For Quick Alerts
ALLOW NOTIFICATIONS  
For Daily Alerts

  ‘ಕಣ್ಣ ದೃಷ್ಟಿ ತಗಲುವುದು’ ಎಂದರೇನು? ಇದಕ್ಕೆ ಪರಿಹಾರವೇನು?

  By Hemanth
  |

  ಹಳ್ಳಿಗಳಲ್ಲಿ ಈಗಲೂ ಕೆಲವೊಂದು ಮೂಢನಂಬಿಕೆಗಳು ಬಲವಾಗಿ ಬೇರೂರಿದೆ. ಇದರಲ್ಲಿ ಕೆಲವು ನಮಗೆ ಅತಿರೇಕದ್ದು ಎಂದು ಅನಿಸಿದರೆ ಮತ್ತೆ ಕೆಲವು ನಮಗೆ ನಂಬಿಕೆಯನ್ನು ಉಂಟು ಮಾಡುವಂತಿರುತ್ತದೆ. ಅದರಲ್ಲೂ ದೃಷ್ಟಿ, ಕಣ್ಣಿನ ದೃಷ್ಟಿ ಎನ್ನುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ಹಣವಂತ ವ್ಯಕ್ತಿ ಹಣ ಕಳೆದುಕೊಂಡರೆ ಅಥವಾ ಇನ್ನೇನಾದರೂ ಸಂಭವಿಸಿದರೆ ಆತನಿಗೆ ದೃಷ್ಟಿಯಾಗಿರಬಹುದು ಎಂದು ಹೇಳುವ ಪರಿಪಾಠವಿದೆ.

  ಹಿಂದೂ ಪುರಾಣಗಳಲ್ಲೂ ಕಣ್ಣದೃಷ್ಟಿಯ ಬಗ್ಗೆ ಉಲ್ಲೇಖವಿದೆ. ಮಾನಸಿಕ ಶಕ್ತಿಯು ಆಲೋಚನೆ, ಏಕಾಗ್ರತೆ, ದೃಷ್ಟಿ, ಹೊಟ್ಟೆಯುರಿ ಮತ್ತು ಮಾತಿನ ಮೂಲಕ ಹೊರಬರುವುದು. ಇದು ಇನ್ನೊಬ್ಬನ ಅಭಿವೃದ್ಧಿ, ಏಳಿಗೆ ಮತ್ತು ಸೌಂದರ್ಯದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದೇ ಕಣ್ಣ ದೃಷ್ಟಿ ಎನ್ನುವುದು.

  ನಮ್ಮ ದೇಹದ ಕಾಲಿನಿಂದ ಹಿಡಿದು ಹಣೆಯ ತನಕ ಏಳು ಚಕ್ರಗಳಿವೆ. ಈ ಚಕ್ರಗಳು ತಿರುಗಳು ಪ್ರಾರಂಭಿಸಿದಾಗ ಮತ್ತು ಸಕ್ರಿಯವಾದಾಗ ನಮ್ಮ ದೇಹದಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಶಕ್ತಿಯು ಚಟುವಟಿಕೆಯನ್ನು ಆರಂಭಿಸುವುದು. ನಕಾರಾತ್ಮಕ ಅಂಶಗಳು ಇವುಗಳ ಮೇಲೆ ಪರಿಣಾಮ ಬೀರಿದಾಗ ನಮ್ಮ ದೇಹದ ಚಕ್ರಗಳು ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಿಧಾನವಾಗುವಂತೆ ಮಾಡುತ್ತದೆ. ಇಂತಹ ಕಣ್ಣದೃಷ್ಟಿಯನ್ನು ನಿವಾರಿಸಲು ಇರುವ ಕೆಲವೊಂದು ವಿಧಾನಗಳನ್ನು ನಾವು ಇಂದು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ, ಮುಂದೆ ಓದಿ..

  ಕಪ್ಪು ನೂಲನ್ನು ಕಟ್ಟುವುದು

  ಕಪ್ಪು ನೂಲನ್ನು ಕಟ್ಟುವುದು

  ದೃಷ್ಟಿಯಾಗದಂತೆ ತಡೆಯಲು ಹೆಚ್ಚಾಗಿ ನಾವು ಕಪ್ಪು ಚುಕ್ಕೆಯನ್ನು ಹಾಕಿಕೊಳ್ಳುತ್ತೇಚೆ. ಮಕ್ಕಳು, ಮದುಮಗಳು ಅಥವಾ ಮದುಮಗನಿಗೆ ಕಪ್ಪುಚುಕ್ಕೆಯನ್ನು ಹಾಕುತ್ತೇವೆ. ಸಣ್ಣ ಮಕ್ಕಳ ಸೊಂಟಕ್ಕೆ ಇದೇ ಕಾರಣದಿಂದಾಗಿ ಕಪ್ಪು ನೂಲನ್ನು ಕಟ್ಟಿರುತ್ತಾರೆ.

