ಕಷ್ಟಕಾರ್ಪಣ್ಯ ಮರೆಯಾಗಲು 'ಅಷ್ಟ ಲಕ್ಷ್ಮೀ ಸ್ತೋತ್ರ' ನಿತ್ಯ ಪಠಿಸಿ

By: Jaya subramanya
Subscribe to Boldsky

ಧನಕನಕಗಳನ್ನು ಭಕ್ತರಿಗೆ ವರವಾಗಿ ನೀಡುವ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನವಾಗಿದೆ. ಒಮ್ಮೆ ಲಕ್ಷ್ಮೀ ಕಟಾಕ್ಷ ನಮ್ಮ ಮೇಲೆ ಉಂಟಾಯಿತು ಎಂದರೆ ಮುಗಿಯಿತು ಜೀವನದಲ್ಲಿ ನಮ್ಮನ್ನು ಕಷ್ಟ ಸ್ಪರ್ಶಿಸಿ ಕೂಡ ನೋಡುವುದಿಲ್ಲ ಎಂಬ ಮಾತೊಂದಿದೆ. ಅದಕ್ಕಾಗಿಯೇ ಭಕ್ತರು ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿ ಕೂಡ ಲಕ್ಷ್ಮೀ ಪೂಜೆಯನ್ನು ಕಡ್ಡಾಯವಾಗಿ ಮಾಡಿಯೇ ಮಾಡುತ್ತಾರೆ.  ಅಕ್ಷಯ ತೃತೀಯ ವಿಶೇಷ: ಜಾತಕದಲ್ಲಿ ದೋಷವಿದ್ದರೆ ಈ ಮಂತ್ರಗಳನ್ನು ಪಠಿಸಿ

ಇನ್ನು ಅಕ್ಷಯ ತೃತೀಯದಂದು ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ನಮ್ಮ ಕಷ್ಟಕಾರ್ಪಣ್ಯಗಳು ಮರೆಯಾಗುತ್ತವೆ ಎಂಬುದೇ ನಂಬಿಕೆಯಾಗಿದೆ. ದೇವಿಯನ್ನು ಆರಾಧಿಸಲು ಮಂತ್ರಗಳಿಂದ ಆಕೆಯನ್ನು ಸಂಪ್ರೀತಿಗೊಳಿಸಬೇಕು ಅಂತೆಯೇ ಅಂತಹುದೇ ಪೂಜೆ ಪುನಸ್ಕಾರಗಳಿಂದ ಆಕೆಯನ್ನು ಮನೆಯಲ್ಲಿ ನೆನೆಯುವಂತೆ ಮಾಡಬೇಕು. ಅಕ್ಷಯ ತೃತೀಯದಂದು ತಪ್ಪದೇ ಪಠಿಸಿ 'ಮಹಾಲಕ್ಷ್ಮೀ' ಸ್ತೋತ್ರ

ಅಕ್ಷಯ ತೃತೀಯವು ಶುಭದಿನವಾಗಿದ್ದು ಈ ದಿನ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಅದರಲ್ಲಿ ಯಶಸ್ಸು ಖಂಡಿತ ದೊರೆಯುತ್ತದೆ. ಲಕ್ಷ್ಮೀಯ ಎಂಟು ಸ್ವರೂಪವನ್ನು ಈ ದಿನ ಪೂಜಿಸುವುದರಿಂದ ಜೀವನದಲ್ಲಿ ಸಕಲ ರೀತಿಯ ಸುಖ ಸೌಭಾಗ್ಯ ನಮ್ಮದಾಗುತ್ತದೆ.  ಸಂಪತ್ತಿನ ದೇವತೆ 'ಲಕ್ಷ್ಮಿ'ಯನ್ನು ಒಲಿಸಿಕೊಳ್ಳುವ ಮಂತ್ರಗಳು

ಆದಿ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಧೈರ್ಯ ಲಕ್ಷ್ಮೀ, ಗಜ ಲಕ್ಷ್ಮೀ, ಸಂತಾನ ಲಕ್ಷ್ಮೀ, ವಿಜಯ ಲಕ್ಷ್ಮೀ, ವಿದ್ಯಾ ಲಕ್ಷ್ಮೀ ಮತ್ತು ಧನ ಲಕ್ಷ್ಮೀ ಎಂಬುದು ಲಕ್ಷ್ಮೀ ದೇವಿಯ ಎಂಟು ಸ್ವರೂಪಗಳಾಗಿವೆ. ಇಂದಿನ ಲೇಖನದಲ್ಲಿ ಈ ಎಂಟು ಪ್ರಕಾರದ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ಮಂತ್ರಗಳಿದ್ದು ಲಕ್ಷ್ಮೀದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ಈ ಮಂತ್ರಗಳನ್ನು ಉಚ್ಛರಿಸುವುದರಿಂದ ನಿಮಗೆ ಶುಭಉಂಟಾಗಲಿದೆ...

