For Quick Alerts
ALLOW NOTIFICATIONS  
For Daily Alerts

ಮನುಕುಲದ ರಕ್ಷಕ ಭಗವಾನ್ ಶ್ರೀಕೃಷ್ಣನ ಹೆಸರಿನ ಹಿನ್ನೆಲೆಯ ಕಥೆ

|

ಶ್ರೀ ಕೃಷ್ಣ ಪರಮಾತ್ಮನು ವಿಷ್ಣುವಿನ ಅವತಾರ. ಮನುಕುಲದ ಒಳಿತಿಗಾಗಿ, ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಠರ ರಕ್ಷಣೆಗಾಗಿ ಅವತರಿಸಿ ಬಂದ ಅವತಾರ ಎಂದು ಹೇಳಲಾಗುವುದು. ವಿಷ್ಣುವಿನ ಹತ್ತು ಅವತಾರದಲ್ಲಿ ಒಂದಾಗಿರುವ ಶ್ರೀಕೃಷ್ಣನ ಅವತಾರವು ಅನೇಕ ರೋಚಕ ಕಥೆಗಳಿಂದ ಕೂಡಿದೆ. ಶ್ರೀಕೃಷ್ಣ ಪರಮಾತ್ಮನ ಬಾಲ್ಯ ಸಾಕಷ್ಟು ವಿಶಿಷ್ಟ ಕಥೆಗಳಿಂದ ಕೂಡಿದೆ. ದೇವಕಿ ಮತ್ತು ವಾಸುದೇವನ ಮಗನಾಗಿ ಸೆರೆಮನೆಯಲ್ಲಿ ಜನಿಸಿದನು. ಕೃಷ್ಣನಿಂದಲೇ ದುಷ್ಟನಾದ ಕಂಸನ ವಧೆ ಎನ್ನುವ ಸತ್ಯವನ್ನು ಕಂಸನು ತಿಳಿದುಕೊಂಡಿರುವುದರ ಪರಿಣಾಮವಾಗಿ ಶ್ರೀಕೃಷ್ಣನು ಬಾಲ್ಯದಲ್ಲಿ ಇರುವಾಗಲೇ ಕೊಂದ ಬೇಕು ಎಂದು ಅಂದುಕೊಂಡಿದ್ದನು.

ಈ ಹಿನ್ನೆಲೆಯಲ್ಲಿಯೇ ಶ್ರೀಕೃಷ್ಣನು ಬಾಲ್ಯದಲ್ಲಿ ಅನೇಕ ರೋಚಕ ಸಂಗತಿಗಳಿಂದ ಕೂಡಿತ್ತು ಎಂದು ಸಹ ಹೇಳಲಾಗುವುದು. ಶಕಟಾಸುರನ ವಧೆ, ಪೂತನಿಯ ವಧೆ, ಕಾಳಿಂಗ ಮರ್ಧನ ಗೋವರ್ಧನ ಗಿರಿಯ ರಕ್ಷಣೆ ಸೇರಿದಂತೆ ಅನೇಕ ಕಥೆಗಳು ಹೆಣೆದುಕೊಂಡಿವೆ. ಶ್ರೀಕೃಷ್ಣನ ಲೀಲೆಯು ಅತ್ಯಂತ ಸುಂದರ ಹಾಗೂ ಜೀವನಕ್ಕೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ಶ್ರೀಕೃಷ್ಣ ಅವತಾರವು ಮನುಕುಲಕ್ಕೊಂದು ನೀತಿಯ ಜೀವನ ಮಾರ್ಗವಾಗಿದೆ. ನಾವು ಕೈಗೊಳ್ಳುವ ಕೆಲಸವು ಹೇಗೆ ಧರ್ಮದಿಂದ ಕೂಡಿರಬೇಕು? ಎನ್ನುವುದನ್ನು ತೋರಿಸಿಕೊಡುತ್ತದೆ.

