For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್ ವಿಶೇಷ: ನೀವು ತಿಳಿದಿರದ ಇಂಟರೆಸ್ಟಿಂಗ್ ವಿಷಯಗಳು...

By Manu
|

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೇಕ್ ತಯಾರಿ, ಮಾಂಸದಡುಗೆ ಸಿದ್ಧಮಾಡುವುದು, ವೈನ್‌ಗಳ ಸೇವನೆ ಹೀಗೆ ಕ್ರಿಸ್‌ಮಸ್ ಆಚರಣೆಯಲ್ಲಿ ಕೈಗೊಳ್ಳುವ ಪ್ರತಿಯೊಂದು ವಿಧಾನಗಳಿಗೂ ಅದರದ್ದೇ ಆದ ಮಹತ್ವವಿದೆ. ದೇವರ ಪುತ್ರನು ಹುಟ್ಟಿದ ಈ ಶುಭ ಸಂದರ್ಭವನ್ನು ಕ್ರೈಸ್ತ ಬಾಂಧವರು ಶ್ರದ್ಧೆ ನಂಬಿಕೆ ಆಚರಣೆಗಳಿಂದ ಆಚರಿಸುತ್ತಾರೆ. ಕ್ರಿಸ್‌ಮಸ್ ಹಬ್ಬ: ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿ

ಮಾನವರನ್ನು ಸಜ್ಜನ ಮಾರ್ಗದಲ್ಲಿ ನಡೆಯಿಸಲು ಮತ್ತು ಪ್ರೀತಿಯ ಸಹಬಾಳ್ವೆಯ ಪಾಠವನ್ನು ತಿಳಿಸಿಕೊಡುವುದಕ್ಕಾಗಿ ಬಡ ಮೇರಿಯ ಗರ್ಭದಲ್ಲಿ ಏಸು ಕ್ರಿಸ್ತರು ಜನ್ಮ ತಾಳುತ್ತಾರೆ. ದೇವರೇ ತಮ್ಮ ಪುತ್ರನನ್ನು ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಕಳುಹಿಸಿರುತ್ತಾರೆ ಎಂಬುದು ಬೈಬಲ್‌ನಲ್ಲಿ ಉಲ್ಲೇಖಿತವಾದುದಾಗಿದೆ.

ಈ ಪುಣ್ಯ ದಿನವನ್ನು ಆಚರಿಸುವಾಗ ಪ್ರಾರ್ಥನೆ, ದೇವರ ಸ್ತುತಿಯೊಂದಿಗೆ ಭೂರೀ ಭೋಜನವನ್ನು ಏರ್ಪಡಿಸಲಾಗುತ್ತದೆ. ಏಕೆಂದರೆ ಏಸುವು ತಮ್ಮ ಜನರಿಗೆ ಎಂದಿಗೂ ಹೊಟ್ಟೆ ತುಂಬಾ ಆಹಾರವನ್ನು ಒದಗಿಸುತ್ತಿದ್ದರು. ಯಾರೂ ಹಸಿವಿನಿಂದ, ಅರೆ ಹೊಟ್ಟೆಯಿಂದ ಬಳಲುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.

Christmas Wreath

ಇದರಿಂದಲೇ ಕ್ರಿಸ್‌ಮಸ್ ನಂದು ಆಹಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇಂತಹುದೇ ಅತಿ ವಿಶಿಷ್ಟ ವಸ್ತುವಾದ ಹಾರದ ಅಥವಾ ಮಾಲೆಯ ಬಗ್ಗೆ ನಾವಿಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದು ಕ್ರಿಸ್‌ಮಸ್ ಹಾರ ಅತಿ ಮಹತ್ವ ಮತ್ತು ವಿಶಿಷ್ಟವಾದುದು ಏಕೆ ಎಂಬುದನ್ನು ಅರಿಯೋಣ. ಕ್ರಿಸ್‌ಮಸ್ ಹಾರವನ್ನು ಮನೆಯ ಮುಂಭಾಗದಲ್ಲಿ ಇರಿಸುತ್ತಾರೆ. ಕ್ರಿಸ್‌ಮಸ್ ಹಬ್ಬದ ವಿಶೇಷ: ಮೂರು ಬಣ್ಣಗಳ ಮಹತ್ವ

ಪವಿತ್ರ ಬೆರ್ರಿ, ಕೆಂಪು ಅಲಂಕಾರಿಕ ಸಾಮಾಗ್ರಿಗಳಿಂದ ಹಾರವನ್ನು ತಯಾರಿಸುತ್ತಾರೆ. ವೃತ್ತಾಕಾರದಲ್ಲಿ ಇದು ಇದ್ದು ಮನೆಯ ಮುಂಭಾಗದಲ್ಲಿ ಇದನ್ನು ತೂಗಿಸುತ್ತಾರೆ. ಎವರ್ ಗ್ರೀನ್ ಎಲೆಗಳಿಂದ ಇದನ್ನು ತಯಾರಿಸಿದ್ದು ಇದು ಶಕ್ತಿಯ ಸಂಕೇತವಾಗಿದೆ.

