'ನವಗ್ರಹ'ಗಳನ್ನು ಪೂಜಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

By: Jaya subramanya
Subscribe to Boldsky

ನವಗ್ರಹಗಳು ಮಾನವ ಜೀವನದಲ್ಲಿ ಒಂಬತ್ತು ಅಂಶಗಳನ್ನು ಬೀರುವ ಗ್ರಹಗಳು ಎಂದೆನಿಸಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು ಮತ್ತು ಕೇತುಗಳೇ ನವಗ್ರಹಗಳು ಎಂದೆನಿಸಿದ್ದು, ನೀಡಿರುವ ಸಮಯಕ್ಕೆ ಅನುಸಾರವಾಗಿ ಇವುಗಳು ತಮ್ಮ ಸ್ಥಾನವನ್ನು ಬದಲಾಯಿಸಿಕೊಂಡಿರುತ್ತವೆ. ಶನಿಯು ನಕ್ಷತ್ರವೆನಿಸಿದ್ದು, ಮಂಗಳ, ಬುಧ, ಬೃಹಸ್ಪತಿ, ಶುಕ್ರ ಮತ್ತು ಶನಿ ಸೌರ ವ್ಯವಸ್ಥೆಯಲ್ಲಿ ಗ್ರಹಗಳು ಎಂದೆನಿಸಿವೆ. ಮಗುವಿನ ಜನ್ಮ ಕುಂಡಲಿಯನ್ನು ಸಿದ್ಧಪಡಿಸುವಾಗ ಈ ಗ್ರಹಗಳು ಸಹಾಯಕವಾಗಲಿವೆ.

ಜನ್ಮ ಕುಂಡಲಿಯನ್ನು ಅನುಸರಿಸಿ ಮಗುವಿನ ಸುಖ, ದುಃಖ, ರೋಗ, ಮರಣ ಸಮಯವನ್ನು ಕಂಡುಕೊಳ್ಳಲಾಗುತ್ತದೆ. ತಮ್ಮ ಜನ್ಮಕುಂಡಲಿಗೆ ಅನುಸಾರವಾಗಿಯೇ ಯಾವ ದೇವರುಗಳನ್ನು ಪೂಜಿಸಬೇಕು ಎಂಬುದನ್ನು ಮಾರ್ಗದರ್ಶಿಸಲಾಗುತ್ತದೆ. ಅಂತೆಯೇ ಇದರಲ್ಲಿ ನವಗ್ರಹಗಳನ್ನು ಪೂಜಿಸುವ ಬಗೆಯನ್ನು ಪ್ರಸ್ತುತಪಡಿಸಲಾಗಿರುತ್ತದೆ. ನವಗ್ರಹಗಳನ್ನು ಪೂಜಿಸುವುದನ್ನು ಕುರಿತು ಅಂತೆಯೇ ನಮ್ಮ ದೈನಂದಿನ ಜೀವನದಲ್ಲಿ ಈ ಗ್ರಹಗಳ ಪಾತ್ರವೇನು ಎಂಬುದನ್ನು ಅರಿತುಕೊಳ್ಳೋಣ.

Worshipping Navagrahas

ನವಗ್ರಹಗಳನ್ನು ಪೂಜಿಸುವಾಗ ಅನುಸರಿಸಬೇಕಾದ ಕ್ರಮಗಳೇನು

ನವಗ್ರಹಗಳನ್ನು ಪೂಜಿಸುವಾಗ ಸಮಯ ಮತ್ತು ಮುಹೂರ್ತವನ್ನು ನೋಡಲಾಗುತ್ತದೆ. ಇದನ್ನು ಅನುಸರಿಸುವುದರಿಂದ ನಿಮ್ಮ ಬಾಳಿನಲ್ಲಿ ಮಹತ್ತರ ಬದಲಾವಣೆಗಳು ಸಾಧ್ಯವಾಗುತ್ತವೆ. ನವಗ್ರಹಗಳ ಶಾಂತಿಯನ್ನು ಮಾಡುವಾಗ ಕೆಲವೊಂದು ನಿಯಮಗಳನ್ನು ನೀವು ಅಳವಡಿಸಿಕೊಳ್ಳಬೇಕಾಗುತ್ತದೆ. ಮಾಂಸಾಹಾರದ ಸೇವನೆಯನ್ನು ನೀವು ಮಾಡಬಾರದು ಎಂಬ ನಿಯಮ ಕೂಡ ಇದರಲ್ಲಿ ಸೇರಿದೆ.