ಶ್ರೀಕೃಷ್ಣನ ಲೀಲೆ

ಶ್ರೀಕೃಷ್ಣನ ಲೀಲೆ

ಶ್ರೀಕೃಷ್ಣನ ಲೀಲೆ ಹಾಗೂ ಮಾರ್ಗದರ್ಶನವನ್ನು ಜನರು ಸದಾ ನೆನೆಯುತ್ತಾರೆ. ಕೃಷ್ಣನ ನಿಲುವು ಹಾಗೂ ಧರ್ಮದ ನುಡಿಯ ಮಾರ್ಗವನ್ನು ಸೂರದಾಸರು, ಪುರಂದರ ದಾಸರು, ಮೀರಾಬಾಯಿ ಹೀಗೆ ಅನೇಕರು ಅನುಸರಿಸುವುದರ ಮೂಲಕ ಭಕ್ತರಾಗಿದ್ದಾರೆ. ಜೊತೆಗೆ ಜನತೆಗೂ ಕೃಷ್ಣನ ಲೀಲೆ ಹಾಗೂ ಜೀವನದ ಕರ್ಮ ಹಾಗೂ ಧರ್ಮದ ಬಗ್ಗೆ ಸಾಕಷ್ಟು ಸಲಹೆ ಹಾಗೂ ಪ್ರವಚನವನ್ನು ಸಹ ನೀಡಿದ್ದಾರೆ. ಶ್ರೀಕೃಷ್ಣ ಎಂದು ಅವತರಿಸಿ ಬಂದ ವಿಷ್ಣುವಿನ ಅವತಾರ ಅತ್ಯಂತ ಪ್ರಸಿದ್ಧವಾದ ಅವತಾರ. ಈ ಅವತಾರಕ್ಕೆ ಶ್ರೀಕೃಷ್ಣ ಎಂದೇ ಏಕೆ ಹೆಸರು ಬಂತು ಎನ್ನುವುದು ಅನೇಕರಿಗೆ ತಿಳಿದಿಲ್ಲ. ನಾಮಕರಣ ಎನ್ನುವುದು ಪ್ರತಿಯೊಂದು ಧರ್ಮ ಹಾಗೂ ಸಮಾರಂಭದಲ್ಲಿ ಅತ್ಯಂತ ಪ್ರಮುಖ ಹಾಗೂ ಸಂಪ್ರದಾಯಗಳಿಂದ ಕೂಡಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಪಡೆದುಕೊಂಡಿರುವ ಪ್ರತಿಯೊಂದು ಕುಟುಂಬವೂ ಮಗುವಿಗೆ ಸೂಕ್ತ ಹೆಸರನ್ನು ಇಡುವುದರ ಮೂಲಕ ಸಂಸ್ಕಾರವನ್ನು ನೀಡಲಾಗುವುದು. ನಾಮಕರಣದ ಸಂಸ್ಕಾರ ನೀಡುವುದರ ಹಿಂದೆ ಮಗುವಿಗೆ ಸಂತೋಷ, ಆಶೀರ್ವಾದ ಹಾಗೂ ಸಮಾಜದಲ್ಲಿ ಕಾಣುವಂತೆ ಮಾಡುವುದು.

ಶ್ರೀಕೃಷ್ಣನ ಲೀಲೆ

ಶ್ರೀಕೃಷ್ಣನ ಲೀಲೆ

ನಾಮಕರಣ ಮಾಡುವುದರ ಹಿಂದೆ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ ತಮ್ಮ ಮಕ್ಕಳಿಗೆ ಇಡುವ ಹೆಸರು ಸೂಕ್ತ ಅರ್ಥವನ್ನು ಹೊಂದಿರಬೇಕು. ಹಾಗಾಗಿಯೇ ಪೋಷಕರು ತಮ್ಮ ಮಗುವಿಗೆ ಹೊಂದುವ, ಅತ್ಯುತ್ತಮ ವ್ಯಕ್ತಿತ್ವವನ್ನು ಬಿಂಬಿಸುವ ಹೆಸರನ್ನು ಇಡಲಾಗುವುದು. ಕೆಲವರು ತಮ್ಮ ಮಕ್ಕಳಿಗೆ ಪೌರಾಣಿಕ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದೇವರ ಹೆಸರುಗಳನ್ನು ಇಡುತ್ತಾರೆ. ಇದಕ್ಕೆ ಕರಣ ಆ ಹೆಸರಿನಿಂದ ಮಕ್ಕಳು ಪ್ರಭಾವಿತರಾಗಲಿ ಎಂದು ಬಯಸುವರು. ಅಲ್ಲದೆ ದೇವರ ಹೆಸರನ್ನು ಮಕ್ಕಳಿಗೆ ಇಡುವುದರಿಂದ ಪದೇ ಪದೇ ಕರೆಯುವಾಗ ದೇವರ ಹೆಸರನ್ನು ಜಪಿಸಿದಂತೆ ಆಗುವುದು ಎನ್ನುವ ಉದ್ದೇಶವನ್ನು ಹೊಂದಿರುತ್ತದೆ.

