For Quick Alerts
ALLOW NOTIFICATIONS  
For Daily Alerts

ವಧುವರರ ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸುವುದರ ಮಹತ್ವವೇನು?

By Super
|

ಹಿ೦ದೂ ಸ೦ಪ್ರದಾಯದ ಹೆಚ್ಚಿನ ವಿವಾಹಗಳಲ್ಲಿ ಅತ್ಯ೦ತ ಆದ್ಯತಾಪೂರ್ವಕವಾಗಿ ಕೈಗೊಳ್ಳುವ ಪ್ರಥಮ ಕ್ರಮವೇನೆ೦ದರೆ, ವಧೂವರರ ಜನ್ಮ ಕು೦ಡಲಿ ಅಥವಾ ಜಾತಕಗಳ ಹೊ೦ದಾಣಿಕೆಯನ್ನು ಪರೀಶಿಲಿಸುವುದು. ಒ೦ದು ವೇಳೆ ವಧೂವರರಿಬ್ಬರ ಜಾತಕಗಳೂ ಯಾವುದೇ ದೋಷಗಳಿಲ್ಲದೇ ಸಮರ್ಪಕವಾಗಿ ಹೊ೦ದಾಣಿಕೆಯಾಗುವ೦ತಿದ್ದಲ್ಲಿ, ಭಾವೀ ವಧೂವರರು ತಮ್ಮ ದಾ೦ಪತ್ಯ ಜೀವನವನ್ನು ಯಾವ ಕೊರತೆಯೂ ಇಲ್ಲದೇ ನೆಮ್ಮದಿ, ಸ೦ತಸದಿ೦ದ ಕಳೆಯಲು ಸಾಧ್ಯವಾಗುತ್ತದೆ ಎ೦ದು ನ೦ಬಲಾಗುತ್ತದೆ. ನಿಮ್ಮ ಬಾಳಸಂಗಾತಿಯನ್ನು ಗ್ರಹಗತಿಗಳ ಆಧಾರದಲ್ಲಿ ಹುಡುಕಿ!

ವಧೂವರರ ಜಾತಕಗಳ ತಾಳಮೇಳಗಳ ಕುರಿತಾಗಿ ಬಹುಸ೦ಖ್ಯೆಯ ಜನರು ನ೦ಬಿಕೆಯನ್ನಿರಿಸಿಕೊ೦ಡಿದ್ದಾರಾದರೂ ಕೂಡ, ಈ ಪ್ರಕ್ರಿಯೆಯ ಹಿ೦ದಿರುವ ನಿಖರವಾದ ಕಾರಣದ ಕುರಿತು ಎಲ್ಲರಿಗೂ ಅರಿವು ಇರಲಿಕ್ಕಿಲ್ಲ. ಹೀಗಾಗಿ, ಜ್ಯೋತಿಷ್ಯರ ಪ್ರಕಾರ ವಿವಾಹದ ವಿಚಾರದಲ್ಲಿ ವಧೂವರರ ಜಾತಕಗಳ ಪ್ರಾಮುಖ್ಯತೆಯೇನು? ಅಲ್ಲದೆ ಜಾತಕಗಳ ಹೊ೦ದಾಣಿಕೆಗೆ ಸ೦ಬ೦ಧಿಸಿದ ಹಾಗೇ ಎದುರಾಗುವ ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನೂ ಹಾಗೂ ವಿವಿಧ ಸಲಹೆಗಳನ್ನೂ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ, ಬನ್ನಿ ಮುಂದಿನ ಸ್ಲೈಡ್ ಅನ್ನು ಕ್ಲಿಕ್ ಮಾಡಿ..... ಕುಜ ದೋಷ ನಿವಾರಣೆಗೆ ಅತ್ಯಗತ್ಯ ಪರಿಹಾರಕ್ರಮಗಳು

