ಗುರುವಾರ ವಿಷ್ಣುವಿಗೆ ಪೂಜೆ ಮಾಡಿ ಲಕ್ಷ್ಮೀ ದೇವಿಯನ್ನು ಮನೆಗೆ ಬರಮಾಡಿಕೊಳ್ಳಿ

Posted By: Deepu
Subscribe to Boldsky

ವಾರ ಬಂತಮ್ಮ ಗುರುವಾರ ಬಂತಮ್ಮ ಎಂಬ ರಾಯರ ಕುರಿತಾಗಿ ಹಾಡಿರುವ ಹಾಡನ್ನು ನೀವು ಕೇಳಿರಬಹುದು. ಅದರ ಜೊತೆಗೆ ಗುರುವಾರ ಸಾಯಿಬಾಬಾರನ್ನು ನೆನೆಯುವ ಪುಣ್ಯ ದಿವಸ ಕೂಡ ಹೌದು. ಜೊತೆಗೆ ಈ ದಿನವನ್ನು ಹಿಂದೂ ಭಗವಾನರಾದ ವಿಷ್ಣುವಿಗೆ ಅರ್ಪಿಸಲಾಗಿದೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ವಿಷ್ಣುವಿಗೆ ತ್ರಿದೇವ ಎಂಬ ಹೆಸರೂ ಇದೆ. ಈ ದಿನವನ್ನು ವೃಹಸ್ಪತಿವಾರ ಎಂದು ಕರೆಯಲಾಗಿದ್ದು ವಿಷ್ಣು ಭಗವಾನ್ ಇಲ್ಲವೇ ಭಗವಾನ್ ಬೃಹಸ್ಪತಿಗೆ ಮೀಸಲಾಗಿದೆ.

ಮಾನವ ದೇಹವನ್ನು ಹೊಂದಿರುವ ವಿಷ್ಣುವು ನಾಲ್ಕು ಕೈಗಳನ್ನು ಹೊಂದಿದ್ದಾರೆ. ಕಿರೀಟವನ್ನು ಧರಿಸಿಕೊಂಡು ಒಂದೊಂದು ಕೈಯಲ್ಲಿ ಒಂದೊಂದು ಆಯುಧವನ್ನು ಹಿಡಿದುಕೊಂಡು ವಿಷ್ಣುವು ಸಾಕಾರಗೊಂಡಿದ್ದಾರೆ. ಒಂದು ಕೈಯಲ್ಲಿ ಶಂಖ, ಗಧೆ ಮತ್ತು ಚಕ್ರವನ್ನು ಹೊಂದಿದ್ದಾರೆ. ಹಿಂದೂ ಧರ್ಮದಲ್ಲಿ ಹಳದಿಯನ್ನು ಜ್ಞಾನಕ್ಕೆ ಸಂಕೇತಿಸಲಾಗಿದೆ.

ಈ ದೇವನ ಪತ್ನಿಯು ಲಕ್ಷ್ಮೀಯಾಗಿದ್ದು ಲಕ್ಷ್ಮೀಯನ್ನು ಧನಸಂಪತ್ತಿಗೆ ಅಧಿಪತಿ ಎಂದು ಕರೆಯಲಾಗಿದೆ. ಲಕ್ಷ್ಮೀ ಮಾತೆಯು ಮನೆಗೆ ಸಂಪತ್ತನ್ನು ತರುವವರಾಗಿದ್ದಾಳೆ, ಆದ್ದರಿಂದ ವಿಷ್ಣು ಮತ್ತು ಲಕ್ಷ್ಮೀಯನ್ನು ಗುರುವಾರ ಮತ್ತು ಶುಕ್ರವಾರ ಜೊತೆಯಾಗಿ ಪೂಜಿಸುವುದರಿಂದ ಧನ ಸಂಪತ್ತು ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆಯಾಗಿದೆ.

ದಕ್ಷಿಣ ಭಾರತದಲ್ಲಿ ಮಹಾವಿಷ್ಣುವಿಗೆ ಪ್ರತಿ ಮನೆಯಲ್ಲೂ ಪೂಜೆಯನ್ನು ನಡೆಸಲಾಗುತ್ತದೆ. ಇದರಿಂದ ಧನ ಕನಕ ಸಂಪತ್ತು ಮನೆಗೆ ಬರುತ್ತದೆ ಎಂಬುದು ನಂಬಿಕೆಯಾಗಿದೆ. ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ಪೂಜನೀಯ ಪ್ರಾಶಸ್ತ್ಯವನ್ನು ನೀಡಲಾಗಿದೆ. ಹಾಗಿದ್ದರೆ ಈ ದಿನಂದು ನೀವು ಅನುಸರಿಸಬೇಕಾದ ವಿಧಿ ವಿಧಾನಗಳೇನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಹಂತಗಳನ್ನು ನೋಡಿ...

