For Quick Alerts
ALLOW NOTIFICATIONS  
For Daily Alerts

  ಕರ್ಮ ಮತ್ತು ಧರ್ಮವನ್ನು ಅನುಸರಿಸುವುದೇ ಕಷ್ಟಗಳಿಂದ ಹೊರಬರುವ ಸೂತ್ರ

  By Jaya Subramanya
  |

  ಹಿ೦ದೂಗಳ ವಿಚಾರದಲ್ಲಿ ರಾಮನವಮಿಯು ಅತ್ಯ೦ತ ಪ್ರಮುಖವಾದ ಹಬ್ಬಗಳಲ್ಲೊ೦ದು. ಈ ಮ೦ಗಳದಾಯಕ ದಿನದ೦ದು ಭಕ್ತರು ಭಗವಾನ್ ಶ್ರೀ ರಾಮಚ೦ದ್ರನನ್ನು ಪರಮಭಕ್ತಿಯಿ೦ದ ಪೂಜಿಸುತ್ತಾರೆ ಹಾಗೂ ಧರ್ಮಮಾರ್ಗದಲ್ಲಿ ಜೀವನವನ್ನು ಸಾಗಿಸುವುದರ ಕುರಿತು ಶಪಥ ಮಾಡುತ್ತಾರೆ. 3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್ ಜೊತೆಗೆ ಪ್ರಭು ಶ್ರೀ ರಾಮಚ೦ದ್ರನಿ೦ದ ಆಶೀರ್ವಾದ, ಅನುಗ್ರಹ, ಹಾಗೂ ರಕ್ಷಣೆಯನ್ನೂ ಬೇಡಿಕೊಳ್ಳುತ್ತಾರೆ.

  ರಾಮ ನವಮಿ ಭಾರತದ ಜನಪ್ರಿಯ ಹಬ್ಬವಾಗಿದೆ. ಶ್ರೀ ರಾಮ ದೇವರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಮಾರ್ಚ್ - ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ಚೈತ್ರ ತಿಂಗಳ ಒಂಭತ್ತನೆಯ ದಿನವೇ ರಾಮ ನವಮಿ ಎಂದು ಹಿಂದೂ ಕ್ಯಾಲೆಂಡರ್ ನಿಖರಪಡಿಸುತ್ತದೆ. ಆದ್ದರಿಂದಲೇ ಹಿಂದೂಗಳಿಗೆ ರಾಮನವಮಿ ಒಂದು ಮಹತ್ವಪೂರ್ಣ ಹಬ್ಬವಾಗಿದೆ.

  Rama Navami

  ರಾಮ ನವಮೀ ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಯಾವುದು ಇಲ್ಲ, ಇದು ಸರಳವಾದ ಹಬ್ಬವಾಗಿದೆ. ಇಂದಿನ ಲೇಖನದಲ್ಲಿ ರಾಮನವಮಿ ಕುರಿತಾಗಿ ಕೆಲವೊಂದು ಅಂಶಗಳನ್ನು ತಿಳಿಯೋಣ.

