ಮುಸ್ಸಂಜೆಯ ವೇಳೆ ಈ ಕೆಲಸಗಳನ್ನು ಮಾಡಬೇಡಿ... ಕಷ್ಟಗಳು ಬರುವುದು!

By: Divya
Subscribe to Boldsky

ಅದೃಷ್ಟ ದೇವತೆಗಳಾದ ಅಷ್ಟ ಲಕ್ಷ್ಮಿಗಳು ಮನೆಯಲ್ಲಿರಬೇಕಾದರೆ ನಮ್ಮ ಆಚಾರ-ವಿಚಾರಗಳು ಸರಿಯಿರಬೇಕು. ನಿತ್ಯವೂ ಕೆಟ್ಟ ಶಬ್ದಗಳ ಬೈಗುಳ, ಹೊತ್ತಲ್ಲದ ಹೊತ್ತಲ್ಲಿ ಮಾಡುವ ಕೆಲಸಗಳಿಂದ ನಮ್ಮ ಸಂಪತ್ತು ಕರಗುತ್ತದೆ. ಹಿಂದೂ ಧರ್ಮಗ್ರಂಥದ ಪ್ರಕಾರ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷದ ಜೀವನ ನಡೆಸಲು ಕೆಲವು ನಿಯಮಗಳನ್ನು ಅನುಸರಿಸಬೇಕು.

ಅದರಲ್ಲೂ ಸಾಯಂಕಾಲ ಅಥವಾ ಸೂರ್ಯಾಸ್ತದ ಸಮಯದಲ್ಲಿ ಕೆಲ ಕೆಲಸಗಳನ್ನು ಮಾಡಬಾರದು. ಸಾಯಂಕಾಲದ ಹೊತ್ತು ಸಲ್ಲದ ಕೆಲಸ ಮಾಡಿದರೆ ಸಾಯುವವರೆಗೂ ಬಡತನ ಮತ್ತು ದುಃಖ ನಮ್ಮನ್ನು ಕಾಡುತ್ತದೆ ಎಂದು ಹೇಳಲಾಗುತ್ತದೆ.

ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಶಕ್ತಿಶಾಲಿ ಮಹಾಮಂತ್ರಗಳು

"ವರಿ ಖಾಲು ಕಾರ್ಯಾಣಿ ಸಂಧ್ಯಾಕಾಲೇ ವಿವಾರ್ಜಯೆತ್

ಆಹಾರಾಮ್ ಮೈಥುನಮ್ ನಿದ್ರಮ್ ಸದ್ವೈಚ್ ಚತುರ್ಥಕಮ್"

ಈ ಶ್ಲೋಕದ ಪ್ರಕಾರ ಕೆಲವು ಕೆಲಸವನ್ನು ಸಾಯಂಕಾಲದ ಹೊತ್ತು ಮಾಡಬಾರದು. ಅದರಿಂದ ನಮಗೆ ದಾರಿದ್ರ್ಯ ಉಂಟಾಗುತ್ತದೆ. ಅವು ಯಾವವು ಎನ್ನುವುದನ್ನು ಇಲ್ಲಿ ವಿವರಿಸಿದ್ದೇವೆ, ಮುಂದೆ ಓದಿ...   

ಸಂಜೆಯ ಹೊತ್ತು ಗಲಾಟೆ ಮಾಡಿಕೊಳ್ಳಬೇಡಿ...

ಸಂಜೆಯ ಹೊತ್ತು ಗಲಾಟೆ ಮಾಡಿಕೊಳ್ಳಬೇಡಿ...

ಮುಸ್ಸಂಜೆಯ ಸಮಯದಲ್ಲಿ ಕೆಟ್ಟ ಶಬ್ದಗಳನ್ನು ಬಳಸಿ ಕಿತ್ತಾಡಬಾರದು. ಆ ವೇಳೆ ದೇವರ ಜಪ-ತಪಗಳು ನಡೆಯಬೇಕು. ಸಂಜೆ ಸಮಯದಲ್ಲಿ ಗಲಾಟೆ ನಡೆಯುತ್ತಿದ್ದರೆ ಆ ಮನೆಗೆ ದಾರಿದ್ರ್ಯ ಬರುವುದು.

ಸಂಜೆಯ ಹೊತ್ತು ಗಲಾಟೆ ಮಾಡಿಕೊಳ್ಳಬೇಡಿ...

ಸಂಜೆಯ ಹೊತ್ತು ಗಲಾಟೆ ಮಾಡಿಕೊಳ್ಳಬೇಡಿ...

