಗಿ ಅತಿ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹೆಸರಾದವರು. ಇದೇ ಕಾರಣದಿಂದ ಈ ರಾಶಿಯವರು ಗುಂಪಿನಲ್ಲಿ ಎದ್ದು ಕಾಣುವ ಮನೋಭಾವ ಹೊಂದಿರುತ್ತಾರೆ. ನೀವು ಮಿಥುನ ರಾಶಿಯವರಾಗಿದ್ದರೆ ನಿಮ್ಮ ರಾಶಿಯ ಮೇ ತಿಂಗಳ ಫಲಾಫಲಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಪ್ರತಿ ತಿಂಗಳು ಪ್ರತಿಯೊಂದು ರಾಶಿಯವರ ಗ್ರಹಗತಿ ಹೇಗಿದೆ ಎಂಬ ಬಗ್ಗೆ ತಿಳಿಸಲು ಓದುಗರಿಗಾಗಿ ಇಡೀ ತಿಂಗಳ ರಾಶಿ ಭವಿಷ್ಯವನ್ನು ನೀಡುತ್ತ ಬಂದಿದ್ದೇವೆ. ಬರುವ ಮೇ ಮಾಸದಲ್ಲಿ ನಿಮ್ಮ ರಾಶಿ ಭವಿಷ್ಯ ಏನು ಹೇಳುತ್ತದೆ ಎಂದು ತಿಳಿಯಲು ಮುಂದೆ ಓದಿ.

ಮೇ ಮಾಸದಲ್ಲಿ ಮಿಥುನ ರಾಶಿಯವರ ಬಗ್ಗೆ ಹೇಳಬೇಕೆಂದರೆ, ನೀವು ಹೊಸ ವಿಚಾರಗಳೊಂದಿಗೆ ನೂತನ ಮಾರ್ಗಗಳ ಬಗ್ಗೆ ಹೆಚ್ಚು ಕೆಲಸ ಮಾಡಲಿದ್ದೀರಿ. ಆದರೆ ನಿಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ ನಿಮಗೆ ನಿರೀಕ್ಷಿತ ಮಟ್ಟದ ಯಶ ದೊರಕದು ಎಂದು ತಿಳಿದು ಬರುತ್ತದೆ. ಯಾಕೆ ಅಂತೀರಾ?

ನಮ್ಮ ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಮೇ ತಿಂಗಳಲ್ಲಿ ನೀವು ನಿಮ್ಮ ಕ್ರಿಯಾಶೀಲತೆಯ ಉತ್ತುಂಗದಲ್ಲಿರಲಿದ್ದೀರಿ. ಖಂಡಿತವಾಗಿಯೂ ಈ ನಿಮ್ಮ ಕ್ರಿಯಾಶೀಲತೆ, ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಯೊಂದರಲ್ಲಿ ನಿಮ್ಮನ್ನು ಪ್ರಮುಖ ಪಾಲುದಾರನನ್ನಾಗಿ ಮಾಡಲಿದೆ. ಅಂದರೆ ಭವಿಷ್ಯದ ದೃಷ್ಟಿಯಿಂದ ಈ ತಿಂಗಳಲ್ಲಿ ಮಹತ್ವದ ತಿರುವು ಸಹ ಸಿಗಬಹುದು.

ಇನ್ನೊಂದು ರೀತಿಯಲ್ಲಿ ನೋಡಿದರೆ, ನಿಮ್ಮ ಯೋಜನೆಗಳು ಕಾರ್ಯಗತವಾಗುವ ಮಟ್ಟ ತಲುಪಿದರೂ ಹೊಸ ಅಡೆತಡೆಗಳನ್ನು ಎದುರಿಸಲು ಸಿದ್ಧವಾಗುವುದು ಕೂಡ ಅವಶ್ಯವಾಗಿದೆ. ಅಂದರೆ ನಿಮಗೆ ಹೊಸ ಅವಕಾಶಗಳಿಗೆ ಕೊರತೆ ಇರಲಾರದು. ಆದರೆ ಅದರ ಜೊತೆಗೆ ಬರುವ ಕೆಲ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಆರೋಗ್ಯ, ದಾಂಪತ್ಯ, ವೃತ್ತಿ ಜೀವನ ಮುಂತಾದುವು ಎಲ್ಲರ ಜೀವನದಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಈ ಎಲ್ಲ ವಿಷಯಗಳ ಬಗ್ಗೆ ರಾಶಿ ಭವಿಷ್ಯ ಏನು ಹೇಳುತ್ತದೆ ಎಂಬ ಕುತೂಹಲ ಸಹಜ. ಒಟ್ಟಾರೆಯಾಗಿ ಮಿಥುನ ರಾಶಿಯವರಿಗೆ ೨೦೧೮ರ ಮೇ ತಿಂಗಳ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ.