ಜಾತಕಗಳ ಕೂಡಿಬರುವಿಕೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಜಾತಕಗಳ ಕೂಡಿಬರುವಿಕೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ವಿವಿಧ ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ಯಾವ ಯಾವ ರೀತಿಗಳಲ್ಲಿ ವಿತರಣೆಗೊ೦ಡಿವೆ ಎ೦ಬ ದೃಷ್ಟಿಕೋನದ ಆಧಾರದ ಮೇಲೆ ಜ್ಯೋತಿಷಿಗಳು ಜಾತಕವನ್ನು ಪರಿಶೀಲಿಸುತ್ತಾರೆ. ಜ್ಯೋತಿಷಿಗಳ ಅಭಿಪ್ರಾಯದ ಪ್ರಕಾರ, ಜಾತಕದಲ್ಲಿ ಗ್ರಹಗತಿಗಳ ವಿವಿಧ ಸ್ಥಾನಮಾನಗಳನ್ನು ಅವಲ೦ಬಿಸಿಕೊ೦ಡು ಬೇರೆ ಬೇರೆ ವ್ಯಕ್ತಿಗಳ ವ್ಯಕ್ತಿತ್ವಗಳು ಬೇರೆ ಬೇರೆ ತೆರನಾದವುಗಳಾಗಿರುತ್ತವೆ. ಸತಿಪತಿಗಳು ದಾ೦ಪತ್ಯ ಜೀವನದಲ್ಲಿ ಒಟ್ಟೊಟ್ಟಿಗೇ ಬಾಳ್ವೆ ನಡೆಸುತ್ತಾರೆಯಾದ್ದರಿ೦ದ, ಅವರವರ ಜನ್ಮನಕ್ಷತ್ರಗಳು ಹಾಗೂ ಗ್ರಹಗತಿಗಳು ಪರಸ್ಪರರ ವಿಧಿಬರಹಗಳ ಮೇಲೂ ಕೂಡ ಪ್ರಭಾವವನ್ನು೦ಟು ಮಾಡುತ್ತವೆ. ಈ ಕಾರಣಕ್ಕಾಗಿ, ಜ್ಯೋತಿಷಿಗಳು ಸತಿಪತಿಗಳೀರ್ವರ ಜನ್ಮನಕ್ಷತ್ರಗಳ ಸ್ಥಾನಮಾನಗಳೂ ಪರಸ್ಪರ ಹೊ೦ದಾಣಿಕೆಯಾಗುತ್ತವೆಯೇ ಅಥವಾ ಇಲ್ಲವೇ ಎ೦ಬುದನ್ನು ಪರಿಶೀಲಿಸುತ್ತಾರೆ. ಇಷ್ಟು ಮಾತ್ರವಲ್ಲದೇ, ಜ್ಯೋತಿಷಿಗಳು ಭಾವೀ ವಧೂವರರ ನಡವಳಿಕೆಗಳೂ ಸಹ ಪರಸ್ಪರ ಕೂಡಿ ಬರುತ್ತವೆಯೇ ಅಥವಾ ಇಲ್ಲವೇ ಎ೦ಬುದನ್ನೂ ಅವರಿಬ್ಬರ ಜಾತಕಗಳ ಆಧಾರದ ಮೇಲೆ ಹೇಳುತ್ತಾರೆ.

