For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್ ಹಬ್ಬ 2019: ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿ

By manu
|

ಡಿಸೆಂಬರ್ ತಿಂಗಳೆಂದರೆ ಒಂದು ಬಗೆಯ ಆಹ್ಲಾದ ಜನರಲ್ಲಿ ಮೂಡುತ್ತದೆ. ಒಂದೆಡೆ ಕೊರೆವ ಚಳಿ, ಇನ್ನೊಂದೆಡೆ ಕ್ರಿಸ್‌ಮಸ್ ಮತ್ತು ಹೊಸವರ್ಷ ಹಬ್ಬಗಳ ಆಚರಣೆ. ತಮ್ಮೆಲ್ಲಾ ಕೆಲಸ ಕಾರ್ಯಗಳಿಂದ ಬಿಡುವನ್ನು ಪಡೆದುಕೊಂಡು ವರ್ಷದ ಕೊನೆಯ ವಾರದ ರಜೆಯನ್ನು ವಿಜೃಂಭಣೆಯಿಂದ ಆಚರಿಸಲು ಜನರು ಪ್ರವಾಸವನ್ನು ಕೈಗೊಳ್ಳುತ್ತಾರೆ.

ಅಂತೂ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಂತಸದಿಂದ ಎಲ್ಲಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. ಹೊಸ ವರ್ಷಕ್ಕಿಂತಲೂ ಮುಂಚಿತವಾಗಿ ಬರುವ ಕ್ರಿಸ್‌ಮಸ್ ಏಸು ಕ್ರಿಸ್ತನ ಜನ್ಮದಿನದ ದ್ಯೋತಕವಾಗಿದೆ. ತಮ್ಮೆಲ್ಲಾ ನೋವು ನಿರಾಶೆಗಳನ್ನು ಜನರು ಮರೆತು ಈ ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕ್ರಿಸ್‌ಮಸ್ ಹಬ್ಬದ ವಿಶೇಷ: ಮೂರು ಬಣ್ಣಗಳ ಮಹತ್ವ

ಕ್ರಿಸ್‌ಮಸ್ ಹಬ್ಬ ಹೇಗೆ ಅತಿ ವಿಶಿಷ್ಟ ಎಂದೆನಿಸಿದೆಯೋ ಅಂತೆಯೇ, ಆಚರಣೆಗೆ ಮಹತ್ವವಾಗಿರುವ ಅಂಶಗಳು ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಈ ಸಮಯದಲ್ಲಿ ನೀಡಲ್ಪಡುವ ಕ್ಯಾಂಡಿ ಕೇನ್ ಕೂಡ ತನ್ನದೇ ವಿಶಿಷ್ಟ ಅರ್ಥವನ್ನು ಪಡೆದುಕೊಂಡಿದ್ದು ಅಮೇರಿಕಾ ಸಂಸ್ಥಾನವು ಈ ಕ್ಯಾಂಡಿಯ ಹಿಂದಿರುವ ನಿಗೂಢತೆಯನ್ನು ಬಯಲು ಮಾಡಿದೆ.

ಹೆಚ್ಚು ಗದ್ದಲವನ್ನುಂಟು ಮಾಡುವ ತುಂಟ ಮಕ್ಕಳನ್ನು ಸುಮ್ಮನಾಗಿಸಲು ಈ ಕ್ಯಾಂಡಿಯನ್ನು ಪ್ರಸ್ತುತಪಡಿಸಲಾಗಿದೆ ಎಂಬುದು ಹೊಸದಾಗಿ ವರದಿಯಾಗಿರುವ ಮಾಹಿತಿಯಾಗಿದೆ. ಇದಷ್ಟಲ್ಲದೆ ಇನ್ನಷ್ಟು ಅಂಶಗಳನ್ನು ಕ್ರಿಸ್‌ಮಸ್ ಹಬ್ಬದಲ್ಲಿ ನಾವು ಕಾಣಬಹುದಾಗಿದ್ದು, ಕ್ರಿಸ್‌ಮಸ್ ಔತಣಕೂಡ, ಕೇಕ್, ಎಲ್ಲದಕ್ಕೂ ವಿಶೇಷತೆ ಇದೆ.

ಹಾಗಿದ್ದರೆ ಕ್ರಿಸ್‌ಮಸ್ ಹಬ್ಬದಲ್ಲಿ ವಿವಿಧ ರೀತಿಯ ಕೇಕ್‌ಗಳನ್ನು ತಯಾರಿಸುವುದು ಏಕೆ? ವೈನ್ ಬೇಕೇ ಬೇಕು ಎಂಬ ಕಡ್ಡಾಯ ಏಕೆ ಮಾಡಲಾಗಿದೆ. ಅಂತೆಯೇ ಕ್ರಿಸ್‌ಮಸ್ ಡಿನ್ನರ್ ಅನ್ನು ಸಂಘಟಿಸುವುದು ಏತಕ್ಕಾಗಿ ಅಂತೆಯೇ ಹಬ್ಬದಲ್ಲಿ ಇನ್ನಷ್ಟು ಪ್ರಮುಖವಾಗಿರುವ ಅಂಶಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.....