ನಿಮ್ಮ ಆರೋಗ್ಯ ಭಾಗ್ಯ

ನಿಮ್ಮ ರಾಶಿ ಭವಿಷ್ಯದ ಪ್ರಕಾರ ಕಳೆದ ಹಲವಾರು ದಿನಗಳಿಂದ ನೀವು ಅನುಭವಿಸುತ್ತಿರುವ ದೀರ್ಘಾವಧಿಯ ಖಿನ್ನತೆ ದೂರವಾಗಲಿದ್ದು, ನೆಮ್ಮದಿಯ ಆಶಾಕಿರಣ ಗೋಚರಿಸಲಿದೆ. ಆದರೆ ಈ ಒಂದು ಉತ್ತಮ ಅಂಶವು ಜೀವನದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವುದು ಅತಿ ಅಗತ್ಯ. ಮತ್ತೆ ಕಳೆದು ಹೋದ ಬೇಡವಾದ ವಿಚಾರಗಳು ಬಾಧಿಸದಂತೆ ಜಾಗೃತಿ ನಿಮ್ಮಲ್ಲಿರಲಿ.

ಎಷ್ಟೇ ಕಾರ್ಯ ಬಾಹುಳ್ಯವಿದ್ದರೂ ಈ ತಿಂಗಳಲ್ಲಿ ವ್ಯಾಯಾಮ ಚಟುವಟಿಕೆಗಳಿಗೆ ಸಾಕಷ್ಟು ಸಮಯ ಮೀಸಲಿಡುವುದು ನಿಮಗೆ ಒಳಿತು ಮಾಡಲಿದೆ. ದೇಹ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ತುಸು ದೈಹಿಕ ದಂಡನೆಯ ವ್ಯಾಯಾಮ ಹೊಸ ಉತ್ಸಾಹ ತರಬಲ್ಲದು.

 ಮೇ ತಿಂಗಳು ಮಿಥುನ ರಾಶಿಯವರ ರಾಶಿ ಭವಿಷ್ಯ

ಆದರೆ ವ್ಯಾಯಾಮ ಮಾಡುವ ನೆಪದಲ್ಲಿ ಅತಿಯಾಗಿ ದೇಹ ದಂಡನೆ ಬೇಡ. ಇದು ಅನಗತ್ಯ ದೈಹಿಕ ಬಳಲಿಕೆಗೆ ಕಾರಣವಾಗದಿರಲಿ. ಇನ್ನು ಈ ತಿಂಗಳಲ್ಲಿ ನಿಮ್ಮ ದೇಹ ನಿಮಗೆ ಹೇಳುವ ಎಚ್ಚರಿಕೆಯ ಸಂದೇಶಗಳನ್ನು ಕಡೆಗಣಿಸಬೇಡಿ. ನಿಮ್ಮ ದೇಹದ ಮಾತನ್ನು ನೀವು ಕೇಳುವುದರಲ್ಲಿ ಸಂಕೋಚ ಬೇಡ.

ನಿಮ್ಮ ವೃತ್ತಿಜೀವನದ ಬಗ್ಗೆ

ಮೇ ತಿಂಗಳು ನಿಮ್ಮ ಪಾಲಿಗೆ ಸಂಪೂರ್ಣ ಚೈತನ್ಯದಾಯಕವಾಗಿರಲಿದ್ದು, ಇದು ನಿಮ್ಮ ಕೆಲಸ, ವ್ಯವಹಾರದ ಮೇಲೆ ಗಮನಹರಿಸಲು ಸಾಕಷ್ಟು ನೆರವಾಗಲಿದೆ. ಈಗಿರುವ ವ್ಯವಹಾರವನ್ನು ಸುಧಾರಿಸಿ ಪುನರ್ಸ್ಥಾಪಿಸುವ ಅಥವಾ ಮತ್ತೆ ಹೊಸದಾಗಿ ವ್ಯವಹಾರ ಆರಂಭಿಸುವ ಅವಕಾಶಗಳು ನಿಮಗೊಲಿಯಲಿವೆ.

ನಿಮ್ಮ ಬಾಗಿಲು ತಟ್ಟಲಿರುವ ಹೊಸ ಅವಕಾಶಗಳ ಬಗ್ಗೆ ಮೈಯೆಲ್ಲ ಕಣ್ಣಾಗಿ ಗಮನಿಸಿ ಅವುಗಳನ್ನು ನಿಮ್ಮದಾಗಿಸಿಕೊಳ್ಳಿ. ಇಷ್ಟಾದರೂ ಬೇರೆಯವರ ಸಹಾಯ ಪಡೆಯುವಾಗ ಕೆಲ ಅಡಚಣೆಗಳು ಇದ್ದೇ ಇರುತ್ತವೆ. ಇದು ನಿಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡಕ್ಕೂ ಅನ್ವಯ ಎಂಬುದು ಗಮನದಲ್ಲಿರಲಿ.

