ಶನಿ ದೋಷವಿದ್ದಲ್ಲಿ, ಹನುಮಂತನನ್ನು ನೆನೆಯಿರಿ, ಸಂಕಷ್ಟ ಪರಿಹಾರವಾಗುವುದು

By: Jaya subramanya
Subscribe to Boldsky

ನವಗ್ರಹಗಳಲ್ಲಿ ಶನಿದೇವರಿಗೆ ವಿಶೇಷವಾದ ಶಕ್ತಿ ಇದ್ದು ಶನಿಯ ಪರಿಣಾಮದಿಂದ ನಮ್ಮೆಲ್ಲರ ಜೀವನದಲ್ಲಿ ಬದಲಾವಣೆಗಳು ಉಂಟಾಗುತ್ತಲೇ ಇರುತ್ತದೆ. ಶನಿ ದೋಷ, ಶನಿ ದೆಸೆ ಮೊದಲಾದವುಗಳು ಸಂಭವಿಸುವಂತಹದ್ದು ಶನಿಯ ಪ್ರಭಾವದಿಂದಲೇ ಆಗಿದೆ. ನಮ್ಮ ಜನ್ಮರಾಶಿಯಲ್ಲಿ ಶನಿಯ ಸ್ಥಾನದಿಂದ ನಮ್ಮ ಜೀವನದಲ್ಲಿ ಉಂಟಾಗುವ ಎಲ್ಲಾ ಪರಿಣಾಮಗಳೂ ಅವಲಂಬಿತವಾಗಿರುತ್ತವೆ.

ಆದರೆ ನಿಮ್ಮ ಜೀವನದಲ್ಲಿ ಶನಿಯ ಪ್ರಭಾವದಿಂದ ಬಹಳಷ್ಟು ನೋವುಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಅದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹನುಮನನ್ನು ಧ್ಯಾನಿಸುವುದರಿಂದ ಶನಿಯ ವಕ್ರದೃಷ್ಟಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. 

Lord Hanuman

ಸಂಕಟದಿಂದ ರಕ್ಷಿಸುವ ಹನುಮನನ್ನು ನೆನೆಯುವುದರಿಂದ ಎಲ್ಲಾ ಸಂಕಟವೂ ದೂರವಾಗಲಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹನುಮನು ನಮ್ಮ ಹುಲುಮಾನವರ ಜೀವನದಲ್ಲಿ ಉಂಟಾಗು ಶನಿ ದೋಷವನ್ನು ಹೇಗೆ ಪರಿಹರಿಸುತ್ತಾನೆ ಎಂಬುದನ್ನು ದೃಷ್ಟಾಂತಗಳ ಮೂಲಕ ನಾವಿಲ್ಲಿ ತಿಳಿಸುತ್ತಿದ್ದೇವೆ.   ಮದುವೆಯಾಗದ ಸ್ತ್ರೀಯರು ಹನುಮಂತನನ್ನು ಪೂಜಿಸಬಹುದೇ?

ಶನಿ ಮತ್ತು ಹನುಮ ದೇವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸೂರ್ಯನ ಮಗನಾಗಿರುವ ಶನಿ ದೇವರು, ಅಂತೆಯೇ ಅವರುಗಳು ಕಣ್ಣಲ್ಲಿ ಕಣ್ಣಿಟ್ಟು ಕೂಡ ನೋಡುವುದಿಲ್ಲ. ಅಂತಹ ವಾಗ್ವಾದವೊಂದು ತಂದೆ ಮತ್ತು ಪುತ್ರನಲ್ಲಿ ಉಂಟಾಗಿದೆ. ಅಂತೆಯೇ ಸೂರ್ಯ ಭಗವಾನರ ಶಿಷ್ಯನಾಗಿದ್ದರೆ ಹನುಮಂತ.

ಸಣ್ಣ ಮಗುವಾಗಿದ್ದಾಗ ಹನುಮಂತನು ಸೂರ್ಯನನ್ನು ನೋಡಿ ಅದು ಹಣ್ಣೆಂದು ಭಾವಿಸಿ ಅದನ್ನು ಸೇವಿಸಲು ಧಾವಿಸುತ್ತಾರೆ. ಈ ಸಂದರ್ಭದಲ್ಲಿ ಭಯದಿಂದ ಸೂರ್ಯನು ಇಂದ್ರನನ್ನು ಸಮೀಪಿಸುತ್ತಾರೆ. ಇಂದ್ರನು ಸಣ್ಣ ಬಾಲಕ ಹನುಮನನ್ನು ತಮ್ಮ ವಜ್ರಾಯುಧದಿಂದ ಹೊಡೆಯುತ್ತಾರೆ. ಇದು ಮಗುವಿನ ಮುಖವನ್ನು ಘಾಸಿಗೊಳಿಸುತ್ತದೆ. ಇದರಿಂದಾಗಿಯೇ ಹನುಮಂತ ಎಂಬ ಹೆಸರು ಆಂಜನೇಯನಿಗೆ ಬಂದಿದೆ. 