  ದ್ವಿಚಕ್ರ ವಾಹನಗಳಿಗೆ

  ದ್ವಿಚಕ್ರ ವಾಹನಗಳಿಗೆ

  ದ್ವಿಚಕ್ರ ವಾಹನ, ಕಾರುಗಳು, ಟ್ರಕ್ ಗಳು ಮತ್ತು ಮನೆಗಳ ಮೇಲೆ ಯಾವುದಾದರೂ ಒಂದು ರಾಕ್ಷಸನಂತೆ ಕಾಣುವ ಚಿತ್ರವನ್ನು ತೂಗು ಹಾಕಿರುತ್ತಾರೆ ಅಥವಾ ನಿಂಬೆಕಾಯಿ, ಮೆಣಸನ್ನು ಕಟ್ಟಿರುತ್ತಾರೆ. ಹೊಸ ವಾಹನವನ್ನು ಖರೀದಿಸಿದಾಗ ಅದಕ್ಕೆ ಯಾವುದೇ ಕಣ್ಣು ಬೀಳದಿರಲೆಂದು ಚಕ್ರದಡಿಗೆ ನಿಂಬೆಹಣ್ಣನ್ನು ಇಟ್ಟು ವಾಹನವನ್ನು ಓಡಿಸುತ್ತಾರೆ.

  ದ್ವಿಚಕ್ರ ವಾಹನಗಳಿಗೆ

  ದ್ವಿಚಕ್ರ ವಾಹನಗಳಿಗೆ

  ಕೆಲವೊಂದು ಅಂಗಡಿ ಹಾಗೂ ಮನೆಗಳಲ್ಲಿಯೂ ನಿಂಬೆ ಹಾಗೂ ಮೆಣಸಿನ ಮಾಲೆಯನ್ನು ಕಟ್ಟಿರುವುದನ್ನು ನೋಡಬಹುದಾಗಿದೆ. ಕೆಲವೊಂದು ಅಂಗಡಿಯವರು ರಾತ್ರಿ ಬೀಗ ಹಾಕಿದ ಬಳಿಕ ಸಣ್ಣ ಪೇಪರಿನ ತುಂಡನ್ನು ಸುಟ್ಟು ಅದರನ್ನು ವೃತ್ತಾಕಾರದಲ್ಲಿ ಬಿಡಿಸಿದ ಬಳಿಕ ಮನೆಗೆ ತೆರಳುವುದು ಒಂದು ನಂಬಿಕೆ.

  ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?

  ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?

  ದೃಷ್ಟಿ ದೋಷವನ್ನು ಹಲವಾರು ರೀತಿಯಿಂದ ನಿವಾರಿಸುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಅನುಸರಿಕೊಂಡು ಬರುತ್ತಿರುವಂತಹ ವಿಧಾನವೆಂದರೆ ಕೆಂಪು ಮೆಣಸು, ಸಾಸಿವೆ ಮತ್ತು ಕರಿಮೆಣಸಿನ ಕಾಯಿ ಮತ್ತು ಉಪ್ಪನ್ನು ನಿಮ್ಮ ಬಲದ ಅಂಗೈಯಲ್ಲಿ ಹಿಡಿದುಕೊಂಡು ಯಾರೊಂದಿಗೂ ಮಾತನಾಡದೆ ಏಕಾಗ್ರತೆಯಿಂದ ಬಲದ ಅಂಗೈನ್ನು ಎದುರಿಗಿನ ವ್ಯಕ್ತಿಯ ತಲೆಗೆ ಮೂರು, ಐದು ಅಥವಾ ಏಳು ಸುತ್ತು ಹಾಕಬೇಕು. ಇದರ ಬಳಿಕ ಇದನ್ನು ಒಲೆ ಅಥವಾ ಮಾರ್ಗ ಮಧ್ಯಕ್ಕೆ ಎಸೆಯಬೇಕು. ಇದನ್ನು ಒಲೆ ಅಥವಾ ನಿಮ್ಮ ಅಡುಗೆ ಮನೆಯ ಸಿಂಕ್ ಗೆ ಎಸೆಯುವಾಗ ಸ್ವಲ್ಪ ದೂರ ನಿಂತುಕೊಂಡು ಎಸೆಯಿರಿ.

  ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?

  ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?