ಸಾಂಗತ್ಯ, ಒಲವು ಹಾಗೂ ಪ್ರೀತಿ

ಈಗಾಗಲೇ ಮದುವೆಯಾಗಿ ಆನಂದದಾಯಕ ದಾಂಪತ್ಯ ಜೀವನ ನಡೆಸುತ್ತಿರುವವರು ಈ ತಿಂಗಳಲ್ಲಿ ಒಂದು ಚಿಕ್ಕ ಅವಧಿಯ ಹನಿಮೂನ್ ಟೂರ್ ಮಾಡುವುದು ಚೇತೋಹಾರಿ ಆಗಲಿದೆ. ಸದಾ ಕೆಲಸದ ಒತ್ತಡ ಹಾಗೂ ಕೌಟುಂಬಿಕ ಜವಾಬ್ದಾರಿಗಳಿಂದ ಕೂಡಿದ ಏಕತಾನತೆ ಹೋಗಲಾಡಿಸಲು ಇದು ಸಹಾಯಕ.

ಮಕ್ಕಳಿದ್ದರೆ ಅವರನ್ನು ಹಿರಿಯರೊಂದಿಗೆ ಖುಷಿಯಾಗಿ ಆಟವಾಡಲು ಬಿಟ್ಟು ದಂಪತಿಗಳಿಬ್ಬರೇ ಹನಿಮೂನ್ ಟೂರ್ ಹೋಗಿ ಏಕಾಂತದ ಕ್ಷಣಗಳಲ್ಲಿ ಮೈಮರೆಯಿರಿ. ಒಂದು ಚಿಕ್ಕ ಹನಿಮೂನ್ ಪ್ರವಾಸ ಮತ್ತೆ ನಿಮ್ಮ ಜೀವನದಲ್ಲಿ ಹೊಸ ಶಕ್ತಿ, ಚೈತನ್ಯ ತರಬಲ್ಲದು. ಇನ್ನು ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರು ಇದೇ ತಿಂಗಳಲ್ಲಿ ಅದಕ್ಕಾಗಿ ಪ್ರಯತ್ನಿಸುವುದು ಹೆಚ್ಚು ಫಲಕಾರಿ.

ನಿಮ್ಮ ಶುಭ ಸಂಖ್ಯೆ ಹಾಗೂ ಬಣ್ಣಗಳು

ಮಿಥುನ ರಾಶಿಯವರಿಗೆ ಮೇ ತಿಂಗಳಲ್ಲಿ ೫ ಮತ್ತು ೬ ಅದೃಷ್ಟ ಸಂಖ್ಯೆಗಳಾಗಿವೆ. ಅದೇ ರೀತಿ ಕೂಡಿಸಿದರೆ ೯ ಉತ್ತರ ಬರುವ ಸಂಖ್ಯೆಗಳು ಸಹ ಅದೃಷ್ಟ ತರಲಿವೆ. ಉದಾ: ೧೪, ೨೩, ೩೨ ಮುಂತಾದುವು.

ಶುಭ ದಿನಾಂಕಗಳು : ೫, ೧೪, ೨೩

ಅದೃಷ್ಟ ಬಣ್ಣಗಳು : ಹಸಿರು, ಹಳದಿ ಹಾಗೂ ಕಿತ್ತಳೆ.

ಮಿಥುನ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ ನೋಡಿದರೆ ದೀರ್ಘಾವಧಿಯ ಆರೋಗ್ಯ ಸಮಸ್ಯೆ ದೂರವಾಗಿ, ನೆಮ್ಮದಿ ಸಿಗಲಿದೆ. ಜೊತೆಗೆ ತುಸು ಕಷ್ಟವಾದರೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ಕೊಂಚ ಪ್ರಮಾಣದಲ್ಲಿ ಎದುರಾಗುವ ಕಷ್ಟಗಳನ್ನು ಜಯಿಸಿದರೆ ಯಶಸ್ಸು ಸುಲಭ. ಹಾಗೆಯೇ ಸಂಗಾತಿಯ ಜೊತೆಗೆ ಕೆಲ ಮಧುರ ಕ್ಷಣಗಳನ್ನು ಆನಂದಿಸಿದರೆ ಹೊಸ ಹುರುಪು ಖಂಡಿತ.

ಇನ್ನುಳಿದ ರಾಶಿಯವರು ತಮ್ಮ ತಿಂಗಳ ರಾಶಿ ಭವಿಷ್ಯ ಏನು ಹೇಳುತ್ತದೆ ಎಂಬುದನ್ನು ನೋಡಲು ನಮ್ಮ ರಾಶಿಭವಿಷ್ಯ ವಿಭಾಗವನ್ನು ನೋಡಿ. ಪ್ರತಿ ತಿಂಗಳು ಸಮಗ್ರವಾಗಿ ಪ್ರತಿ ರಾಶಿ ಆಧಾರಿತ ಭವಿಷ್ಯವನ್ನು ನಾವು ನಮ್ಮ ಓದುಗರಿಗಾಗಿ ರಾಶಿ ಭವಿಷ್ಯ ವಿಭಾಗದಲ್ಲಿ ಪ್ರಕಟಿಸುತ್ತಿದ್ದೇವೆ.

English summary

ಮೇ ತಿಂಗಳು ಮಿಥುನ ರಾಶಿಯವರ ರಾಶಿ ಭವಿಷ್ಯ

Gemini individuals are known to be hyperactive and this is something that lets their personality stand out in a crowd. If you belong to this sign, then you need to know about your predictions.
Story first published: Tuesday, May 1, 2018, 9:06 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more