For Quick Alerts
ALLOW NOTIFICATIONS  
For Daily Alerts

  ಅಂದು ಸೀತೆಯ ಶಾಪಕ್ಕೆ ಒಳಗಾದವರಿವರು…..

  By Deepu
  |

  ಪುರಾಣಗಳಲ್ಲಿ ನಾಲ್ಕು ಯುಗಗಳನ್ನು ಹೆಸರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಸತ್ಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ. ಇದರಲ್ಲಿ ಸತ್ಯುಗವು ತುಂಬಾ ಪಾವಿತ್ರ್ಯತೆ ಹೊಂದಿರುವುದು ಎನ್ನಲಾಗಿದೆ. ಈ ಯುಗದಲ್ಲಿ ಜನರ ಮನಸ್ಸು, ದೇಹ ಮತ್ತು ಹೃದಯವು ತುಂಬಾ ಒಳ್ಳೆಯದಾಗಿತ್ತು. ಪವಿತ್ರ ಪುರುಷರಾದ ಮಹಾತ್ಮರು, ಸನ್ಯಾಸಿಗಳು, ದೈವಿಸಂಭೂತರು ಸತ್ಯುಗದಲ್ಲಿ ಹೇಳಿರುವುದೆಲ್ಲವೂ ನಿಜವಾಗಿರುತ್ತಿತ್ತು.

  ಈ ಯುಗದಲ್ಲಿ ನೀಡುವಂತಹ ಶಾಪ ಮತ್ತು ವರವು ತುಂಬಾ ಪರಿಣಾಮಕಾರಿಯಾಗಿರುತ್ತಿತ್ತು. ಈ ಯುಗದಲ್ಲಿ ಎಲ್ಲಾ ಪ್ರಾಣಿಪಕ್ಷಿಗಳು ಪರಸ್ಪರರ ಭಾಷೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದವು. ಸಂಕಷ್ಟಗಳು ಕಡಿಮೆ ಇದ್ದ ದಿನಗಳಲ್ಲಿ ಶುದ್ಧಮನಸ್ಸಿನಿಂದ ಹೇಳಿರುವುದು ನಿಜವಾಗುತ್ತಿತ್ತು. ಇದರಿಂದಾಗಿ ನೀಡಲಾಗುತ್ತಿದ್ದ ಶಾಪವು ಪ್ರತಿಯೊಬ್ಬರಿಗೂ ತಟ್ಟುತ್ತಿತ್ತು. ಒಂದು ಸಂದರ್ಭದಲ್ಲಿ ಸೀತೆಯು ಗೋವು, ಕಾಗೆ, ಕೇತಕಿ ಹೂ, ತುಳಸಿ ಗಿಡ ಮತ್ತು ಪುರೋಹಿತನಿಗೆ ಶಾಪ ನೀಡಿರುವಂತಹ ಘಟನೆಯು ನಡೆದಿತ್ತು.

  lord Sita

  ನೀಡಿರುವ ಶಾಪದ ಕಥೆ

  ಈ ಘಟನೆಯು ಸತ್ಯುಗದಲ್ಲಿ ನಡೆದಿರುವಂತದ್ದಾಗಿದೆ. ಶ್ರೀರಾಮ, ತಮ್ಮ ಲಕ್ಷ್ಮಣ ಮತ್ತು ಸೀತಾದೇವಿಯು ವನವಾಸದಲ್ಲಿ ಇದ್ದಂತಹ ಸಮಯವಾಗಿತ್ತು. ಈ ವೇಳೆ ದಶರಥನು ಸಾವನ್ನಪ್ಪಿದ ಮತ್ತು ಸತ್ತ ಹಿರಿಯರಿಗೆ ಅಂತಿಮ ವಿಧಿ ಸಲ್ಲಿಸುವ ಕ್ರಮವಾಗಿ ಪಿಂಡದಾನ ಕಾರ್ಯಕ್ರಮ ಮಾಡಲಾಗುತ್ತದೆ. ಇದನ್ನು ಪವಿತ್ರ ನದಿಯ ದಡದಲ್ಲಿ ನೆರವೇರಿಸಲಾಗುತ್ತದೆ. ಗಯಾದಲ್ಲಿರುವಂತಹ ಫಲ್ಗು ನದಿಯ ದಡಕ್ಕೆ ಈ ಮೂವರು ಹೋದಾಗ ಪಿಂಡದಾನ ಮಾಡಲು ಯಾವೆಲ್ಲಾ ಸಾಮಗ್ರಿಗಳು ಬೇಕೆಂದು ಪುರೋಹಿತರದಲ್ಲಿ ಶ್ರೀರಾಮನು ಕೇಳುತ್ತಾನೆ.