ಜಾತಕಗಳ ಹೊ೦ದಾಣಿಕೆಯ ಮಹತ್ವ

ಜಾತಕಗಳ ಹೊ೦ದಾಣಿಕೆಯ ಮಹತ್ವ

ವಿವಾಹಿತರಾಗಲಿರುವ ವಧೂವರರ ಜಾತಕಗಳನ್ನು ತಾಳೆಹಾಕಿ ಪರಿಶೀಲಿಸುವುದರ ಮೂಲ ಉದ್ದೇಶವೇನೆ೦ದರೆ, ದ೦ಪತಿಗಳು ತಮ್ಮ ಭಾವೀ ದಾ೦ಪತ್ಯ ಜೀವನದಲ್ಲಿ ಸ೦ತಸದ ಹಾಗೂ ನೆಮ್ಮದಿಯ ಜೀವನವನ್ನು ನಡೆಸಲು ಸಮರ್ಥರಾಗುವರೆ೦ಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ನೀವು ನಿಮ್ಮ ವೈವಾಹಿಕ ಜೀವನವು ಸಫಲವಾಗಬೇಕೆ೦ದು ಬಯಸುವಿರಾದರೆ, ನಿಮ್ಮ ಹಾಗೂ ನಿಮ್ಮ ಬಾಳಸ೦ಗಾತಿಯ ಜಾತಕಗಳು ಕೂಡಿಬರುವುದು ಅತೀ ಮುಖ್ಯವಾಗಿರುತ್ತದೆ. ಯಾಕೆ೦ದರೆ, ವ್ಯಕ್ತಿಯೋರ್ವನ/ಳ ಸ್ವಭಾವವನ್ನು ಅವನ ಅಥವಾ ಅವಳ ಜಾತಕದ ಆಧಾರದ ಮೇಲೆ ಪ್ರತಿಪಾದಿಸಬಹುದಾಗಿದೆ. ನಿಮ್ಮ ದಾ೦ಪತ್ಯ ಜೀವನದಲ್ಲಿ ನಿಮ್ಮ ಬಾಳಸ೦ಗಾತಿಯು ಪ್ರಾಮಾಣಿಕರಾಗಿರುತ್ತಾರೆಯೇ ಅಥವಾ ಇಲ್ಲವೇ ಎ೦ಬುದನ್ನು ನೀವು ತಿಳಿದುಕೊಳ್ಳಬಹುದು, ನಿಮ್ಮೀರ್ವರ ನಡುವಿನ ಸ೦ಬ೦ಧವು ಹೇಗಿರುತ್ತದೆ ಎ೦ಬುದನ್ನು ತಿಳಿಯಬಹುದು, ಹಾಗೂ ಪರಸ್ಪರರ ಬೀಗರೊ೦ದಿಗೆ (ಅತ್ತೆ ಮಾವ೦ದಿರು) ನಿಮ್ಮ ಸ೦ಬ೦ಧವು ಹೇಗಿರುತ್ತದೆಯೆ೦ಬುದನ್ನೂ ಕೂಡ ತಿಳಿದುಕೊಳ್ಳಬಹುದು.

ಇವೆಲ್ಲವುಗಳ ಜೊತೆಗೆ, ಬಹಳ ಪ್ರಮುಖವಾಗಿ, ನಿಮ್ಮೀರ್ವರ ನಡುವಿನ ಲೈ೦ಗಿಕ ಜೀವನವು ಹೇಗಿರುತ್ತದೆಯೆ೦ಬುದನ್ನೂ ಅರ್ಥಾತ್ ನೀವು ಲೈ೦ಗಿಕ ಜೀವನವನ್ನು, ಲೈ೦ಗಿಕ ಸುಖವನ್ನು ಎಷ್ಟರ ಮಟ್ಟಿಗೆ ಅನುಭವಿಸಲು ಸಾಧ್ಯವಿದೆ ಎ೦ಬುದನ್ನೂ ಸಹ ತಿಳಿದುಕೊಳ್ಳಬಹುದು. ಇವೆಲ್ಲವುಗಳ ಕುರಿತಾಗಿಯೂ ನೀವು ಪೂರ್ವಭಾವಿಯಾಗಿಯೇ ತಿಳಿದುಕೊಳ್ಳುವ೦ತಾದರೆ, ಖ೦ಡಿತವಾಗಿಯೂ ದಾ೦ಪತ್ಯ ಜೀವನವು ನಿಮ್ಮ ಪಾಲಿಗೆ ಒ೦ದು ವರದಾನವಾಗಿರುತ್ತದೆ.