  ಇನ್ನೊಂದು ವಿಧಾನವೆಂದರೆ ಲಿಂಬೆ/ ತೆಂಗಿನಕಾಯಿ ಅಥವಾ ಬೂದುಕುಂಬಳದಲ್ಲಿ ಆರತಿಯನ್ನು ಎತ್ತಿ ಬಳಿಕ ಅದನ್ನು ನೆಲಕ್ಕೆ ಬಡಿಯಬೇಕು. ಮತ್ತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಆರತಿ ಎತ್ತುವಾಗ ಸುಣ್ಣ, ಅರಿಶಿನ ನೀರನ್ನು ಮಿಶ್ರಣ ಮಾಡಿ ಅದನ್ನು ಅಡಕೆ ಎಲೆಯಲ್ಲಿ ಹಾಕಿ ಮುಖದ ಸುತ್ತ ಎಡಕ್ಕೆ ಮತ್ತು ಬಲಕ್ಕೆ ಸುತ್ತು ತಿರುಗಿಸಿದರೆ ಆಗ ನಕಾರಾತ್ಮಕ ಅಂಶಗಳು ದೂರ ಹೋಗುವುದು.

  ಕರ್ಪೂರ ಚಿಕಿತ್ಸೆ

  ಕರ್ಪೂರ ಚಿಕಿತ್ಸೆ

  ರಾತ್ರಿ ಮಲಗುವ ಮೊದಲು ಕರ್ಪೂರವನ್ನು ಹಿಡಿದುಕೊಂಡು ವ್ಯಕ್ತಿಯ ತಲೆಯ ಸುತ್ತಲು ತಿರುಗಿಸಿ ಇದನ್ನು ನಿಮ್ಮ ಮನೆಯ ಹೊರಗಡೆ ಬಾಗಿಲಿನ ಎದುರುಗಡೆ ಉರಿಸಿ.

  ದೃಷ್ಟಿ ದೋಷ ತಡೆಯುವುದು ಹೇಗೆ

  ದೃಷ್ಟಿ ದೋಷ ತಡೆಯುವುದು ಹೇಗೆ

  ದೃಷ್ಟಿ ದೋಷವನ್ನು ಪ್ರಮುಖವಾಗಿ ನಿವಾರಿಸುವ ಉಪಾಯವೆಂದರೆ ಕಣ್ಣದೃಷ್ಟಿ ಗಣಪತಿ. ನೀಲಿ ಕಣ್ಣಿನ ತಾಯಿತ ಅಥವಾ ನರಸಿಂಹ ದೇವರ ಫೋಟೊವನ್ನು ಮನೆಯ ಪ್ರವೇಶದ್ವಾರದಲ್ಲಿ ತೂಗು ಹಾಕಬೇಕು. ಇದರಿಂದ ನಿಮ್ಮ ಮನೆ ಅಥವಾ ಅಂಗಡಿಯೊಳಗೆ ನಕಾರಾತ್ಮಕ ಪರಿಣಾಮ ಬೀರುವುದು ಕಡಿಮೆಯಾಗುವುದು.

   ತೂಗಾಡುವ ಆಲಾಮ್

  ತೂಗಾಡುವ ಆಲಾಮ್

  ಮನೆಯ ಪ್ರವೇಶ ದ್ವಾರದಲ್ಲಿ ತೂಗಾಡುವ ಆಲಾಮ್ ಮತ್ತು ಪ್ರತ್ಯೇಕ ಡಬ್ಬಿಯಲ್ಲಿ ಕಲ್ಲುಉಪ್ಪನ್ನು ಇಡಬೇಕು. ಒಂದು ಗಾಜಿನ ಡಬ್ಬಿಯಲ್ಲಿ ನೀರು ಹಾಗೂ ಕಲ್ಲುಉಪ್ಪನ್ನು ಹಾಕಿ ನಿಮ್ಮ ಹಾಲ್ ನಲ್ಲಿ ಇಡಿ. ಇದನ್ನು ಎಲ್ಲರೂ ನೋಡುವಂತಿರಲಿ. ನಮಗೆ ದೃಷ್ಟಿಯಾಗುತ್ತದೆ ಎನ್ನುವ ಜಾಗಕ್ಕೆ ಡಬ್ಬಿಯಲ್ಲಿರುವ ನೀರನ್ನು ಚೆಲ್ಲಿ ಮತ್ತೆ ಅದಕ್ಕೆ ಹೊಸ ನೀರು ಹಾಗೂ ಉಪ್ಪನ್ನು ಹಾಕಿ. ವಾರಕ್ಕೊಮ್ಮೆ ಹೀಗೆ ಮಾಡಿ.

    

  English summary

  Drishti – An Evil eye on you!! How to remove it?

  Getting affected by evil eyes is quite common in many cultures. 'Evil eye' usually refers to a magical glance which may or may not be intentional. It is believed that if you are affected by the evil eye of a person out of jealousy or extreme admiration, you may fall sick or something really bad may happen to you. Though, these beliefs can be called superstitions yet, many religions recognise it's bad effects on people.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more