Just In
- 5 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 7 hrs ago
ಭಾನುವಾರದ ದಿನ ಭವಿಷ್ಯ (08-12-2019)
- 23 hrs ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
ರಾಮನಗರ; ಮಾವಿನ ತೋಪಿನಲ್ಲಿ ರೇವ್ ಪಾರ್ಟಿ, 10 ಜನರ ಬಂಧನ
- Automobiles
ಸಿಎನ್ಜಿ ಬಸ್ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ
- Sports
ಕ್ರಿಕೆಟ್, ಸೆಕ್ಸ್ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್ಗಳು ವೈರಲ್!
- Movies
ಅಂಬರೀಶ್ - ಸುಮಲತಾ 28ನೇ ವಿವಾಹ ವಾರ್ಷಿಕೋತ್ಸವ
- Technology
ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರ ನೆರವಿಗಿದೆ 'ಸುರಕ್ಷಾ ಆಪ್'!.ಆಪ್ ಹೀಗೆ ಬಳಸಿ!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಜ್ಯೋತಿಷಿಗಳನ್ನು ಭೇಟಿಯಾದವರಿಗೆ ಅವರು ಹೇಳುವ ಮಾಹಿತಿಗಳಲ್ಲಿ ಕೆಲವು ವಾಕ್ಯಗಳು ಸಾಮಾನ್ಯವಾಗಿ ಪುನರಾವರ್ತನೆಯಾಗುತ್ತವೆ. ಅದು ಯಾವುದೆಂದರೆ "ನಿಮ್ಮ ಗ್ರಹಗತಿಯಲ್ಲಿ ಶನಿ ಭಾರಿಯಾಗಿದೆ, ಇದು ಶನಿದೆಸೆ" ಎಂಬುದು. ಹಿಂದೂ ಸಂಪ್ರದಾಯದಲ್ಲಿ ಶನಿಯ ಪ್ರಭಾವ ಸಾಡೆ ಸಾತಿ ಅಥವಾ ಏಳುವರೆ ವರ್ಷಗಳ ಕಾಲ ದೋಷಗಳನ್ನು ತರುತ್ತದೆ ಎಂದು ನಂಬಲಾಗಿದೆ.
ಅಂದರೆ ಈ ಏಳೂವರೆ ವರ್ಷದ ಅವಧಿಯಲ್ಲಿ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ಈ ಅವಧಿಯಲ್ಲಿ ಒತ್ತಡ, ಸೋಮಾರಿತನ, ಆರೋಗ್ಯ ಸಂಬಂಧಿ ತೊಂದರೆಗಳು ಮತ್ತು ವೃತ್ತಿಜೀವನದಲ್ಲಿ ಬಹಳಷ್ಟು ತೊಡಕುಗಳು ಎದುರಾಗುತ್ತವೆ. ಈ ತೊಂದರೆ ಅಥವಾ ದೋಷದಿಂದ ಮುಕ್ತಿಗೊಳ್ಳಲು ಜ್ಯೋತಿಷಿಗಳು ಹಲವು ಪರಿಹಾರಗಳನ್ನು ಸೂಚಿಸುತ್ತಾರೆ. ಇದರಲ್ಲಿ ಪ್ರಮುಖವಾದುದು ಶನಿದೇವನನ್ನು ಒಲಿಸಿಕೊಳ್ಳುವ ಪ್ರಯತ್ನ.
ಇದರ ಪ್ರಯೋಗ ಶನಿದೇವರನ್ನು ಸಾಸಿವೆ ಎಣ್ಣೆಯಲ್ಲಿ ಸ್ನಾನ ಅಥವಾ ಅಭ್ಯಂಜನ ಮಾಡಿಸುವ ಪೂಜೆ ಪ್ರಮುಖವಾಗಿದೆ. ಆದರೆ ಹೆಚ್ಚಿನವರಿಗೆ ಇದರ ಮಹತ್ವ ಅಥವಾ ಕಾರಣವೇನೆಂದು ಗೊತ್ತಿಲ್ಲ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಹಿಂದೂ ಮಹಾಗ್ರಂಥ ರಾಮಾಯಣದ ಸೇತುವೆ
ಹಿಂದೂ ಮಹಾಗ್ರಂಥ ರಾಮಾಯಣದ ಪ್ರಕಾರ ರಾಮನ ವಾನರ ಸೇನೆ ರಾಮೇಶ್ವರಂನಿಂದ ಲಂಕೆಯವರೆಗೆ ಸೇತುವೆಯನ್ನು ನಿರ್ಮಿಸಿದಾಗ ಈ ಸೇತುವೆಯ ಸುರಕ್ಷತೆಯ ಹೊಣೆಯನ್ನು ಹನುಮಂತ ವಹಿಸಿದ್ದ. ವೈರಿಗಳು ಇದನ್ನು ಹಾಳುಗೆಡವದಂತೆ ಕಣ್ಣಿಟ್ಟು ಕಾವಲು ಕಾಯುತ್ತಿದ್ದ.