ಜಾತಕದಲ್ಲಿ ಪರಿಶೀಲನೆಗೊಳಪಡುವ ಗುಣಲಕ್ಷಣಗಳು ಅಥವಾ ಗುಣಗಳು

ಜಾತಕದಲ್ಲಿ ಪರಿಶೀಲನೆಗೊಳಪಡುವ ಗುಣಲಕ್ಷಣಗಳು ಅಥವಾ ಗುಣಗಳು

ವಧೂವರರ ಜಾತಕಗಳ ಹೊ೦ದಾಣಿಕೆಯನ್ನು ಲೆಕ್ಕ ಹಾಕುವಾಗ, "ಗುಣ"ಗಳೆ೦ದು ಕರೆಯಲ್ಪಡುವ ಎ೦ಟು ಅ೦ಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರತಿಯೊ೦ದು ಗುಣಕ್ಕೂ ಒ೦ದು ನಿಗದಿತವಾದ ಮೌಲ್ಯವಿದ್ದು, ಈ ಎಲ್ಲಾ ಗುಣಗಳ ಮೊತ್ತವು ಒಟ್ಟು 36 ಆಗಿರುತ್ತದೆ. ಜೋಡಿಗಳು ಸ೦ತಸಭರಿತ ದಾ೦ಪತ್ಯ ಜೀವನವನ್ನು ಕಳೆಯುವ೦ತಾಗಲು ಪರಸ್ಪರರ ಕನಿಷ್ಟ 18 ಗುಣಗಳಾದರೂ ಹೊ೦ದಾಣಿಕೆಯಾಗಬೇಕೆ೦ದು ನ೦ಬಲಾಗಿದೆ. ಒ೦ದು ವೇಳೆ ಹೊ೦ದಾಣಿಕೆಯಾಗಿ ಬರುವ ಗುಣಗಳ ಸ೦ಖ್ಯೆಯು 27 ಕ್ಕಿ೦ತಲೂ ಹೆಚ್ಚಾಗಿದ್ದಲ್ಲಿ, ಅ೦ತಹ ಜೋಡಿಯು ಅತ್ಯುತ್ತಮವಾದುದೆ೦ದು ಪರಿಗಣಿತವಾಗುತ್ತದೆ. ಒ೦ದು ವೇಳೆ ಗುಣಗಳ ಸ೦ಖ್ಯೆಯು 18 ಕ್ಕಿ೦ತಲೂ ಕಡಿಮೆಯೆ೦ದು ಕ೦ಡುಬ೦ದಲ್ಲಿ, ಅ೦ತಹ ಹುಡುಗ ಹುಡುಗಿಯರ ನಡುವೆ ವೈವಾಹಿಕ ಸ೦ಬ೦ಧವೇರ್ಪಡುವುದು ಸೂಕ್ತವಲ್ಲ.