  ಪುರೋಹಿತರು ಹೇಳಿದ ಬಳಿಕ ಲಕ್ಷ್ಮಣನನ್ನು ಹತ್ತಿರದ ಹಳ್ಳಿಗೆ ಕಳುಹಿಸಿ ಅಲ್ಲಿಂದ ಈ ಸಾಮಗ್ರಿಗಳನ್ನು ತರಲು ಸೂಚಿಸುತ್ತಾನೆ. ಆದರೆ ತುಂಬಾ ಹೊತ್ತಾದರೂ ಲಕ್ಷ್ಮಣ ಮಾತ್ರ ಬರುವುದೇ ಇಲ್ಲ. ಪುರೋಹಿತರು ಮಾತ್ರ ಮುಹೂರ್ತ ಮೀರಿ ಹೋಗುತ್ತಿದೆ ಎಂದು ಎಚ್ಚರಿಸುತ್ತಲೇ ಇದ್ದರು. ಲಕ್ಷ್ಮಣನನ್ನು ಹುಡುಕಿಕೊಂಡು ಶ್ರೀರಾಮ ಕೂಡ ಹಳ್ಳಿಗೆ ಹೋಗುತ್ತಾನೆ. ಆದರೆ ಆತನೂ ಬರುವುದಿಲ್ಲ. ಸಾಮಗ್ರಿಗಳನ್ನು ತಕ್ಷಣ ತರಬೇಕು.

  lord Sita

  ಇಲ್ಲವಾದಲ್ಲಿ ಮುಹೂರ್ತ ಮೀರಿ ಹೋಗುತ್ತದೆ ಎಂದು ಅಲ್ಲಿದ್ದ ಸೀತಾಮಾತೆಗೆ ಪುರೋಹಿತರು ಹೇಳುತ್ತಾರೆ. ರಾಮಲಕ್ಷ್ಮಣರು ಬರದೇ ಇರುವುದನ್ನು ಕಂಡ ಸೀತೆ ಮುಹೂರ್ತ ಮೀರಿ ಹೋಗುತ್ತಿದ್ದ ಕಾರಣ ತಾನೇ ಪಿಂಡದಾನ ಮಾಡಲು ನಿರ್ಧರಿಸುತ್ತಾಳೆ. ಅಲ್ಲಿಯೇ ಇದ್ದ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಆಕೆ ವಿಧಿಯನ್ನು ಮುಂದುವರಿಸುತ್ತಾಳೆ.

  ಪಿಂಡದಾನವು ಪರಿಪೂರ್ಣವಾಗಿದೆ ಮತ್ತು ದಶರಥನಿಗೆ ಇದರಿಂದ ಸಂತೋಷವಾಗಿದೆ ಎಂದು ತಿಳಿದ ಸೀತೆಗೆ ತುಂಬಾ ಖುಷಿಯಾಗುತ್ತದೆ. ಮಕ್ಕಳು ಇಲ್ಲದೆ ಪಿಂಡದಾನ ಮಾಡುವಂತಿಲ್ಲವೆಂದು ಸಾಮಾನ್ಯ ನಂಬಿಕೆಯಿರುವ ಕಾರಣದಿಂದಾಗಿ ತಾನು ಪಿಂಡದಾನ ಮಾಡಿದ್ದೇನೆಂದು ಹೇಳಿದರೆ, ರಾಮ ಹಾಗೂ ಲಕ್ಷ್ಮಣ ಇದನ್ನು ನಂಬುವುದಿಲ್ಲವೆಂದು ಸೀತೆ ತಿಳಿದಿರುತ್ತದೆ. ಇದಕ್ಕಾಗಿ ಸೀತೆ ಅಲ್ಲೇ ಹರಿಯುತ್ತಿದ್ದ ನದಿ ಫಾಲ್ಗು, ಪಿಂಡದಾನಕ್ಕೆ ಬಂದಿದ್ದ ದನ, ಬಾಳೆಗಿಡ, ಕೇತಕಿ ಹೂ, ತುಳಸಿ ಗಿಡ ಮತ್ತು ಪುರೋಹಿತರಲ್ಲಿ ನೀವು ಸಾಕ್ಷಿ ಹೇಳಬೇಕೆಂದು ಕೇಳಿಕೊಳ್ಳುವಳು. ಎಲ್ಲರೂ ಇದನ್ನು ಒಪ್ಪುತ್ತಾರೆ.