ಹನುಮಂತನಿಗೆ ಸವಾಲೆಸೆದ ಶನಿದೇವ
ಒಂದು ದಿನ ಹನುಮಂತ ಮರದ ಕೆಳಗೆ ಕುಳಿತು ರಾಮದೇವನಿಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವಾಗ ಶನಿದೇವ ಅಲ್ಲಿ ಪ್ರತ್ಯಕ್ಷನಾಗಿ ಹೇಳಿದ "ಈ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ನಾನೇ. ಆದರೆ ನೀನೂ ಸಹಾ ಪ್ರಬಲನೆಂದು ಕೇಳಲ್ಪಟ್ಟೆ. ನಿನ್ನ ಪರಾಕ್ರಮ ಎಷ್ಟು ಎಂದು ನನಗೆ ತಿಳಿಯಬೇಕಿದೆ, ಬಾ, ಕಣ್ಣು ತೆರೆದು ನನ್ನೊಂದಿಗೆ ಯುದ್ದ ಮಾಡು" ಎಂದು ಸವಾಲೆಸೆದ.

ತಪಸ್ಸಿನಿಂದ ವಿಮುಖನಾಗದ ಹನುಮಂತ
ಶನಿದೇವನ ಸವಾಲಿಗೆ ಒಂದಿನಿತೂ ವಿಚಲಿತನಾಗದ ಹನುಮಂತ ಕಣ್ಣುಗಳನ್ನು ತೆರೆದು ಈ ರೀತಿಯಾಗಿ ಉತ್ತರಿಸಿದ: "ಈಗ ನಾನು ನನ್ನ ಇಷ್ಟದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಈ ಹೊತ್ತಿನಲ್ಲಿ ನನ್ನನ್ನು ಚಂಚಲಗೊಳಿಸಬೇಡ, ನನ್ನನ್ನು ಒಂಟಿಯಾಗಿ ಪ್ರಾರ್ಥಿಸಲು ಬಿಡು"

ಸಿಟ್ಟಿಗೆದ್ದ ಹನುಮಂತ
ಆದರೆ ಇದಕ್ಕೆ ಮಣಿಯದ ಶನಿದೇವ ಮತ್ತೆ ಮತ್ತೆ ಹನುಮಂತನನ್ನು ಯುದ್ಧಕ್ಕೆ ಬರುವಂತೆ ಕಾಡತೊಡಗುತ್ತಾನೆ. ಆಗ ತಾಳ್ಮೆ ಕಳೆದುಕೊಂಡ ಹನುಮಂತ ತನ್ನ ಬಾಲದಿಂದ ಶನಿದೇವನ ಶರೀರವನ್ನು ಸುತ್ತುವರೆದು ನಿಧಾನವಾಗಿ ಒತ್ತಡ ಹೆಚ್ಚಿಸಲು ತೊಡಗುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಿಟ್ಟಿಗೆದ್ದ ಹನುಮಂತ
ಇದರಿಂದ ಬಿಡಿಸಿಕೊಳ್ಳಲು ಶನಿದೇವ ಎಷ್ಟು ಪ್ರಯತ್ನಿಸಿದರೂ ಬಾಲದ ಒತ್ತಡ ಹೆಚ್ಚುತ್ತಲೇ ಹೋಗುತ್ತಿತ್ತು. ತನ್ನ ಬಾಲದಿಂದಲೇ ಶನಿದೇವನನ್ನು ಎತ್ತಿ ಅಲುಗಾಡಿಸಿದಾಗ ಲಂಕೆಯ ಸೇತುವೆಗೆ ಶನಿದೇವನ ಶರೀರ ಸೇತುವೆಗೆ ತಾಗಿ ರಕ್ತ ಹರಿಯಲು ಪ್ರಾರಂಭವಾಗುತ್ತದೆ.