ವಿವಿಧ ಧರ್ಮದಲ್ಲಿ ವಿಭಿನ್ನ ನಾಮಕರಣ

ವಿವಿಧ ಧರ್ಮದಲ್ಲಿ ವಿಭಿನ್ನ ನಾಮಕರಣ

ವಿವಿಧ ಧರ್ಮ ಹಾಗೂ ಜಾತಿಗಳಲ್ಲಿ ವಿಭಿನ್ನ ರೀತಿಯ ನಾಮಕರಣ ಪದ್ಧತಿಯನ್ನು ಅನುಸರಿಸುತ್ತಾರೆ. ಹಿಂದೂ ಧರ್ಮದಲ್ಲಿ ಅಧಿಕ ಜನರು ದೇವರ ನಾಮ ಹಾಗೂ ದೈವಿಕ ಶಕ್ತಿಗೆ ಸಂಬಂಧಿಸಿದಂತಹ ಹೆಸರನ್ನು ಇಡುವುದು ಹೆಚ್ಚು. ಕೆಲವು ಧರ್ಮದಲ್ಲಿ ಹುಟ್ಟುವ ಮೊದಲೇ ಹೆಸರನ್ನು ಇಡುತ್ತಾರೆ. ಇನ್ನೂ ಕೆಲವರು ಹುಟ್ಟಿದ ಬಳಿಕ ಸ್ವಲ್ಪ ದಿನಗಳನ್ನು ಬಿಟ್ಟು ಹೆಸರನ್ನು ಇಡುತ್ತಾರೆ. ಅದೇ ನೀವು ದೇವರ ಹೆಸರನ್ನು ಹೇಗೆ ಅಸ್ತಿತ್ವಕ್ಕೆ ಬಂದವು ಎನ್ನುವುದನ್ನು ಯೋಚಿಸಿದ್ದೀರಾ?

ದೇವರ ಹೆಸರಿನ ಮೂಲ

ದೇವರ ಹೆಸರಿನ ಮೂಲ

ಮನು ಕುಲದ ರಕ್ಷಣೆಗೆ ದೇವತೆಗಳ ಹಲವಾರು ಅವತಾರ ಹಾಗೂ ರೂಪಗಳಿರುವುದನ್ನು ಕಾಣಬಹುದು. ಆ ಎಲ್ಲಾ ದೇವತೆಗಳಿಗೆ ಹೆಸರುಗಳನ್ನು ಯಾರು ಆರಿಸಿದರು? ಆ ಹೆಸರುಗಳ ಅರ್ಥವೇನು? ಯಾರು ಈ ಹೆಸರೇ ಸೂಕ್ತ ಎನ್ನುವುದನ್ನು ಆರಿಸಿದರು? ಎನ್ನುವಂತಹ ಅನೇಕ ವಿಷಯ ಹಾಗೂ ಮೂಲ ಕಾರಣಗಳ ಬಗ್ಗೆ ಆಸಕ್ತಿ ಮತ್ತು ಕುತೂಹಲ ಇರಬಹುದು. ಅಂತಹ ಕುತೂಹಲಕ್ಕೆ ಯಾರು ಉತ್ತರ ನೀಡುವರು ಎನ್ನುವುದರ ಬಗ್ಗೆ ನೀವು ಯೋಚಿಸಿರಬಹುದು. ಉತ್ತರ ಸಿಗದೆ ಸುಮ್ಮನಾಗಿರಬಹುದು.