  lord Sita

  ಇಷ್ಟಾದರೂ ಸೀತೆ ಶಾಪ ನೀಡಿರುವುದು ಯಾಕೆ?

  ರಾಮ ಮತ್ತು ಲಕ್ಷ್ಮಣ ಮರಳಿ ಬಂದಾಗ ಸೀತೆಯು ಪಿಂಡದಾನ ಮಾಡಿರುವ ವಿಚಾರ ಕೇಳಿ ರಾಮ ಕೆರಳಿದ. ತಮ್ಮಿಬ್ಬರ ಅನುಪಸ್ಥಿತಿಯಲ್ಲಿ ಮಾಡಿರುವಂತಹ ಈ ಕಾರ್ಯದಿಂದ ದಶರಥನ ಆತ್ಮಕ್ಕೆ ಶಾಂತಿ ಸಿಗುತ್ತದೆಯಾ ಎನ್ನುವ ಭೀತಿ ರಾಮನಲ್ಲಿತ್ತು. ಆದರೆ ಪಿಂಡದಾನ ಪರಿಪೂರ್ಣವಾಗಿದೆ ಎನ್ನುವ ಅಶರೀರವಾಣಿಯು ಕೇಳಿದೆ ಮತ್ತು ತನ್ನ ಪರವಾಗಿ ಮಾತನಾಡುವಂತೆ ಸಾಕ್ಷಿಗಳಾಗಿದ್ದವರಿಗೆ ಸೀತೆ ಹೇಳುತ್ತಾಳೆ. ಆದರೆ ರಾಮ ಭಯದಿಂದ ಯಾರೂ ಕೂಡ ಈ ಬಗ್ಗೆ ಮಾತನಾಡುವುದಿಲ್ಲ. ಆದರೆ ಬಾಳೆಗಿಡವು ನಡೆದ ಘಟನೆಯನ್ನು ರಾಮನಿಗೆ ಹೇಳುತ್ತದೆ. ಆದರೆ ಎಲ್ಲರೂ ಮೌನವಾಗಿದ್ದ ಕಾರಣ ಸೀತೆಗೆ ನೋವಾಗುತ್ತದೆ ಮತ್ತು ಎಲ್ಲರಿಗೂ ಶಾಪ ನೀಡುತ್ತಾಳೆ.

  ಸೀತೆ ನೀಡಿರುವಂತಹ ಶಾಪವೇನು?

  ಯಾವತ್ತೂ ನಿನ್ನ ನೀರಿನ ಮಟ್ಟವು ಭೂಮಿಯ ಮಟ್ಟಕ್ಕೆ ಬರದಿರಲಿ ಎಂದು ಸೀತೆ ನದಿಗೆ ಶಾಪ ನೀಡುತ್ತಾಳೆ.