Lord Hanuman

ಶಕ್ತಿವಂತನಾದ ಹನುಮಂತನು ದಯೆಯಿಂದ ಸೂರ್ಯನನ್ನು ತನ್ನ ಶಿಷ್ಯನಾಗಿ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾರೆ. ಸೂರ್ಯನು ತಾನು ಹೆಚ್ಚು ಕಾರ್ಯನಿರತನಾಗಿದ್ದು ಪ್ರತೀ ದಿನವೂ ಆಕಾಶದಲ್ಲಿ ಸಂಚರಿಸಬೇಕಾಗಿದೆ ಈಗ ಸಮಯವಿಲ್ಲ ಎಂದು ನುಡಿಯುತ್ತಾರೆ. ಇದಕ್ಕೆ ಪರಿಹಾರವಾಗಿ ಸೂರ್ಯನನ್ನು ಹಿಂಬಾಲಿಸಲು ಆರಂಭಿಸುತ್ತಾರೆ. ಸೂರ್ಯನಿಂದ ಪ್ರತಿಯೊಂದನ್ನೂ ಹನುಮನು ಕಲಿತುಕೊಳ್ಳುತ್ತಾರೆ. ಅದಾಗ್ಯೂ ಶನಿ ಮತ್ತು ಹನುಮನು ವಿಭಿನ್ನ ವರ್ಗದವರಾಗಿದ್ದು ವಿಭಿನ್ನ ಸ್ವಭಾವದವರಾಗಿದ್ದರೂ ಶನಿಯು ಹನುಮನಿಗೆ ವರವನ್ನು ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಕಥೆ ಇಲ್ಲಿದೆ.    ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಸೂರ್ಯನಿಂದ ಹನುಮನು ಶಿಕ್ಷಣವನ್ನು ಪಡೆದುಕೊಂಡ ನಂತರ ಗುರುದಕ್ಷಿಣೆಯಾಗಿ ಏನು ಬೇಕು ಎಂದು ಕೇಳುತ್ತಾರೆ. ಸೂರ್ಯನು ಏನೂ ಬೇಡವೆಂದೂ ಹೇಳಿದರೂ ಹನುಮನು ಸೂರ್ಯನಲ್ಲಿ ವಿನಂತಿಸಿಕೊಳ್ಳುತ್ತಾರೆ. ಅದರಂತೆಯೇ ಶನಿದೇವರನ್ನು ವಧಿಸುವಂತೆ ಹನುಮನಿಗೆ ಸೂರ್ಯನು ಆಣತಿಯನ್ನು ನೀಡುತ್ತಾರೆ. 

Lord Shani

ಶನಿ ಮತ್ತು ಹನುಮನಿಗೆ ಯುದ್ಧವಾಗುತ್ತದೆ. ಶನಿಯು ಹನುಮನ ಮೇಲೇರಿ ಶಕ್ತಿಯನ್ನು ಕುಗ್ಗಿಸುವಂತೆ ಮಾಡುತ್ತಾರೆ. ಆದರೆ ಹನುಮನಿಗೆ ಇದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಹನುಮನು ತಮ್ಮ ಗಾತ್ರವನ್ನು ಹಿರಿದಾಗಿಸುತ್ತಾರೆ ಮತ್ತು ಛಾವಣಿಯ ಗಾತ್ರಕ್ಕೆ ಬೆಳೆಯುತ್ತಾರೆ. ಇದರಿಂದ ಶನಿಗೆ ನೋವು ಉಂಟಾಗುತ್ತದೆ. ಹನುಮನಲ್ಲಿ ಶನಿಯು ವಿನಮ್ರನಾಗಿ ವಿನಂತಿಸಿಕೊಳ್ಳುತ್ತಾರೆ ಮತ್ತು ಹನುಮನನ್ನು ಪ್ರಾರ್ಥನೆ ಮಾಡಿದರೆ ಶನಿ ದೋಷವು ನಿವಾರಣೆಯಾಗುತ್ತದೆ ಎಂಬುದಾಗಿ ವರವನ್ನು ನೀಡುತ್ತಾರೆ.