ಕೃಷ್ಣ ಪರಮಾತ್ಮನ ಹೆಸರು ಹೇಗೆ ಬಂತು?

ಕೃಷ್ಣ ಪರಮಾತ್ಮನ ಹೆಸರು ಹೇಗೆ ಬಂತು?

ಕೆಲವೊಮ್ಮೆ ನಮ್ಮ ಮನಸ್ಸನ್ನು ಕಾಡುವ ಪ್ರಶ್ನೆಗೆ ಉತ್ತರ ಹುಡುಕಲು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಆ ಪ್ರಯತ್ನಕ್ಕೆ ಕೆಲವೊಮ್ಮೆ ಬೇಗ ಉತ್ತರ ದೊರೆಯುವುದು. ಅದೇ ಕೆಲವು ಬಾರಿ ಹುಡುಕಾಟವನ್ನು ಮುಂದುವರಿಸಬೇಕಾಗುತ್ತದೆ. ಇಂತಹ ಕುತೂಹಲವೆನಿಸಿದ ಪ್ರಶ್ನೆಯೊಂದು ನಮ್ಮನ್ನು ಕಾಡಲಾರಂಭಿಸಿತು. ಅದೇನೆಂದರೆ ಭಗವಾನ್ ಶ್ರೀ ಕೃಷ್ಣನಿಗೆ ಹೇಗೆ ಕೃಷ್ಣ ಎನ್ನುವ ಹೆಸರು ಬಂತು ಎನ್ನುವುದರ ಕುರಿತು. ನಂತರ ಅದಕ್ಕಾಗಿ ಪುರಾಥನ ಗ್ರಂಥದಲ್ಲಿ ಮಾಹಿತಿಯನ್ನು ಹುಡುಕಿದೆವು. ಆಗ ಸಿಕ್ಕ ಉತ್ತರವನ್ನು ಮತ್ತು ಅದಕ್ಕಿರುವ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಕೃಷ್ಣನ ನಾಮಕರಣ ಸಮಾರಂಭ

ಕೃಷ್ಣನ ನಾಮಕರಣ ಸಮಾರಂಭ

ನಾಮಕರಣ ಎಂದಾಗ ಸಾಮಾನ್ಯವಾಗಿ ಮಗುವನ್ನು ಹೆತ್ತವರು ಅಥವಾ ಕುಟುಂಬದ ಹಿರಿಯರು ಆಯ್ಕೆ ಮಾಡುತ್ತಾರೆ. ಆ ಹೆಸರನ್ನು ಇಡಲು ಪಾಲಕರು ಮುಂದಾಗುತ್ತಾರೆ. ಆದರೆ ಕೃಷ್ಣನ ವಿಚಾರದಲ್ಲಿ ಹಾಗಾಗಲಿಲ್ಲ. ಆತನನ್ನು ಹೆತ್ತವರು ಅಥವಾ ಹಿರಿಯರು ಯಾರೂ ಹೆಸರನ್ನು ಆಯ್ಕೆ ಮಾಡಲಿಲ್ಲ.

 ಕಂಸನ ಕ್ರೌರ್ಯ

ಕಂಸನ ಕ್ರೌರ್ಯ

ಕೃಷ್ಣನ ಜನ್ಮವೆತ್ತಿದವರಿಗೆ ಮೊದಲೇ ಭವಿಷ್ಯವಾಣಿ ದೊರೆತಿತ್ತು. ಇವರ ಹೊಟ್ಟೆಯಲ್ಲಿ ಹುಟ್ಟುವ ಗಂಡುಮಗುವು ಕ್ರೂರಿಯಾದ ಚಿಕ್ಕಪ್ಪನನ್ನು ಸಂವರಿಸುವನು ಎನ್ನುವುದು. ಇದನ್ನು ತಿಳಿದ ಕಂಸ ತನ್ನ ತಂಗಿ ದೇವಕಿ ಹಾಗೂ ಅವಳ ಪತಿ ವಾಸುದೇವನನ್ನು ಸೆರೆಮನೆಯಲ್ಲಿ ಇರಿಸಿದ್ದನ್ನು. ಭವಿಷ್ಯವಾಣಿಯಂತೆ ಎಂಟನೇ ಮಗುವಿನ ಜನನ ಅತ್ಯಂತ ಆಶ್ಚರ್ಯ ಹಾಗೂ ಅದ್ಭುತವನ್ನು ತೋರಿತು.