ಸೋಲೊಪ್ಪಿಕೊಂಡು ಹನುಮಂತನಲ್ಲಿ ದಯಾಭಿಕ್ಷೆ ಯಾಚಿಸಿದ ಶನಿದೇವ
ನೋವು ತಾಳಲಾರದ ಶನಿದೇವ ಸೋಲೊಪ್ಪಿಕೊಂಡು ಹನುಮಂತನಲ್ಲಿ ದಯಾಭಿಕ್ಷೆ ಯಾಚಿಸಲು ತೊಡಗಿದ. "ದಯವಿಟ್ಟು ನನ್ನನ್ನು ಬಿಡುಗಡೆ ಮಾಡು, ನಾನೆಂದಿಗೂ ಈ ತಪ್ಪನ್ನು ಮತ್ತೊಮ್ಮೆ ಮಾಡಲಾರೆ" ಎಂದು ಅಂಗಲಾಚಿದ. ಅದಕ್ಕೆ ಉತ್ತರಿಸಿದ ಹನುಮಂತ "ಇನ್ನು ಮುಂದೆ ಎಂದಿಗೂ ನೀನು ರಾಮನ ಯಾವುದೇ ಭಕ್ತನಿಗೆ ತೊಂದರೆ ಮಾಡಲಾರೆ ಎಂದು ಭರವಸೆ ನೀಡಿದರೆ ಮಾತ್ರ ಬಿಡುಗಡೆ ಮಾಡುವೆ" ಎಂದ. ನೋವು ತಾಳಲಾರದೇ ಶನಿದೇವ ಹೀಗೆ ಉತ್ತರಿಸಿದ: "ಹಾಗೆಯೇ ಆಗಲಿ, ಇನ್ನು ಮೇಲೆ ನಾನೆಂದೂ ನಿನ್ನ ಅಥವಾ ರಾಮನ ಭಕ್ತರಿಗೆ ಯಾವುದೇ ತೊಂದರೆ ನೀಡಲಾರೆ, ಅವರ ವಿಧಿಯನ್ನು ಬದಲಿಸಲಾರೆ"
courtesy -ThangamuthuRaja

ನೋವಿನ ಶಮನಕ್ಕೆ ಎಣ್ಣೆ ಬೇಡಿದ ಶನಿದೇವ
ಶನಿದೇವನ ಮಾತಿಗೆ ಒಪ್ಪಿ ತನ್ನ ಬಂಧನದಿಂದ ಶನಿದೇವನನ್ನು ಹನುಮಂತ ಬಿಡುಗಡೆ ಮಾಡಿದ. ಬಳಿಕ ಶನಿದೇವ ತನ್ನ ಶರೀರದ ನೋವನ್ನು ಕಡಿಮೆಗೊಳಿಸಲು ಹನುಮಂತನಲ್ಲಿ ಈ ರೀತಿಯಾಗಿ ಬೇಡಿದ: "ಈ ನೋವನ್ನು ಶಮನಗೊಳಿಸಲು ನನಗೆ ಯಾವುದಾದರೂ ಎಣ್ಣೆ ನೀಡುವೆಯಾ"? ಇದಕ್ಕೆ ಒಪ್ಪಿದ ಹನುಮಂತ ನೋವನ್ನು ಕಡಿಮೆಗೊಳಿಸುವ ಎಣ್ಣೆಯನ್ನು ನೀಡಿದ. ಈ ಎಣ್ಣೆಯನ್ನು ಹಚ್ಚಿದ ಬಳಿಕ ಶನಿದೇವನ ನೋವು ಕಡಿಮೆಯಾಯಿತು.

ಶನಿದೇವನ ನೋವು ಕಡಿಮೆ ಮಾಡಿದ ಎಣ್ಣೆ
ಅಂದಿನಿಂದ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯ ಪ್ರಾರಂಭವಾಯಿತು. ಇದು ಎಲ್ಲಾ ನೋವುಗಳನ್ನು ಕಡಿಮೆಮಾಡುವ ಒಂದು ಸಂಕೇತವಾಗಿದೆ. ತೊಂದರೆಗಳಿಗೆ ಕಾರಣನಾಗುವ ಶನಿದೇವನಿಗೆ ಎಣ್ಣೆ ಅರ್ಪಿಸುವ ಮೂಲಕ ಶನಿದೇವ ತನ್ನ ನೋವನ್ನು ಕಡಿಮೆ ಮಾಡಿಕೊಂಡು ಎಣ್ಣೆ ಅರ್ಪಿಸಿದ ಭಕ್ತರ ತೊಂದರೆಯನ್ನೂ ಕಡಿಮೆ ಮಾಡುತ್ತಾನೆ ಎಂದು ನಂಬಲಾಗುತ್ತದೆ.
Courtesy - Vaikoovery

