For Quick Alerts
ALLOW NOTIFICATIONS  
For Daily Alerts

ದೀಪಾವಳಿ 2021: ಬೆಳಕಿನ ಹಬ್ಬದಂದು ಮಾಡಬೇಕಾದ ಹಾಗೂ ಮಾಡಲೇಬಾರದ ಕೆಲಸಗಳು ಇಲ್ಲಿವೆ

|

ದೀಪಾವಳಿ ದೀಪಗಳ ಹಬ್ಬ. ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸೂಚಿಸುವ ಹಬ್ಬ. ಇದೇ ನವೆಂಬರ್ 5ರಂದು ಆಚರಣೆ ಮಾಡುವ ಈ ದೀಪಗಳ ಹಬ್ಬಕ್ಕೆ ಈಗಾಗಲೇ ಸಿದ್ಧತೆ ಭರದಿಂದಲೇ ಸಾಗುತ್ತಿದೆ.

ಪ್ರಸ್ತುತ ಇರುವ ಕೊರೊನಾವೈರಸ್ ಪರಿಸ್ಥಿತಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟಗಳಿಂದಾಗಿ ಈ ಹಬ್ಬದಂದು ರಾಜಿ ಮಾಡಿಕೊಳ್ಳಬೇಕಾಗಿದೆ. ಇದರ ಜೊತೆಗೆ ನೀವು ಈ ಸಲದ ದೀಪಾವಳಿಯಂದು ಅನುಸರಿಸಬೇಕಾದ ಮತ್ತು ಮಾಡಬಾರದ ಕೆಲವು ಸಂಗತಿಗಳು ಇವೆ. ಇವುಗಳು ಬೆಳಕಿನ ಹಬ್ಬವನ್ನು ಸುರಕ್ಷಿತ ಹಾಗೂ ಸಂತೋಷ, ಸಂಭ್ರಮದಿಂದ ಆಚರಿಸಲು ಸಹಾಯ ಮಾಡುತ್ತವೆ.

ದೀಪಾವಳಿ ವೇಳೆ ಅನುಸರಿಸಬೇಕಾದ ಹಾಗೂ ಮಾಡಬಾರದ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ದೀಪಾವಳಿ ವೇಳೆ ಅನುಸರಿಸಬೇಕಾದ ಹಾಗೂ ಮಾಡಬಾರದ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ದೀಪಾವಳಿ ಎಂದರೆ ತಕ್ಷಣ ನೆನಪಾಗುವುದೇ, ಬೆಳಕು. ಹಣತೆ ಹಾಗೂ ಪಟಾಕಿಗಳ ಬೆಳಕೇ ಕಣ್ಣ ಮುಂದೆ ಬರುವುದು. ದೀಪಾವಳಿ ಹಬ್ಬದಂದು ಕೆಲವೊಂದು ಕೆಲಸಗಳನ್ನು ಮಾಡಬೇಕು.. ಅದೇ ರೀತಿ ಕೆಲವು ಕೆಲಸಗಳನ್ನು ಮಾಡಬಾರದು. ದೀಪಾವಳಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಈಗ ತಿಳಿದುಕೊಳ್ಳೋಣ ...

ಮಾಡಬೇಕಾದ ಕೆಲಸಗಳು ಹೀಗಿವೆ:

ಮಾಡಬೇಕಾದ ಕೆಲಸಗಳು ಹೀಗಿವೆ:

  • ಪಟಾಕಿ ಸಿಡಿಸಲು ಹೋದರೆ, ಬೆಂಕಿಯ ಮೂಲಗಳಾದ ಬೆಂಕಿಪೆಟ್ಟಿಗೆ, ಕ್ಯಾಂಡಲ್‌ಗಳು ಮತ್ತು ದೀಪಗಳಿಂದ ದೂರವಿಡಿ.
  • ಪಟಾಕಿ ಸುಡುವ ಮೊದಲು ದಯವಿಟ್ಟು ಪ್ಯಾಕೆಟ್‌ಗಳ ಮೇಲಿನ ಸೂಚನೆಗಳನ್ನು ಸಂಪೂರ್ಣವಾಗಿ ಓದಿ.
  • ಸುಟ್ಟ ಎಲ್ಲಾ ಪಟಾಕಿಗಳ ಕಸವನ್ನು ಒಂದು ಬಕೆಟ್‌ನಲ್ಲಿ ಹಾಕಿ, ಸಂಗ್ರಹಿಸಿ. ಇದು ಪರಿಸರಕ್ಕೆ, ನಿಮ್ಮ ಸುತ್ತಮುತ್ತಲಿನ ಇತರರಿಗೆ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ.
  • ಮಾಸ್ಕ್ ಧರಿಸಲು ಮರೆಯಬೇಡಿ ಏಕೆಂದರೆ ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ.
  • ಸ್ಯಾನಿಟೈಸರ್ ಅನ್ನು ಸುಡುವ ವಸ್ತುಗಳಿಂದ ದೂರವಿಡಿ.
  • ಯಾವುದೇ ರೀತಿಯ ಉಸಿರಾಟದ ತೊಂದರೆ ಇರುವವರು ಮನೆಯೊಳಗೆ ಇರಬೇಕು.
  • ಒಂದೇ ಬಾರಿಗೆ ಒಬ್ಬರೇ ಪಟಾಕಿ ಹಚ್ಚಬೇಕು. ಜನನಿಬಿಡ ಪ್ರದೇಶದಿಂದ ದೂರವಿರಲು ಪ್ರಯತ್ನಿಸಿ.
  • ಪಟಾಕಿ ಹೊಡೆಯುವಾಗ ಮುಂಜಾಗ್ರತಾ ಕ್ರಮವಾಗಿ ಬಕೆಟ್ ನಲ್ಲಿ ನೀರು ಸಿದ್ಧವಾಗಿಟ್ಟುಕೊಳ್ಳಿ.
  • ಪಟಾಕಿ ಹೊಡೆಯುವಾಗ ನಿಮ್ಮ ಕೈ ಮತ್ತು ಮುಖದಿಂದ ದೂರವಿರಿಸಿ ಮತ್ತು ಎಚ್ಚರಿಕೆಯಿಂದ ಹೊಡೆಯಿರಿ.
  • ಚಿಕ್ಕ ಮಕ್ಕಳಿರುವ ಮನೆಯಲ್ಲಿ ಪಟಾಕಿ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು.
  • ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸಿದ್ಧವಾಗಿಟ್ಟುಕೊಳ್ಳಿ.
  • ಮಾಡಬಾರದ ಕೆಲಸಗಳು ಹೀಗಿವೆ:

    ಮಾಡಬಾರದ ಕೆಲಸಗಳು ಹೀಗಿವೆ:

    • ಯಾವುದೇ ಸಂದರ್ಭದಲ್ಲೂ ಮನೆಯೊಳಗೆ ಪಟಾಕಿ ಸುಡಬೇಡಿ. ಹೊರಾಂಗಣದಲ್ಲಿ ಮಾತ್ರ ಹಚ್ಚಿ.
    • ನಿಮ್ಮ ಜೇಬಿನಲ್ಲಿ ಪಟಾಕಿಗಳನ್ನು ಇಟ್ಟುಕೊಂಡು ಹೊಡೆಯಬೇಡಿ.
    • ಪಟಾಕಿ ಹೊಡೆಯಲು ಗಾಜಿನ ಪಾತ್ರೆ ಬಳಸಬೇಡಿ. ಲೋಹದ ಪಾತ್ರೆ ಬಳಸಿ.
    • ಕೆಲವು ಪಟಾಕಿ ಹೊಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮತ್ತೆ ಬೆಂಕಿ ಹಚ್ಚಲು ಹತ್ತಿರ ಹೋಗಬೇಡಿ.
    • ಪ್ರಥಮ ಚಿಕಿತ್ಸಾ ಪೆಟ್ಟಿಗೆ:

      ಪ್ರಥಮ ಚಿಕಿತ್ಸಾ ಪೆಟ್ಟಿಗೆ:

      ದೀಪಾವಳಿ ಸಂದರ್ಭದಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಕೆಲವೊಮ್ಮೆ ಏನಾದರೂ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುಂಚಿತವಾಗಿ ಪ್ರಥಮ ಚಿಕಿತ್ಸಾ ಕಿಟ್ ಸಿದ್ಧವಾಗಿಟ್ಟುಕೊಳ್ಳಬೇಕು. ಪಟಾಕಿಯಿಂದ ಗಾಯಗೊಂಡ ವ್ಯಕ್ತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವ ಮೊದಲು ಗಾಯಗೊಂಡ ಪ್ರದೇಶದ ಮೇಲೆ ನೀರನ್ನು ಸುರಿಯಬೇಕು ಜೊತೆಗೆ ಐಸ್ನಿಂದ ಮಸಾಜ್ ಮಾಡಬಹುದು. ಬೆಣ್ಣೆ, ಗ್ರೀಸ್ ಮತ್ತು ಪುಡಿಯನ್ನು ಸಹ ಗಾಯಗಳಿಗೆ ಹಚ್ಚಬಹುದು. ಹೀಗೆ ಮಾಡುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ನಂತರ ಅದನ್ನು ವೈದ್ಯರ ಬಳಿಗೆ ಕೊಂಡೊಯ್ಯಿರಿ.

English summary

Diwali 2021: List of Dos and Don'ts on this Festival of Lights

Here we talking about Diwali 2021: List of dos and don'ts on this festival of lights, read on
X
Desktop Bottom Promotion