ಕ್ರಿಸ್‌ಮಸ್ ಕ್ಯಾಂಡಿ

ಕ್ರಿಸ್‌ಮಸ್ ಕ್ಯಾಂಡಿ

ಸಣ್ಣ ಮಕ್ಕಳನ್ನು ಹೆದರಿಸುವುದಕ್ಕಾಗಿ ಈ ಕ್ಯಾಂಡಿಗಳನ್ನು ಪ್ರಸ್ತುತಪಡಿಸಲಾಗಿದೆ ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. 1670 ರಲ್ಲಿ ಈ ಕ್ಯಾಂಡಿಗಳನ್ನು ಪ್ರಸ್ತುತಪಡಿಸಲಾಯಿತು. ಕಲೋನ್ ಕ್ಯಾಥೆಡ್ರಲ್‌ನ ಕ್ವಯರ್‌ಮಾಸ್ಟರ್ ಮಿಠಾಯಿಗಳನ್ನು ಪ್ರಾರಂಭಿಸಿದಾಗ ಶೇಪರ್ಡ ಕ್ರೂಕ್ ಮಾದರಿಯಲ್ಲಿದ್ದ ಈ ಕ್ಯಾಂಡಿಗಳನ್ನು ಮಕ್ಕಳಿಗೆ ನೀಡಲಾಯಿತು. ಚರ್ಚ್‌ನಲ್ಲಿ ನಡೆಯುವ ಕೆಲವೊಂದು ಪವಿತ್ರ ಕಾರ್ಯಾಗಾರದಲ್ಲಿ ಮಕ್ಕಳು ಹಠ ಮಾಡಬಾರದು ಎಂಬ ಕಾರಣಕ್ಕೆ ಅವರನ್ನು ಹೆದರಿಸಲು ಈ ಮಿಠಾಯಿಗಳನ್ನು ನೀಡಲಾಗುತ್ತಿತ್ತಂತೆ.

ಕ್ರಿಸ್‌ಮಸ್ ಪ್ಲಮ್ ಕೇಕ್

ಕ್ರಿಸ್‌ಮಸ್ ಪ್ಲಮ್ ಕೇಕ್

ಈ ವರ್ಷದಲ್ಲಿ ಪ್ಲಮ್ ಕೇಕ್ ಎಲ್ಲರ ಅಚ್ಚುಮೆಚ್ಚನದ್ದಾಗಿದೆ. ಆದರೆ ಇದಕ್ಕೂ ಒಂದು ಇತಿಹಾಸವಿದ್ದು ಕ್ರಿಶ್ಚಿಯನ್ ಧರ್ಮದ ಆರಂಭ ಕಾಲಕ್ಕೆ ನಾವು ಹೋಗಬೇಕು. ಉತ್ತಮವಾಗಿ ಹುಡಿಮಾಡಿದ ಗೋಧಿ ಹುಡಿಯಿಂದ ಈ ಕೇಕ್ ಅನ್ನು ತಯಾರಿಸಲಾಗುತ್ತಿತ್ತು ಮತ್ತು ದೊಡ್ಡ ಮನೆಗಳಲ್ಲಿ ಇದನ್ನು ಬೇಕ್ ಮಾಡಲಾಗುತ್ತಿತ್ತು, ಏಕೆಂದರೆ 14 ನೇ ಶತಮಾನದಲ್ಲಿ ಹೆಚ್ಚಿನ ಮನೆಗಳಲ್ಲಿ ಓವನ್‌ಗಳು ಇರಲಿಲ್ಲ.

ಕ್ರಿಸ್‌ಮಸ್ ಪ್ಲಮ್ ಕೇಕ್

ಕ್ರಿಸ್‌ಮಸ್ ಪ್ಲಮ್ ಕೇಕ್

ನಂತರದ ದಿನಗಳಲ್ಲಿ ಕೇಕ್‌ಗೆ ಜನರು ಇನ್ನಷ್ಟು ರುಚಿಯಾದ ಉತ್ಪನ್ನಗಳನ್ನು ಸೇರಿಸಲು ಆರಂಭಿಸಿದರು. ಸ್ವಲ್ಪ ಖಾರ ಸೇರಿಸುವುದು, ಡ್ರೈ ಫ್ರುಟ್ಸ್ ಬಳಕೆ, ಜೇನು ಮೊದಲಾದವುಗಳನ್ನು ಕೇಕ್‌ನಲ್ಲಿ ಸೇರಿಸುತ್ತಾರೆ. ಕ್ರಿಸ್‌ಮಸ್ ಗಂಜಿ ಪ್ರಮುಖ ಆಹಾರವೆಂದೇ ಕರೆಯಲಾದ ಈ ಪ್ಲಮ್ ಕೇಕ್ ಹಬ್ಬದಲ್ಲಿ ವಿಶೇಷ ಖಾದ್ಯವೆಂದೆನಿಸಿದೆ.