ಹಳದಿ ಧಾರಣೆ

ಹಳದಿ ಧಾರಣೆ

ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ಪವಿತ್ರತೆಯನ್ನು ನೀಡಲಾಗಿದೆ. ವಿಷ್ಣು ಪೀತಾಂಬರ ದಿರಿಸುಗಳನ್ನು ಹಳದಿ ಬಣ್ಣದಲ್ಲಿ ಮಾಡಲಾಗಿದೆ. ವಿಷ್ಣು ಭಕ್ತರೂ ಕೂಡ ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸಬೇಕು. ಇನ್ನು ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಿಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ.

ವಿಷ್ಣುವಿನ ಪೂಜೆ

ವಿಷ್ಣುವಿನ ಪೂಜೆ

ಹಿಂದೂ ಭಕ್ತರು ಗುರುವಾರದಂದು ವಿಶೇಷವಾಗಿ ಅನುಸರಿಸುವ ವಿಧಿ ವಿಧಾನವಾಗಿದೆ. ಲಕ್ಷ್ಮೀ ದೇವಿಯನ್ನು ಮನೆಗೆ ಕರೆತರಲು ವಿಷ್ಣು ಮಂತ್ರವನ್ನು ಪಠಿಸುತ್ತಾರೆ. ಅದರಲ್ಲೂ ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ದಿನದಂದು ವ್ರತವನ್ನು ಕೈಗೊಳ್ಳುವವರು ಗಜ್ಜರಿ ಮತ್ತು ತುಪ್ಪವನ್ನು ಬಳಸಿದ ವ್ರತಾಹಾರವನ್ನು ಸೇವಿಸುತ್ತಾರೆ. ಈ ದಿನದಂದು ವ್ರತವನ್ನು ಕೈಗೊಂಡವರು, ಧನ, ಕೀರ್ತಿ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಬೇಳೆ ಕಾಳುಗಳ ಅರ್ಪಣೆ

ಬೇಳೆ ಕಾಳುಗಳ ಅರ್ಪಣೆ

ಹಿಂದೂ ಧರ್ಮದಲ್ಲಿ ವಿಷ್ಣು ಭಕ್ತರು ವಿಷ್ಣುವಿಗೆ ಬೇಳೆ ಕಾಳುಗಳನ್ನು ಅರ್ಪಿಸುತ್ತಾರೆ. ಇದರೊಂದಿಗೆ ಬೆಲ್ಲವನ್ನೂ ನೀವು ಮಿಶ್ರ ಮಾಡಿಕೊಳ್ಳಬಹುದು. ಬೇಳೆ ಮತ್ತು ಬೆಲ್ಲವು ಹಳದಿ ಬಣ್ಣದಲ್ಲಿರುವುದರಿಂದ ಗುರುವಾರದಂದು ವಿಷ್ಣುವನ್ನು ಸಂಪ್ರೀತಗೊಳಿಸಲು ನೀವು ಇದನ್ನು ದೇವರಿಗೆ ನೀಡಬಹುದು.