  ರಾಮ ಮತ್ತು ಸಹೋದರರ ಜನನ

  ಅಯೋಧ್ಯೆಯ ರಾಜ ದಶರಥ ಮತ್ತು ಆತನ ಮೂವರು ಪತ್ನಿಯಯರು ಸಂತಾನವಿಲ್ಲವೆಂದು ಕೊರಗುತ್ತಿದ್ದರು. ಅಂತೆಯೇ ತನ್ನ ನಂತರ ರಾಜ್ಯವನ್ನು ಆಳ್ವಿಕೆ ಮಾಡಲು ಪುತ್ರನಿಲ್ಲ ಎಂಬ ಕೊರಗು ದಶರಥನನ್ನು ಯಾವಾಗಲೂ ಕಾಡುತ್ತಿತ್ತು. ಅದಕ್ಕಾಗಿ ಆತ ಪುತ್ರಕಾಮೇಷ್ಟಿ ಯೋಗವನ್ನು ಮಾಡುತ್ತಾನೆ. ಯಾಗದಿಂದ ಪ್ರಸನ್ನಗೊಂಡ ಅಗ್ನಿ ಒಂದು ಪಾತ್ರೆ ತುಂಬಾ ಪಾಯಸವನ್ನು ನೀಡಿ ಸಂತಾನ ಪ್ರಾಪ್ತಿಯಾಗುವಂತೆ ಮಾಡುತ್ತಾರೆ. ದಶರಥನು ಈ ಪಾಯಸವನ್ನು ತನ್ನ ಮೂವರೂ ಪತ್ನಿಯರಿಗೆ ಸಮಾನವಾಗಿ ಹಂಚುತ್ತಾನೆ. ಹೀಗೆ ದಶರಥನ ಪತ್ನಿಯರು ನಾಲ್ಕು ಪುತ್ರರಿಗೆ ಜನ್ಮವನ್ನು ನೀಡುತ್ತಾರೆ.

  ನೀತಿ - ದಶರಥನಿಗೆ ಗಂಡು ಮಕ್ಕಳು ಜನಿಸಲೇಬಾರದು ಎಂಬ ಶಾಪವನ್ನು ಆತ ಪಡೆದುಕೊಂಡಿರುತ್ತಾನೆ. ಆದರೆ ದೇವರೇ ಅವರ ಹಣೆಬರಹವನ್ನು ಪುನಃ ಬರೆದು ಗಂಡು ಮಕ್ಕಳು ಜನಿಸುವಂತೆ ಮಾಡುತ್ತಾರೆ. ನಾವು ಮಾಡುವ ಕೆಲಸವು ಉತ್ತಮವಾಗಿದ್ದರೆ ಶಾಪ ಕೂಡ ಹಿಮ್ಮೆಟ್ಟುತ್ತದೆ ಎಂದಾಗಿದೆ.

  ಕೈಕೇಯಿ ಮತ್ತು ಆಕೆಯ ಬೇಡಿಕೆಗಳು

  ಒಮ್ಮೆ ರಾಜ ದಶರಥನು ಯುದ್ಧಭೂಮಿಯಲ್ಲಿ ಗಾಯಗೊಂಡ ಸಂದರ್ಭದಲ್ಲಿ ಆತನ ಪತ್ನಿ ಕೈಕೇಯಿ ರಾಜನನ್ನು ರಕ್ಷಿಸುತ್ತಾಳೆ. ಆಗ ದಶರಥನು ಕೈಕೇಯಿಗೆ ಎರಡು ವರವನ್ನು ನೀಡಿ ಇದನ್ನು ಆಕೆ ಯಾವಾಗ ಬೇಕಾದರೂ ಕೇಳಬಹುದು ಎಂದು ನುಡಿಯುತ್ತಾನೆ. ಅಂತೆಯೇ ರಾಮನು ಮುಂದಿನ ಅಯೋಧ್ಯೆಯ ಯುವರಾಜನಾಗುವ ಸಂದರ್ಭದಲ್ಲಿ ಕೈಕೇಯಿ ಈ ವರಗಳನ್ನು ಬಳಸಿಕೊಳ್ಳುತ್ತಾಳೆ. ತನ್ನ ಮಗ ಭರತನನ್ನು ಯುವರಾಜನನ್ನಾಗಿ ಮಾಡಬೇಕು ಹಾಗೂ ರಾಮನಿಗೆ ವನವಾಸವನ್ನು ವಿಧಿಸಬೇಕು ಎಂದಾಗಿರುತ್ತದೆ. ಕೈಕೇಯಿ ದಾಸಿ ಮಂಥರ ಆಕೆಯ ಮನದಲ್ಲಿ ಈ ವಿಷಬೀಜದ ಉಪಾಯವನ್ನು ಬಿತ್ತಿರುತ್ತಾಳೆ.

