Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಯಾವ್ಯಾವ ದೇವರಿಗೆ ಎಷ್ಟೆಷ್ಟು ಪ್ರದಕ್ಷಿಣೆ ಹಾಕಬೇಕು?
ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ ಒಮ್ಮೆ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯನನ್ನು ಕರೆದು ವಿಶ್ವಕ್ಕೆ ಪ್ರದಕ್ಷಿಣೆ ಬರುವಂತೆ ತಿಳಿಸುತ್ತಾನೆ.
ಆಗ ಕಾರ್ತಿಕೇಯನು ತನ್ನ ವಾಹನ ನವಿಲನ್ನು ಏರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗುತ್ತಾನೆ. ಆದರೆ ಗಣಪತಿಯು ಅಲ್ಲೇ ಶಿವನಿಗೆ ಸುತ್ತು ಬರುತ್ತಾನೆ. ಇದು ಮೋಸವಲ್ಲವೇ ಎಂದು ಶಿವ ಕೇಳಿದಾಗ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ಹೀಗೆ ಮಾಡಿದೆ ಎನ್ನುತ್ತಾನೆ. ಇದು ಪ್ರದಕ್ಷಿಣೆಯ ಬಗ್ಗೆ ಪುರಾಣ ಹೇಳುವಂತಹದ್ದು.

ಪುರಾಣಗಳಲ್ಲಿ ಇರುವಂತೆ ನಾವು ಇಂದಿಗೂ ದೇವರಿಗೆ ಪ್ರದಕ್ಷಿಣೆ ಹಾಕುವುದು. ಕೆಲವರು ಕೈ ಮುಗಿದು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದರೆ, ಮತ್ತೆ ಕೆಲವರು ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ದೇವರು ನಮ್ಮ ಸನಿಹವೇ ಇದ್ದಾನೆ ಎನ್ನುವಂತಹ ಭಾವನೆ ಮೂಡುತ್ತದೆ. ಮಧ್ಯದಲ್ಲಿರುವ ದೇವರು ನಮ್ಮೆಲ್ಲರ ಜೀವನಕ್ಕೆ ಮಧ್ಯದಿಂದಲೇ ಗೆರೆ ಹಾಕಬೇಕೆಂದು ಇದರರ್ಥವಾಗಿದೆ. ದೇವರಿಗೆ ಬರುವಂತಹ ಪ್ರದಕ್ಷಿಣೆಯು ತುಂಬಾ ಪವಿತ್ರವಾಗಿರುವುದೆಂದು ಭಾವಿಸಲಾಗಿದೆ. ದೇವಸ್ಥಾನಗಳ ಹಿ೦ದಿರುವ ವಿಸ್ಮಯಕರವಾದ ವೈಜ್ಞಾನಿಕ ವಿಚಾರಗಳೇನು?
ಪ್ರದಕ್ಷಿಣೆಯ ಸಂಪೂರ್ಣ ಫಲವನ್ನು ಪಡೆಯಬೇಕಾದರೆ ಪ್ರದಕ್ಷಿಣೆ ಹಾಕುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ತಮ್ಮ ಕೈಗಳನ್ನು ಎದೆಯ ಮೇಲೆ ಜೋಡಿಸಿಕೊಳ್ಳಬೇಕು. ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ನಿಧಾನವಾಗಿ ಮುನ್ನಡೆಯಬೇಕು. ದೇವಸ್ಥಾನದಲ್ಲಿನ ದೇವರ ಮಂತ್ರವನ್ನು ಬಾಯಿಯಲ್ಲಿ ಪಠಿಸುತ್ತಾ, ಹೃದಯಲ್ಲಿ ದೇವರ ಚಿತ್ರವನ್ನು ಜ್ಞಾಪಿಸಿಕೊಳ್ಳಬೇಕು.
