ಅಕ್ಷಯ ತೃತೀಯದಂದು 'ಅನ್ನಪೂರ್ಣ ದೇವಿ'ಯ ಪೂಜಾ ಮಹತ್ವ

By: Jaya subramanya
Subscribe to Boldsky

ಅಕ್ಷಯ ತೃತೀಯವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ಪೂಜೆ ಹವನಗಳನ್ನು ನಡಸುತ್ತಾರೆ. ಅಂತೆಯೇ ತಮ್ಮ ಇಷ್ಟದ ದೇವತೆಗಳನ್ನು ಇಂದು ಪೂಜಿಸುವುದರಿಂದ ನಮ್ಮ ಸಕಲ ಇಷ್ಟಾರ್ಥಗಳೂ ಪೂರೈಕೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ದಿನ ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಶುಭ ಫಲವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ತಿಜೋರಿಯ ಒಡೆಯನಾದ ಕುಬೇರನನ್ನು ಪೂಜಿಸುವುದು, ಲಕ್ಷ್ಮೀ ದೇವರನ್ನು ನೆನೆಯುವುದರಿಂದ ಮನೆಯಲ್ಲಿ ಧನಕನಕ ನೆಲೆಯಾಗುತ್ತದೆ ಮತ್ತು ಕಷ್ಟಕಾರ್ಪಣ್ಯಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ. ಕೃಷ್ಣ ಕೂಡ ಈ ದಿನ ತನ್ನ ಗೆಳೆಯ ಸುಧಾಮನ ಬಡತನವನ್ನು ನೀಗಿಸಿ ಅವರನ್ನು ಶ್ರೀಮಂತರನ್ನಾಗಿ ಮಾಡಿದ್ದರು ಎಂಬ ಕಥೆಯಿದೆ. ಇದರೊಂದಿಗೆ ಅಕ್ಷಯ ತೃತೀಯಕ್ಕೂ ದೇವಿ ಅನ್ನಪೂರ್ಣ ಮಾತೆಗೂ ಧಾರ್ಮಿಕ ಹಿನ್ನೆಲೆಯಿದ್ದು ಇಂದಿನ ಲೇಖನದಲ್ಲಿ ನಾವು ಅದನ್ನು ಕುರಿತು ಅರಿತುಕೊಳ್ಳೋಣ.  ಅಕ್ಷಯ ತೃತೀಯದಂದು ಏನು ಮಾಡಬೇಕು? ಏನು ಮಾಡಬಾರದು?

ಒಮ್ಮೆ ಶಿವ ಮತ್ತು ಪಾರ್ವತಿಗೆ ಸಣ್ಣಮಾತಿನ ಚಕಮಕಿ ಉಂಟಾಗುತ್ತದೆ. ಈ ಲೋಕವು ಮಾಯೆಯಿಂದ ನಡೆಯುತ್ತದೆ ಎಂಬುದಾಗಿ ಶಿವನು ನುಡಿದರೆ ಪಾರ್ವತಿ ದೇವಿಯು ಶಿವನ ಈ ವಾದವನ್ನು ಒಪ್ಪುವುದಿಲ್ಲ. ಇದಕ್ಕಾಗಿ ಪಾರ್ವತಿಯು ಕಣ್ಮರೆಯಾಗುತ್ತಾರೆ ಮತ್ತು ಇಡಿಯ ವಿಶ್ವವೇ ಅಂಧಕಾರಮಯವಾಗುತ್ತದೆ.  

Annapoorna Devi
 

ಪಾರ್ವತಿ ದೇವಿ ಇಲ್ಲದೆ ವಿಶ್ವದಲ್ಲಿ ಶಕ್ತಿ ನಷ್ಟವಾಗುತ್ತದೆ. ಆಹಾರದ ಕೊರತೆಯುಂಟಾಗಿ ಜನರು ದೇವರನ್ನು ನೆನೆಯುತ್ತಾರೆ. ತನ್ನ ಮಕ್ಕಳು ಹಸಿವೆಯಿಂದ ಕಂಗೆಡುವುದನ್ನು ನೋಡಿ ಪಾರ್ವತಿಯು ಮರುಕ ಹೊಂದುತ್ತಾರೆ. ಅನ್ನಪೂರ್ಣೆಯ ಅವತಾರವನ್ನು ತಾಳಿ ಕಾಶಿಯಲ್ಲಿ ಅಡುಗೆಮನೆಯನ್ನು ಆಕೆ ನಿರ್ಮಿಸುತ್ತಾರೆ. ಈ ಸಮಯದಲ್ಲಿ ಶಿವ ದೇವರೂ ಕೂಡ ಹಸಿವೆಯಿಂದ ಕಂಗೆಟ್ಟಿರುತ್ತಾರೆ.

ಪಾರ್ವತಿಯು ಅನ್ನಪೂರ್ಣೆಯ ರೂಪದಲ್ಲಿ ಕಾಶಿಯಲ್ಲಿ ನೆಲೆಗೊಂಡಿರುವುದನ್ನು ಶಿವನು ಅರಿತುಕೊಂಡು ಅಲ್ಲಿಗೆ ಧಾವಿಸುತ್ತಾರೆ. ಆಹಾರಕ್ಕಾಗಿ ಅನ್ನಪೂರ್ಣೆಯಲ್ಲಿ ಶಿವನು ಬೇಡಿಕೊಳ್ಳುತ್ತಾರೆ ಮತ್ತು ವಿಶ್ವವು ಮಾಯೆಯಿಂದ ಮಾತ್ರವಲ್ಲದೆ ಆಧ್ಯಾತ್ಮಿಕ ಅಂಶದಿಂದ ಕೂಡ ನಿರ್ಮಿಸಲ್ಪಟ್ಟಿದೆ ಎಂಬುದಾಗಿ ಒಪ್ಪಿಕೊಳ್ಳುತ್ತಾರೆ. ಇದೂ ಕೂಡ ಅತಿಪ್ರಮುಖವಾಗಿರುವುದು ಎಂಬುದಾಗಿ ತಮ್ಮ ವಾದವನ್ನು ಹಿಂಪಡೆದುಕೊಳ್ಳುತ್ತಾರೆ.