  ನೀತಿ: ದುಃಖದ ಸಂದರ್ಭದಲ್ಲಿ ಮಾಡಿದ ನಿರ್ಧಾರಗಳು ಉತ್ತಮ ಕೊನೆಯನ್ನು ಕಾಣುವುದಿಲ್ಲ. ಹೊಟ್ಟೆಕಿಚ್ಚು ಎಂದಿಗೂ ಅವನತಿಗೆ ಕಾರಣವಾಗಿದೆ.

  Rama Navami

  ಭರತನ ವಿನಂತಿ

  ತನ್ನ ತಾಯಿಯಿಂದಾಗಿ ರಾಮನು ವನವಾಸಕ್ಕೆ ಹೋಗಬೇಕಾಗಿ ಬಂತು ಎಂಬುದನ್ನು ಅರಿತ ಭರತನು ಮಮ್ಮಲ ಮರುಗುತ್ತಾನೆ. ಆತ ಕೂಡಲೇ ರಾಮನು ವಾಸವಾಗಿರುವ ಕಾಡಿಗೆ ಹೋಗಿ ಪುನಃ ಬಂದು ರಾಜನಾಗಿ ಆಳ್ವಿಕೆ ಮಾಡಬೇಕೆಂದು ಅಂಗಲಾಚುತ್ತಾನೆ. ರಾಮನು ತಿರಸ್ಕರಿಸಿದಾಗ ಅವರ ಪಾದುಕೆಯನ್ನು ತಂದು ಸಿಂಹಾಸನದಲ್ಲಿ ಇರಿಸಿ, ರಾಮನ ಪರವಾಗಿ ರಾಜ್ಯವನ್ನು ಭರತ ಆಳ್ವಿಕೆ ಮಾಡುತ್ತಾನೆ. ತನ್ನ ತಲೆಯ ಮೇಲೆ ರಾಮನ ಪಾದುಕೆಗಳನ್ನು ಹೊತ್ತುಕೊಂಡು ಬಂದು ಅದನ್ನು ಸಿಂಹಾಸನದ ಮೇಲೆ ಭರತನು ಇರಿಸುತ್ತಾನೆ. ರಾಮನು ವನವಾಸ ಮುಗಿಸಿ ಬಂದ ಬಳಿಕ ಭರತನು ರಾಮನಿಗೆ ರಾಜ್ಯವನ್ನು ಹಸ್ತಾಂತರಿಸುತ್ತಾನೆ.

  ನೀತಿ: ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ಸಂಬಂಧಗಳ ನಡುವಿನ ಅನುಬಂಧ ಮಾಸುವುದಿಲ್ಲ. ದ್ವೇಷ ಅಸೂಯೆ ಮಾಡದೆಯೇ ಸಹೋದರ ವಾತ್ಸಲ್ಯದೊಂದಿಗೆ ಅನ್ಯೋನ್ಯವಾಗಿರುವುದು ಹೇಗೆ ಎಂಬುದನ್ನು ಭರತ ಮತ್ತು ರಾಮನ ಕಥೆ ನಮಗೆ ತೋರಿಸುತ್ತದೆ.

  ಶೂರ್ಪಣಖಿಯ ಭೇಟಿ

  ರಾವಣನ ಸಹೋದರಿ ಕಾಡಿನಲ್ಲಿ ರಾಮನನ್ನು ನೋಡಿ ಅವರಿಗೆ ಮನಸೋಲುತ್ತಾಳೆ. ತನಗೆ ವಿವಾಹವಾಗಿದ್ದು ಆಕೆಯ ಬೇಡಿಕೆಯನ್ನು ಮನ್ನಿಸಲಾಗುವುದಿಲ್ಲವೆಂದು ರಾಮನ ಹೇಳುತ್ತಾರೆ. ನಂತರ ಲಕ್ಷ್ಮಣನನ್ನು ಆಕೆ ಸಮೀಪಿಸಿ ವಿವಾಹವಾಗುವುದಾಗಿ ಬೇಡಿಕೆ ಇಟ್ಟಾಗ ಲಕ್ಷ್ಮಣ ಕೂಡ ತಿರಸ್ಕರಿಸುತ್ತಾನೆ. ಇದರಿಂದ ಕುಪಿತಗೊಂಡ ಶೂರ್ಪಣಖಿ ಸೀತೆಯ ಮೇಲೆ ಆಕ್ರಮಣಕ್ಕೆ ಮುಂದಾಗುತ್ತಾಳೆ. ಆಗ ಲಕ್ಷ್ಮಣನು ಶೂರ್ಪಣಖಿಯ ಮೂಗನ್ನು ಕತ್ತರಿಸುತ್ತಾನೆ.