ನಿಮ್ಮ ದೇಹದ ಶುಚಿತ್ವದಂತೆಯೇ ಮನಸ್ಸು ಕೂಡ ಶುಚಿತ್ವವನ್ನು ಕಂಡುಕೊಳ್ಳಬೇಕು. ಕೆಟ್ಟ ಆಲೋಚನೆಗಳನ್ನು ಪರಿಹಾರ ಸಮಯದಲ್ಲಿ ಮಾಡಬಾರದು. ದೀಪಕ್ಕೆ ಬಳಸುವ ಎಣ್ಣೆ ತುಪ್ಪ ಅಥವಾ ಎಳ್ಳೆಣ್ಣೆಯಾಗಿರಬೇಕು. ನೀವು ದೇವರಿಗೆ ಏನನ್ನೂ ಬೇಕಾದರೂ ಅರ್ಪಿಸಬಹುದು. ಆದರೆ ಆ ಅರ್ಪಣೆ ಶುದ್ಧವಾಗಿರಬೇಕು.   

lord shani

ಪೂಜೆಯ ನಂತರ ದೊರೆಯುವ ಪ್ರಸಾದವನ್ನು ನೀವು ಸ್ನೇಹಿತರು ಮತ್ತು ಬಂಧು ಮಿತ್ರರೊಂದಿಗೆ ಹಂಚಿಕೊಳ್ಳಬೇಕು. ನಿಮ್ಮ ಜನ್ಮಕುಂಡಲಿಯಲ್ಲಿರುವ ದೋಷವನ್ನು ಪರಿಹಾರ ಮಾಡಿಕೊಳ್ಳಲು ನೀವು ಪೂಜೆಯನ್ನು ನೆರವೇರಿಸಿದರೂ ಪ್ರಸಾದವನ್ನು ಹಂಚುವುದು ಇತರರಿಗೂ ಭಕ್ತಿಯನ್ನು ಪಸರುವಂತೆ ಮಾಡುತ್ತದೆ ಜೊತೆಗೆ ನಿಮ್ಮ ಪೂಜೆಯ ಪುಣ್ಯ ಅವರಿಗೂ ಲಭಿಸಿ ಅವರ ಮುಕ್ತ ಪ್ರಶಂಸೆಯಿಂದ ನಿಮಗೆ ಒಳಿತಾಗುತ್ತದೆ.  

ಇದನ್ನೂ ಓದಿ-   ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ನವಗ್ರಹಗಳನ್ನು ಇತರ ದೇವರುಗಳಿಗೆ ಸಮನಾಗಿ ಕಾಣುವುದು ಪಾಪ ಎಂದೆನಿಸುತ್ತದೆ. ಅದರಲ್ಲೂ ಶಿವನಿಗೆ ಸರಿಸಮನಾಗಿ ನವಗ್ರಹಗಳನ್ನು ಕಂಡರೆ ದೋಷವುಂಟಾಗುತ್ತದೆ ಎಂಬುದು ಶಾಸ್ತ್ರಗಳ ಉಲ್ಲೇಖವಾಗಿದೆ. ಇತರ ದೇವತೆಗಳನ್ನು ಪೂಜಿಸಿದ ನಂತರವೇ ನೀವು ನವಗ್ರಹಗಳನ್ನು ಆರಾಧನೆ ಮಾಡಬೇಕು. ಮೊದಲು ಇತರ ದೇವತೆಗಳಿಗೆ ಪೂಜೆಯನ್ನು ಅರ್ಪಿಸಿದ ನಂತರವೇ ನವಗ್ರಹಗಳಿಗೆ ಪರಿಹಾರವನ್ನು ಮಾಡಬೇಕು. 

