For Quick Alerts
ALLOW NOTIFICATIONS  
For Daily Alerts

ಕುಂಭಕರ್ಣನಿಗೆ ಅಂದು ದೊರೆತ ವಿಚಿತ್ರ ವರ-'ನಿದ್ರಾಸನ'!

By Jaya subramanaya
|

ಅತಿ ಹೆಚ್ಚು ನಿದ್ದೆ ಮಾಡುವವರನ್ನು ಕುಂಭಕರ್ಣನಿಗೆ ಹೋಲಿಸುವುದನ್ನು ನೀವು ಕೇಳಿರುತ್ತೀರಿ ಅಲ್ಲವೇ? ರಾಮಾಯಣದಲ್ಲಿ ಬರುವ ಕುಂಭಕರ್ಣ ನಿದ್ದೆ ಪ್ರಿಯ ಆರು ತಿಂಗಳು ನಿದ್ದೆ, ಆರು ತಿಂಗಳು ಎಚ್ಚರ ಇದು ಕುಂಭಕರ್ಣನ ದಿನಚರಿ. ಆರು ತಿಂಗಳ ನಿದ್ದೆಯ ನಂತರ ಎಚ್ಚರಗೊಳ್ಳುವ ಈ ರಕ್ಕಸನಿಗೆ ಭಯಂಕರ ಹಸಿವು ಕಾಡುತ್ತದಂತೆ ಆಗ ಸಿಕ್ಕಿದ್ದನ್ನೆಲ್ಲಾ ಒಮ್ಮೆಲೇ ತಿಂದುಬಿಡುತ್ತಾನೆ ಎಂಬುದಾಗಿ ಹೇಳುತ್ತಾರೆ.

ಆದರೆ ಕುಂಭಕರ್ಣ ಆರು ತಿಂಗಳ ಕಾಲ ನಿದ್ದೆ ಮಾಡುವ ಅಭ್ಯಾಸವನ್ನಾದರೂ ರೂಢಿಸಿಕೊಂಡಿದ್ದಾದರೂ ಏಕೆ ಎಂಬುದು ನಿಮ್ಮನ್ನು ಕಾಡುತ್ತಿರಬಹುದು. ಇದರ ಹಿಂದೆ ಒಂದು ಸಣ್ಣ ಕಥೆಯೇ ಇದ್ದು ಇಂದಿನ ಲೇಖನದಲ್ಲಿ ಆ ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ರಾವಣನ ಸಹೋದರನಾಗಿದ್ದ ಕುಂಭಕರ್ಣ ಕೊಂಚ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

ತನ್ನ ಅಣ್ಣ ರಾಮನೊಂದಿಗೆ ಯುದ್ಧ ಮಾಡುವುದನ್ನು ಸಾಕಷ್ಟು ತಡೆಯಲು ಯತ್ನಿಸಿದ್ದ ಅದಾಗ್ಯೂ ಅಣ್ಣನ ಮೇಲಿನ ವ್ಯಾಮೋಹದಿಂದ ರಾಮನೊಂದಿಗೆ ಯುದ್ಧ ಮಾಡಲು ನಿಂತನು. ಕೆಳಗಿನ ಸ್ಲೈಡರ್‎ಗಳಲ್ಲಿ ಕುಂಭಕರ್ಣ ಆರು ತಿಂಗಳು ನಿದ್ದೆ ಮತ್ತು ಆರು ತಿಂಗಳು ಎಚ್ಚರವಾಗಿರುವುದು ಏಕೆ ಎಂಬುದನ್ನು ತಿಳಿಸಲಿರುವೆವು, ಮುಂದೆ ಓದಿ..

ಇಂದ್ರ

ಇಂದ್ರ

ದೇವತೆಗಳ ನಾಯಕನಾಗಿರುವ ಇಂದ್ರನು, ಕುಂಭಕರ್ಣನು ಹೆಚ್ಚು ಬುದ್ಧಿವಂತ ಮತ್ತು ಧೈರ್ಯಶಾಲಿ ಎಂಬ ಕಾರಣಕ್ಕೆ ಆತನ ಮೇಲೆ ಅಸೂಯೆಗೊಂಡಿದ್ದನು. ಕುಂಭಕರ್ಣನ ಮೇಲೆ ಹಗೆ ತೀರಿಸಿಕೊಳ್ಳಲು ತಕ್ಕ ಸಮಯಕ್ಕಾಗಿ ಇಂದ್ರನು ಕಾಯುತ್ತಿದ್ದನು.