  ನೀತಿ: ಕೋಪದ ಸಮಯದಲ್ಲಿ ಮಾಡಿದ ಕೆಲಸವು ಕೆಟ್ಟದ್ದಾಗಿರುತ್ತದೆ. ಶೂರ್ಪಣಖಿ ಇಲ್ಲವೇ ಲಕ್ಷ್ಮಣ ಇದಕ್ಕೆ ಉದಾಹರಣೆಯಾಗಿದ್ದಾರೆ.

  ಲಕ್ಷ್ಮಣ ರೇಖೆ ದಾಟುವುದು

  ತನ್ನ ಸಹೋದರಿಗಾದ ಅನ್ಯಾಯದ ಮೇಲೆ ಸೇಡು ತೀರಿಸಿಕೊಳ್ಳಲು ರಾವಣ ಮುಂದಾಗುತ್ತಾನೆ. ಮರೀಚನೆಂಬ ರಾಕ್ಷಸನನ್ನು ಕರೆಯಿಸಿ ಚಿನ್ನದ ಮಾಯದ ಜಿಂಕೆಯಾಗಿ ಪರಿವರ್ತನೆಗೊಳ್ಳಲು ಹೇಳುತ್ತಾನೆ. ಹೀಗೆ ಈ ಮಾಯಾವಿ ಜಿಂಕೆ ಅರಣ್ಯದಲ್ಲಿ ಓಡಾಡುತ್ತಿರಬೇಕಾದರೆ ಸೀತೆಗೆ ಅದರ ಮೇಲೆ ಮನಸ್ಸಾಗಿ ರಾಮನಲ್ಲಿ ತನಗಾಗಿ ಅದನ್ನು ತೆಗೆದುಕೊಂಡು ಬರುವಂತೆ ಹೇಳುತ್ತಾಳೆ. ರಾಮನು ಜಿಂಕೆಯ ಬೆನ್ನಟ್ಟಿಕೊಂಡು ಹೋಗಿ ಬಹಳ ಹೊತ್ತು ಬಾರದೇ ಇರುತ್ತಾರೆ. ಇದರಿಂದ ಗಾಬರಿಗೊಂಡ ಸೀತೆ ಲಕ್ಷ್ಮಣನನ್ನು ಕಳುಹಿಸಿ ಅಣ್ಣನನ್ನು ಹುಡುಕಿಕೊಂಡು ಬರುವಂತೆ ಹೇಳುತ್ತಾರೆ. ಲಕ್ಷ್ಮಣ ಸೀತೆಯ ಸುರಕ್ಷತೆಗಾಗಿ ಲಕ್ಷ್ಮಣ ರೇಖೆಯನ್ನು ಹಾಕಿ ಅತ್ತಿಗೆಗೆ ಇದನ್ನು ದಾಟದಂತೆ ಎಚ್ಚರಿಸಿ ಹೋಗುತ್ತಾನೆ. ಆದರೆ ರಾವಣ ಮೋಸದಲ್ಲಿ ಸೀತೆಯನ್ನು ಅಲ್ಲಿಂದ ಅಪಹರಣ ಮಾಡುತ್ತಾನೆ.

