Just In
Don't Miss
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Automobiles
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರಿಸ್ಮಸ್ ಹಬ್ಬದ ವಿಶೇಷ: ಮೂರು ಬಣ್ಣಗಳ ಮಹತ್ವ
ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಎಲ್ಲರ ಮನೆಗಳಲ್ಲೂ ಹಬ್ಬದ ತಯಾರಿಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಿರುತ್ತಾರೆ. ಕ್ರಿಸ್ಮಸ್ ಮರದ ಅಲಂಕಾರ, ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಉಡುಗೊರೆಗಳ ಖರೀದಿ ಹೀಗೆ ಹಬ್ಬಕ್ಕಾಗಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟುತ್ತಿರುತ್ತದೆ. ಕ್ರಿಸ್ಮಸ್ ಬಗ್ಗೆ ಇರುವ ಐದು ಪುರಾಣಕಥೆಗಳು
ಆದರೆ ಕ್ರಿಸ್ಮಸ್ ಆಚರಣೆಯಲ್ಲಿ ಬಣ್ಣಗಳ ಮಹತ್ವವನ್ನು ಅರಿತಿದ್ದೀರಾ? ಕೆಲವೊಂದು ಬಣ್ಣಗಳಿಲ್ಲದೆ ಕ್ರಿಸ್ಮಸ್ ಆಚರಣೆ ಕಳೆಗಟ್ಟುವುದೇ ಇಲ್ಲ. ಆ ಬಣ್ಣಗಳೇ ಕೆಂಪು, ಹಸಿರು ಮತ್ತು ಚಿನ್ನದ ಬಣ್ಣವಾಗಿವೆ. ಸಾಂತಾ ಕ್ಲಾಸ್ ಕುರಿತು ಕುತೂಹಲಕಾರಿ ಅಂಶಗಳು
ಕ್ರಿಸ್ಮಸ್ ಆಚರಣೆಯೊಂದಿಗೆ ಈ ಬಣ್ಣಗಳು ಅವಿನಾಭಾವ ಸಂಬಂಧವನ್ನು ಪಡೆದುಕೊಂಡಿದ್ದು ಕ್ರಿಸ್ತನು ಹೇಳಿರುವ ಮೂರು ಪಾಠಗಳ ಪರಿಚಯವನ್ನು ಇದು ಮಾಡಿಕೊಡುತ್ತದೆ. ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಬಣ್ಣಗಳ ವಿಶೇಷತೆಯೇನು ಎಂಬುದನ್ನು ಅರಿತುಕೊಳ್ಳೋಣ...

ಕೆಂಪು
ಕ್ರಿಸ್ತನನ್ನು ಶಿಲುಬೆಗೇರಿಸುವುದನ್ನು ಪ್ರತಿನಿಧಿಸುವ ಬಣ್ಣ ಕೆಂಪಾಗಿದೆ. ಪ್ರೇಮದ ಪಾಠವನ್ನು ಕ್ರಿಸ್ತನು ಜಗತ್ತಿಗೆ ಸಾರಿರುವುದನ್ನು ಕೆಂಪು ಬಣ್ಣವು ತಿಳಿಸುತ್ತದೆ. ದೇವರ ಪ್ರೀತಿ ಅಪ್ಯಾಯಮಾನವಾಗಿರುತ್ತದೆ ಮತ್ತು ಇದಕ್ಕೆ ಪರಿಧಿ ಇರುವುದಿಲ್ಲ. ಅವರು ತಮ್ಮ ಮಗನನ್ನು ಭೂಮಿಗೆ ಕಳುಹಿಸಿದ್ದೇ ಮಾನವರನ್ನು ಪ್ರೀತಿಯಿಂದ ಬಂಧಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಲಾಗಿದೆ.

ಕೆಂಪು
ಕೆಂಪು ಬಣ್ಣವು ಜನಮಾನಸದಲ್ಲಿ ಮಾನವತ್ವವನ್ನು ಎತ್ತಿ ಹಿಡಿದಿದೆ. ಪ್ರೀತಿ ನಂಬಿಕೆಯ ಮೇಲೆ ನಿಂತಿದೆ ಎಂಬುದನ್ನು ಕೆಂಪು ತಿಳಿಸಿಕೊಡುತ್ತದೆ. ಸಂತಸ ಪ್ರತೀಕವೂ ಕೆಂಪಾಗಿದೆ. ಆದ್ದರಿಂದಲೇ ಕ್ರಿಸ್‌ಮಸ್ ಹಬ್ಬದಲ್ಲಿ ಕೆಂಪು ಬಣ್ಣಕ್ಕೆ ಪ್ರಾಧಾನ್ಯತೆ ಹೆಚ್ಚು.