 ವಾಸುದೇವ ಮಥುರಾದಲ್ಲಿ ಇರಿಸಿದನು

ವಾಸುದೇವ ಮಥುರಾದಲ್ಲಿ ಇರಿಸಿದನು

ದೇವಕಿ ಎಂಟನೇ ಮಗುವನ್ನು ಹೆತ್ತಿದಾಗ ಆ ಮಗುವು ಅತ್ತಿರಲಿಲ್ಲ. ಬದಲಿಗೆ ತಂದೆಗೆ ಕೆಲವು ಮಾಹಿತಿಯನ್ನು ನೀಡಿತು. ಈ ಹಿನ್ನೆಲೆಯಲ್ಲಿಯೇ ವಾಸು ದೇವನು ಮಗುವನ್ನು ಮಥುರದಲ್ಲಿ ಇರಿಸಲು ನಿರ್ಧರಿಸಿದನು. ಇದಕ್ಕೆ ಸರಿಯಾಗಿ ದೈವಶಕ್ತಿಯ ಮಗುವು ಸೆರೆಮನೆಯ ಬಂಧನವನ್ನು ಕಳಚಿತು. ಸೆರೆಮನೆಯಿಂದ ಮಗುವನ್ನು ಆಚೆ ತಂದು ನಂದಗೋಕುಲಕ್ಕೆ ಕರೆದೊಯ್ದನು. ಆ ಸಂದರ್ಭದಲ್ಲಿ ಗೋಕುಲದ ಮುಖ್ಯಸ್ಥನಾದ ನಂದ ಹಾಗೂ ಅವನ ಹೆಂಡತಿ ಯಶೋಧೆಗೆ ಹೆಣ್ಣುಮಗುವಾಗಿತ್ತು. ವಾಸುದೇವನು ಆ ಹೆಣ್ಣು ಮಗುವಿನ ಸ್ಥಳದಲ್ಲಿ ಕೃಷ್ಣನನ್ನು ಮಲಗಿಸಿ, ಆ ಹೆಣ್ಣುಮಗುವನ್ನು ಹೊತ್ತು ಸೆರೆಮನೆಗೆ ಕರೆ ತಂದಿದ್ದನು.

ಸನ್ಯಾಸಿಗಳಾದ ಗಾರ್ಗ್‍ರು ಗೋಕುಲಕ್ಕೆ ಭೇಟಿ ನೀಡಿದ್ದರು

ಸನ್ಯಾಸಿಗಳಾದ ಗಾರ್ಗ್‍ರು ಗೋಕುಲಕ್ಕೆ ಭೇಟಿ ನೀಡಿದ್ದರು

ಕೆಲವು ದಿನಗಳ ಬಳಿಕ ಸುಪ್ರಸಿದ್ಧ ಸನ್ಯಾಸಿ ಆಚಾರ್ಯ ಗಾರ್ಗ್ ಮಥುರಾ ಮಾರ್ಗವಾಗಿ ಹೋಗುವಾಗ ಗೋಕುಲಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ನಂದನು ಸನ್ಯಾಸಿಯನ್ನು ಹೃದಯ ಪೂರ್ವಕವಾಗಿ ಆಹ್ವಾನಿಸಿದನು. ಒತ್ತಾಯ ಪೂರ್ವಕವಾಗಿ ಅಂದು ಅಲ್ಲಿಯೇ ಉಳಿದುಕೊಂಡರು. ತಮ್ಮ ಭೋದನೆಯನ್ನು ಉಪಸ್ಥಿತರಿದ್ದ ಸ್ಥಳೀಯರಿಗೆ ಭೋಧಿಸಿದರು. ಇದರಿಂದ ಅನೇಕರು ಜ್ಞಾನವನ್ನು ಪಡೆದುಕೊಂಡರು.