  ನೀತಿ: ಕೆಟ್ಟವರು ನೋಡಲು ಹಾನಿಮಾಡದಂತೆ ಕಾಣಿಸುತ್ತಾರೆ ಆದರೆ ಅವರನ್ನು ಸರಿಯಾಗಿ ತಿಳಿದುಕೊಳ್ಳದೆ ಅವರ ಮೇಲೆ ನಂಬಿಕೆ ಇರಿಸಬಾರದು. ಕೆಟ್ಟವರಿಗೆ ಒಳ್ಳೆಯದು ಮಾಡಿದರೂ ಅದರ ಅಂತ್ಯ ಕೆಟ್ಟದ್ದಾಗಿರುತ್ತದೆ.

  ಸುಗ್ರೀವ ಮತ್ತು ರಾಮನ ಗೆಳೆತನ

  ತನ್ನ ಪತ್ನಿ ಸೀತೆಯನ್ನು ಹುಡುಕುತ್ತಿರುವಾಗ ರಾಮನಿಗೆ ಸುಗ್ರೀವ ಮತ್ತು ಹನುಮಂತನ ಭೇಟಿಯಾಗುತ್ತದೆ. ಸೀತೆಯು ಅಪಹರಣದ ಸಮಯದಲ್ಲಿ ಎಸೆದಿದ್ದ ಬಂಗಾರವನ್ನು ರಾಮನಿಗೆ ನೀಡುತ್ತಾನೆ. ಸೀತಾ ಮಾತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ತಾನು ಸಹಾಯ ಮಾಡುವುದಾಗಿ ಸುಗ್ರೀವ ರಾಮನಿಗೆ ಮಾತನ್ನು ನೀಡುತ್ತಾನೆ.

  ನೀತಿ: ಸ್ನೇಹವೆಂಬುದು ಬೇರೆ ಬೇರೆ ವಿಧಾನಗಳಲ್ಲಿ ಕಂಡುಬರುವ ವರವಾಗಿದೆ. ಮುಕ್ತ ಮನಸ್ಸು ಮತ್ತು ಸ್ವಾಗತಿಸುವ ಕೈಗಳು ಬೇರೆ ಬೇರೆ ವಿಧಾನಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ.

  ಸಾಗರ ಪೂಜೆ

  ಸೀತೆಯನ್ನು ಲಂಕೆಗೆ ಅಪಹರಿಸಿ ಕೊಂಡೊಯ್ಯಲಾಗಿದೆ ಎಂಬುದನ್ನರಿತ ರಾಮನು ಸಾಗರ ಪೂಜೆಯನ್ನು ಮಾಡಲು ನಿರ್ಧರಿಸುತ್ತಾರೆ. ಸಾಗರ ರಾಜನು ಸಮುದ್ರವನ್ನು ದಾಟಿ ಲಂಕೆಗೆ ಹೋಗಲು ರಾಮನಿಗೆ ಸಹಾಯ ಮಾಡುತ್ತಾನೆ. ರಾಮನು ಮೂರು ದಿನ ಉಪವಾಸವನ್ನು ಕೈಗೊಂಡು ಸಾಗರದ ದಡದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಆದರೆ ಸಾಗರ ರಾಜ ಪ್ರತ್ಯಕ್ಷನಾಗುವುದಿಲ್ಲ. ತನ್ನ ತಾಳ್ಮೆಯನ್ನು ಕಳೆದುಕೊಂಡ ರಾಮನು ಸಾಗರದ ನೀರನ್ನು ಕುಡಿಯುವ ತೀರ್ಮಾನವನ್ನು ಕೈಗೊಳ್ಳುತ್ತಾರೆ. ಕೂಡಲೇ ಸಾಗರ ರಾಜನು ಪ್ರತ್ಯಕ್ಷಗೊಂಡು ರಾಮನಿಗೆ ಸೇತುವೆ ಕಟ್ಟಲು ಸಹಾಯ ಮಾಡುವುದಾಗಿ ಮಾತನ್ನು ನೀಡುತ್ತಾರೆ.