ಹನುಮನಿಂದ ಶನಿಯ ರಕ್ಷಣೆ

ರಾವಣನ ಮಗನಾದ ಮೇಘನಾದ ತನ್ನ ಜನ್ಮ ಕುಂಡಲಿಯಲ್ಲಿ ಯಾವುದೇ ಗ್ರಹಗಳು ಇರಬಾರದೆಂಬುದಾಗಿ ಬಯಸುತ್ತಾನೆ ಇದಕ್ಕಾಗಿ ಎಲ್ಲಾ ಗ್ರಹಗಳನ್ನು ಆತ ಅಡಗಿಸುತ್ತಾನೆ ಮತ್ತು ಖೈದಿಗಳನ್ನಾಗಿ ಮಾಡಿಕೊಳ್ಳುತ್ತಾನೆ. ಕಿಟಕಿಯೇ ಇಲ್ಲದ ಕೋಣೆಯಲ್ಲಿ ಶನಿಯನ್ನು ಮೇಘನಾದ ಬಂಧಿಸುತ್ತಾನೆ. ಇದರಿಂದ ಯಾರ ಮುಖವನ್ನೂ ಶನಿಗೆ ನೋಡಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳ ಬಳಿಕ ಹನುಮನು ಲಂಕೆಗೆ ಸೀತೆಯನ್ನು ಅರಸಿಕೊಂಡು ಬರುತ್ತಾರೆ.   ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಇಡಿಯ ನಗರವನ್ನೇ ಹನುಮನು ಸುಟ್ಟಾಗ ಶನಿ ಮತ್ತು ಇತರ ಗ್ರಹಗಳು ಬಂಧನದಿಂದ ವಿಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಶನಿಯು ಹನುಮನ್ನು ನೋಡಿದುದರಿಂದ ಹನುಮನಿಗೆ ಶನಿದೆಸೆ ಆರಂಭವಾಗುತ್ತದೆ. ಶನಿಯು ಹೇಳುತ್ತಾರೆ ತಮ್ಮ ಪರಿಣಾಮದಿಂದಾಗಿ ಹನುಮಂತನಿಗೆ ಪತ್ನಿ ಮತ್ತು ಬಂಧುಮಿತ್ರರ ವಿಯೋಗ ಉಂಟಾಗುತ್ತದೆ ಎಂದು. ಆದರೆ ಹನುಮನಿಗೆ ಇದು ಪರಿಣಾಮವನ್ನು ಬೀರುವುದಿಲ್ಲ ಏಕೆಂದರೆ ಹನುಮನಿಗೆ ಪತ್ನಿ ಇರುವುದಿಲ್ಲ.  

Lord Shani

ಶನಿಯು ಹನುಮನ ಶಿರವನ್ನೇರಿ ಕುಳಿತುಕೊಳ್ಳುತ್ತಾರೆ ಆದರೆ ಲಂಕೆಯಲ್ಲಿ ಯುದ್ಧ ಮಾಡಲು ಶನಿಯು ತಮ್ಮ ಶಿರವನ್ನೇ ಬಳಸಿಕೊಳ್ಳುತ್ತಾರೆ. ತಮ್ಮ ಶಿರದಲ್ಲಿ ಮರವನ್ನು ಬಂಡೆಗಳನ್ನು ಇರಿಸಿಕೊಂಡು ಹನುಮಂತನು ಯುದ್ಧದಲ್ಲಿ ಕಾದಾಡುತ್ತಾರೆ. ಇದರಿಂದ ಶನಿಯು ನೋವನ್ನು ಅನುಭವಿಸುತ್ತಾರೆ. ಶನಿಯು ಹನುಮನ ಶಿರದಿಂದ ಇಳಿದು ಹನುಮನಿಗೆ ವರವನ್ನು ನೀಡಿ ಅನುಗ್ರಹಿಸುತ್ತಾರೆ.

ಈ ಸಂದರ್ಭದಲ್ಲಿ ಶನಿಯು ಮೈಕೈನೋವಿನಿಂದ ಬಳಲುತ್ತಾರೆ. ಅದಕ್ಕಾಗಿಯೇ ಶನಿ ದೋಷ ನಿವಾರಣೆಯಾಗಲು ಭಕ್ತರು ಶನಿಗೆ ಎಳ್ಳೆಣ್ಣೆ ಮತ್ತು ಎಳ್ಳನ್ನು ನೀಡುತ್ತಾರೆ. ಇದು ಶನಿಯ ನೋವನ್ನು ಪರಿಹರಿಸುತ್ತದೆ ಮತ್ತು ಇದರಿಂದ ಸಂಪ್ರೀತಗೊಂಡು ಭಗವಂತನು ಅವರ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದಾಗಿದೆ.

English summary

Why Worshipping Hanuman Prevents The Effects Of Shani

It is common knowledge that if one has ill effects of Shani in his birth charts, all he needs to do is to pray to Lord Hanuman. Lord Hanuman is called Sankat Mochan because he relieves his devotes from all kinds of 'sankat', which is translated to troubles or problems. There are many stories that explain why Shani does not trouble the devotees of Lord Hanuman.
Subscribe Newsletter