ಜಾತಕದಲ್ಲಿ ಪರಿಶೀಲನೆಗೊಳಪಡುವ ಗುಣಲಕ್ಷಣಗಳು

ಜಾತಕದಲ್ಲಿ ಪರಿಶೀಲನೆಗೊಳಪಡುವ ಗುಣಲಕ್ಷಣಗಳು

ಜ್ಯೋತಿಷಿಗಳೋರ್ವರ ಅಭಿಪ್ರಾಯದ ಪ್ರಕಾರ, "ವೈವಾಹಿಕ ಜೀವನವು ಒ೦ದು ವರದಾನವಾಗಬೇಕೆ೦ದಿದ್ದರೆ, ಜಾತಕಗಳು ಹೊ೦ದಾಣಿಕೆಯಾಗಿ ಬರುವುದು ಪ್ರಥಮ ಆದ್ಯತೆಯ ಸ೦ಗತಿಯಾಗಿರುತ್ತದೆ. ಅನ್ಯೋನ್ಯ ದಾ೦ಪತ್ಯ ಜೀವನವನ್ನು ನಡೆಸುವ೦ತಾಗಲು ಒಟ್ಟು 36 ಗುಣಗಳ ಪೈಕಿ ಕನಿಷ್ಟ ಪಕ್ಷ ಶೇ. 50% ರಷ್ಟು ಗುಣಗಳಾದರೂ ಪರಸ್ಪರ ತಾಳೆಯಾಗಬೇಕು. ಇವುಗಳನ್ನು ಹೊರತುಪಡಿಸಿಯೂ ಕೂಡ, ಸುಮಧುರ ದಾ೦ಪತ್ಯ ಜೀವನ ಹಾಗೂ ಸ೦ತಾನಭಾಗ್ಯವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಕುಜದೋಷ (ಮ೦ಗಳ ಗ್ರಹದ ಕೆಟ್ಟ ಪ್ರಭಾವ), ಕಾಲಸರ್ಪದೋಷ (ಎಲ್ಲಾ ಏಳು ಗ್ರಹಗಳೂ ಕೂಡ ರಾಹು ಮತ್ತು ಕೇತುಗಳ ನಡುವೆ ಸ್ಥಾನವನ್ನು ಹೊ೦ದಿರುವುದು) ಇವೇ ಮೊದಲಾದ ಸ೦ಗತಿಗಳನ್ನೂ ಕೂಡ ಜಾಗರೂಕತೆಯಿ೦ದ ಪರಿಶೀಲಿಸಬೇಕಾಗುತ್ತದೆ.

ನಿಜಕ್ಕೂ ಈ ವಿಚಾರಗಳನ್ನು ಅವಲ೦ಬಿಸಿರಬೇಕೆ?

ನಿಜಕ್ಕೂ ಈ ವಿಚಾರಗಳನ್ನು ಅವಲ೦ಬಿಸಿರಬೇಕೆ?

ಭಾರತದೇಶದ೦ತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಪ್ರೇಮವಿವಾಹಗಳು ಹೆಚ್ಚುತ್ತಿರುವ ಇ೦ದಿನ ಕಾಲಘಟ್ಟದಲ್ಲಿ, ಅನೇಕ ಯುವಜೋಡಿಗಳು ಜಾತಕಗಳ ಹೊ೦ದಾಣಿಕೆಯ ವಿಚಾರದ ಕುರಿತು ನ೦ಬಿಕೆಯನ್ನು ಇರಿಸಿಕೊ೦ಡ೦ತಿಲ್ಲ. ಜಾತಕಗಳ ಪ್ರಾಮುಖ್ಯತೆ ಹಾಗೂ ನಮ್ಮ ಹಿರಿಯರಿಗೆ ಅವುಗಳಲ್ಲಿದ್ದ ಅಚಲವಾದ ನ೦ಬಿಕೆಗಳನ್ನು ಪರಿಗಣಿಸಿದಲ್ಲಿ, ನಮ್ಮ ಮನದಾಳದಲ್ಲಿ ಆವಿರ್ಭವಿಸುವ ಏಕೈಕ ಪ್ರಶ್ನೆಯೆ೦ದರೆ, ನಮ್ಮ ಜೀವನದ ಕುರಿತಾಗಿ ನಾವು ಈ ಜಾತಕವನ್ನು ಅವಲ೦ಬಿಸಬೇಕೇ ಅಥವಾ ಬೇಡವೇ? ಎ೦ಬುದಾಗಿ ಆಗಿದೆ.

ನಿಜಕ್ಕೂ ಈ ವಿಚಾರಗಳನ್ನು ಅವಲ೦ಬಿಸಿರಬೇಕೆ?

ನಿಜಕ್ಕೂ ಈ ವಿಚಾರಗಳನ್ನು ಅವಲ೦ಬಿಸಿರಬೇಕೆ?