  ನೀತಿ: ಬರಿಯ ಪ್ರಾರ್ಥನೆ ಮಾತ್ರ ನಿಮಗೆ ಫಲ ನೀಡುವುದಿಲ್ಲ. ಪ್ರಾರ್ಥನೆಯೊಂದಿಗೆ ಪ್ರವೃತ್ತಿಯನ್ನು ನಿರ್ವಹಿಸಬೇಕು.

  ರಾವಣನ ಮರಣ

  ಯುದ್ಧದ ಕೊನೆಯಲ್ಲಿ ರಾಮನು ರಾವಣನೊಂದಿಗೆ ಯುದ್ಧವನ್ನು ಮಾಡುತ್ತಾರೆ. ರಾಮನು ಎಷ್ಟೇ ಬಾಣ ಬಿಟ್ಟು ರಾವಣನ ತಲೆಯನ್ನು ಉರುಳಿಸಲು ನೋಡಿದರೂ ಪುನಃ ಇನ್ನೊಂದು ತಲೆ ಅಲ್ಲಿ ಬಂದಿರುತ್ತಿತ್ತು. ನಂತರ ರಾಮನು ರಾವಣನ ಹೊಟ್ಟೆಯಲ್ಲಿ ಅಮೃತವಿರುವುದನ್ನು ತಿಳಿದುಕೊಳ್ಳುತ್ತಾರೆ. ನಂತರ ರಾವಣನ ಹೊಟ್ಟೆಗೆ ಗುರಿಯಾಗಿ ರಾಮನ ಬಾಣವನ್ನು ಬಿಡುತ್ತಾರೆ. ಹೀಗೆ ರಾವಣನ ಅಂತ್ಯವಾಗುತ್ತದೆ.

  ನೀತಿ: ಸಾವಿರ ಕೆಲಸ ಮಾಡುವುದಕ್ಕಿಂತ ಒಂದು ಉತ್ತಮ ಕೆಲಸ ಮಾಡುವುದು ಆ ಸಾವಿರ ಕೆಲಸದ ಫಲವನ್ನು ನೀಡುತ್ತದೆ.

  ರಾಮನ ಪಟ್ಟಾಭಿಷೇಕ

  14 ವರ್ಷಗಳ ತರುವಾಯ ರಾಮನು ತನ್ನ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಯನ್ನು ತಲುಪುತ್ತಾರೆ. ನಂತರ ರಾಜನಾಗಿ ಪಟ್ಟಾಭಿಷೇಕಗೊಂಡು ಸಾವಿರ ವರ್ಷ ಆಳ್ವಿಕೆಯನ್ನು ನಡೆಸುತ್ತಾರೆ.

  ನೀತಿ: ಜೀವನದಲ್ಲಿ ನೀವು ಯಾವುದೇ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಸಮಯ ಬದಲಾಗಿ ಅದು ನಿಮಗೆ ಸುಖಾಂತ್ಯವನ್ನು ನೀಡುತ್ತದೆ. ರಾಮ ಕೂಡ ತನ್ನ ಜೀವನದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸಬೇಕಾಯಿತು. ನಮ್ಮ ಜೀವನದಲ್ಲಿ ಕೂಡ ನಾವು ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತೇವೆ. ಕರ್ಮವನ್ನು ಮಾಡುವುದು ಮತ್ತು ಧರ್ಮವನ್ನು ಪಾಲಿಸುವುದರಿಂದ ನಮ್ಮ ಕಷ್ಟದ ದಿನಗಳಿಂದ ನಾವು ಹೊರಬರಲು ನೆರವನ್ನು ನೀಡುತ್ತದೆ.

  English summary

  Stories From The Ramayana On Rama Navami

  Lord Rama has many incarnations. He is considered to be the 7th avatar of Lord Vishnu. Ramayana is an epic book that defines about Lord Rama and his life. There are certain things that one should know about Lord Rama specially on Rama Navami.Lord Rama's life, its struggles and triumphs were recorded in a 'Maha Kavya' called the Ramayana.
  Story first published: Sunday, March 25, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more