For Quick Alerts
ALLOW NOTIFICATIONS  
For Daily Alerts

ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಏಕೆ ಕರೆಯುತ್ತಾರೆ?

By Deepu
|

ಹಿಂದೂ ಧರ್ಮದಲ್ಲಿ ರಾಮನಿಗೆ ಮಹತ್ವದ ಸ್ಥಾನವಿದ್ದು ಅವರನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗಿದೆ. ವಿಷ್ಣುವಿನ ಹತ್ತನೆಯ ಅವತಾರವಾಗಿ ರಾಮನನ್ನು ಕೊಂಡಾಡುತ್ತಾರೆ. ರಾಮಾಯಣದ ಕಥೆಯನ್ನು ಆಲಿಸಿಕೊಂಡು ಬೆಳೆದು ಬಂದವರು ನಾವಾಗಿರುವುದರಿಂದ ಜೀವನದಲ್ಲಿನ ಮಹತ್ವದ ಅಂಶಗಳನ್ನು ನಾವು ರಾಮಾಯಣದಿಂದ ಅರಿತಿದ್ದೇವೆ. ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಪ್ರಜೆಗಳ ಪಾಲನೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದ ರಾಮನು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದಾರೆ. ದೇವರೇ ಆಗಿದ್ದರೂ ಮನುಷ್ಯನಾಗಿ ಎಲ್ಲಾ ಕಷ್ಟಗಳನ್ನು ಅವರು ಅನುಭವಿಸಿದ್ದರು. ಧರ್ಮ ಮಾರ್ಗದಲ್ಲಿ ಪರಿಪಾಲನೆಯನ್ನು ನಡೆಸಿದ್ದರು.

ರಾಮನ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿದ್ದ ಜನರು ಸುಖಿಗಳಾಗಿದ್ದರು. ಎಲ್ಲಿಯೂ ಕಳ್ಳತನ, ಮೋಸ, ವಂಚನೆ, ಹಸಿವಿನ ಚಿಂತೆ ಇರಲಿಲ್ಲ. ಎಲ್ಲಾ ಪ್ರಜೆಗಳು ಸುಖದಿಂದ ಬಾಳುತ್ತಿದ್ದರು. ರಾಮನ ಉದಾತ್ತ ಆದರ್ಶಗಳನ್ನು ಅವರು ನಂಬಿದ್ದರು. ಅಂತೂ ರಾಮ ರಾಜ್ಯ ಸುಖೀ ರಾಜ್ಯ ಎಂದು ಕರೆಯಬಹುದು.

Lord Rama

ಮರ್ಯಾದಾ ಪುರುಷೋತ್ತಮ ಅರ್ಥವೇನು

ಮರ್ಯಾದಾ ಪುರುಷೋತ್ತಮ ಎಂಬುದು ಸಂಸ್ಕೃತ ಪದವಾಗಿದ್ದು ಇದು ಮರ್ಯಾದೆ ಮತ್ತು ಗೌರವದ ಸಂಕೇತವಾಗಿದೆ ಹಾಗೂ ಪುರುಷೋತ್ತಮ ಎಂದರೆ ಅದ್ಭುತ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಉತ್ತಮ ಗೌರವವನ್ನು ಹೊಂದಿರುವವರು ಇಲ್ಲವೇ ಪಾತ್ರರಾಗಿರುವವರು ಎಂಬುದಾಗಿ ಮರ್ಯಾದಾ ಪುರುಷೋತ್ತಮ ಅರ್ಥವನ್ನು ನೀಡುತ್ತದೆ. ಆತ ಉತ್ತಮ ಪುರುಷನಾಗಿದ್ದು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆದವರಾಗಿದ್ದಾರೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.

ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಏಕೆ ಕರೆಯಲಾಗುತ್ತದೆ?

ಇಂದಿಗೂ ರಾಮನ ಭಕ್ತರಿಗೆ ರಾಮನೆಂದರೆ ಅಚ್ಚುಮೆಚ್ಚು. ಅವರ ಆದರ್ಶಗಳನ್ನು ಇಂದಿಗೂ ಭಕ್ತರು ಅನುಸರಿಸುತ್ತಿದ್ದಾರೆ. ತಮ್ಮ ಕುಟುಂಬದಲ್ಲಿ ಮತ್ತು ರಾಜ್ಯದಲ್ಲಿ ರಾಮನಿಗೆ ವಿಶೇಷವಾದ ಸ್ಥಾನವಿದೆ. ತನ್ನ ಜೀವನದ ಪ್ರತಿಯೊಂದು ಕಾರ್ಯವನ್ನು ಇವರು ಪರಿಪೂರ್ಣತೆಯಿಂದ ನಿರ್ವಹಿಸಿದ್ದಾರೆ. ಅವರೊಬ್ಬರು ಉತ್ತಮ ನಿದರ್ಶನ ಎಂದೆನಿಸಿದ್ದಾರೆ.