ಆದಿ ಲಕ್ಷ್ಮೀ

ಆದಿ ಲಕ್ಷ್ಮೀ

ಸುಮನಸ ವಂದಿತ ಮಾಧವೀ

ಚಂದ್ರ ಸಹೋದರಿ ಹೇಮ - ಮಯೆ

ಮುನಿಗಣ ಮಂದಿತ ಮೋಕ್ಷ ಪ್ರದಾಯಿನಿ

ಮಂಜುಳ ಭಾಷಿಣಿ ವೇದ - ಮೂರ್ತೆ

ಪಂಕಜ ವಾಸಿನಿ ದೇವ ಸುಪೋಜಿತಾ

ಸದ್ಗುಣ ವರ್ಷಿಣಿ ಸಂತಾನಿ - ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಆದಿ - ಲಕ್ಷ್ಮೀ ಸದಾ ಪಾಲಯ ಮಾಮ್

ಧಾನ್ಯ ಲಕ್ಷ್ಮೀ

ಧಾನ್ಯ ಲಕ್ಷ್ಮೀ

ಅಯೋ ಕಲಿ ಕಲ್ಮಶ ನಾಶಿನಿ ಕಾಮಿನಿ

ವೈದಿಕ ರೂಪಿಣಿ ವೇದ - ಮಯೇ

ಕಶೀರ ಸಮುಧ-ಭವ ಮಂಗಳ ರೂಪಿಣಿ

ಮಂತ್ರ ನಿವಾಶಿನಿ ಮಂತ್ರ-ನುತೇ

ಮಂಗಳ ಧಾಯಿನಿ ಅಂಬುಜ ವಾಸಿನಿ

ದೇವ ಗಣಾರ್ಚಿತ ಪದ - ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಧಾನ್ಯ ಲಕ್ಷ್ಮೀ ಸದಾ ಪಾಲಯ ಮಾಮ್

ಧೈರ್ಯ ಲಕ್ಷ್ಮೀ

ಧೈರ್ಯ ಲಕ್ಷ್ಮೀ

ಜಯ ವರ ವಾಹಿನಿ ವೈಷ್ಣವಿ

ಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರ ಮಯೆ

ಸುರಗಣ ಪೂಜಿತಾ ಶೀಘ್ರ ಫಲ ಪ್ರದ

ಜ್ಞಾನ ವಿಕಾಸಿನಿ ಸಾಸ್ತ್ರ ನುತೇ

ಭವ ಭಯ ಹಾರಿಣಿ ಪಾಪ ವಿಮೋಚಿನಿ

ಸಾದು ಜನಾರ್ಚಿತಾ ಪದ ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಧೈರ್ಯ-ಲಕ್ಷ್ಮೀ ಸದಾ ಪಾಲಯ ಮಾಮ್

ಗಜ ಲಕ್ಷ್ಮೀ

ಗಜ ಲಕ್ಷ್ಮೀ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ

ಸರ್ವ ಫಲ ಪ್ರದ ಶಾಸ್ತ್ರ ಮಯೆ

ರಥ ಗಜ ತುರಗಾ ಪದಾತಿ ಸಮ - ವೃತ

ಪರಿಜನ ಮಂದಿತ ಲೋಕ ನುತೇ

ಹರಿಹರ ಬ್ರಹ್ಮ ಸುಪೋಜಿತಾ ಸೇವಿತ

ತಪ ನಿವಾರಿಣಿ ಪದ ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಗಜ- ಲಕ್ಷ್ಮೀ ಸದಾ ಪಾಲಯ ಮಾಮ್

