Latest Updates
-
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು!
ಶ್ರಾವಣ ಮಾಸದಲ್ಲಿ ಸೇವಿಸಬಾರದ ತರಕಾರಿಗಳು
ಶ್ರಾವಣ ಮಾಸವು ಶಿವ ದೇವರಿಗೆ ಅರ್ಪಿತವಾಗಿದೆ. ಹೆಚ್ಚಿನ ಜನರು ಈ ತಿಂಗಳಲ್ಲಿ ಉಪವಾಸ ವೃತವನ್ನು ಮಾಡುತ್ತಾರೆ ಇಲ್ಲವೇ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಮಾಂಸಹಾರಿಗಳು ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನೇ ಸೇವಿಸಬೇಕು ಎಂಬುದು ಶ್ರಾವಣ ಮಾಸದ ನಿಯಮವಾಗಿದೆ.
ಶ್ರಾವಣ ಮಾಸದ ಮಹತ್ವವನ್ನು ಅರಿತುಕೊಳ್ಳಿ
ಶಿವ ದೇವರನ್ನು ಭಜಿಸುವ ಸಮಯದಲ್ಲಿ ಮಾಂಸಹಾರಿಗಳು ಸಸ್ಯಾಹಾರವನ್ನು ಸೇವಿಸಬೇಕು. ಶ್ರಾವಣ ಮಾಸದಲ್ಲಿ ಬರಿಯ ಸಸ್ಯಾಹಾರವನ್ನು ಸೇವಿಸಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಮಾಂಸಾಹಾರವನ್ನು ತಿನ್ನಬಾರದು ಎಂಬ ನಿಯಮದೊಂದಿಗೆ ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸಬಾರದೆಂಬ ನಿಯಮ ಕೂಡ ಇದೆ.
ಈ ಇಡೀ ತಿಂಗಳು ಹಿಂದೂಗಳು ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕೆಂಬ ನಿಯಮವಿದೆ. ಆದ್ದರಿಂದ, ಮಾಂಸಾಹಾರವಲ್ಲದೆ ನೀವು ಈ ತಿಂಗಳಲ್ಲಿ ತಿನ್ನಲೇಬಾರದ ಸಸ್ಯಾಹಾರಗಳು ಯಾವುವು ಎಂಬುದನ್ನು ಕೂಡ ನೋಡೋಣ.
ಶ್ರಾವಣ ಮಾಸದ ವಿಶೇಷ: ಬೈದ್ಯನಾಥ ಶಿವನ ಕಥೆ

ಸೊಪ್ಪು ತರಕಾರಿಗಳು
ಸೊಪ್ಪಿನ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಆದರೆ ಶ್ರಾವಣ ಮಾಸದಲ್ಲಿ ವೃತಧಾರಿಗಳು ಸೊಪ್ಪಿನ ತರಕಾರಿಗಳನ್ನು ತಿನ್ನಬಾರದು ಎಂಬ ನಿಯಮವಿದೆ. ಇದು ಕೆಲವೊಂದು ಆರೋಗ್ಯಕ್ಕೆ ಹಾನಿಮಾಡುವ ಅಂಶಗಳನ್ನು ಹೊಂದಿರುತ್ತದೆ ಎಂಬ ಕಾರಣಕ್ಕೆ ಸೊಪ್ಪುಗಳನ್ನು ಸೇವಿಸಬಾರದು. ಮಳೆಗಾಲದ ಸಮಯದಲ್ಲಿ ಸೊಪ್ಪು ತರಕಾರಿಗಳ ಸೇವನೆಯಿಂದ ನಮ್ಮ ದೇಹದಲ್ಲಿ ಪಿತ್ತರಸ ಪ್ರಮಾಣ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅಲ್ಲದೆ ಈ ಸಮಯದಲ್ಲಿ ಸೊಪ್ಪು ತರಕಾರಿಗಳಲ್ಲಿ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸಾಕಷ್ಟು ಕಂಡು ಬರುವ ಕಾರಣ ಶ್ರಾವಣ ಮಾಸದಲ್ಲಿ ಸೊಪ್ಪಿನ ತರಕಾರಿಗಳನ್ನು ತಿನ್ನಬಾರದು.

ಬದನೆ
ಸೊಪ್ಪಿನ ನಂತರ, ಮಳೆಗಾಲದ ಸಮಯದಲ್ಲಿ ತಿನ್ನಲೇಬಾರದ ತರಕಾರಿಯಾಗಿದೆ ಬದನೆ. ಮಳೆಗಾಲದ ಸಮಯದಲ್ಲಿ ಬದನೆ ಕಾಯಿಯಲ್ಲೂ ಕೂಡ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸಾಕಷ್ಟು ಕಂಡು ಬರುವ ಕಾರಣ ವೃತಧಾರಿಗಳು ಬದನೆಯನ್ನು ಸೇವಿಸಬಾರದು.

ಹಾಲು
ಆಯುರ್ವೇದದ ಪ್ರಕಾರ ಮಳೆಗಾಲದ ಸಮಯದಲ್ಲಿ ಹಸಿ ಹಾಲು ಕುಡಿಯುವುದರಿಂದ ದೇಹದಲ್ಲಿ ಪಿತ್ತರಸ ಪ್ರಮಾಣ ಹೆಚ್ಚಾಗುತ್ತದೆ, ಹಾಗಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಕುಡಿಯುವ ಮುನ್ನ ಅದನ್ನು ಕುದಿಸಿ ಆರಿಸಿ ಕುಡಿಯಬೇಕೆಂಬ ನಿಯಮ ಇದೆ. ಅಂತೆಯೇ ಹಸಿ ಹಾಲನ್ನು ಸೇವಿಸಬಾರದು ಎಂಬುದು ಶ್ರಾವಣ ಮಾಸದ ನಿಯಮವಾಗಿದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ
ಹಿಂದೂ ಧರ್ಮದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಾತ್ವಿಕ ಆಹಾರವೆಂದು ಪರಿಗಣಿಸಲಾಗುವುದಿಲ್ಲ. ಈ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ತಂದೊಡ್ಡುತ್ತವೆ.

ಮದ್ಯ
ಮದ್ಯವನ್ನು ವೃತಧಾರಿಗಳು ಈ ಮಾಸದಲ್ಲಿ ಸೇವಿಸಬಾರದು ಎಂಬ ನಿಯಮವಿದೆ. ಇದು ಮಾನವನ ಮನಸ್ಸಿನಲ್ಲಿ ಋಣಾತ್ಮಕ ಅಂಶಗಳನ್ನು ಉತ್ಪಾದಿಸುತ್ತದೆ.

ಮಾಂಸಾಹಾರಿ ಆಹಾರಗಳು
ಮಾಂಸಾಹಾರವನ್ನು ಸೇವಿಸಬಾರದೆಂಬ ನಿಯಮವಿದೆ. ವೃತಾಧಾರಿಗಳು ಮಾಂಸಹಾರವನ್ನು ಸೇವಿಸಿದರೆ ಪ್ರಾಣಿಗಳನ್ನು ಕೊಂದಂತೆ ಎಂಬ ಕಾರಣಕ್ಕಾಗಿ ಈ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸಬಾರದೆಂದು ಹೇಳುತ್ತಾರೆ.



Click it and Unblock the Notifications