  ನದಿಯು ಭೂಮಿಯ ಒಳಗಡೆಯೇ ಹರಿಯುತ್ತಿರುತ್ತದೆ. ಇದರ ಬಳಿಕ ಗೋವಿಗೆ ಶಾಪ ನೀಡುವ ಸೀತೆ, ನಿನ್ನ ಸಂಪೂರ್ಣ ದೇಹವನ್ನು ಯಾರೂ ಪೂಜಿಸಬಾರದು ಎನ್ನುತ್ತಾಳೆ. ಅದರಂತೆ ಇಂದಿಗೂ ಗೋವಿನ ಹಿಂದಿನ ಭಾಗವು ತುಂಬಾ ಪವಿತ್ರವೆಂದು ಹಿಂದೂಗಳು ನಂಬಿದ್ದಾರೆ. ಮುಖವನ್ನು ಪೂಜೆ ಮಾಡುವುದಿಲ್ಲ. ಇದರ ಬಳಿಕ ಪುರೋಹಿತನಿಗೆ ಶಾಪ ನೀಡುವ ಸೀತೆ, ನೀವು ಎಷ್ಟೇ ಸಂಪಾದನೆ ಮಾಡಿದರೂ ನಿನಗೆ ಅದು ಕಡಿಮೆಬೀಳಲಿ ಮತ್ತು ನಿನಗೆ ಯಾವತ್ತೂ ತೃಪ್ತಿಯಾಗದಿರಲಿ ಎನ್ನುತ್ತಾಳೆ. ಕೇತಕಿ ಹೂವನ್ನು ಯಾವತ್ತೂ ಶಿವನ ಆರಾಧನೆಯಲ್ಲಿ ಬಳಸಬಾರದೆಂದು ಸೀತೆ ಶಾಪ ನೀಡುವಳು. ಗಯಾದ ಮಣ್ಣಿನಲ್ಲಿ ತುಳಸಿಯು ಬೆಳೆಯಬಾರದು ಎಂದು ಸೀತೆ ಶಾಪ ನೀಡುವಳು!. ಇದೇ ವೇಳೆ ತನ್ನ ಪರವಾಗಿ ಧೈರ್ಯದಿಂದ ಸಾಕ್ಷಿ ಹೇಳಿದ ಬಾಳೆಹಣ್ಣಿನ ಗಿಡಕ್ಕೆ ವರ ನೀಡುವ ಸೀತೆ, ಪಿಂಡದಾನದಲ್ಲಿ ಬಾಳೆಗಿಡವು ಅತ್ಯಗತ್ಯವಾಗಿ ಇರಲೇಬೇಕೆನ್ನುತ್ತಾಳೆ.

  ಸೀತೆಯ ಬಗೆಗಿನ ಕೆಲವೊಂದು ಆಸಕ್ತಿಕರ ಸಂಗತಿಗಳು

  ಜನಕ ರಾಜನ ದತ್ತುಪುತ್ರಿ ಸೀತಾ ಮಾತೆ ತನ್ನ ಸಹನೆ ಮತ್ತು ಪತಿ ಶ್ರೀರಾಮನ ಕಡೆಗಿನ ಅದಮ್ಯ ಒಲವಿನಿಂದ ಲೋಕಮಾತೆಯಾಗಿ ಹೆಸರುಗಳಿಸಿದವಳು. 14 ವರುಷ ವನವಾಸವನ್ನು ತನ್ನ ಪತಿಯೊಂದಿಗೆ ಅನುಭವಿಸಿದ ಸೀತಾ ಮಾತೆ ಎಂತಹ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಹೋರಾಡುವ ತ್ಯಾಗ ಮೂರ್ತಿಯಾಗಿ ರಾಮಾಯಣದಲ್ಲಿ ಕಂಡುಬಂದಿದ್ದಾಳೆ. ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಕೂಡ ಸೀತೆಯ ಸಹನೆ, ವಿನಯತೆ ಮತ್ತು ಪತಿಭಕ್ತಿಯ ಬಗ್ಗೆ ಹೊಗಳಿ ಬರೆದಿದ್ದಾರೆ. ಜನಕನ ಮಗಳಾದ್ದರಿಂದ ಜಾನಕಿ ಎಂಬ ಹೆಸರೂ ಮಾತೆಗೆ ಇದೆ. ಭೂಮಿಯನ್ನು ಊಳುತ್ತಿರುವಾಗ ದೊರಕಿದ ಮಗುವನ್ನು ಜನಕ ರಾಜ ಪ್ರೀತಿಯಿಂದ ಸಲಹುತ್ತಾರೆ. ಅಂತೆಯೇ ಮಗಳಾಗಿ, ಪತ್ನಿಯಾಗಿ ತಾಯಿಯಾಗಿ ಹೆಣ್ಣು ಹೇಗೆ ಲೋಕದಲ್ಲಿ ಇರಬೇಕೆಂಬ ಅಂಶವನ್ನು ಸಾರಿದ್ದಾರೆ. 