ಗೋಕುಲದ ದುರಾದರಷ್ಟ

ಗೋಕುಲದ ದುರಾದರಷ್ಟ

ದುರಾದೃಷ್ಟವಶಾತ್ ಕಂಸ ರಾಜನು ಗೋಕುಲದಲ್ಲಿ ಇರುವ ನವಜಾತ ಶಿಶುಗಳನ್ನು ಸೈನಿಕರಿಂದ ಕೊಲ್ಲಲ್ಪಟ್ಟಿದ್ದವು. ಹಾಗಾಗಿ ನಂದನು ಅವರ ಮಗ ಮತ್ತು ಸೋದರಳಿಯನ ಸುದ್ದಿಯನ್ನು ಬಹಿರಂಗ ಪಡಿಸಿರಲಿಲ್ಲ. ಹಾಗಾಗಿಯೇ ಯಾವುದೇ ಸ್ಥಳೀಯ ಅರ್ಚಕರನ್ನು ಸಹ ಆಹ್ವಾನಿಸಿ ಮಕ್ಕಳಿಗೆ ಹೆಸರನ್ನು ಇಟ್ಟಿರಲಿಲ್ಲ.

ಗಾರ್ಗ್ ಸಂಹಿತಾ

ಗಾರ್ಗ್ ಸಂಹಿತಾ

ತಮ್ಮ ಪರಿಸ್ಥಿತಿಯ ಬಗ್ಗೆ ಆಚಾರ್ಯರಾದ ಗಾರ್ಗ್ ಅವರಲ್ಲಿ ನಂದ ಮತ್ತು ಯಶೋದಾ ಹೇಳಿಕೊಂಡರು. ಜೊತೆಗೆ ತಮ್ಮ ಮಗ ಹಾಗೂ ಸೋದರ ಅಳಿಯನಿಗೆ ಹೆಸರನ್ನು ಇಡುವಂತೆ ಕೇಳಿಕೊಂಡರು. ಮಹಾನ್ ಜ್ಞಾನಿಗಳಾದ ಗಾರ್ಗ್ ಅವರು ಇವರ ಪರಿಸ್ಥಿತಿ ಹಾಗೂ ಮಕ್ಕಳ ದಿವ್ಯ ಶಕ್ತಿಯನ್ನು ಅರಿತರು. ಜೊತೆಗೆ ಅವರಿಗೊಂದು ನೆಮ್ಮದಿಯ ಮಾರ್ಗ ಸೂಚಿಸಿದರು.

ಕೃಷ್ಣ ಎನ್ನುವ ನಾಮಕರಣ ಆಯಿತು

ಕೃಷ್ಣ ಎನ್ನುವ ನಾಮಕರಣ ಆಯಿತು

ದಿವ್ಯ ಜ್ಞಾನವನ್ನು ಅರಿತ ಸನ್ಯಾಸಿಗಳು ಮಗುವು ವಿಷ್ಣುವಿನ ಅವತಾರ ಎನ್ನುವುದು ಅರಿತರು. ಅಂತೆಯೇ ಮಕ್ಕಳನ್ನು ಹಸುವಿನ ಕೊಟ್ಟಿಗೆಗೆ ರಹಸ್ಯವಾಗಿ ಕರೆದುಕೊಂಡು ಬರುವಂತೆ ಸೂಚಿಸಿದರು. ಅಂತೆಯೇ ಇಬ್ಬರು ಮಕ್ಕಳನ್ನು ನಂದ ಮತ್ತು ಯಶೋದ ಕರೆತಂದರು.