ಹಾರದ ಅರ್ಥವೇನು

ಮಧ್ಯ ಇಂಗ್ಲೀಷ್ ಪದವಾದ "ವ್ರೆತ್‌ನಿಂದ" ಈ ಹಾರ ಪದ ಬಂದಿದ್ದು, ಬ್ಯಾಂಡ್ ಅಥವಾ ತಿರುಚಿದ ರಿಂಗ್ ಎಂಬುದಾಗಿದೆ. ಹಲವಾರು ಶತಮಾನಗಳಿಂದ ಇದನ್ನು ಬಳಸುತ್ತಿದ್ದಾರೆ. ಈ ವೃತ್ತಾಕಾರದ ಹಾರವು ಶಾಶ್ವತತೆ ಮತ್ತು ಶಾಶ್ವತ ಜೀವನದ ಮಹತ್ವವನ್ನು ತಿಳಿಸಿಕೊಡುತ್ತದೆ. ಈ ಹಾರಕ್ಕೆ ಯಾವುದೇ ಆರಂಭ ಮತ್ತು ಕೊನೆ ಇರುವುದಿಲ್ಲ ಅಂತೆಯೇ ಮಾನವ ಜೀವನ ಕೂಡ ಎಂಬುದಾಗಿ ಈ ಹಾರ ತಿಳಿಸಿಕೊಡುತ್ತದೆ.

ಮಹತ್ವ

ಜೀವನದ ಶಕ್ತಿ ಸಾಮರ್ಥ್ಯದ ಪ್ರತೀಕವಾಗಿ ಈ ಹಾರವನ್ನು ಒಳಗೊಂಡಿರುವ ವಸ್ತುಗಳು ಬಿಂಬಿಸುತ್ತವೆ. ತಣ್ಣನೆಯ ಮತ್ತು ಘನೀಕರಿಸುವ ಹವಾಮಾನವನ್ನು ತಡೆಯುವ ಸಾಮರ್ಥ್ಯವನ್ನು ಎವರ್ ಗ್ರೀನ್ ಎಲೆಗಳು ತಿಳಿಸಿಕೊಡುತ್ತವೆ. ಅಂತೆಯೇ ಮಾನವರೂ ಕೂಡ ತಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಸಂಕಷ್ಟಗಳನ್ನು ಶಕ್ತಿ ಸಾಮರ್ಥ್ಯದಿಂದ ಎದುರಿಸಬೇಕು ಎಂಬುದನ್ನು ಇವು ಪ್ರಸ್ತುತಪಡಿಸುತ್ತದೆ. ಕ್ರಿಸ್ಮಸ್ ಹಬ್ಬಕ್ಕೆ ಸಾಥ್ ನೀಡುವ ಕ್ಯಾಂಡಿ ಕೇನ್ ರೆಸಿಪಿ

ಮಾಲೆಯ ಆಕಾರವು ಏಸುವಿನ ತಲೆಯನ್ನು ಅಲಂಕರಿಸಿದ್ದ ಮುಳ್ಳಿನ ಕಿರೀಟವನ್ನು ಸಂಕೇತಿಸುತ್ತಿದ್ದು, ಪುನರುಜ್ಜೀವನ ಮತ್ತು ಶಾಶ್ವತ ಜೀವನವನ್ನು ಎತ್ತಿಹಿಡಿದಿದೆ. ಬೆರ್ರಿ ಮತ್ತು ಇತರ ಹಣ್ಣುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಬಿಂಬಿಸುತ್ತವೆ.

