Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್ಮಸ್ ಹಬ್ಬಕ್ಕೆ ಸಾಥ್ ನೀಡುವ ಕ್ಯಾಂಡಿ ಕೇನ್ ರೆಸಿಪಿ
ವಿಶ್ವದ ಸಂಭ್ರಮದ ಕ್ರಿಸ್ಮಸ್ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿಬಿಟ್ಟಿದೆ. ಜಗತ್ತಿನಾದ್ಯಂತ ಭಕ್ತರು ಯೇಸುವಿನ ಜನ್ಮದಿನವನ್ನು ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಶುಭಸಂದರ್ಭದಲ್ಲಿ ನಿಮ್ಮ ಮನೆಯಲ್ಲಿಯೂ ವಿಶೇಷ ತಿಂಡಿಗಳು ತಯಾರಾಗುತ್ತಿವೆ. ಆದರೆ ಕ್ಯಾಂಡಿ ಕೇನ್ ಇಲ್ಲವೇ? ಚಿಂತೆ ಬೇಡ, ಇದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ.
ಕ್ರಿಸ್ಮಸ್ ಸಮಯದಲ್ಲಿ ಕ್ಯಾಂಡಿ ಕೇನ್ ಅಥವಾ ಪುಟ್ಟ ಕೊಡೆಯ ಹಿಡಿಯಂತೆ ಬಾಗಿರುವ ಸಕ್ಕರೆಯ ಕಡ್ಡಿಗಳಿಗೆ ವಿಶಿಷ್ಟ ಮಹತ್ವವಿದೆ. ಆದರೆ ಇವು ಯಾವಾಗಲೂ ಕೆಂಪು ಮತ್ತು ಬಿಳಿ ಬಣ್ಣದ್ದೇ ಆಗಿದ್ದು ತಿರುಚಿದ ಅಥವಾ ಪಟ್ಟೆಪಟ್ಟೆಯ ರೂಪದಲ್ಲಿ ಇಂಗ್ಲಿಷ್ ನ 'ಜೆ' ಅಕ್ಷರ ತಳೆದಿವೆ ಎಂದು ಗೊತ್ತೇ? ಇದರ ಬಿಳಿ ಬಣ್ಣ ಶಾಂತಿಯನ್ನೂ ಮತ್ತು ಕೆಂಪು ಬಣ್ಣವನ್ನು ಯೇಸುವಿನ ರಕ್ತವನ್ನೂ ಪ್ರತಿಬಿಂಬಿಸುತ್ತದೆ. ಜೆ ಅಕ್ಷರದಿಂದ ಪ್ರಾರಂಭವಾಗುವ ಜೀಸಸ್ ಅಥವಾ ಯೇಸುವಿನ ಸ್ಮರಣಾರ್ಥ ಈ ಸಕ್ಕರೆಕಡ್ಡಿಯನ್ನೂ ಜೆ ಅಕ್ಷರದಂತೆ ನಿರ್ಮಿಸಲಾಗುತ್ತದೆ. ಈ ಕಡ್ಡಿಗಳು ಕ್ರಿಸ್ಮಸ್ ಸಮಯದಲ್ಲಿ ನಮ್ಮ ಬಳಿ ಇದ್ದರೆ ಸಾಕ್ಷಾತ್ ಜೀಸಸ್ ನೇ ನಮ್ಮ ಬಳಿ ಇದ್ದು ನಮಗೆ ಬಲ ನೀಡುತ್ತಾನೆ ಮತ್ತು ನಮ್ಮನ್ನು ರಕ್ಷಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಬನ್ನಿ, ಈ ರುಚಿಯಾದ ಸಕ್ಕರೆಕಡ್ಡಿಗಳನ್ನು ಮನೆಯಲ್ಲಿಯೇ ತಯಾರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳೋಣ: ಕ್ಯಾಂಡಿ ಕೇನ್‍ನ ದಂತಕಥೆಗಳಲ್ಲಿ ಯೇಸುವಿನ ಬಗ್ಗೆ ಏನನ್ನು ಹೇಳಲಾಗಿದೆ?

ಪ್ರಮಾಣ: ನಾಲ್ವರಿಗೆ ಸಾಕಾಗುವಷ್ಟು
*ಸಿದ್ಧತಾ ಸಮಯ: ನಲವತ್ತು ನಿಮಿಷಗಳೂ
*ತಯಾರಿಕಾ ಸಮಯ: ಹತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಸಕ್ಕರೆ : ನಾಲ್ಕು ಕಪ್
*ವೆನಿಲ್ಲಾ ಎಸೆನ್ಸ್: ಎರಡು ದೊಡ್ಡ ಚಮಚ
*ಕೆಂಪು ಆಹಾರಕ್ಕೆ ಬಣ್ಣ ನೀಡುವ ದ್ರವ: ಒಂದು ದೊಡ್ಡ ಚಮಚ
*ಕಾರ್ನ್ ಸಿರಪ್: ಅರ್ಧ ಚಿಕ್ಕ ಚಮಚ
*ಪೆಪ್ಪರ್ ಮಿಂಟ್ : ಒಂದು ದೊಡ್ಡ ಚಮಚ
ವಿಧಾನ:
1) ಒಂದು ಪಾತ್ರೆಯಲ್ಲಿ ಮೂರು ಕಪ್ ಸಕ್ಕರೆ, ಕಾರ್ನ್ ಸಿರಪ್ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಕಲಕಿ. ಸಕ್ಕರೆ ಪೂರ್ಣ ಕರಗಬೇಕು.