ಸಂಜೆ ಸಮಯದಲ್ಲಿ ನೆಲವನ್ನು ತೊಳೆಯುವುದು ಅಥವಾ ಗುಡಿಸುವ ಕೆಲಸಕ್ಕೆ ಹೋಗಬಾರದು. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಕೆಲವರು ಇದನ್ನು ಮೂಢ ನಂಬಿಕೆ ಎನ್ನಬಹುದು. ಆದರೆ ಶಾಸ್ತ್ರದ ಪ್ರಕಾರ ಸಂಧ್ಯಾಕಾಲವು ಲಕ್ಷ್ಮಿ ಪೂಜೆಗೆ ಸೂಕ್ತ. ಆ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ ಧನಾತ್ಮಕ ಶಕ್ತಿಯು ನಾಶವಾಗುವುದು ಎಂದು ಹೇಳಲಾಗಿದೆ.

ಸಂಜೆಯ ಹೊತ್ತು ಆದಷ್ಟು ಲಕ್ಷ್ಮಿಯ ಧ್ಯಾನಮಾಡಿ...

ಸಂಜೆಯ ಹೊತ್ತು ಆದಷ್ಟು ಲಕ್ಷ್ಮಿಯ ಧ್ಯಾನಮಾಡಿ...

ಮುಸ್ಸಂಜೆಯ ಸಮಯದಲ್ಲಿ ಲೈಂಗಿಕ ಕೆಲಸದಲ್ಲಿ ತೊಡಗಬಾರದು. ಸಂಜೆಯ ಸಮಯದಲ್ಲಿ ಲಕ್ಷ್ಮಿಯು ಧರೆಗಿಳಿಯುತ್ತಾಳೆ. ಆ ಸಮಯದಲ್ಲಿ ಈ ಚಟುವಟಿಕೆಗಳು ನಡೆಯುತ್ತಿದ್ದರೆ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆದೂರುವುದು.

ಮುಸ್ಸಂಜೆಯ ಸಮಯದಲ್ಲಿ ಮಲಗಬಾರದು...

ಮುಸ್ಸಂಜೆಯ ಸಮಯದಲ್ಲಿ ಮಲಗಬಾರದು...

ಮುಸ್ಸಂಜೆಯ ಸಮಯದಲ್ಲಿ ಮಲಗಬಾರದು. ಮಲಗಿದರೆ ಮನಸ್ಸು ಮತ್ತು ನೆನಪಿನ ಶಕ್ತಿಯು ದುರ್ಬಲಗೊಳ್ಳುತ್ತದೆ. ಅಲ್ಲದೆ ಸ್ಥೂಲಕಾಯದಿಂದ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು.

ಮುಸ್ಸಂಜೆಯ ಹೊತ್ತು ತುಳಸಿ ಎಲೆಗಳನ್ನು ಕೀಳಬೇಡಿ...

ಮುಸ್ಸಂಜೆಯ ಹೊತ್ತು ತುಳಸಿ ಎಲೆಗಳನ್ನು ಕೀಳಬೇಡಿ...

ಮುಸ್ಸಂಜೆಯ ಸಮಯದಲ್ಲಿ ತುಳಸಿ, ದೂರ್ವೆ ಮತ್ತು ಇನ್ನಿತರ ಸಸ್ಯಗಳ ಎಲೆಗಳನ್ನು ಕೀಳಬಾರದು. ಇದರಿಂದ ವ್ಯಕ್ತಿಯ ಮನೆಗೆ ಬಡತನ ಮತ್ತು ಶಾಪ ತಗುಲುವುದು. ಮುಸ್ಸಂಜೆಯ ನಂತರ ಎಲೆಗಳನ್ನು ಕಿತ್ತರೆ ಆ ಸಸ್ಯವನ್ನು ನಿರ್ಜೀವಗೊಳಿಸಿದಂತೆ ಎಂದು ವಿಜ್ಞಾನ ಹೇಳುತ್ತದೆ.

ಸಂಪತ್ತಿನ ಅಧಿದೇವತೆ 'ಲಕ್ಷ್ಮಿ' ಗೆ ಇವುಗಳೆಂದರೆ ಅಚ್ಚುಮೆಚ್ಚು....

English summary

These Things Will Bring Money Loss In The Family

For keeping poverty and misery at bay, there are certain rules that Hindu scriptures advice people to follow. These tips are related to lifestyle and anyone can follow them to lead a healthy and happy life. Some of them are related to things that should NOT be done in the evening or at the time of sunset.
Subscribe Newsletter