  ಸೀತಾ ಎಂಬ ಪದವು ಸಂಸ್ಕೃತದ ಮೂಲ....

  ಸೀತಾ ಎಂಬ ಪದವು ಸಂಸ್ಕೃತದಿಂದ ವಿಭಜನೆಗೊಂಡಿದ್ದು, ತನ್ನ ತಂದೆಗೆ ಭೂಮಿಯನ್ನು ಉಳುತ್ತಿರುವಾಗ ದೊರಕಿದ ಮಗಳಾಗಿದ್ದಾಳೆ ಸೀತೆ. ಭೂಮಿಯ ಫಲವತ್ತತೆಯ ಸಂಕೇತವಾಗಿ ಆಕೆಯನ್ನು ಬಣ್ಣಿಸಲಾಗಿದೆ. 

  ಭೂ ತಾಯಿಯ ಮಗಳು....

  ಭೂ ತಾಯಿಯ ಮಗಳು ಎಂಬುದಾಗಿ ಕೂಡ ಸೀತೆ ಪುರಾಣದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ, ಆದ್ದರಿಂದ ಭೂಮಿಜೆ ಎಂಬ ಹೆಸರೂ ಕೂಡ ಆಕೆಗಿದೆ. ತನ್ನ ಪತಿ ಶ್ರೀರಾಮನೊಂದಿಗೆ ಆಕೆ ವನವಾಸವನ್ನು ಅನುಭವಿಸುತ್ತಿದ್ದಾಗ "ವೈದೇಹಿ" ಎಂಬುದಾಗಿ ಕೂಡ ಆಕೆಯನ್ನು ಕರೆದಿದ್ದಾರೆ. 

  lord Sita

  ಜಾನಕಪುರ v/s ಸೀತಾಮರಾಹಿ

  ಸೀತಾ ಮಾತೆಯ ಹುಟ್ಟಿದ ಸ್ಥಳದ ಕುರಿತು ಸಾಕಷ್ಟು ವದಂತಿಗಳಿವೆ. ನೇಪಾಳದ ದಕ್ಷಿಣದಲ್ಲಿರುವ ಮಿಥಿಲಾದ ಜಾನಕಪುರ ಆಕೆಯ ಜನ್ಮಸ್ಥಳ ಎಂಬುದಾಗಿ ಕೆಲವರು ಹೇಳಿದರೆ, ಬಿಹಾರದಲ್ಲಿರುವ ಸೀತಾಮರಾಹಿ ಎಂಬುದಾಗಿ ಇನ್ನು ಕೆಲವರು ಹೇಳುತ್ತಾರೆ. 

  ಹಿಂದಿನ ಜನ್ಮದಲ್ಲಿ ವೇದವತಿ

  ಸೀತಾ ಮಾತೆಯು ವೇದವತಿ ಎಂಬ ಹೆಸರಿನಿಂದ ಹಿಂದಿನ ಜನ್ಮದಲ್ಲಿ ವಿಷ್ಣುವನ್ನು ವರಿಸಲು ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ರಾವಣನ ಕಿರುಕುಳಕ್ಕೆ ಒಳಗಾಗಿದ್ದರು. ಮುಂದಿನ ಜನ್ಮದಲ್ಲಿ ವಿನಾಶಗೊಳ್ಳುವ ಶಾಪವನ್ನು ವೇದವತಿಯಿಂದ ರಾವಣ ಪಡೆದುಕೊಂಡಿದ್ದನು. 

  English summary

  The Legend Of The Curse Given By Sita

  The story goes back to the times of Satyuga. Lord Ram, along with Lakshman and Goddess Sita, was living in exile. King Dasharath was then dead and it was a day to pay gratitude to the long dead ancestors of the family. This gratitude is paid by performing the Pinda Daan ceremony for the ancestors. It is done at the banks of a holy river. When all three of them reached the banks of the Phalgu river, in Gaya, Lord Ram asked the priest what are the Samagri (the sacred items required for the holy ceremony) that were required.
  Story first published: Tuesday, May 29, 2018, 15:52 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more