ಮಾಲೆಗಳ ವಿಧಗಳು

ಮಾಲೆಗಳನ್ನು ಪ್ರಮುಖವಾಗಿ ಎರಡು ಬಗೆಯಲ್ಲಿ ರಚಿಸಲಾಗುತ್ತದೆ. ಅಲಂಕಾರಿಕ ಕ್ರಿಸ್‌ಮಸ್ ಮಾಲೆ ಮತ್ತು ಆಗಮನ ಮಾಲೆ ಎಂದಾಗಿದೆ. ಕ್ರಿಸ್‌ಮಸ್ ಹಾರವು ಧೈರ್ಯ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಆಗಮನ ಹಾರ (ಅಡ್ವೆಂಟ್ ವ್ರೆತ್) ಮೌಖಿಕ ಸಂಪ್ರದಾಯದ ಭಾಗವಾಗಿದೆ. ಪೂರ್ವ ಕ್ರಿಶ್ಚಿಯನ್ ಯುಗದಲ್ಲಿ, ಶೀತ ಮತ್ತು ಗಾಢ ಚಳಿಗಾಲದ ಸಮಯದಲ್ಲಿ ಜನರು ಹಾರಗಳನ್ನು ಸಂಗ್ರಹಿಸಿ ಮತ್ತು ಬೆಂಕಿಯನ್ನು ಉರಿಸಿ ವಸಂತ ಮಾಸದ ಬರುವಿಕೆಯ ಭರವಸೆಯಲ್ಲಿರುತ್ತಾರೆ. ಹದಿನಾರನೇ ಶತಮಾನದಲ್ಲಿ ಕ್ಯಾಥೋಲಿಕ್ಸ್ ಮತ್ತು ಪ್ರೊಟೆಸ್ಟೆಂಟರು ಕ್ರಿಸ್ತನಲ್ಲಿ ತಮಗಿದ್ದ ಭರವಸೆಯನ್ನು ಕೊಂಡಾಡಲು ಒಂದು ಗುರುತಾಗಿ ಹಾರಗಳನ್ನು ಬಳಸಿಕೊಳ್ಳುತ್ತಿದ್ದರು. ಕ್ರಿಸ್ಮಸ್‌ಗೂ ಮುನ್ನ ನಿಮ್ಮ ಮನೆಯ ಅಲಂಕಾರ ಹೇಗಿರಬೇಕು?

ಸಾಂಪ್ರದಾಯಿಕವಾಗಿ, ಈ ಮಾಲೆಯನ್ನು ಎವರ್ ಗ್ರೀನ್ ಎಲೆಗಳ ವೃತ್ತದಲ್ಲಿ ನಾಲ್ಕು ನೇರಳೆ ಅಥವಾ ಗುಲಾಬಿ ಬಣ್ಣಗಳ ಮೇಣದ ಬತ್ತಿಯಿಂದ ಸಿದ್ಧಪಡಿಸಲಾಗುತ್ತದೆ ಮತ್ತು ಐದನೆಯ ಮೇಣದ ಬತ್ತಿಯನ್ನು ಮಧ್ಯಭಾಗದಲ್ಲಿ ಇರಿಸಲಾಗುತ್ತದೆ. ಪ್ರತೀ ದಿನ ರಾತ್ರಿಯೂಟಕ್ಕೆ ಮುನ್ನ ಮೇಣದ ಬತ್ತಿಗಳನ್ನು ಉರಿಸಲಾಗುತ್ತದೆ.

ಒಂದು ಕ್ಯಾಂಡಲ್ ಅನ್ನು ಒಂದು ವಾರದವರೆಗೆ, ಹೀಗೆ ಡಿಸೆಂಬರ್ 25 ರವರೆಗೆ ಹಚ್ಚಲಾಗುತ್ತದೆ. ಹಾರದ ಮಧ್ಯಭಾಗದಲ್ಲಿ ಒಂದೇ ಒಂದು ಮೇಣದ ಬತ್ತಿಯನ್ನು ಇರಿಸಲಾಗುತ್ತದೆ. ಕ್ರಿಸ್‌ಮಸ್‌ನ ಸಂಜೆಯ ವೇಳೆ ಈ ಮೇಣದ ಬತ್ತಿಯನ್ನು ಹಚ್ಚಲಾಗುತ್ತದೆ. ಇದು ಏಸುಕ್ರಿಸ್ತನ ಜನನದ ದ್ಯೋತಕವಾಗಿದೆ.

English summary

Significance Of The Christmas Wreath

A Christmas wreath is usually made combining of the Holly, berries and the mistletoe. The wreath is made into a circular shape and is generally hung outside the house. A wreath is made from the leaves of the evergreens and is a symbol of strength. Let us have a look as to why the Christmas wreath is so symbolic.
Story first published: Monday, December 12, 2016, 23:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more