 ಸನ್ಯಾಸಿ ಗಾರ್ಗ್ ಕೃಷ್ಣ ಮತ್ತು ಬಲರಾಮ ಎಂದು ಹೆಸರಿಸಿದರು

ಸನ್ಯಾಸಿ ಗಾರ್ಗ್ ಕೃಷ್ಣ ಮತ್ತು ಬಲರಾಮ ಎಂದು ಹೆಸರಿಸಿದರು

ಮೊದಲಿಗೆ ನಂದನ ಸೋದರಳಿಯನನ್ನು ಎತ್ತಿಕೊಂಡು ರೋಹಿಣಿಯ ಈ ಮಗನು ಅತ್ಯಂತ ಸದ್ಗುಣದ ವ್ಯಕ್ತಿ ಆಗುತ್ತಾನೆ. ಜನರಿಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೂ ಹೌದು. ಇವರು ತನ್ನ ಹತ್ತಿರದವರಿಗೆ ಹಾಗೂ ಪ್ರೀತಿ ಪಾತ್ರರಿಗೆ ಸಂತೋಷವನ್ನು ತಂದುಕೊಡುತ್ತಾನೆ. ಹಾಗಾಗಿ ಇವನಿಗೆ ಬಲರಾಮ ಎಂದು ಹೆಸರಿಡಬೇಕು. ಜನರು ಇವನ ಮೇಲೆ ಪ್ರೀತಿಯಿಂದ ಬಾಲ ಎಂದು ಕರೆಯುವರು. ಜನರನ್ನು ಒಗ್ಗೂಡಿಸುವುದು, ಅವರಿಗೆ ಸಹಾಯ ಮಾಡುವುದು ಮತ್ತು ಪ್ರೀತಿಯನ್ನು ತೋರುವುದರಿಂದ ಇವನನ್ನು ಶಂಕರನ್ ಎಂದು ಸಹ ಕರೆಯುವರು ಎಂದು ನಾಮಕರಣ ಮಾಡಿದರು.

 ಕೃಷ್ಣ ವಿಷ್ಣುವಿನ ಅವತಾರ

ಕೃಷ್ಣ ವಿಷ್ಣುವಿನ ಅವತಾರ

ನಂತರ ನಂದನ ಮಗುವನ್ನು ಎತ್ತಿಕೊಂಡರು. ಆ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಇದು ವಿಷ್ಣುವಿನ ಅವತಾರದ ಮಗು ಎಂದು ತಿಳಿದರು. ಹಿಂದಿನ ಅವತಾರದಲ್ಲಿ ಕ್ರಮವಾಗಿ ಬಿಳಿ, ಕೆಂಪು ಮತ್ತು ಹಳದಿ ಬಣ್ಣವನ್ನು ಹೊಂದಿದ್ದನ್ನು. ಈ ಅವತಾರದಲ್ಲಿ ಕಡು ಬಣ್ಣವನ್ನು ತೆಗೆದುಕೊಂಡಿದ್ದಾನೆ. ಆದ್ದರಿಂದ ಈ ಬಾರಿ ಇವನು ಕೃಷ್ಣ ಎಂದು ಕರೆಯಲ್ಪಡುತ್ತಾನೆ. ಜನರಿಗೆ ಒಳಿತನ್ನು ಮಾಡುವುದರ ಮೂಲಕ ದುಷ್ಟರಿಗೆ ಶಿಕ್ಷೆಯನ್ನು ವಿಧಿಸುವನು. ಶಿಷ್ಟರನ್ನು ರಕ್ಷಿಸುವವನಾಗುತ್ತಾನೆ. ಎಂದು ಹೇಳುತ್ತಾ ಮಗುವಿಗೆ ಕೃಷ್ಣ ಎಂದು ಹೆಸರನ್ನು ನಾಮಕರಣ ಮಾಡಿದರು. ಈ ರೀತಿಯಲ್ಲಿ ಶ್ರೀಕೃಷ್ಣ ಪರಮಾತ್ಮನು ತನ್ನ ಹೆಸರನ್ನು ಪಡೆದುಕೊಂಡನು ಎಂದು ಹೇಳಲಾಗುವುದು.

English summary

Story behind how Lord Krishna got his name

Although the customs of Naming Ceremony (Naamkaran or Christening) may vary from family to family, depending upon their religious or cultural background, the mutual objective is to choose a name that would bring joy, blessings, and happiness in the child’s life.Particularly in Hinduism, every name has a meaning behind it and often parents search for the best ones that would suit their child’s personality. Sometimes they chose legendary names for their kids and hope that their kids get influenced by their name.While some families wait until the ceremony to officiate the ‘name’ (in Hinduism- Naamkaran), some register the name in advance and organize a christening or celebration later (in Christianity). But, did you ever wonder how the names of our deities came into existence?
X
Desktop Bottom Promotion