ಅನ್ನಪೂರ್ಣೆಯು ಶಿವನನ್ನು ಕ್ಷಮಿಸಿ ತಮ್ಮ ಕೈಯಿಂದಲೇ ಶಿವನಿಗೆ ಆಹಾರವನ್ನು ತಿನ್ನಿಸುತ್ತಾರೆ. ಆದ್ದರಿಂದ ಅನ್ನಪೂರ್ಣ ಮಂತ್ರ ಮತ್ತು ಗಾಯತ್ರಿ ಮಂತ್ರಗಳೆರಡೂ ಐಶ್ವರ್ಯವನ್ನು ಪಡೆದುಕೊಳ್ಳಲು ನಿಮಗೆ ನೆರವಾಗಲಿದೆ. ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವವರೂ ಕೂಡ ಈ ಮಂತ್ರವನ್ನು ಪಠಿಸುವುದರಿಂದ ಆಹಾರದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದಾಗಿದೆ. 

Annapoorna Devi
 

ಅನ್ನಪೂರ್ಣ ಮಂತ್ರ

ಓಂ ಅನ್ನಪೂರ್ಣಾಯಾ ನಮಃ

ದೇವಿ ಅನ್ನಪೂರ್ಣೆಯ ಮೂಲ ಮಂತ್ರ ಇದಾಗಿದೆ. ಇದು ಪವಿತ್ರ ಮಂತ್ರವಾಗಿದ್ದು ಅಕ್ಷಯ ತೃತೀಯದಂದು ನೀವು ಇದನ್ನು ಪಠಿಸಬೇಕು.

ಓಂ ಹ್ರೀಂ ನಮೋ ಭಗವತೀ ಮಹೇಶ್ವರಿ ಅನ್ನಪೂರ್ಣಾ ಸ್ವಾಹಾ

ಈ ಮಂತ್ರವು ಮಾತೆ ಅನ್ನಪೂರ್ಣೆಯನ್ನು ನಿಮ್ಮ ಮನೆಗೆ ಬರುವಂತೆ ಮಾಡುತ್ತದೆ ಮತ್ತು ಆಕೆಯ ಕೃಪೆಯಿಂದ ಹಣದ ತೊಂದರೆಗೆ ನಿಮ್ಮ ಕುಟುಂಬ ಎಂದಿಗೂ ಒಳಗಾಗುವುದಿಲ್ಲ.

ಓಂ ಹ್ರೀಂ ಶ್ರೀಂ ಕ್ಲೀಂ ನಮೋ ಭಗವತೇ ಮಹೇಶ್ವರಿ ಅನ್ನಪೂರ್ಣೆ ಸ್ವಾಹಾ ಅನ್ನಪೂರ್ಣಾ ದೇವಿಯನ್ನು ಸಂಪ್ರೀತಿಗೊಳಿಸಲು ಈ ಮಂತ್ರವನ್ನು ಉಚ್ಛರಿಸಿ. ಇದರಿಂದ ನಿಮ್ಮ ಅಡುಗೆ ಮನೆ ಎಂದಿಗೂ ಆಹಾರ ಮತ್ತು ಇಂಧನ ಕೊರತೆಯನ್ನು ಅನುಭವಿಸುವುದಿಲ್ಲ.  ಅಕ್ಷಯ ತೃತೀಯ ವಿಶೇಷ: ಜಾತಕದಲ್ಲಿ ದೋಷವಿದ್ದರೆ ಈ ಮಂತ್ರಗಳನ್ನು ಪಠಿಸಿ

ಅನ್ನಪೂರ್ಣ ಗಾಯತ್ರಿ ಮಂತ್ರ

ಓಂ ಭಗವತಯೇ ವಿಧಾಮಹೇ

ಮಹೇಶ್ವರಿಯೇ ಧೀಮಹಿ

ತನ್ನೊ ಅನ್ನಪೂರ್ಣ ಪ್ರಚೋದಯಾತ್

ಗಾಯತ್ರಿ ಅನ್ನಪೂರ್ಣ ಮಂತ್ರವನ್ನು 108 ಬಾರಿ ಪಠಿಸುವುದರಿಂದ ನಿಮ್ಮ ಕುಟುಂಬ ಜೀವನ ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಮುನ್ನಡೆಯಲಿದೆ. ಅಕ್ಷಯ ತೃತೀಯದಂದು ನೀವು ಪಠಿಸಬೇಕಾದ ಮಂತ್ರ ಇದಾಗಿದೆ.

 

English summary

Goddess Annapoorna Devi And Akshaya Tritiya

Annapoorna Devi is a form of Goddess Parvati. She is the Goddess of nourishment and food. It is said that Goddess Annapoorna was born on the day of Akshaya Tritiya. It is therefore important that we remember Goddess Annapoorna on this Akshaya Tritiya day.Read on to know more about Goddess Annapoorna.
Subscribe Newsletter