ಸಂತಾನ ಲಕ್ಷ್ಮೀ

ಸಂತಾನ ಲಕ್ಷ್ಮೀ

ಅಯಿ ಖಗ ವಾಹಿನಿ ಮೋಹಿನಿ ಚಕ್ರಿಣಿ

ರಾಗ ವಿವರ್ಧಿನಿ ಜ್ಞಾನ ಮಯೇ

ಗುಣ ಗಣ ವಾರಿಧಿ ಲೋಕ ಹಿತಾಶಿನಿ

ಸ್ವರಾ ಸಪ್ತ ಭೂಷಿತಾ ಗಣ ನುತೇ

ಸಕಲ ಸುರಾ ಸುರ ದೇವ ಮುನೀಶ್ವರ

ಮನ್ವ ವಂದಿತಾ ಪದ ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಸಂತಾನ ಲಕ್ಷ್ಮೀ ಸದಾ ಪಾಲು ಮಾಮ್

ವಿಜಯ ಲಕ್ಷ್ಮೀ

ವಿಜಯ ಲಕ್ಷ್ಮೀ

ಜಯ ಕಮಲಸಿನಿ ಸದ್ಗತಿ ದಾಯಿನಿ

ಜ್ಞಾನ ವಿಕಾಸಿನಿ ಗಣಮಯೇ

ಅನುದಿನ ಮರ್ಚಿತಾ ಕುಂಕುಮ ಧೂಸರ

ಭೂಷಿತ ವಸಿತಾ ವಧ್ಯ ನುತೇ

ಕನಕಾಧರ ಸ್ತುತಿ ವೈಭವ

ವಂದಿತ ಶಂಕರ ದೇಸಿಕಾ ಮಾನ್ಯ ಪತೇ

ಜಯ ಜಯ ಹೇ ಮಧುಸೂಧನಾ ಕಾಮಿನಿ

ವಿಜಯ ಲಕ್ಷ್ಮೀ ಸದಾ ಪಾಲಯ ಮಾಮ್

ವಿದ್ಯಾ ಲಕ್ಷ್ಮೀ

ವಿದ್ಯಾ ಲಕ್ಷ್ಮೀ

ಪ್ರನ್ನಾತ ಸುರೇಶ್ವರಿ ಭಾರತಿ ಭಾರ್ಗವಿ

ಶೋಕ ವಿನಾಶಿನಿ ರತ್ನ ಮಯೆ

ಮಣಿ-ಮಯ ಭೂಷಿತಾ ಕರ್ಮ ವಿಭೂಷಣ

ಸಂತಿ ಸಮವೃತ ಹಾಸ್ಯ ಮುಖೆ

ನವ ನಿಧಿ ದಾಯಿನಿ ಕಲಿಮಲ ಹಾರಿಣಿ

ಕಾಮಿತ ಫಲ ಪ್ರದಾ ಹಸ್ತ ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ವಿದ್ಯಾ ಲಕ್ಷ್ಮೀ ಸದಾ ಪಾಲಯ ಮಾಮ್

ಧನ ಲಕ್ಷ್ಮೀ

ಧನ ಲಕ್ಷ್ಮೀ

ಧಿಮಿ ಧಿಮಿ ಧಿನ್ ಧಿಮಿ ಧಿನ್ ಧಿಮಿ ಧಿನ್ ಧಿಮಿ

ಡುಂಡುಭಿ ನಾದ ಸುಪೂರ್ಣ ಮಯೆ

ಗುಮ ಗುಮ ಗುಮ ಗುಮ ಗುಮ ಗುಮ

ಶಂಖ ನಿನಾದ ಸುವಾಧ್ಯ ನುತೇ

ವೇದ ಪುರಾಣತಿಹಾಸ ಸುಪೋಜಿತಾ

ವೈಧಿಕ ಮಾರ್ಗ ಪ್ರದರ್ಶ ಯುತೇ

ಜಯ ಜಯ ಹೇ ಮಧುಸೂಧನ ಕಾಮಿನಿ

ಧನ ಲಕ್ಷ್ಮೀ ಸದಾ ಪಾಲಯ ಮಾಮ್

English summary

Ashtalakshmi Stotra To Chant On Akshaya Tritiya

Goddess Lakshmi is often worshipped in her eight different forms. These varied forms of Goddess Lakshmi stand for eight different ways that you can gain prosperity and wealth. These eight forms represent the eight forms of 'Aishwarya' that are necessary for a human being to lead a happy and prosperous life. The eight forms of Goddess Lakshmi are called the Adi Lakshmi, Dhanya Lakshmi, Dhairya Lakshmi, Gaja Lakshmi, Santana Lakshmi, Vijaya Lakshmi, Vidya Lakshmi and Dhana Lakshmi.
Subscribe Newsletter