Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮದುವೆಯಾಗದ ಸ್ತ್ರೀಯರು ಹನುಮಂತನನ್ನು ಪೂಜಿಸಬಹುದೇ?
ಹನುಮಂತನನ್ನು ವಿಶ್ವದೆಲ್ಲೆಡೆಯಲ್ಲಿ ಪೂಜಿಸಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲೂ ಮದುವೆಯಾಗದೆ ಇರುವ ಮಹಿಳೆಯರು ಹನುಮಂತನನ್ನು ಪೂಜಿಸುವುದು ಮತ್ತು ಹನುಮಾನ್ ಚಾಲೀಸ್ ಪಠಣ ಮಾಡುವುದು ನಿಷಿದ್ಧವಿದೆ, ಆದರೆ ಪಾಲಿಸುವವರು ತುಂಬಾ ಕಡಿಮೆ....
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಅದೇ ರೀತಿ ಅವರವರ ಇಷ್ಟಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುತ್ತಾರೆ. ಇನ್ನು ಕೆಲವು ದೇವರು ಆಯಾಯ ಜಾತಿಗೆ ಅನುಗುಣವಾಗಿ ಪೂಜಿಸಲ್ಪಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಶಿವ ಹಾಗೂ ದೇವಿಯ ಭಕ್ತರಿದ್ದರೆ ಉತ್ತರ ಭಾರತದಲ್ಲಿ ವಿಷ್ಣುವಿನ ಭಕ್ತರಿದ್ದಾರೆ. ಇನ್ನು ಕೆಲವು ದೇವರನ್ನು ಬ್ರಹ್ಮಚಾರಿಗಳು ಮತ್ತು ಗಂಡಸರು ಮಾತ್ರ ಪೂಜಿಸಬಹುದು ಎನ್ನುವ ನಿಯಮಿದೆ. ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!

ಅಂತಹ ದೇವರಲ್ಲಿ ವಾಯುಪುತ್ರ ಆಜಂನೇಯ. ಹನುಮಂತನನ್ನು ವಿಶ್ವದೆಲ್ಲೆಡೆಯಲ್ಲಿ ಪೂಜಿಸಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲೂ ಮದುವೆಯಾಗದೆ ಇರುವ ಮಹಿಳೆಯರು ಹನುಮಂತನನ್ನು ಪೂಜಿಸುವುದು ಮತ್ತು ಹನುಮಾನ್ ಚಾಲೀಸ್ ಪಠಣ ಮಾಡುವುದು ನಿಷಿದ್ಧ. ನಿಯಮಗಳು ಏನೇ ಇದ್ದರೂ ಇಂದಿನ ಆಧುನಿಕ ಯುಗದಲ್ಲಿ ಅದನ್ನು ಪಾಲಿಸುವವರು ತುಂಬಾ ಕಡಿಮೆ.
ಇದೇ ಕಾರಣದಿಂದಾಗಿ ಮದುವೆಯಾಗದೆ ಇರುವ ಹುಡುಗಿಯರು ಇಂದಿನ ದಿನಗಳಲ್ಲಿ ಆಂಜನೇಯ ದೇವಾಲಯಗಳಿಗೆ ಹೋಗಿ ಅಲ್ಲಿ ಪಾರ್ಥಿಸುವುದನ್ನು ಕಾಣಬಹುದು. ತುಂಬಾ ಶಕ್ತಿಶಾಲಿ ಹಾಗೂ ಪ್ರಭಾವಶಾಲಿಯೆಂದು ಪರಿಗಣಿಸಲಾಗಿರುವ ಹನುಮಾನ್ ಚಾಲೀಸವನ್ನು ಪಠಣ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕೇ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಪೂಜಿಸುವ ಕೆಲವೊಂದು ಸತ್ಯಗಳ ಬಗ್ಗೆ ನಾವಿಲ್ಲಿ ತಿಳಿಸಿಕೊಡಲಿದ್ದೇವೆ. ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ
ಹನುಮಂತನ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷಿದ್ಧ ಯಾಕೆ?
ಪುರಾಣಗಳ ಪ್ರಕಾರ ಹನುಮಂತ ದೇವರು ಬ್ರಹ್ಮಚಾರಿ. ಮದುವೆಯಾಗದೆ ಇರುವವರು ಮತ್ತು ಜೀವನಪೂರ್ತಿ ಬ್ರಹ್ಮಚಾರಿಗಳಾಗಿ ಉಳಿಯಲು ಬಯಸುವವರು ಹನುಮಂತ ದೇವರನ್ನು ಪೂಜಿಸುತ್ತಾರೆ. ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ
ಮಹಿಳೆಯರು ಹನುಮಂತ ದೇವರನ್ನು ಪೂಜಿಸಬಹುದೇ?
ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಮದುವೆಯಾಗದೆ ಇರುವ ಮಹಿಳೆಯರು ಹನುಮಂತ ದೇವಾಲಯಕ್ಕೆ ಭೇಟಿ ನೀಡಬಹುದು.
ಆದರೆ ಈ ಹುಡುಗಿಯರು ದೇವಾಲಯದಲ್ಲಿ ಸ್ಥಾಪಿತವಾಗಿರುವ ಮೂರ್ತಿಯನ್ನು ಮುಟ್ಟಬಾರದು. ಹನುಮಂತ ಬಾಲಬ್ರಹ್ಮಚಾರಿಯಾಗಿರುವ ಕಾರಣದಿಂದಾಗಿ ಹುಡುಗಿಯರು ಆತನನ್ನು ಪೂಜಿಸಬಾರದು ಎಂದು ಹೆಚ್ಚಿನವರು ಹೇಳುತ್ತಾರೆ. ಅದೇನೇ ಇದ್ದರೂ ಮಹಿಳೆಯರು ಕೂಡ ಹನುಮಂತನನ್ನು ಪೂಜಿಸುತ್ತಾರೆ ಮತ್ತು ಹನುಮಾನ್ ಚಾಲೀಸನ್ನು ಪಠಿಸುತ್ತಾರೆ. ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಹನುಮಾನ್ ಮಂತ್ರ
ಹನುಮಾನ್ ಚಾಲೀಸವನ್ನು ಪಠಿಸುವ ಪ್ರಾಮುಖ್ಯತೆ
ಹನುಮಾನ್ ಚಾಲೀಸವನ್ನು ಲಿಂಗಭೇದವಿಲ್ಲದೆ ಯಾರು ಬೇಕಿದ್ದರೂ ಪಠಿಸಬಹುದು. ರಾಶಿಯಲ್ಲಿ ಸಾಡೇಸಾತಿ ಇರುವ ವ್ಯಕ್ತಿಗಳು ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅದರಿಂದ ಮುಕ್ತಿಯನ್ನು ಪಡೆಯಬಹುದು.
ಹನುಮಂತನನ್ನು ಮಹಿಳೆಯರು ಪೂಜಿಸಬಹುದೇ ಎನ್ನುವ ನಿಮ್ಮ ಗೊಂದಲಕ್ಕೆ ಪರಿಹಾರ ಸಿಕ್ಕಿದೆ ಎಂದು ನಾವು ಅಂದುಕೊಂಡಿದ್ದೇವೆ. ಲಿಂಗಭೇದ ಮರೆತು ಹನುಮಂತನನ್ನು ಪ್ರತಿಯೊಬ್ಬರೂ ಪೂಜಿಸಬಹುದು. ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?



Click it and Unblock the Notifications




