For Quick Alerts
ALLOW NOTIFICATIONS  
For Daily Alerts

ಶ್ರದ್ಧಾಭಕ್ತಿಯ ರಾಮ ನವಮಿ ಆಚರಣೆಯ ವಿಧಿವಿಧಾನ...

ಹಿ೦ದೂಗಳ ವಿಚಾರದಲ್ಲಿ ರಾಮನವಮಿಯು ಅತ್ಯ೦ತ ಪ್ರಮುಖವಾದ ಹಬ್ಬಗಳಲ್ಲೊ೦ದು. ಈ ಮ೦ಗಳದಾಯಕ ದಿನದ೦ದು ಭಕ್ತರು ಭಗವಾನ್ ರಾಮಚ೦ದ್ರನನ್ನು ಪರಮಭಕ್ತಿಯಿ೦ದ ಪೂಜಿಸುತ್ತಾರೆ ಹಾಗೂ ಧರ್ಮಮಾರ್ಗದಲ್ಲಿ ಜೀವನವನ್ನು ಸಾಗಿಸುವುದರ ಕುರಿತು ಶಪಥ ಮಾಡುತ್ತಾರೆ

By Hemanth
|

ಭಾರತದಲ್ಲಿರುವ ಅಥವಾ ವಿಶ್ವದೆಲ್ಲೆಡೆಯಲ್ಲಿರುವ ಹಿಂದೂಗಳಿಗೆ ವರ್ಷದಲ್ಲಿ ಹಲವಾರು ಹಬ್ಬಗಳು ಇವೆ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ ಮತ್ತು ಅದನ್ನು ವಿವಿಧ ರೀತಿಯಿಂದ ಆಚರಿಸಿಕೊಂಡು ಸಂಭ್ರಮ ಪಡುವುದೇ ಹಿಂದೂ ಧರ್ಮಿಯರ ಗುಣವಾಗಿದೆ. ವರ್ಷದ ಪ್ರತೀ ತಿಂಗಳು ಏನಾದರೊಂದು ಹಬ್ಬ ಇದ್ದೇ ಇರುತ್ತದೆ. ಈ ತಿಂಗಳು ರಾಮ ನವಮಿಯಿದೆ. ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ

ಚೈತ್ರಾ ಮಾಸದ 9ನೇ ದಿನದಂದು ರಾಮನವಮಿಯನ್ನು ಆಚರಿಸಲಾಗುತ್ತದೆ ಮತ್ತು ಈ ದಿನದಂದು ರಾಮಲೀಲೆಯನ್ನು ಪ್ರದರ್ಶಿಸಲಾಗುತ್ತದೆ. ರಾಮನವಮಿಯಂದು ಅಯೋಧ್ಯೆಯ ರಾಜನಾಗಿದ್ದ ಶ್ರೀರಾಮನನ್ನು ಪೂಜಿಸಲಾಗುತ್ತದೆ.

ರಾಮನನ್ನು ಪೂಜಿಸುವ ಆತನ ಭಕ್ತರು ರಾಮ ನವಮಿ ಆತನ ಹುಟ್ಟುಹಬ್ಬದಂತೆ ಆಚರಿಸುತ್ತದೆ. ಬನ್ನಿ ರಾಮ ನವಮಿಯನ್ನು ಯಾಕೆ ಆಚರಿಸಲಾಗುತ್ತದೆ ಮತ್ತು ರಾಮನವಮಿಯನ್ನು ಆಚರಿಸುವ ಪ್ರಾಮುಖ್ಯತೆಗಳು ಏನು ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದೆ....

ಸೂರ್ಯನಿಗೆ ಪ್ರಾರ್ಥನೆ

ಸೂರ್ಯನಿಗೆ ಪ್ರಾರ್ಥನೆ

ಸೂರ್ಯನನ್ನು ರಾಮನ ಪೂರ್ವಿಕರೆಂದು ನಂಬಲಾಗಿದೆ. ಶಕ್ತಿಯ ಸಂಕೇತವಾಗಿರುವ ಸೂರ್ಯನ ಪ್ರಾರ್ಥನೆಯೊಂದಿಗೆ ರಾಮ ನವಮಿ ಆರಂಭವಾಗುತ್ತದೆ. ಸೂರ್ಯನಿಂದ ಶಕ್ತಿಯನ್ನು ಬೇಡುವ ಭಕ್ತರು ತಮ್ಮ ದಿನವನ್ನು ಆರಂಭಿಸುತ್ತಾರೆ.