ಹಸಿರು
ಪವಿತ್ರ ಗಿಡಗಳು ತಮ್ಮ ಬಣ್ಣವನ್ನು ಚಳಿಗಾದಲ್ಲಿ ರಕ್ಷಿಸಿಕೊಳ್ಳುತ್ತವೆ. ಆದ್ದರಿಂದಲೇ ಹಸಿರು ಬಣ್ಣ ಕ್ರಿಸ್‌ಮಸ್‌ನಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕ್ರಿಸ್ತುವಿನ ಬದುಕನ್ನು ಹಸಿರು ಪ್ರತಿನಿಧಿಸುತ್ತದೆ. ಏಸುಕ್ರಿಸ್ತನ ಜನನ ಅತಿ ಕಠಿಣ ಪರಿಸ್ಥಿತಿಯಲ್ಲಿ ನಡೆದು ಹೋಗುತ್ತದೆ. ಹಠಾತ್ತಾಗಿ ಜೋಸೆಫ್‌ನೊಂದಿಗೆ ವಿವಾಹವೇರ್ಪಟ್ಟ ವರ್ಜೀನ್‌ನ ಬಡ ಹುಡುಗಿಯ ಗರ್ಭದಲ್ಲಿ ಏಸು ಜನನಗೊಳ್ಳುತ್ತಾರೆ.

ಹಸಿರು
ರಾಜನು ಮಗುವನ್ನು ಹತ್ಯೆಮಾಡಲು ಬಯಸುತ್ತಾನೆ. ಈ ಸಮಯದಲ್ಲಿ ಏಸುವಿನ ತಂದೆ ತಾಯಿ ಈಜಿಪ್ಟ್‌ನಿಂದ ನಜರತ್‌ಗೆ ತಲುಪುತ್ತಾರೆ. ಎಲ್ಲ ಕಠಿಣ ಪರಿಸ್ಥಿತಿಗಳ ನಡುವೆ ಕೂಡ ಏಸು ಬದುಕುಳಿಯುತ್ತಾರೆ. ತದನಂತರ ಪ್ರತಿಯೊಬ್ಬರ ಮನದಲ್ಲಿ ಏಸು ಸ್ಥಾನ ಪಡೆದುಕೊಳ್ಳುತ್ತಾರೆ. ಹಸಿರು ಜೀವನದ ನಿಜವಾದ ಅರ್ಥ ಮತ್ತು ಮಹತ್ವವನ್ನು ತಿಳಿಸಿಕೊಡುತ್ತದೆ.

ಹಸಿರು
ಜೀವನವನ್ನು ಹೇಗೆ ಬದುಕಬೇಕು, ಅಲ್ಲಿ ಪ್ರೀತಿಯನ್ನು ಹೇಗೆ ತುಂಬಿಕೊಳ್ಳಬೇಕು ಎಂಬುದನ್ನು ಹಸಿರು ತಿಳಿಸಿಕೊಡುತ್ತದೆ. ಹಸಿರು ಬಣ್ಣದ ಕ್ರಿಸ್‌ಮಸ್ ಗಿಡ ಕೂಡ ಬದುಕಿನಲ್ಲಿ ಬಂದೊದಗುವ ಕಷ್ಟಗಳನ್ನು ನಿವಾರಿಸುವ ದಾರಿ ದೀಪದಂತಿದೆ. ದೇವರು ನೀಡುವ ಪರೀಕ್ಷೆಗಳನ್ನು ಗೆದ್ದು ಅವರನ್ನು ಸೇರುವ ಹಾದಿಯನ್ನು ನಮಗೆ ಇದು ತೋರಿಸಿಕೊಡುತ್ತದೆ.

ಗೋಲ್ಡ್
ಚಿನ್ನದ ಬಣ್ಣವು ನೀಡುವುದನ್ನು ಸಂಕೇತಿಸುತ್ತದೆ. ಕ್ರಿಸ್ತನ ಜನನ ಸಮಯದಲ್ಲಿ ಆಗಮಿಸಿದ್ದ ಮೂರನೇ ರಾಜನು ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದನಂತೆ. ಚಿನ್ನದ ಬಣ್ಣವು ಕೊಡುವಿಕೆಯನ್ನು ಪ್ರತಿನಿಧಿಸುತ್ತದೆ. ದೇವರು ತನ್ನ ಮಗನನ್ನು ಹೆರಲು ತಾಯಿಯಾಗಿ ಒಬ್ಬ ಬಡ ವರ್ಜೀನ್‌ನ ಮೇರಿಯನ್ನು ಆರಿಸುತ್ತಾರೆ.

ಗೋಲ್ಡ್
ಇತ್ತ ಮೇರಿ ಮತ್ತು ಜೋಸೆಫ್ ಕ್ರಿಸ್ತನನ್ನು ಉಳಿಸಿಕೊಳ್ಳಲು ಎಲ್ಲಾ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ದೇವರಿಗೆ ಪ್ರತಿಯೊಬ್ಬರೂ ಸಮಾನರಾಗಿರುತ್ತಾರೆ. ಉತ್ತಮ ಜೀವನವನ್ನು ನಡೆಸಲು ದೇವರು ಮನುಷ್ಯರಿಗೆ ನೀಡಿದ ಮಾರ್ಗ ಇದಾಗಿದೆ. ಕ್ರಿಸ್‌ಮಸ್ ಆಚರಣೆಯಲ್ಲಿ ಮಹತ್ವವನ್ನು ಪಡೆದುಕೊಂಡಿರುವ ಈ ಬಣ್ಣಗಳ ಅರ್ಥವನ್ನು ನಾವು ಮನಗಾಣಬೇಕು ಮತ್ತು ಜೀವನದುದ್ದಕ್ಕೂ ಅದನ್ನು ಅಳವಡಿಸಿಕೊಳ್ಳಬೇಕು.