ಯಜ್ಞ ಮತ್ತು ಯಾಗ

ಯಜ್ಞ ಮತ್ತು ಯಾಗ

ಬ್ರಹ್ಮನನ್ನು ಒಲಿಸಿಕೊಳ್ಳುವುದಕ್ಕಾಗಿ ಮೂರೂ ಜನ ಸಹೋದರರಾದ ರಾವಣ, ಕುಂಭಕರ್ಣ ಮತ್ತು ವಿಭೀಷಣ ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದರು.

ವರ ಅಥವಾ ಶಾಪ

ವರ ಅಥವಾ ಶಾಪ

ಬ್ರಹ್ಮನು ಅವರುಗಳ ಪ್ರಾರ್ಥನೆಗೆ ಒಲಿದಾಗ, ಕುಂಭಕರ್ಣನಲ್ಲಿ ಏನು ವರಬೇಕೆಂದು ಕೇಳುತ್ತಾನೆ. ಎಲ್ಲಾ ಸಹೋದರರು ಸಂತಸಗೊಳ್ಳುತ್ತಾರೆ ಮತ್ತು ಇಂದ್ರನ ಕುಟಿಲತೆಯಿಂದಾಗಿ ಇಂದ್ರಾಸನ ಎಂಬುದಾಗಿ ಕೇಳುವ ಬದಲಾಗಿ ಕುಂಭಕರ್ಣನು ನಿದ್ರಾಸನ ಎಂದು ಕೇಳುತ್ತಾನೆ.

ಗೊಂದಲಗೊಂಡ ಕುಂಭಕರ್ಣ

ಗೊಂದಲಗೊಂಡ ಕುಂಭಕರ್ಣ

ಇಂದ್ರಾಸನದ ಬದಲಿಗೆ ನಿದ್ರಾಸನ ಎಂಬುದಾಗಿ ಕೇಳಿಕೊಂಡ ಕುಂಭಕರ್ಣನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅದನ್ನು ಸರಿಪಡಿಸಿಕೊಳ್ಳುವ ಮುನ್ನವೇ ಬ್ರಹ್ಮನು ಅಸ್ತು ಎಂಬುದಾಗಿ ನುಡಿಯುತ್ತಾನೆ. ಕುಂಭಕರ್ಣ ಕೇಳಿಕೊಂಡಿರುವ ವರ ಸಫಲಗೊಳ್ಳುತ್ತದೆ. ಅದಾಗ್ಯೂ ಕುಂಭಕರ್ಣನು ಬ್ರಹ್ಮನನ್ನು ಬೇಡಿಕೊಂಡರೂ ಸಮಯ ಮೀರಿ ಹೋಗಿರುತ್ತದೆ.

 ಇಂದ್ರನ ಕುಟಿಲತೆ

ಇಂದ್ರನ ಕುಟಿಲತೆ

ಕುಂಭಕರ್ಣನ ಮೇಲೆ ಅಸೂಯೆಯನ್ನು ಹೊಂದಿದ್ದ ಇಂದ್ರನು ಸರಸ್ವತಿಯನ್ನು ಪ್ರಾರ್ಥಿಸಿಕೊಂಡು ಕುಂಭಕರ್ಣನ ಬಾಯಿಯಲ್ಲಿ ಇಂದ್ರಾಸನದ ಬದಲಿಗೆ ನಿದ್ರಾಸನವನ್ನು ಉಚ್ಛರಿಸುವಂತೆ ಮಾಡಿದ್ದನು.

ಕುಂಭಕರ್ಣನ ನಿದ್ದೆ

ಕುಂಭಕರ್ಣನ ನಿದ್ದೆ

ಹೀಗೆ ಆರು ತಿಂಗಳು ನಿದ್ದೆ ಮತ್ತು ಆರು ತಿಂಗಳು ಎಚ್ಚರ ಎಂಬ ವರವನ್ನು ಪಡೆದುಕೊಳ್ಳುವ ಕುಂಭಕರ್ಣನು ನಿದ್ದೆಯಿಂದ ಎಚ್ಚೆತ್ತ ಒಡನೆಯೇ ಹಸಿವನ್ನು ತೀರಿಸಿಕೊಳ್ಳಲು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾನೆ.

English summary

Why Kumbhakarna Slept For 6 Months?

We all have heard about a character called 'kumbhakarna' in Ramayana who used to sleep for six months and for rest of the six months he would remain awake eating anything and everything that he found.However, do you know the reasons why Kumbhakarna used to sleep for six months continously? Well, we shall brief you about this story today.
X
Desktop Bottom Promotion