2) ಈ ನೀರನ್ನು ಕುದಿಸಿ. ಕೊಂಚ ಗಾಢವಾಗುತ್ತಲೇ ಪೆಪ್ಪರ್ ಮಿಂಟ್ ಸೇರಿಸಿ ಚೆನ್ನಾಗಿ ಕಲಕಿ
3) ಇದರಲ್ಲಿ ಅರ್ಧ ಪ್ರಮಾಣವನ್ನು ಒಂದು ಸಿಲಿಕಾನ್ ಪದರದ ಮೇಲೆ ಹರದಿ. ಉಳಿದ ಅರ್ಧಕ್ಕೆ ಕೆಂಪು ಬಣ್ಣವನ್ನು ಸೇರಿಸಿ ಕಲಸುವುದನ್ನು ಮುಂದುವರೆಸಿ
4) ಈಗ ಸಿಲಿಕಾನ್ ಪದರದ ಮೇಲೆ ಹರಡಿದ್ದ ಬಿಳಿಭಾಗವನ್ನು ಓವನ್ ನಲ್ಲಿ ಐವತ್ತು ಡಿಗ್ರಿ ತಾಪಮಾನದಲ್ಲಿ ಹತ್ತು ನಿಮಿಷ ಇರಿಸಿ ಹೊರತೆಗೆಯಿರಿ.
5) ಈ ಪದರವನ್ನು ಕೊಂಚ ತಣಿದ ಬಳಿಕ ಚಪಾತಿಹಿಟ್ಟಿನಂತೆ ಕಲಸಿ ನಂತರ ಒಂದು ಉರುಳೆಯಾಗಿಸಿ ಮತ್ತೊಮ್ಮೆ ಅವನ್ ನಲ್ಲಿ ಕೊಂಚ ಹೊತ್ತು ಬಿಸಿಮಾಡಿ.
6) ಇದೇ ರೀತಿ ಕೆಂಪು ಬಣ್ಣವನ್ನೂ ಅವನ್ ನಲ್ಲಿ ಬಿಸಿಮಾಡಿ ಇನ್ನೊಂದು ಉರುಳೆ ತಯಾರಿಸಿ.
7) ಎರಡೂ ಉರುಳೆಗಳನ್ನು ಪರೀಕ್ಷಿಸಿ. ಇದು ಗಟ್ಟಿ ಎನಿಸಿದರೆ ಇನ್ನೂ ಕೊಂಚ ಹೊತ್ತು ಓವನ್‌ನಲ್ಲಿರಿಸಬಹುದು.
8) ಬಳಿಕ ಎರಡೂ ಉರುಳೆಗಳನ್ನು ಪಕ್ಕಪಕ್ಕದಲ್ಲಿಟ್ಟು ನಾಲ್ಕು ಸಮಭಾಗ ಮಾಡಿ.
9) ನಿಮ್ಮ ಅಭಿರುಚಿಗೆ ತಕ್ಕಂತೆ ಬಿಳಿ ಮತ್ತು ಕೆಂಪು ಬಣ್ಣದ ವಿನ್ಯಾಸ ಬರುವಂತೆ ಎರಡೂ ಉರುಳೆಗಳನ್ನು ಒಂದರ ಮೇಲೊಂದಿಟ್ಟು ಲಟ್ಟಿಸಿ ಬಳಿಕ ಚಿಕ್ಕದಾಗಿ ಕತ್ತರಿಸಿ. ಬಳಿಕ ಪ್ರತಿ ಭಾಗವನ್ನು ತಿರುಚಿ ಬಳಿಕ ಜೆ ಅಕ್ಷರದ ರೂಪ ನೀಡಿ
10) ಬಳಿಕ ಒಣಗಲು ಬಿಡಿ. ಗಟ್ಟಿಯಾದ ಬಳಿಕ ಈ ಸಕ್ಕರೆ ಕಡ್ಡಿ ನಿಮ್ಮ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಸಿಹಿ ನಿಮ್ಮ ಜೀವನವನ್ನು ಇನ್ನಷ್ಟು ಸಿಹಿಯಾಗಲು ಸಹಕರಿಸುತ್ತದೆ.



Click it and Unblock the Notifications


