ಸಂಭ್ರಮದ 'ರಾಮ ನವಮಿಯ' ಮಹತ್ವ ಹಾಗೂ ವೈಶಿಷ್ಟ್ಯತೆ

By: Jaya subramanya
Subscribe to Boldsky

ವಿಷ್ಣುವಿನ ಏಳನೇ ಅವತಾರವಾದ ರಾಮನನ್ನು ನೆನೆಯುವ ಹಬ್ಬವಾಗಿದೆ ಶ್ರೀರಾಮ ನವಮಿ. ಚೈತ್ರ ಮಾಸದ ಮೊದಲ ದಿನದಂದು ರಾಮನವಮಿ ಆರಂಭವಾಗಿ ಒಂಬತ್ತು ದಿನಗಳವರೆಗೆ ಮುಂದುವರಿಯುತ್ತದೆ. ರಾಮನವಮಿಯಂದು ರಾಮನ ಸಾಹಸಗಳನ್ನು ವರ್ಣಿಸಲಾಗುತ್ತದೆ ಮತ್ತು ಅವರು ಮಾಡಿದ ಕಾರ್ಯಗಳನ್ನು ಸ್ಮರಿಸಲಾಗುತ್ತದೆ.

ಒಂಬತ್ತು ದಿನಗಳ ಕಾಲವೂ ರಾಮಸ್ತ್ರೋತ್ರವನ್ನು ಭಕ್ತರು ಪಠಿಸುತ್ತಾರೆ. ರಾಮನಿಂದ ಸಂರಕ್ಷಣೆ ಎಂಬ ಅರ್ಥವನ್ನು ಈ ಸ್ತ್ರೋತ್ರವನ್ನು ಪಡೆದುಕೊಂಡಿದ್ದು ಎಲ್ಲಾ ದುಃಖ ದುಮ್ಮಾನಗಳಿಂದ ರಾಮ ಭಗವಂತ ನಮ್ಮನ್ನು ಕಾಪಾಡುತ್ತಾರೆ ಎಂದಾಗಿದೆ. 

Lord Ram
 

ರಾಮ ನವಮಿಯಂದು ಭಕ್ತರು ವಿಶೇಷವಾಗಿ ವ್ರತಗಳನ್ನು ಆಚರಿಸುತ್ತಾರೆ. ದಿನವಿಡೀ ಹಣ್ಣುಗಳನ್ನು, ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಭಕ್ತರು ಸೇವಿಸುತ್ತಾರೆ. ಚೈತ್ರಮಾಸದ ಆರಂಭದಂದು ರಾಮನವಮಿ ತೊಡಗಿ ಒಂಬತ್ತು ದಿನಗಳ ಕಾಲ ನೆರವೇರುತ್ತದೆ. ಕೆಂಪು ಬಟ್ಟೆಯಲ್ಲಿ ತೆಂಗಿನಕಾಯಿಯನ್ನು ಸುತ್ತಿ ತೊಟ್ಟಿಲಲ್ಲಿ ಇದನ್ನು ಇರಿಸಲಾಗುತ್ತದೆ ಮತ್ತು ಈ ತೆಂಗಿನಕಾಯಿಯು ಮಗು ರಾಮನ ಸಂಕೇತವಾಗಿರುತ್ತದೆ.  ಶ್ರದ್ಧಾಭಕ್ತಿಯ ರಾಮ ನವಮಿ ಆಚರಣೆಯ ವಿಧಿವಿಧಾನ...

ರಾಮನು ಅಪರಾಹ್ನದಲ್ಲಿ ಜನ್ಮವೆತ್ತಿರುತ್ತಾರೆ ಮತ್ತು ಭಕ್ತರು ಈ ತೊಟ್ಟಿಲನ್ನು ಜೋಗುಳ ಹಾಡುಗಳಿಂದ ತೂಗುತ್ತಾರೆ. ಈ ಬಟ್ಟೆಯಲ್ಲಿ ಸುತ್ತಿದ ತೆಂಗಿನಕಾಯಿಗೆ ಕುಂಕುಮದಿಂದ ಅಲಂಕಾರವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ ಮತ್ತು ಪ್ರಸಾದದಲ್ಲಿ ಹಣ್ಣುಗಳು ಹಾಗೂ ಮನೆಯಲ್ಲಿ ತಯಾರು ಮಾಡಿದ ಸಿಹಿ ಪ್ರಮುಖವಾಗಿರುತ್ತದೆ. 