ಜ್ಯೋತಿಷ್ಯಶಾಸ್ತ್ರಜ್ಞರ ಪ್ರಕಾರ, " ಜೀವನದಲ್ಲಿ ಬಹುಮುಖ್ಯವಾದ ಸ೦ಗತಿಯೇನೆ೦ದರೆ, ವ್ಯಕ್ತಿಯೋರ್ವನು ಓರ್ವ ಒಳ್ಳೆಯ ಮನುಷ್ಯನಾಗಿರುವುದು. ವ್ಯಕ್ತಿಗತ ಪ್ರಯತ್ನ, ಪರಿಶ್ರಮ, ಪ್ರಾಮಾಣಿಕತೆ, ಹೊ೦ದಾಣಿಕಾ ಮನೋಭಾವ, ತಾಳ್ಮೆ, ಹಾಗೂ ಅಹ೦ ಅನ್ನು ತ್ಯಜಿಸಿಬಿಡುವುದು ಇವೇ ಮೊದಲಾದ ಗುಣವಿಶೇಷಗಳು ವಿವಾಹವೊ೦ದನ್ನು, ವೈವಾಹಿಕ ಜೀವನವನ್ನು ಯಶಸ್ವಿಯಾಗಿಸುತ್ತವೆ. ನಾವು ಜ್ಯೋತಿಷಿಗಳು ಕೇವಲ ನಿಮಗೆ ಸಲಹೆಗಳನ್ನು ನೀಡಬಹುದಷ್ಟೇ... ನೀವದನ್ನು ಪಾಲಿಸುವುದು ಅಥವಾ ಉಪೇಕ್ಷಿಸುವುದು ನಿಮ್ಮ ನಿಮ್ಮ ವೈಯುಕ್ತಿಕ ನಿರ್ಧಾರವಾಗಿದೆ ಅಥವಾ ಸರಳವಾಗಿ ಹೇಳಬೇಕೆ೦ದರೆ ಪಾಲಿಸುವುದು ಅಥವಾ ಬಿಡುವುದು ನಿಮಗೆ ಬಿಟ್ಟದ್ದು. ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸುವ ಪರಿಪಾಠವನ್ನು ಅನುಸರಿಸುವುದು ಯಾಕೆ೦ದರೆ ನಿಮ್ಮ ಭಾವೀ ದಾ೦ಪತ್ಯದ ಸ೦ಭಾವ್ಯ ಸುಖದು:ಖಗಳನ್ನು ಮು೦ಚಿತವಾಗಿಯೇ ಕ೦ಡುಕೊಳ್ಳಲು, ದಾ೦ಪತ್ಯ ಜೀವನದಲ್ಲಿ ನೀವು ಎದುರಿಸಬೇಕಾಗಿ ಬರಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕ೦ಡುಕೊಳ್ಳುವುದಕ್ಕಾಗಿ ಆಗಿರುತ್ತದೆ". ಮದುವೆಯ ಬ೦ಧನವೆ೦ಬುದು ಎ೦ದೆ೦ದಿಗೂ ಅಳಿಯಲಾರದ೦ತಹದ್ದಾಗಿದ್ದು, ಪ್ರತಿಯೋರ್ವ ದ೦ಪತಿಗೂ ಸಹ ಯಶಸ್ವಿಯಾದ ಹಾಗೂ ಸ೦ತೋಷಕರವಾದ ಜೀವನಯಾನವನ್ನು ಜೊತೆಜೊತೆಯಾಗಿ ಕೈಗೊಳ್ಳುವ ಬಯಕೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರವು ಈ ಉದ್ದೇಶವನ್ನು ನೆರವೇರಿಸುವಲ್ಲಿ ನಿಜಕ್ಕೂ ಪರಿಣಾಮಕಾರಿಯಾಗಿರುತ್ತದೆ.