ಬಾಳೆ ಮರಕ್ಕೆ ಪೂಜೆ

ಬಾಳೆ ಮರಕ್ಕೆ ಪೂಜೆ

ಅತ್ಯಂತ ಪುರಾತನ ಧರ್ಮವೆಂದರೆ ಅದು ಹಿಂದೂ ಧರ್ಮ. ಹಿಂದೂ ಧರ್ಮವನ್ನು ತುಂಬಾ ಪವಿತ್ರ ಧರ್ಮವೆನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ವಲ್ಪ ಆರ್ಯರ ಪ್ರಭಾವವು ಇರುವ ಕಾರಣದಿಂದ ನಾವು ಮರ ಹಾಗೂ ಇತರ ಕೆಲವೊಂದು ವಸ್ತುಗಳನ್ನು ಕೂಡ ಪವಿತ್ರವೆಂದು ನಂಬಿ ಅದನ್ನು ಪೂಜಿಸುತ್ತೇವೆ. ಅಗ್ನಿ, ಸೂರ್ಯ, ನದಿಗಳು, ತುಳಸಿ ಗಿಡ, ಮಣ್ಣು, ಅಶ್ವತ್ಥ ಮರ ಹೀಗೆ ಹಲವಾರು ವಸ್ತುಗಳ ಹಿಂದೂಗಳಿಗೆ ತುಂಬಾ ಪವಿತ್ರವೆನಿಸಿದೆ. ಇತರ ಧರ್ಮದವರಿಗೆ ಇದನ್ನು ನೋಡಿ ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಇದನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ಹಿಂದೂ ಧರ್ಮದಲ್ಲಿ ಬಾಳೆ ಮರಕ್ಕೆ ವಿಶೇಷ ಸ್ಥಾನವಿದೆ. ನೀವು ನೀರನ್ನು ನೀಡಬಹುದು ಮತ್ತು ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬಹುದಾಗಿದೆ.

ಸತ್ಯನಾರಾಯಣ ಕಥೆ

ಸತ್ಯನಾರಾಯಣ ಕಥೆ

ಸತ್ಯವೇ ದೇವರು ಎಂಬ ನಂಬಿಕೆಯ ಸಾಕಾರರೂಪವಾಗಿರುವ ಸತ್ಯ ನಾರಾಯಣನಿಗೆ ಸಲ್ಲಿಸುವ ಪೂಜೆಯೇ ಸತ್ಯನಾರಾಯಣ ಪೂಜೆ. ಹಿಂದೂಗಳು ವಿವಿಧ ದೇವರುಗಳಿಗೆ ಸಲ್ಲಿಸುವ ಪೂಜೆಗಳಲ್ಲಿ ಈ ಪೂಜೆ ಹೆಚ್ಚಿನ ಮಹತ್ವದ ಮತ್ತು ಹೆಚ್ಚಾಗಿ ಸಲ್ಲಿಸಲ್ಪಡುವ ಪೂಜೆಯಾಗಿದೆ. ಅನಾದಿಕಾಲದಿಂದಲೂ ಈ ಪೂಜೆಯನ್ನು ಸಲ್ಲಿಸಿದ ಭಕ್ತರಿಗೆ ದೇವರು ಹಲವು ರೀತಿಯ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಪೂಜೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಿದ ಭಕ್ತರ ಕಂಟಕಗಳು ನಿವಾರಣೆಯಾಗಿರುವುದನ್ನು ಕಂಡ ಬಳಿಕ ಈ ಪೂಜೆಯ ಮಹತ್ವವೇನೆಂದು ಅರಿವಾಗುತ್ತದೆ. ಅದರಲ್ಲೂ ಗುರುವಾರದಂದು ಪ್ರತಿಯೊಬ್ಬ ವಿಷ್ಣು ಭಕ್ತರೂ ದೇವರನ್ನು ಒಲಿಸಿಕೊಳ್ಳಲು ಸತ್ಯನಾರಾಯಣ ಕಥೆಯ ಪಾರಾಯಣವನ್ನು ಮಾಡುತ್ತಾರೆ.

ದಾನ

ದಾನ

ಪ್ರತಿಯೊಂದು ಧರ್ಮದಲ್ಲಿ ಕೂಡ ದಾನಕ್ಕೆ ವಿಶೇಷ ಸ್ಥಾನವಿದೆ. ಬಡವರಿಗೆ ಮತ್ತು ಅಗತ್ಯವಿದ್ದವರಿಗೆ ಬೇಕಾದ ವಸ್ತುಗಳನ್ನು ದಾನ ಮಾಡಬೇಕು. ಆಹಾರ, ಹಣ ಅಥವಾ ಬಟ್ಟೆಗಳನ್ನು ನೀವು ದಾನ ಮಾಡಬಹುದು. ಇವೇ ಮುಂತಾದ ಕೆಲವೊಂದು ವಿಧಿ ವಿಧಾನಗಳನ್ನು ನೀವು ಗುರುವಾರದಂದು ಆಚರಣೆ ಮಾಡಬೇಕು.

English summary

Spiritual Things To Do On Thursday

In South India, Lord Vishnu is worshiped in almost all the household. To bring prosperity and wealth, people worship Lord Vishnu on Thursday. Even otherwise, Thursday is considered as one of the spiritual days in Hinduism. So what spiritual things you should follow on a Thursday? Take a look.