ಇದರಿಂದ ಸಂಪೂರ್ಣ ಶಾಂತಿ ಮತ್ತು ಶರಣಾದ ಭಾವನೆ ಮೂಡುವುದು.ದೇವರ ಗರ್ಭಗುಡಿಗೆ ಸಂಪೂರ್ಣವಾಗಿ ಸುತ್ತು ಬರುವುದು ಪ್ರದಕ್ಷಿಣೆ. ಆದರೆ ಕೆಲವೊಂದು ಶಿವ ಮಂದಿರಗಳಲ್ಲಿ ಸ್ವಲ್ಪ ಮಟ್ಟದ ಬದಲಾವಣೆಯಿದೆ. ಶಿವ ಮಂದಿರಗಳಲ್ಲಿ ಶಿವನಿಗೆ ಅಭಿಷೇಕ ಮಾಡುವ ನೀರು ಹೊರಬರುವ ಗೋಮುಖಿ ತನಕ ಮಾತ್ರ ಸುತ್ತ ಬರಬಹುದು. ಇದನ್ನು ದಾಟಬಾರದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದನ್ನು ದಾಟಿದರೆ ದೇವರಿಗೆ ಅಗೌರವ ತೋರಿಸಿದಂತೆ. ಗೋಮುಖಿಯಿಂದ ತಿರುಗಿ ಮಂದಿರದ ಇನ್ನೊಂದು ಭಾಗದವರೆಗೆ ಸಾಗಿ ಗೋಮುಖಿಯ ಮತ್ತೊಂದು ಪಾರ್ಶ್ವದ ತನಕ ಸುತ್ತು ಬರಬೇಕು. ಯಾವುದೇ ಸಂದರ್ಭದಲ್ಲಿ ಗೋಮುಖಿಯನ್ನು ದಾಟುವಂತಿಲ್ಲ.
Image courtesy
ಯಾವ್ಯಾವ ದೇವರಿಗೆ ಎಷ್ಟೆಷ್ಟು ಪ್ರದಕ್ಷಿಣೆ ಹಾಕಬೇಕು?
*ಗಣಪತಿ-1
*ಶಿವ-2
*ವಿಷ್ಣು-3
*ಅಯ್ಯಪ್ಪ-4
*ಕಾರ್ತಿಕೇಯ-5
*ದುರ್ಗಾ-6
*ಅಶ್ವತ್ಥ ಮರ-7
ವ್ಯಕ್ತಿಯು ಭೂತ ಹಾಗೂ ವರ್ತಮಾನದಲ್ಲಿ ಮಾಡಿರುವಂತಹ ಪಾಪಗಳನ್ನು ಪ್ರದಕ್ಷಿಣೆಯು ತೊಡೆದುಹಾಕುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಕೇವಲ ದೇವಸ್ಥಾನಗಳಲ್ಲಿ ಮಾತ್ರ ಪ್ರದಕ್ಷಿಣೆ ಹಾಕಬೇಕೆಂದಿಲ್ಲ. ಇನ್ನೂ ಹಲವಾರು ರೀತಿಯ ಪ್ರದಕ್ಷಿಣೆಗಳಿವೆ.
*ಆತ್ಮ ಪ್ರದಕ್ಷಿಣೆ: ತನ್ನಲ್ಲಿ ಆತ್ಮವಿದೆಯೆಂದು ಮನವರಿಕೆ ಮಾಡಿಕೊಂಡು ತನಗೆ ತಾನೇ ಸುತ್ತು ಬರುವುದು.
*ಗಿರಿ ಪ್ರದಕ್ಷಿಣೆ: ಪರ್ವತಕ್ಕೆ ಸುತ್ತು ಬರುವುದು.
*ಆದಿ ಪ್ರದಕ್ಷಿಣೆ: ಅತೀ ಸಣ್ಣ ಹೆಜ್ಜೆಗಳನ್ನು ಇಟ್ಟುಕೊಂಡು ಪ್ರದಕ್ಷಿಣೆ ಬರುವುದು. ನಿಮ್ಮ ಕಾಲಿನ ಮುಂಭಾಗವು ಮತ್ತೊಂದು ಕಾಲಿನ ಹಿಂಭಾಗಕ್ಕೆ ತಾಗುತ್ತಿರಬೇಕು. ಹೀಗೆ ಮುಂದೆ ಸಾಗುತ್ತಿರಬೇಕು.
*ಅಂಗ ಪ್ರದಕ್ಷಿಣೆ: ದೇವಸ್ಥಾನದ ಕೆರೆ ಅಥವಾ ಬಾವಿಯಲ್ಲಿ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಯಲ್ಲಿ ಮಂತ್ರ ಪಠಿಸುತ್ತಾ ದೇವರಿಗೆ ಪ್ರದಕ್ಷಿಣೆ ಬರುವುದು.
ಮೊಣಕಾಲಿನ ಪ್ರದಕ್ಷಿಣೆ: ಮೊಣಕಾಲಿನಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದು. ಇದರ ಹೊರತಾಗಿ ಅಶ್ವತ್ಥ ಮರ ಮತ್ತು ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ತುಂಬಾ ಪವಿತ್ರವೆಂದು ಭಾವಿಸಲಾಗಿದೆ.



Click it and Unblock the Notifications