ಪುತ್ರನಾಗಿ ರಾಮ

ಸಂಪ್ರದಾಯದ ಪ್ರಕಾರ ತನ್ನ ಪೂರ್ವಜರಿಂದ ಬಂದ ಅಧಿಕಾರ ಯಾವಾಗಲೂ ಹಿರಿಯ ಪುತ್ರನಿಗೆ ಲಭ್ಯವಾಗುತ್ತದೆ. ಆದರೆ ತನ್ನ ಸಹೋದರ ಭರತನಿಗೆ ಪಟ್ಟಾಭಿಷೇಕವನ್ನು ಮಾಡುವ ನಿರ್ಧಾರವನ್ನು ರಾಮನು ತಾಳಿ ಧೃತರಾಷ್ಟ್ರನ ಎರಡನೆಯ ಪತ್ನಿ ಕೈಕೇಯಿ ರಾಮನನ್ನು ವನವಾಸಕ್ಕೆ ಹೋಗಲು ಹೇಳಿದಾಗ ಅದನ್ನು ತನ್ನ ಪತ್ನಿ ಮತ್ತು ಸಹೋದರ ಲಕ್ಷ್ಮಣನೊಂದಿಗೆ ನಗುನಗುತ್ತಲೇ ಸ್ವೀಕರಿಸುತ್ತಾರೆ. ದೃತರಾಷ್ಟ್ರ ತನ್ನ ಪತ್ನಿ ಕೈಕೇಯಿಗೆ ನೀಡಿದ ಮೂರು ವರದಲ್ಲಿ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸುವ ಮಾತು ಕೂಡ ಇತ್ತು. ಕೊಟ್ಟ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿದ್ದ ದಶರಥ ಪುತ್ರನನ್ನು ವನವಾಸಕ್ಕೆ ಕಳುಹಿಸುವ ಇಚ್ಛೆ ಇಲ್ಲದಿದ್ದರೂ ಪತ್ನಿಗೆ ಕೊಟ್ಟ ಮಾತಿಗಾಗಿ ಕಳುಹಿಸಬೇಕಾಗುತ್ತದೆ. ತನ್ನ ತಂದೆತಾಯಿ ಮಾತನ್ನು ಆತ ನಡೆಸಿಕೊಡುತ್ತಾರೆ.

ಅಣ್ಣನಂತೆ ರಾಮ

ರಾಮನು ಮೂವರು ಸಹೋದರರನ್ನು ಹೊಂದಿದ್ದರು ಭರತ, ಶತ್ರುಘ್ನ, ಲಕ್ಷ್ಮಣ. ಇವರೂ ಮೂವರೂ ರಾಮನಿಗೆಹೆಚ್ಚಿನ ಬೆಲೆಯನ್ನು ನೀಡುತ್ತಿದ್ದರು. ಆದರವನ್ನು ಮಾಡುತ್ತಿದ್ದರು. ಭರತನು ಅಣ್ಣನ ಪರವಾಗಿ ರಾಜ್ಯವನ್ನು ಆಳುತ್ತಿದ್ದರೂ ರಾಮನ ನಿಯಮಗಳನ್ನು ಅನುಸರಿಸಿಕೊಂಡು ರಾಜ್ಯಭಾರವನ್ನು ಮಾಡಿದ್ದರು. ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇರಿಸಿಕೊಂಡು ಅವರು ರಾಜ್ಯಭಾರವನ್ನು ಮಾಡಿದರು.

ಪತಿಯಾಗಿ ರಾಮ

ಪ್ರಜಾಪಾಲನೆಯಲ್ಲಿ ರಾಮ ನಿರತರಾಗಿದ್ದರೂ, ಹಲವಾರು ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದರೂ ರಾಮನು ತನ್ನ ಪತ್ನಿ ಸೀತೆಯ ಕಾಳಜಿಯನ್ನು ನಡೆಸುತ್ತಿದ್ದರು. ತಾನು ಇಲ್ಲದೇ ಇದ್ದಾಗ ಮನೆಯಿಂದ ಹೊರಗೆ ಬರಬಾರದು ಎಂಬುದಾಗಿ ಕಟ್ಟಪ್ಪಣೆಯನ್ನು ಮಾಡಿ, ಪತ್ನಿಯ ಬಯಕೆಯಾದ ಚಿನ್ನದ ಜಿಂಕೆಯ ಬೆನ್ನಟ್ಟಿ ರಾಮನು ಹೋಗಿದ್ದರು. ಲಕ್ಷ್ಮಣನು ಎಳೆದಿದ್ದ ರೇಖೆಯನ್ನು ದಾಟಿ ಸೀತಾ ಮಾತೆಯು ರಾವಣನ ಅಪಹರಣಕ್ಕೆ ಒಳಗಾಗಿದ್ದರು.