Lord shani

ಶನಿವಾರದಂದು ನವಗ್ರಹಗಳಿಗೆ ಒಂಬತ್ತು ಸುತ್ತುಗಳನ್ನು ಹಾಕಬೇಕು. ವಾರದ ಇತರ ದಿನಗಳಲ್ಲಿ ಹೀಗೆ ಮಾಡುವುದು ತಪ್ಪಾಗಿದೆ. ಶನಿವಾರದಂದು ಹೊರತುಪಡಿಸಿ ಶನಿಯು ಇತರ ಗ್ರಹಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸುವುದರಿಂದ ಶನಿಯ ದೋಷ ನಿಮ್ಮ ಮೇಲೆ ಉಂಟಾಗಲಿದೆ ಎಂಬುದು ಇದಕ್ಕೆ ಕಾರಣವಾಗಿದೆ. ಶನಿವಾರದಂದು ಬಿಟ್ಟು ನವಗ್ರಹಗಳಿಗೆ ಒಂದು ಸುತ್ತು ಹಾಕಿ ಪ್ರಾರ್ಥಿಸಬಹುದಾಗಿದೆ.   

ಇದನ್ನೂ ಓದಿ- 'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

ವಿರುದ್ಧ ದಿಕ್ಕಿನಲ್ಲಿ ರಾಹು ಮತ್ತು ಕೇತುವಿಗೆ ಸುತ್ತು ಹಾಕಬಾರದು. ಅಂತೆಯೇ ಶನಿಯನ್ನು ಪೂಜಿಸುವಾಗ ಅವರಿಗೆ ವಿರುದ್ಧ ದಿಕ್ಕಿನಲ್ಲಿ ನೀವು ನಿಂತು ಪೂಜಿಸಬಾರದು. ನವಗ್ರಹಗಳಿಗೆ ಸುತ್ತು ಹಾಕುವಾಗ ನಿಮ್ಮ ಕೈಗಳನ್ನು ಕಟ್ಟಬಾರದು. ನಿಮ್ಮಷಕ್ಕೆ ನೀವು ಮಾತನಾಡಿಕೊಳ್ಳುವುದು ಮೊದಲಾದವುಗಳನ್ನು ಮಾಡಬಾರದು.  

Hindu temple

ನವಗ್ರಹ ಮತ್ತು ಇತರ ದೇವತೆಗಳನ್ನು ಬೇರ್ಪಡಿಸುವ ಕೆಲವೊಂದು ಕಟ್ಟುಪಾಡು, ಆಚರಣೆಗಳಿದ್ದು ಇವುಗಳನ್ನು ದಾಟುವ ಕೆಲಸವನ್ನು ನೀವು ಎಂದಿಗೂ ಮಾಡಬಾರದು. ನಿಮ್ಮಷ್ಟಕ್ಕೆ ನೀವು ನವಗ್ರಹಗಳಿಗೆ ಪೂಜೆಯನ್ನು ನೆರವೇರಿಸಬಹುದಾಗಿದ್ದರೂ ನಿಮ್ಮ ಮನಸ್ಸಿನ ಸ್ವಚ್ಛತೆಯನ್ನು ಮೊದಲು ಅರಿತುಕೊಂಡು ನಂತರವಷ್ಟೇ ಇದಕ್ಕೆ ಮುಂದುವರಿಯಿರಿ.

ದೀಪ ಹಚ್ಚುವಾಗ ಇತರರು ಹಚ್ಚಿರುವ ದೀಪವನ್ನು ಬಳಸಿಕೊಂಡು ನವಗ್ರಹಗಳಿಗೆ ದೀಪ ಹಚ್ಚಬೇಡಿ. ನಿಮ್ಮದೇ ಬೆಂಕಿಪೆಟ್ಟಿಗೆಯನ್ನು ಕೊಂಡೊಯ್ಯಿರಿ ಮತ್ತು ದೇವಸ್ಥಾನದ ದೀಪದಿಂದ ಬೆಂಕಿಯನ್ನು ಬಳಸಿ.

English summary

Dos And Don’ts Of Worshipping Navagrahas

This article provides details on the correct procedure that you must follow while worshipping the Navagrahas. Read here to know more.
Subscribe Newsletter