ಶನಿದೇವನಿಗೆ ಯಾವ ಎಣ್ಣೆ ಅರ್ಪಿಸುವುದು?
ಧರ್ಮಗ್ರಂಥಗಳ ಪ್ರಕಾರ ಶನಿದೇವನಿಗೆ ಅರ್ಪಿಸಲು ಸಾಸಿವೆ ಎಣ್ಣೆ ಸೂಕ್ತವಾಗಿದೆ. ಇದನ್ನು ಅರ್ಪಿಸಲು ಶನಿದೇವನ ದಿನವಾದ ಶನಿವಾರವೇ ಅತ್ಯಂತ ಸೂಕ್ತವಾದ ದಿನವಾಗಿದ್ದು ಅಂದು ಸೂರ್ಯ ಹುಟ್ಟುವ ಮೊದಲೇ ಅರಳಿ ಮರದ ಬಳಿ ಧಾವಿಸಿ ಯಾವುದಾದರೊಂದು ರೆಂಬೆಯ ಮೇಲೆ ಎಣ್ಣೆಯನ್ನು ಸುರಿದು ಅರ್ಪಿಸಬೇಕು. ಸಾಸಿವೆ ಎಣ್ಣೆ ಲಭ್ಯವಿಲ್ಲದಿದ್ದರೆ ಕರಿಎಳ್ಳಿನ ಎಣ್ಣೆಯನ್ನೂ ಅರ್ಪಿಸಬಹುದು.

ಶನಿದೇವರಿಗೆ ಬಡವರೇ ಪ್ರಿಯರು
ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದೆಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.

ಹನುಮಂತನನ್ನು ಆರಾಧಿಸಿ
ಶನಿದೇವನ ಪ್ರಭಾವದಿಂದ ಹೊರಬರಲು ಹನುಮಂತನನ್ನು ಆರಾಧಿಸುವುದು ಇನ್ನೊಂದು ವಿಧಾನವಾಗಿದೆ. ರಾಮಾಯಣದ ಪ್ರಕಾರ ರಾವಣದ ಬಿಗಿಮುಷ್ಠಿಯಲ್ಲಿ ಸಿಲುಕಿದ್ದ ಶನಿದೇವನನ್ನು ಹನುಮಂತ ರಕ್ಷಿಸಿದ್ದ. ಈ ಉಪಕಾರವನ್ನು ತೀರಿಸಲು ಹನುಮಂತನ ಭಕ್ತರಿಗೆ ತೊಂದರೆ ನೀಡದಿರುವ ಶನಿದೇವ ಒಪ್ಪಿಕೊಂಡ. ಆದ್ದರಿಂದ ಶನಿಯ ಪ್ರಭಾವವಿರುವವರು ಹನುಮಂತನನ್ನು ಪ್ರಾರ್ಥಿಸುವ ಮೂಲಕ ತೊಂದರೆಯಿಂದ ಹೊರಬರಲು ಸಾಧ್ಯವಿದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಕಪ್ಪು ಬಟ್ಟೆಯನ್ನು ಧರಿಸಿ
ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು. ಆದ್ದರಿಂದ ಶನಿವಾರದಂದು ಕಪ್ಪುಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೊತೆಗೇ, ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ.

ಮದ್ಯಪಾನದಿಂದ ದೂರವಿರಿ
ಶನಿದೇವನನ್ನು ಒಲಿಸಿಕೊಳ್ಳಲು ಮದ್ಯಪಾನದ ವರ್ಜನೆ ಅಗತ್ಯ. ಏಕೆಂದರೆ ಶನಿ ಓರ್ವ ನ್ಯಾಯದೇವತೆಯೂ ಆಗಿದ್ದಾನೆ. ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ಮಾಂಸಸೇವನೆ ಮೊದಲಾದವು ಶನಿದೇವನಿಗೆ ಕೋಪ ತರಿಸುತ್ತದೆ. ಆದ್ದರಿಂದ ಈ ಎಲ್ಲಾ ದುರಭ್ಯಾಸಗಳನ್ನು ತ್ಯಜಿಸುವುದರಿಂದ, ಅದರಲ್ಲೂ ವಿಶೇಷವಾಗಿ ಸಾಡೆಸಾತಿಯ ಅವಧಿಯಲ್ಲಿ ಅನುಸರಿಸುವ ಮೂಲಕ ಶೀಘ್ರವಾಗಿ ತೊಂದರೆಯಿಂದ ಪಾರಾಗಬಹುದು.
Coutesy - Singhmanroop

ಪ್ರಾಮಾಣಿಕರಾಗಿರಿ
ನಿಮ್ಮ ಜೀವನದಲ್ಲಿ ಪ್ರಾಮಾಣಿಕರಾಗಿರುವುದು, ಲಂಚ ನೀಡದಿರುವುದು, ಯಾರಿಗೂ ತೊಂದರೆ ಅಥವಾ ನೋವು ನೀಡದಿರುವುದು ಸಾಡೆಸಾತಿಯ ಅವಧಿಯಲ್ಲಿ ಅವಶ್ಯವಾಗಿದೆ.
Courtesy- Jeeteshroxx