ಶ್ರೀರಾಮಚಂದ್ರನ ಮನಗೆದ್ದ ಶಬರಿ

ಬೇಡರ ಕುಟು೦ಬವೊ೦ದರಲ್ಲಿ ಜನಿಸಿದ ಶಬರಿಯು, ರಾಮನ ಕುರಿತಾದ ತನ್ನ ನಿಷ್ಕಳ೦ಕ ಭಕ್ತಿಭಾವದ ಮೂಲಕ ಪ್ರಭು ಶ್ರೀ ರಾಮಚ೦ದ್ರನ ಪಾದಪದ್ಮಗಳಲ್ಲಿ ಲೀನವಾದ ಕಥೆಯು ರಾಮಾಯಣದ ಭಾಗವಾಗಿದ್ದು, ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರಿಗೆ ದಾರಿದೀಪವಾಗಿದೆ. ಹೌದು ತನ್ನ ನಿಷ್ಕಲ್ಮಶ ಮನಸ್ಸಿನಿ೦ದ, ಪರಿಶುದ್ಧವಾದ ಭಕ್ತಿಭಾವದಿ೦ದ, ಪ್ರಾಮಾಣಿಕ ಭಕ್ತಿಭಾವದಿಂದಲೇ, ಶ್ರೀರಾಮಚಂದ್ರನ ಮನಗೆದ್ದ ಶಬರಿಯ ಕಥೆ, ಮನುಕುಲದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದೆ.

ರಾಜನಾಗಿ ರಾಮ

ಎಲ್ಲಕ್ಕಿಂತ ಹೆಚ್ಚಾಗಿ ರಾಮನು ಪ್ರಜಾಪಾಲಕನಾಗಿದ್ದ. ಅವರ ರಾಜ್ಯಾಭಾರದಲ್ಲಿ ಕಳ್ಳತನ, ದರೋಡೆ, ಹಸಿವೆಯಿಂದ ಜನ ಬಳಲುತ್ತಿರಲಿಲ್ಲ. ತನ್ನ ವನವಾಸದ ಬಳಿಕ ಅಯೋಧ್ಯೆಗೆ ಮರಳಿ ರಾಜ್ಯಾಭಾರವನ್ನು ನಡೆಸಿದ ರಾಮನ ನಿರ್ಧಾರ ಮತ್ತು ಆಡಳಿತ ಪಾರದರ್ಶಕವಾಗಿತ್ತು. ಆದರೆ ಸೀತಾ ಮಾತೆಯನ್ನು ಸಂಶಯದಿಂದ ನೋಡಿದ ಪ್ರಜೆಗಳ ಮಾತಿಗೆ ಮರುನುಡಿಯದೇ ಸೀತೆಯನ್ನು ಪುನಃ ವನವಾಸಕ್ಕೆ ಕಳುಹಿಸುವ ಸಂದರ್ಭದಲ್ಲಿ ಆತ ಮಾನಸಿಕವಾಗಿ ಬಳಲುತ್ತಾರೆ. ರಾಜನಾಗಿ ತನ್ನ ಪರಿವಾರದಿಂದ ಕೂಡ ಪ್ರಜೆಗಳು ಮಹತ್ತರವಾದವರು ಎಂಬುದಾಗಿ ರಾಮನ ಮನಗಂಡಿದ್ದರು. ತನ್ನ ಮೊದಲ ಜವಬ್ದಾರಿ ರಾಜನಾಗಿ ಎಂಬುದನ್ನು ಅವರು ಅರಿತಿದ್ದರು. ಆದ್ದರಿಂದಲೇ ಅವರು ಪ್ರಜೆಗಳ ಕೋರಿಕೆಗಳನ್ನು ಮನ್ನಿಸಿದ್ದರು.

ಕೊನೆಗೆ ತನ್ನ ಮಾನವರೂಪಿ ಜನ್ಮವನ್ನು ಅ೦ತ್ಯ

ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ. ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯ ದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ. ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ.
ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ.

English summary

Why Is Lord Rama Known As Maryada Purushottam?

Lord Rama is one of the most revered deities in Hinduism. He was the tenth incarnation of Lord Vishnu. We all have grown up listening to the stories from the Ramayana, which are a source of inspiration for all. Lord Rama is an embodiment of perfection for his devotees. Well, ever wondered why he is known as Maryada Purushottam? Today, we have brought to you the information about why Lord Rama is known as Maryada Purushottam. Let us begin.
X
Desktop Bottom Promotion