ಉಪವಾಸದ ಮಹತ್ವ

ಉಪವಾಸದ ಮಹತ್ವ

ರಾಮ ನವಮಿಯಂದು ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಭಕ್ತರು ದಿನಪೂರ್ತಿ ಉಪವಾಸವಿದ್ದು, ಸೂರ್ಯ ಮುಳುಗಿದ ಬಳಿಕ ಸಿಹಿ ಹಾಗೂ ಹಣ್ಣುಗಳನ್ನು ತಿಂದು ತಮ್ಮ ಉಪವಾಸ ಅಂತ್ಯಗೊಳಿಸುತ್ತಾರೆ. ಇದರಿಂದ ಅವರ ದೇಹಕ್ಕೆ ಉಪವಾಸದ ಲಾಭವಾಗುತ್ತದೆ ಮತ್ತು ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭ್ಯವಾಗುತ್ತದೆ.

ಪವಿತ್ರ ಸ್ನಾನದ ಮಹತ್ವ

ಪವಿತ್ರ ಸ್ನಾನದ ಮಹತ್ವ

ಸರಾಯು ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ದೇಹ, ಮನಸ್ಸು ಮತ್ತು ಆತ್ಮವು ನಕಾರಾತ್ಮಕತೆಯಿಂದ ಮುಕ್ತವಾಗುತ್ತದೆ ಎನ್ನುವ ಭಾವನೆ ಅಯೋಧ್ಯೆಯ ಜನರಲ್ಲಿದೆ. ರಾಮನವಮಿಯಂದು ಹೆಚ್ಚಿನ ಜನರು ದೇಶದೆಲ್ಲೆಡೆ ಪವಿತ್ರ ಸ್ನಾನವನ್ನು ಮಾಡುತ್ತಾರೆ. ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸಿ ಜೀವನದ ಸರಿಯಾದ ಮಾರ್ಗದಲ್ಲಿ ನಡೆಯುವುದೇ ಇದರ ಉದ್ದೇಶ.

ರಾಮಲೀಲೆಯ ಪ್ರಾಮುಖ್ಯತೆ

ರಾಮಲೀಲೆಯ ಪ್ರಾಮುಖ್ಯತೆ

ರಾಮಲೀಲೆ ರಾಮನವಮಿಯಂದು ಪ್ರದರ್ಶಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ರಾಮನ ಜೀವನಕ್ಕೆ ಸಂಬಂಧಿಸಿದ ಹಾಗೂ ರಾವಣನ ವಧೆ ಸಹಿತ ಹಲವಾರು ದೃಶ್ಯಾವಳಿಗಳನ್ನು ರಾಮಲೀಲೆಯಲ್ಲಿ ಪ್ರದರ್ಶಿಸಲಾಗುತ್ತದೆ. ಮೈದಾನದಲ್ಲಿ ನಡೆಯುವಂತಹ ರಾಮಲೀಲೆಯನ್ನು ನೋಡಲು ಸಾವಿರಾರು ಮಂದಿ ಸೇರುತ್ತಾರೆ.

ರಥಯಾತ್ರೆಯ ಮಹತ್ವ

ರಥಯಾತ್ರೆಯ ಮಹತ್ವ

ರಾಮನ ಆಡಳಿತದ ಅವಧಿಯಲ್ಲಿದ್ದ ಶಾಂತಿಯ ಕಾಲವನ್ನು ಜ್ಞಾಪಿಸಲು ರಾಮನವಮಿಯನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಹೂಗಳಿಂದ ಶೃಂಗರಿಸಲ್ಪಟ್ಟ ರಥದಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಮೂರ್ತಿಗಳನ್ನು ಇಟ್ಟು ರಥಯಾತ್ರೆ ನಡೆಸಲಾಗುತ್ತದೆ. ರಾಮ ಹಾಗೂ ಸೀತಾ ಮಾತೆಯ ಮದುವೆಯ ದಿನವನ್ನು ನೆನಪಿಸಲು ಇದನ್ನು ಆಚರಿಸಲಾಗುತ್ತದೆ.

ನಿರ್ಣಯ

ನಿರ್ಣಯ

ರಾಮನವಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಈಗ ನಿಮಗೆ ತಿಳಿಯಿತು ತಾನೇ? ಈ ದಿನದಂದು ದೇವರು ಭೂ ಮೇಲೆ ಬಂದು ಮಾನವನ ದೇಹ ಹಾಗೂ ಆತ್ಮದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತಾರೆ ಎಂದು ನಂಬಲಾಗಿದೆ. ರಾಮನವಮಿಯ ಸರಿಯಾದ ಆಚರಣೆಯೆಂದರೆ ನಕಾರಾತ್ಮಕತೆಯನ್ನು ತೆಗೆದುಹಾಕಿ ಧನಾತ್ಮಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.

English summary

Rama Navami: What is it and why do we celebrate?

Every year you celebrate Ram Navami on the ninth day of the month of Chaitra and enjoy Ramleela vigorously. Why is Ram Navami celebrated? Yes, this is known to all that this is the birthday of Lord Ram, the lawful king of Ayodhya. But, his birth is significant to every Hindu and therefore, the importance of celebrating Ram Navami is deep.
X
Desktop Bottom Promotion