ಅಕ್ಷಯ ತೃತೀಯದಂದು ತಪ್ಪದೆ ಪಠಿಸಿ ಕನಕಧಾರಾ ಸ್ತೋತ್ರ

By: Deepak M
Subscribe to Boldsky

ಕನಕಧಾರ ಸ್ತೋತ್ರವು ಮಹಾಲಕ್ಷ್ಮಿಗೆ ಸಮರ್ಪಿಸಿದ ಸ್ತೋತ್ರವಾಗಿದ್ದು, "ಕನಕ" ಮತ್ತು "ಧಾರಾ" ಎಂಬ ಎರಡು ಪದಗಳಿಂದ ಸೃಷ್ಟಿಯಾದ ಪದವೃಂದವಾಗಿದೆ. ಇಲ್ಲಿ 'ಕನ' ಎಂದರೆ ಚಿನ್ನ ಅಥವಾ ಸಂಪತ್ತು ಮತ್ತು 'ಧಾರ" ಎಂದರೆ ಧಾರಣೆ ಅಥವಾ ಹಿಡಿದಿರುವಾಕೆ ಎಂದರ್ಥ. ಇದು ಮಹಾಲಕ್ಷ್ಮಿಯನ್ನು ಹೊಗಳುವ ಒಂದು ಸ್ತೋತ್ರವಾಗಿದ್ದು, ಕರಗಳಲ್ಲಿ ಸಂಪತ್ತು ಅಥವಾ ಚಿನ್ನವನ್ನು ಹಿಡಿದ ದೇವತೆ ಎಂದು ಇದು ಹೊಗಳುತ್ತದೆ. 

Lord Lakshmi

ಮಹಾಲಕ್ಷ್ಮಿ ದೇವಿಯು ಅಕ್ಷಯ ತೃತೀಯದಲ್ಲಿ ಆರಾಧಿಸಲ್ಪಡುವ ಪ್ರಮುಖ ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಈ ಹಬ್ಬದಂದು ಮಹಾವಿಷ್ಣು, ಕುಬೇರ ಮತ್ತು ಗಣಪತಿಯನ್ನು ಸಹ ಆರಾಧಿಸಲಾಗುತ್ತದೆ. ಈ ಹಬ್ಬದಂದು ಯಾರು ದೇವರನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಮತ್ತು ಭಕ್ತಿಪೂರ್ವಕವಾಗಿ ಆರಾಧಿಸುತ್ತಾರೋ, ಅವರಿಗೆ ಅಕ್ಷಯ ತೃತೀಯಾವು ಅಪರಿಮಿತ ಸಂಪತ್ತನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

Kanakadhara Stotram to Chant on Akshaya Tritiya
 

ಕನಕಧಾರ ಸ್ತೋತ್ರವನ್ನು ರಚಿಸಿದವರು ಆದಿ ಶಂಕರಾಚಾರ್ಯರು. ಈ ರಚನೆಯ ಹಿಂದೆ ಒಂದು ಅದ್ಭುತ ಕತೆಯಿದೆ. ಅದೇನೆಂದರೆ, ಆದಿ ಶಂಕರಾಚಾರ್ಯರು ಒಮ್ಮೆ ಭಿಕ್ಷಾಟನೆಗೆ ಹೋದಾಗ. ಒಂದು ಬಡ ಮಹಿಳೆಯ ಮನೆಯ ಮುಂದೆ ಭಿಕ್ಷೆಗಾಗಿ ನಿಂತರು. ಆಗ ಆಕೆ ಈ ಸನ್ಯಾಸಿಯನ್ನು ನೋಡಿ ಭಿಕ್ಷೆ ನೀಡಲು ಮನಸ್ಸು ಮಾಡಿದಳಾದರೂ ಆಕೆಯ ಬಳಿ ಏನೂ ಇರಲಿಲ್ಲ.

Kanakadhara Stotram to Chant on Akshaya Tritiya
 

ಮನೆಯೆಲ್ಲಾ ಹುಡುಕಿದರೂ ಒಂದು ಒಣಗಿದ ಒಂದು ಮುಳ್ಳಿನ ಹಣ್ಣು ಮಾತ್ರ ದೊರೆಯಿತು. ಅದನ್ನು ಹೇಗೆ ನೀಡುವುದು ಎಂದು ಸಂಕೋಚಪಡುತ್ತಲೇ ಸನ್ಯಾಸಿಗೆ ಅದನ್ನೇ ನೀಡಿದಳು. ಶಂಕರಾಚಾರ್ಯರಿಗೆ ಆಕೆ ನೀಡಿದ ಭಿಕ್ಷೆ ಸಂತೋಷವನ್ನು ಉಂಟು ಮಾಡಿತು. ಆದರೆ ಆಕೆಯ ಸ್ಥಿತಿ ಕಂಡು ಕನಿಕರ ಸಹ ಬಂದಿತು. ಆಗ ಅವರು ಈ ಕನಕಧಾರಾ ಸ್ತೋತ್ರವನ್ನು ಪಠಿಸಿದರು. ಸ್ತೋತ್ರದ ಕೊನೆಗೆ ಮಹಾಲಕ್ಷ್ಮಿ ಪ್ರಸನ್ನಳಾದಳು. ದೇವಿ ಶಂಕರಾಚಾರ್ಯರಿಗೆ ಯಾವ ವರ ಬೇಕು ಕೇಳು ಎಂದಳು.  ಅಕ್ಷಯ ತೃತೀಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಏನು?