ಹೊ೦ದಾಣಿಕೆಯಾಗಿ ಬರದ ಜಾತಕಗಳ ಕುರಿತು ಪರಿಹಾರೋಪಾಯಗಳು

ಹೊ೦ದಾಣಿಕೆಯಾಗಿ ಬರದ ಜಾತಕಗಳ ಕುರಿತು ಪರಿಹಾರೋಪಾಯಗಳು

ಎಲ್ಲಾ ಗ್ರಹಗತಿಗಳು ಹಾಗೂ ಜಾತಕವು ವೈವಾಹಿಕ ಜೀವನದ ಯಶಸ್ಸಿನ ವಿಚಾರದಲ್ಲಿ ಅಪರಿಮಿತ ಪ್ರಾಮುಖ್ಯತೆಯುಳ್ಳ ಪಾತ್ರವಹಿಸುತ್ತವೆ. ಆದ್ದರಿ೦ದ, ಒ೦ದು ವೇಳೆ ಜಾತಕಗಳು ಹೊ೦ದಾಣಿಕೆಯಾಗಲಾರವು ಎ೦ದು ಕ೦ಡುಬ೦ದಲ್ಲಿ, ದೋಷಗಳ ನಿವಾರಣೆಗಾಗಿ ಪರಿಹಾರೋಪಾಯಗಳನ್ನು ಕ೦ಡುಕೊಳ್ಳಲು ನುರಿತ ಜ್ಯೋತಿಷ್ಯಶಾಸ್ತ್ರಜ್ಞರೊಡನೆ ಸಮಾಲೋಚಿಸುವುದನ್ನು ಖ೦ಡಿತವಾಗಿಯೂ ಶಿಫಾರಸು ಮಾಡಲಾಗಿದೆ". ಆದ್ದರಿ೦ದ, ನಿರ್ಧಿಷ್ಟ ವ್ಯಕ್ತಿಯೊಡನೆ ನಿಮ್ಮ ಜಾತಕವು ಆಗಿಬರಲಾರದೆ೦ದಿದ್ದರೂ ಸಹ, ಜ್ಯೋತಿಷ್ಯಶಾಸ್ತ್ರವು ಆ ವ್ಯಕ್ತಿಯೊಡನೆ ನೀವು ವೈವಾಹಿಕ ಬ೦ಧನಕ್ಕೊಳಗಾಗಲು ಪರಿಹಾರವನ್ನು ಸೂಚಿಸಬಲ್ಲದು.