ಕ್ರಿಸ್‌ಮಸ್ ಹಣ್ಣಿನ ಕೇಕ್

ಕ್ರಿಸ್‌ಮಸ್ ಹಣ್ಣಿನ ಕೇಕ್

ಕ್ರಿಸ್‌ಮಸ್‌ನಿಂದ ಆರಂಭಗೊಂಡು ವರ್ಷದ ಕೊನೆಯವರೆಗೂ ಈ ಹಣ್ಣಿನ ಕೇಕ್ ಅನ್ನು ಹಾಗೆಯೇ ಇರಿಸಬೇಕು ಎಂಬ ನಿಯಮವಿದೆ. ಸುಗ್ಗಿಯ ಕೊನೆಯಲ್ಲಿ ಈ ಹಣ್ಣಿನ ಕೇಕ್ ಅನ್ನು ಬೇಯಿಸಲಾಗುತ್ತದೆ ಮತ್ತು ಮುಂದಿನ ವರ್ಷ ಸುಗ್ಗಿಯ ಆರಂಭದಲ್ಲಿ ಸೇವಿಸುವುದಕ್ಕಾಗಿ ಇದನ್ನು ಕಾಪಿಡಲಾಗುತ್ತದೆ. ಹೀಗೆ ಮಾಡುವುದು ಅದೃಷ್ಟದ ಸಂಕೇತವಾಗಿದೆ.

ಕ್ರಿಸ್ಮಸ್ ಟರ್ಕಿ

ಕ್ರಿಸ್ಮಸ್ ಟರ್ಕಿ

ಊಟದ ಮೇಜಿನಲ್ಲಿ ಅಗತ್ಯವಾಗಿ ಇರಲೇಬೇಕಾದ ಖಾದ್ಯ ಇದಾಗಿದೆ. ಈ ಟರ್ಕಿಯ ಖಾದ್ಯದ ಹಿಂದೆ ಕೂಡ ವಿಶಿಷ್ಟ ಕಥೆ ಇದ್ದು, ಹೆನ್ರಿ VIII ಯು ಹದಿನಾರನೇ ಶತಮಾನದಲ್ಲಿ ಟರ್ಕಿಯನ್ನು ಸೇವಿಸಿದ್ದನು ಮತ್ತು ಈ ಪದ್ಧತಿಯು ನಂತರದ ದಿನಗಳಲ್ಲಿ ಹಾಗೆಯೇ ಮುಂದುವರಿದುಕೊಂಡು ಬಂದಿತು.

ಕ್ರಿಸ್‌ಮಸ್ ಔತಣಕೂಟ

ಕ್ರಿಸ್‌ಮಸ್ ಔತಣಕೂಟ

ಪ್ರತೀ ವರ್ಷವೂ, ಕ್ರಿಸ್‌ಮಸ್ ಹಬ್ಬದಂದು ಊಟದ ಮೇಜು ಖಾದ್ಯಗಳಿಂದ ತುಂಬಿರುತ್ತದೆ. ಆರೋಗ್ಯ ತಜ್ಞರು ಹೇಳುವಂತೆ, ಕ್ರಿಸ್‌ಮಸ್ ಔತಣಕೂಟವು 7000 ಕ್ಯಾಲೋರಿಗಳಿಗಿಂತಲೂ ಹೆಚ್ಚಿನ ಪ್ರಮಾಣವನ್ನು ಒಳಗೊಂಡಿರುತ್ತದೆ ಅಂತೆಯೇ ವರ್ಷದ ಕೊನೆಯಲ್ಲಿ ಜನರು ಈ ಖಾದ್ಯಗಳನ್ನು ಅಧಿಕವಾಗಿ ಸೇವಿಸುವುದರಿಂದ ಅವರ ತೂಕದಲ್ಲೂ ಏರಿಕೆಯಾಗುತ್ತದಂತೆ. ಆದ್ದರಿಂದ ಕ್ರಿಸ್‌ಮಸ್ ಹಬ್ಬದಂದು ಆರೋಗ್ಯಯುತ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಸುದೃಢ ಮತ್ತು

ಆರೋಗ್ಯವಂತರಾಗಿರಬಹುದಾಗಿದೆ.

English summary

Things You Didn't Know About Christmas

If you read on, you will see more of these astonishing and strange Christmas facts, which will surely blow your mind away. So, what are you waiting for? Take a look at the recent Christmas facts that are said to rock this festive season. It is that time of the year to share cheer and love, take a peek:
X