ಆಗ ಅವರು ನನಗೇನು ಬೇಡ, ಆದರೆ ಈ ಬಡ ಮಹಿಳೆಗೆ ಸಂಪತ್ತನ್ನು ನೀಡು ಎಂದರು. ಆಗ ದೇವಿಯು ಈಕೆ ಹೋದ ಜನ್ಮದಲ್ಲಿ ಒಂದು ಒಳ್ಳೆಯ ಕೆಲಸ ಸಹ ಮಾಡಿಲ್ಲ, ಹಾಗಾಗಿ ಆಕೆಗೆ ಪುಣ್ಯದ ಕೊರತೆಯಿಂದಾಗಿ ಸಂಪತ್ತು ದೊರೆಯುವುದಿಲ್ಲ ಎಂದಳು. ಆದರೆ ಶಂಕರಾಚಾರ್ಯರು ಈಗ ಆಕೆ ಇರಿಸಿಕೊಂಡಿದ್ದ ಒಂದೇ ಒಂದು ಮುಳ್ಳು ಹಣ್ಣನ್ನು ನನಗಾಗಿ ತ್ಯಾಗ ಮಾಡಿದ್ದಾಳೆ ದೇವಿ, ಒಂದು ಪುಣ್ಯದ ಕೆಲಸ ಮಾಡಿದರೆ ಸಾಕು ಹಿಂದಿನ ಪಾಪವನ್ನು ಪರಿಗಣಿಸಬಾರದು. ನೀನು ಆಕೆಯ ಈ ಒಳ್ಳೆಯ ಕೆಲಸವನ್ನು ನೋಡಿ ಆಕೆಗೆ ಸಂಪತ್ತನ್ನು ಕರುಣಿಸು ಎಂದು ಬೇಡಿದರು.

Kanakadhara Stotram to Chant on Akshaya Tritiya
 

ಶಂಕರಾಚಾರ್ಯರ ವಾದಕ್ಕೆ ಮೆಚ್ಚಿದ ದೇವಿ ಆ ಬಡ ಮಹಿಳೆಗೆ ಸಂಪತ್ತನ್ನು ಕರುಣಿಸಿದಳು. ಹೀಗೆ ಕನಕಧಾರಾ ಸ್ತೋತ್ರವನ್ನು ಪಠಿಸುವುದರಿಂದ ನಮ್ಮ ಪಾಪಗಳು ಸಹ ತೊಳೆದು ಹೋಗುತ್ತವೆ ಎಂಬ ನಂಬಿಕೆ ಸಹ ಇದೆ. ಈ ಕನಕಧಾರಾ ಸ್ತೋತ್ರವನ್ನು ಗೊತ್ತಿಲ್ಲದೆ ಪಠಿಸುವುದರಿಂದ ಸಹ ಸಂಪತ್ತನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ನಂಬಿಕೆ ಆಸ್ತಿಕರಲ್ಲಿದೆ. ಬನ್ನಿ ಈ ಅಕ್ಷಯ ತೃತೀಯಾಗೆ ತಪ್ಪದೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಈ ಸ್ತೋತ್ರವನ್ನು ಪಠಿಸಿ.

ಶ್ರೀ ಕನಕಧಾರಾ ಸ್ತೋತ್ರಂ

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ

ಭೃಂಗಾಂಗನೇವ ಮುಕುಲಾಭರಣಂ ತಮಾಲಮ್|

ಅಂಗೀಕೃತಾಖಿಲವಿಭೂತಿರಪಾಂಗಲೀಲಾ

ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ

ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ

ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ|

ಮಾಲಾ ದೃಶೋರ್ಮಧುಕರೀವ ಮಹೋತ್ಪಲೇ ಯಾ

ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾಯಾಃ 

Kanakadhara Stotram to Chant on Akshaya Tritiya
 

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ

ಆನಂದಕಂದಮನಿಮೇಷಮನಂಗತಂತಮ್|

ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ

ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ

ಹಾರಾವಲೀವ ಹರಿನೀಲಮಯೀ ವಿಭಾತಿ|

ಕಾಮಪ್ರದಾ ಭಗವತೋಪಿ ಕಟಾಕ್ಷಮಾಲಾ

ಕಲ್ಯಾಣಮಾವಹತು ಮೇ ಕಮಲಾಲಯಾಯಾಃ   ಕಷ್ಟಕಾರ್ಪಣ್ಯ ಮರೆಯಾಗಲು 'ಅಷ್ಟ ಲಕ್ಷ್ಮೀ ಸ್ತೋತ್ರ' ನಿತ್ಯ ಪಠಿಸಿ

ಕಾಲಾಂಬುದಾಳಿಲಲಿತೋರಸಿ ಕೈಟಭಾರೇಃ

ಧಾರಾಧರೇ ಸ್ಫುರತಿ ಯಾ ತಡಿದಂಗನೇವ

ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ

ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಷ್ರಭಾವಾತ್

ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ

ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ

ಮಂದಾಲಸಂ ಚ ಮಕರಾಲಯಕನ್ಯಕಾಯಾಃ   ಅಕ್ಷಯ ತೃತೀಯದಂದು 'ಅನ್ನಪೂರ್ಣ ದೇವಿ'ಯ ಪೂಜಾ ಮಹತ್ವ  

 

 

English summary

Kanakadhara Stotram to Chant on Akshaya Tritiya

Kanakadhara Stotram is a hymn dedicated to Goddess Lakshmi. The word ‘Kanakadhara’ is an amalgamation of the two Sanskrit words’ Kanakam’ and ‘Dhara’. ‘Kanaka’ here means gold or wealth and the word ‘Dhara’ can be translated as the one who holds. It praises Goddess Lakshmi as the one who holds wealth or gold in her hands.
Subscribe Newsletter