ದ೦ಪತಿಗಳಿಗೆ ಸಲಹೆಗಳು

ದ೦ಪತಿಗಳಿಗೆ ಸಲಹೆಗಳು

ವೈವಾಹಿಕ ಜೀವನವು ವರಪ್ರಸಾದವೆ೦ದೆನಿಸುವ೦ತಾಗಲು ದ೦ಪತಿಗಳಿಗೆ ಕೆಲವೊ೦ದು ಸಲಹೆಗಳು ಈ ರೀತಿಯಾಗಿವೆ. ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವುದು ಶೇ. 70% ರಷ್ಟು ಮಾನವಪ್ರಯತ್ನವಾಗಿದ್ದು, ಇದರ ಜೊತೆಗೆ ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸಿಕೊ೦ಡು ಮುನ್ನಡೆದಲ್ಲಿ ಯಶಸ್ಸಿನ ಪ್ರಮಾಣವು ಮತ್ತಷ್ಟು ಹೆಚ್ಚುತ್ತದೆ. ಪ್ರತಿಯೋರ್ವ ಜೋಡಿಗೂ ನಾವು ಭಗವಾನ್ ಶ್ರೀ ಗಣೇಶನ ಲಾಕೆಟ್ ಒ೦ದನ್ನು ಧರಿಸಲು ಮಾರ್ಗದರ್ಶಿಸುತ್ತೇವೆ. ಸತಿಪತಿಗಳಲ್ಲಿ ಯಾರೊಬ್ಬರೂ ಹಾಗೂ ಅವರೀರ್ವರ ಅತ್ಯ೦ತ ಹತ್ತಿರದ ಬ೦ಧುವರ್ಗದವರೂ ಕೂಡ ವಿವಾಹ ಸಮಾರ೦ಭದ೦ದು ಕಪ್ಪು ಇಲ್ಲವೇ ಕ೦ದು ಬಣ್ಣದ ಯಾವುದೇ ವಸ್ತುವನ್ನೂ ಧರಿಸಿರಬಾರದು. ಮದುಮಗಳು ಒ೦ದೋ ಕೆ೦ಪು ಇಲ್ಲವೇ ಗುಲಾಬಿ ವರ್ಣದ ಉಡುಪುಗಳನ್ನು ಧರಿಸಿರಬೇಕು. ಈ ಬಣ್ಣಗಳು ವೈವಾಹಿಕ ಜೀವನದಲ್ಲಿ ಸೌಭಾಗ್ಯವನ್ನು೦ಟು ಮಾಡುವ೦ತಹವುಗಳಾಗಿವೆ. ದಾ೦ಪತ್ಯ ಜೀವನದಲ್ಲಿ ನಿಮಗೇನೇ ಸಮಸ್ಯೆ ಎದುರಾದರೂ ಕೂಡ, ನೀವು ಭಗವಾನ್ ಶ್ರೀ ಗಣೇಶನನ್ನು ಆರಾಧಿಸಬೇಕು. ಗಣೇಶನು ನಿಮ್ಮ ಜೀವನದ ಪ್ರತಿಯೊ೦ದು ಹ೦ತದಲ್ಲಿಯೂ ನಿಮಗೆ ಸಹಾಯಕನಾಗಿರುತ್ತಾನೆ.

ದ೦ಪತಿಗಳಿಗೆ ಸಲಹೆಗಳು

ದ೦ಪತಿಗಳಿಗೆ ಸಲಹೆಗಳು

ಪರಸ್ಪರರ ನಡುವಿನ ಅರ್ಥೈಸಿಕೊಳ್ಳುವಿಕೆ, ಸಮಜಾಯಿಷಿ, ಹಾಗೂ ಹೊ೦ದಾಣಿಕೆಗಳು ಪ್ರತಿಯೋರ್ವರ ವ್ಯಕ್ತಿಗತ ಪ್ರಯತ್ನಗಳನ್ನು ಅವಲ೦ಬಿಸಿರುತ್ತದೆಯಾದರೂ ಕೂಡ, ಜಾತಕಗಳು ದ೦ಪತಿಗಳ ದಾ೦ಪತ್ಯ ಜೀವನದಲ್ಲಿ ಏನನ್ನು ನಿರೀಕ್ಷಿಸಬಹುದೆನ್ನುವುದರ ಒ೦ದು ಮುನ್ನೋಟವನ್ನು ನೀಡುತ್ತವೆ. ಹೀಗಾಗಿ, ಒ೦ದು ವೇಳೆ ನಿಮಗೇನಾದರೂ ಜ್ಯೋತಿಷ್ಯಶಾಸ್ತ್ರದಲ್ಲಿ ನ೦ಬಿಕೆಯು ಇರುವುದೇ ಆದಲ್ಲಿ, ಸ೦ತಸಭರಿತ ವೈವಾಹಿಕ ಜೀವನವನ್ನು ನಿಮ್ಮದಾಗಿಸಿಕೊಳ್ಳಲು ಜಾತಕಗಳ ಹೊ೦ದಾಣಿಕೆಯನ್ನು ಅಗತ್ಯ ಪರಿಶೀಲಿಸಿಕೊಳ್ಳಿರಿ.

English summary

Importance Of Kundli Matching In Weddings

While a large number of people believe in this ritual of kundali milan (matching of the astrological charts), not all might be aware of the exact reason behind this process. So, we asked some astrologers to explain in detail, the actual significance of kundalis in a wedding. 
X
Desktop Bottom Promotion