Lord Ram
 

ಭಗವಂತ ವಿಷ್ಣು ಮತ್ತು ಶ್ರೀರಾಮ

ಭಗವಾನ್ ವಿಷ್ಣುವಿನ ಏಳನೇ ಅವತಾರವಾಗಿ ರಾಮನನ್ನು ಕಾಣಲಾಗುತ್ತದೆ. ಶೋದಶೋಪಚಾರ ಪೂಜೆಯಲ್ಲಿ ವಿಷ್ಣುವನ್ನು ಹೇಗೆ ಆರಾಧನೆ ಮಾಡಲಾಗುತ್ತದೆಯೋ ಅಂತೆಯೇ ರಾಮನವಮಿಯಂದು ಶ್ರೀರಾಮನನ್ನು ಪೂಜಿಸಲಾಗುತ್ತದೆ.  3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್

ಈ ಪೂಜೆಲ್ಲಿ ಮುಖ್ಯವಾಗಿ ತುಳಸಿ ಎಲೆಗಳು ಮತ್ತು ತಾವರೆ ಪ್ರಧಾನವಾಗಿರುತ್ತದೆ. ನೈವೇದ್ಯವು ಶ್ರೀರಾಮನಿಗೆ ಹೆಚ್ಚು ಪ್ರಿಯವಾಗಿರುವುದರಿಂದ ರವೆ, ತುಪ್ಪ ಮತ್ತು ಸಕ್ಕರೆಯಿಂದ ಇದನ್ನು ತಯಾರಿಸಲಾಗುತ್ತದೆ. ದೇವರಿಗೆ ಹತ್ತಿರವಾಗುವಂತೆ ಅವರ ಅನುಗ್ರಹವನ್ನು ಪ್ರತಿಯೊಬ್ಬ ಭಕ್ತರೂ ಪಡೆದುಕೊಳ್ಳುವಂತೆ ಈ ಪೂಜೆಯನ್ನು ನೆರವೇರಿಸಲಾಗುತ್ತದೆ. ಪ್ರಸಾದವನ್ನು ದೇವರಿಗೆ ಅರ್ಪಣೆ ಮಾಡಲಾಗುತ್ತದೆ. 

Lord Ram
 

ದೇವಸ್ಥಾನಗಳಲ್ಲಿ ರಾಮನವಮಿ ಪೂಜೆ 

ದೇವಸ್ಥಾನಗಳಲ್ಲಿ ವಿಶೇಷವಾಗಿ ಶ್ರೀರಾಮನಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಭಕ್ತರು ಅವರ ಸ್ತ್ರೋತ್ರವನ್ನು ದಿನಪೂರ್ತಿ ಪಠಿಸುತ್ತಾರೆ. ರಾಮನ ದೇವಸ್ಥಾನಗಳಲ್ಲಿ ರಾಮನನ್ನು ರೇಶಿಮೆ ವಸ್ತ್ರಗಳಿಂದ ಅಲಂಕರಿಸಿ ಆಭರಣಗಳನ್ನು ಹಾಕಿ ಪೂಜಿಸುತ್ತಾರೆ. ಹೂವುಗಳಿಂದ ದೇವರನ್ನು ಅಲಂಕಾರ ಮಾಡುತ್ತಾರೆ. ಅಂತೆಯೇ ರಾಮನ ಕಾರ್ಯಗಳನ್ನು ಈ ಸಂದರ್ಭದಲ್ಲಿ ಹಾಡಿ ಹೊಗಳುತ್ತಾರೆ.

ಭಕ್ತರು ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ

ಅಯೋಧ್ಯೆ, ಭದ್ರಾಚಲಂ ಮತ್ತು ರಾಮೇಶ್ವರದಲ್ಲಿ ರಾಮನವಮಿಯನ್ನು ವಿಶೇಷವಾಗಿ ಕೊಂಡಾಡುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಮತ್ತು ಪ್ರವಾಸಿಗರು ಈ ಸ್ಥಳಗಳಲ್ಲಿ ತುಂಬಿಕೊಂಡಿರುತ್ತಾರೆ. ಅಯೋಧ್ಯೆಯ ಪವಿತ್ರ ನದಿ ಸರಯೂವಿನಲ್ಲಿ ಭಕ್ತರು ತೀರ್ಥಸ್ನಾನವನ್ನು ಕೈಗೊಳ್ಳುತ್ತಾರೆ. ರಾಮೇಶ್ವರದಲ್ಲಿ ಭಕ್ತರು ಕಡಲಿನಲ್ಲಿ ಸ್ನಾನವನ್ನು ಮಾಡಿ ಶುದ್ಧಗೊಳ್ಳುತ್ತಾರೆ. ತಮ್ಮ ಪಾಪಗಳನ್ನು ತೊಡೆದು ಹಾಕಿ ರಾಮನಿಗೆ ಪ್ರಿಯವಾಗುವಂತೆ ಭಕ್ತರನ್ನು ಈ ತೀರ್ಥಸ್ನಾನವು ಮಾಡುತ್ತದೆ ಎಂಬುದು ನಂಬಿಕೆಯಾಗಿದೆ.

English summary

Ways In Which Ram Navami Is Celebrated

Ram Navami is the celebration of the birth of Lord Rama, the seventh incarnation of Lord Vishnu. In different parts of the country, this festival is celebrated with pomp and show. People celebrate this occasion with proper dedication and they have the idol of Shree Ram in front of them who is the epitome of a perfect son, a loyal husband and a loving elder brother and overall, a loyal king to his kinsmen.
Please Wait while comments are loading...
Subscribe Newsletter